Link copied!
Sign in / Sign up
1
Shares

ಇಂದಿನ ರಾಶಿ ಭವಿಷ್ಯ..

ಮೇಷ

ನಿಮ್ಮ ಎಲ್ಲಾ  ಯೋಜನೆಗಳಲ್ಲೂ ಜಯವಿದೆ, ಯಾವುದೇ ಕೆಲಸ ಮಾಡುವ ಯೋಚನೆಯಲ್ಲಿದ್ದರೆ ಧೈರ್ಯವಾಗಿ  ಮುನ್ನುಗಿ. ಒಳ್ಳೆಯದೇ ಆಗುವುದು.

ವೃಷಭ

ಸ್ನೇಹಿತರ ಮನಸ್ಥಿತಿ ನಿಮಗೆ ಇಷ್ಟವಾಗುವುದಿಲ್ಲ ಮನಸ್ಸಿಗೆ ನೋವುಂಟಾಗುತ್ತದೆ. ಮಾಡುವ ಕೆಲಸದಲ್ಲಿ ಸಂಶಯವನ್ನು ತೆಗೆದುಹಾಕಿ. ಪ್ರಣಯ ಸಂಬಂಧ ವಿಚಾರಗಳಲ್ಲಿ ಯೋಚನೆ ಮಾಡಿ ಮುಂದುವರೆಯಿರಿ. ಹಿರಿಯರ ಬೆಂಬಲದ ಮಾತುಗಳು ಮನಸ್ಸಿಗೆ ನೆಮ್ಮದಿ ನೀಡುತ್ತದೆ.

ಮಿಥುನ

ನೀವು ಎಷ್ಟೇ ಪ್ರಯತ್ನಿಸಿದರೂ ಕುಟುಂಬದವರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗದೆ ಇರಬಹುದು. ನೀವು ಸಮಾಜಕ್ಕೆ  ಒಳ್ಳೆಯ ಕೆಲಸಮಾಡುವ ಉದ್ದೇಶ ಹೊಂದಿದ್ದರೆ ಕೆಲವರು ಬೇಕಂತಲೇ ನೀವು ಮಾಡುವ ಕೆಲಸದ ವಿರುದ್ಧ ನಿಲ್ಲುವರು.

ಕಟಕ

ಜೀವನ ನೆಮ್ಮದಿ ಇಂದ ಸಾಗುತ್ತಿದೆ ಎಂದು ನಿಮಗನ್ನಿಸುತ್ತದೆ. ನೀವು ಪ್ರೀತಿಯಲ್ಲಿ ತೇಲಾಡುವಿರಿ,ಎಲ್ಲರಿಗೂ  ಖುಷಿಯನ್ನು ಬಯಸುವ ನೀವು ಹೊದಲ್ಲೆಲ್ಲಾ ಜನರನ್ನು ಖುಷಿಯಾಗಿಡಲು ಪ್ರಯತ್ನಿಸುವಿರಿ.

ಸಿಂಹ

ನಿಮಗೆ ಕೋಪ ಬರುವುದರ ಹಿಂದಿನ ಕಾರಣ ಯಾರಿಗೂ ತಿಳಿದಿಲ್ಲ, ಆದರೆ ನೀವು ಕೋಪಗೊಂಡಿರುವುದನ್ನು ಮಾತ್ರ ಎಲ್ಲರೂ ಗುರುತಿಸುವರು. ಇದರಿಂದ ನಿಮ್ಮನ್ನು ನೀವೇ ದೂಷಿಸಿಕೊಂಡರೆ ನಿಮ್ಮ ಮೂಡ್ ಹಾಳಾಗುವುದು. ಚಿಕ್ಕ ವಿಷಯಗಳಿಗೆ ತಲೆ ಕೆಡಿಸಿಕೊಳ್ಳಬೇಡಿ.

ಕನ್ಯಾ

ಮುಂದೆ ಒಳ್ಳೆಯ ಸ್ಡಿನಗಳಿರುವುದರಿಂದ ಸಂತೋಷದಿಂದಿರಿ, ಬ್ಯಾಂಕ್ ಹಾಗು ಹಣಕಾಸಿನ ವಿಷಯಗಳಲ್ಲಿ ತೊಡಗಿ ಕೊಳ್ಳುವಿರಿ. ನಿಮ್ಮ ಆಪ್ತರ ವಿಷಯದಲ್ಲಿ ಯಾರಿಗೆ ಬೆಂಬಲ ನೀಡುವುದೆಂದು ಗೊಂದಲಕ್ಕೊಳಗಾಗುವಿರಿ.

ತುಲಾ

ತುಂಬ ಚಿಂತಿಸುವ ನೀವು ರಕ್ತದೊತ್ತಡಕ್ಕೆ ಒಳಗಾಗಬಹುದು. ಯೋಚನೆ ಮಾಡಬೇಡಿ. ನೀವು ಮೊದಲು ಮನೆಯವರಿಗೆ ಗೌರವಕೊಡಿ ನಂತರ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ನೀವಾಗೇ ರೂಪುಗೊಳ್ಳುವಿರಿ.

ವೃಶ್ಚಿಕ

ಕೆಲಸ ತಡವಾಯಿತೆಂದು ಸಂಗಾತಿಯೊಂದಿಗೆ ಜಗಳವಾಡಬೇಡಿ. ಕಳೆದುಹೋದ ವಿಚಾರಗಳಿಗೆ ಚಿಂತಿಸುವ ಅಗತ್ಯವಿಲ್ಲ.  ವಿಭಿನ್ನ ರೀತಿಯಲ್ಲಿ ಪ್ರೀತಿಯನ್ನು ಅನುಭವಿಸುವ ಸಾಧ್ಯತೆ ಇದೆ.

ಧನಸ್ಸು

ಇಂದು ನೀವು ಆರಾಮವಾಗಿ ಸಂತೋಷದಿಂದಿರಲು ನಿರ್ಧರಿಸುವಿರಿ. ಸಣ್ಣ ಪುಟ್ಟ ವಿಷಯಗಳಿಗೆ ತಲೆ ಕೆಡಿಸಿಕೊಳ್ಳಬಾರದೆಂಬ ನಿಮ್ಮ ಯೋಚನೆ ಒಳ್ಳೆಯದೇ ಆಗಿದೆ. ಕೆಮ್ಮು ಹಾಗು ಶೀತದ ಸಮಸ್ಯೆ ಉಂಟಾಗಬಹುದು.

ಮಕರ

ನಿಮ್ಮ ಮನಸ್ಸಿಗೆ ನೋವುಂಟಾದಾಗ ಅದರಬಗ್ಗೆಯೆ ಯೋಚಿಸುವ ಬದಲಾ ಧನಾತ್ಮಕವಾಗಿ ಯೋಚಿಸಲು ತೊಡಗಿ. ಒಂದು ಒಳ್ಳೆಯ ಸಂಗೀತವನ್ನು ಕೇಳಿ ಆನಂದಿಸಿ, ಚಿಂತೆ ಬಿಡಿ. ಮನಸ್ಸಿನಲ್ಲಿ ಒಳ್ಳೆಯ ಕಲ್ಪನೆಯನ್ನು ಮಾಡಿಕೊಳ್ಳಿ, ಒಳ್ಳೆಯದೇ ಆಗುತ್ತದೆ.