Link copied!
Sign in / Sign up
2
Shares

ನೀವು ಈ ದಿನ ಸೆಕ್ಸ್ ಅಲ್ಲಿ ತೊಡಗುವಿರಿ ಎಂದರೆ ಈ 7 ಕೆಲಸಗಳನ್ನ ಮಾಡಲೇಬಾರದು!

ನೀವು ಈ ರಾತ್ರಿ ನಿಮ್ಮ ಸಂಗಾತಿಯೊಂದಿಗೆ ರಸಮಯ ಕ್ಷಣಗಳನ್ನ ಕಳೆಯಬೇಕು ಎಂದುಕೊಂಡಿರುವಿರಿ. ಇಂದು ನಿಮ್ಮ ಮದುವೆ ವಾರ್ಷಿಕೋತ್ಸವನೋ ಅಥವಾ ಇನ್ನ್ಯಾವುದೋ ಸಂದರ್ಭ ಇರಬಹುದು. ಅದೇನೇ ಇರಲಿ, ಈ ರಾತ್ರಿ ಸ್ಮರಣೀಯವಾಗಿರಬೇಕು ಎಂಬುದು ನಿಮ್ಮ ಭಾವನೆ. ಆದರೆ ಒಂದು ಸಣ್ಣ ತಪ್ಪು ಇಡಿ ರಾತ್ರಿಯನ್ನು ಹಾಲು ಮಾಡಬಹುದು. ನೀವು ಇಂತದ್ದು ಒಂದು ಘಳಿಗೆಗೆ ಸಿದ್ಧರಾಗುತ್ತಿದ್ದೀರ ಎಂದರೆ ನೀವು ಮಾಡಬಾರದ ಕೆಲವು ಕೆಲಸಗಳು ಇಲ್ಲಿವೆ ನೋಡಿ.

೧. ಕೆಲವೊಂದು ತಿನಿಸುಗಳಿಂದ ದೂರವಿರುವುದು

ನೀವು ಇಂತಹ ಒಂದು ರಸಮಯ ಕ್ಷಣಗಳನ್ನ ಎದುರು ನೋಡುತ್ತಿರುವಾಗ ನಿಮಗೆ ಬೇಡದಿರುವ ಒಂದು ಪಾಡು ಎಂದರೆ ಅದು ರಾತ್ರಿಯಿಡಿ ಬಾತ್ರೂಮ್ ಅಲ್ಲಿ ಕಾಲ ಕಳೆಯುವುದು. ನೀವು ಅತಿಯಾದ ಮಸಾಲೆ ಪದಾರ್ಥಗಳನ್ನ ಮತ್ತು ಸ್ಯಾಚುರಟೆಡ್ ಕೊಬ್ಬಿನ ಆಮ್ಲ ಹೆಚ್ಚಿರುವ ಪದಾರ್ಥಗಳನ್ನು ಸೇವಿಸಬಾರದು.


೨. ವ್ಯಾಕ್ಸಿಂಗ್ ಮಾಡಿಸುವುದು

ಇಂತಹ ಸಮಯಕ್ಕೆ ವ್ಯಾಕ್ಸಿಂಗ್ ಮಾಡಿಸುವುದು ಹೆಚ್ಚು ಸೆಕ್ಸಿಯಾಗಿ ಇರುತ್ತದೆ ಎಂಬುದು ಎಲ್ಲರಲ್ಲಿನ ಗ್ರಹಿಕೆ. ಆದರೆ ವ್ಯಾಕ್ಸಿಂಗ್ ತಜ್ಞೆ ನಟಾಲಿಯ ಅವರ ಪ್ರಕಾರ ವ್ಯಾಕ್ಸಿಂಗ್ ಮದಿಸಿದೊಡನೆ ನಿಮ್ಮ ಚರ್ಮದಲ್ಲಿನ ರಂಧ್ರಗಳು ಮತ್ತಷ್ಟು ದೊಡ್ಡದಾಗುತ್ತವೆ. ಹೀಗಾಗಿ ಆ ಕೂದಲನ್ನು ಕಿತ್ತ ಜಾಗಗಳಲ್ಲಿ ಉರಿತ,ಊದುವುದು ಕಡಿಮೆ ಆಗುತ್ತದೆ ಮತ್ತು ಕೆಂಪು ಬಣ್ಣ ಮಾಸುತ್ತದೆ. ಹೀಗಾಗಿ ಇಂತಹ ಸಮಯ ಎದುರು ನೋಡುತ್ತಿದ್ದರೆ, ವ್ಯಾಕ್ಸಿಂಗ್ ಅನ್ನು ಒಂದು ದಿನ ಮುನ್ನವೇ ಮಾಡಿಸಿ.


೩. ಪ್ರೆಸ್ಕ್ರಿಪ್ಶನ್ ಮದ್ದುಗಳನ್ನು ಸೇವಿಸುವುದು

ಕೆಲವೊಂದು ಖಿನ್ನತೆಗೆಂದು ತೆಗೆದುಕೊಳ್ಳುವ ಔಷಧಿಗಳು ಅಡ್ಡಪರಿಣಾಮಗಳನ್ನು ಉಂಟು ಮಾಡುತ್ತವೆ. ಖಿನ್ನತೆಗೆ ವೈದ್ಯರು ಸೂಚಿಸುವ ಔಷಧಿ ನಿಮ್ಮ ದೇಹದಲ್ಲಿ ಸೆರೋಟೋನಿನ್ ಹೆಚ್ಚಿಸುತ್ತವೆ, ಆದರೆ ನಿಮ್ಮ ಲೈಂಗಿಕ ಆಸಕ್ತಿ ಕುಗ್ಗಿಸುತ್ತವೆ. ಹೀಗಾಗಿ ಒಂದು ವೇಳೆ ನೀವು ಇಂತಹ ಔಷಧಿಗಳನ್ನು ಸೇವಿಸುತ್ತಿದ್ದರೆ, ವೈದ್ಯರೊಡನೆ ಮಾತಾಡಿ ನೀವು ಏನು ಮಾಡಬಹುದೆಂದು ತಿಳಿದುಕೊಳ್ಳಿ;


೪. ಮದ್ಯಪಾನ ಮಾಡುವುದು

ಮದ್ಯಪಾನವು ಗಂಡಸರಲ್ಲಿ ನಿಮಿರುವಿಕೆಯ ಅಪಸಾಮಾನ್ಯತೆ (ಎರೆಕ್ಟೈಲ್ ಡಿಸ್ಫಂಕ್ಷನ್) ಉಂಟು ಮಾಡುತ್ತದೆ. ಹೆಂಗಸರಲ್ಲಿ ಇದು ಯೋನಿಯಲ್ಲಿ ಶುಷ್ಕತೆ ಉಂಟು ಮಾಡಿ, ಯೋನಿಯು ಒಣಗುವಂತೆ ಮಾಡುತ್ತದೆ. ಅಲ್ಲದೆ ದೇಹದಲ್ಲಿ ಮದ್ಯದ ಅಂಶ ಹೆಚ್ಚಾದಷ್ಟು ಇಂದ್ರಿಯಗಳ ಸೂಕ್ಷ್ಮತೆಯು ಕಡಿಮೆ ಆಗುತ್ತಾ ಹೋಗುತ್ತದೆ. ಇದರಿಂದ ಲೈಂಗಿಕ ಪರಾಕಾಷ್ಟೆ ಹೊಂದುವುದು ಕಷ್ಟ ಆಗುತ್ತದೆ.


೫. ತುಂಬಾ ಕಾಫಿ ಕುಡಿಯುವುದು

ನಮಗೆ ಸುಸ್ತಾಗಿದ್ದಾರೆ, ಮತ್ತೆ ಫ್ರೆಶ್ ಆಗಲು ಕಾಫಿ ಮೊರೆ ಹೋಗುತ್ತೇವೆ. ಆದರೆ ಕಾಫಿ ಅಲ್ಲಿರುವ ಕೆಫೇನ್ ಆಡ್ರಿನಲ್ ಗ್ರಂಥಿ ಮೇಲೆ ಒತ್ತಡ ಹೇರುತ್ತದೆ. ಈ ಗ್ರಂಥಿಯೇ ನಾವು ವಿಶ್ರಾಂತಿಸಲು ಬೇಕಿರುವ ಹಾರ್ಮೋನುಗಳನ್ನು ಉತ್ಪತ್ತಿ ಮಾಡುವುದು. ಒಂದು ವೇಳೆ ಅದು ಸರಿಯಾಗಿ ಉತ್ಪತ್ತಿ ಆಗದೇ ಇದ್ದರೆ, ನಾವು ಆತಂಕಕ್ಕೆ ಮತ್ತು ಆಯಾಸಕ್ಕೆ ಒಳಗಾಗಿ ಲೈಂಗಿಕ ಆಸಕ್ತಿಯನ್ನು ಕಳೆದುಕೊಳ್ಳುತ್ತೇವೆ.


೬. ಮೆನ್ತೋಲ್ ಒಳಗೊಂಡ ಆಹಾರ ಸೇವಿಸುವುದು

ಮೆನ್ತೋಲ್ ಎನ್ನುವುದು ಪೆಪ್ಪೆರ್ಮಿಂಟ್ ಅಲ್ಲಿ ಬಳಸುವ ಒಂದು ಕರ್ಪೂರದಂತ ಪದಾರ್ಥ. ಇದನ್ನು ಮಿಂಟ್ ಅಲ್ಲಿ, ಸೆಂಟರ್ ಫ್ರೆಶ್ ಅಂತಹ ಚುಯಿಂಗ್ ಗಮ್ ಅಲ್ಲಿ ಬಳಸಲಾಗುತ್ತದೆ. ಇದು ದೇಹದಲ್ಲಿ ಮದಜನಕ (ಟೆಸ್ಟೋಸ್ಟೆರಾನ್) ಹಾರ್ಮೋನ್ ಅನ್ನು ಕಡಿಮೆ ಮಾಡುತ್ತದೆ. ಮದಜನಕ ಇಲ್ಲದೆಯೇ ಸೆಕ್ಸ್ ಇಲ್ಲ!


೭. ಅತಿಯಾಗಿ ಕೆಲಸ ಮಾಡುವುದು

ಒಂದು ವೇಳೆ ನೀವು ಅತಿಯಾದ ದೈಹಿಕ ಶ್ರಮವುಳ್ಳ ಕೆಲಸದಲ್ಲಿ ತೊಡಗಿಸಿಕೊಂಡರೆ ಅಥವ ಜಿಮ್ ಅಲ್ಲಿ ಅತಿಯಾಗಿ ವ್ಯಾಯಾಮ ಮಾಡಿದರೆ, ನಿಮ್ಮಲ್ಲಿನ ಶಕ್ತಿ ಎಲ್ಲಾ ಅಲ್ಲೇ ಖರ್ಚಾಗಿ ಹೋಗುತ್ತದೆ. ಹೀಗಾಗಿ ನೀವು ನಿಮ್ಮ ಶಕ್ತಿಯನ್ನು ನಿಮ್ಮ ಮಂಚದ ಮೇಲಿನ ಕೆಲಸಕ್ಕೆ ಉಳಿಸಿಕೊಳ್ಳಬೇಕು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon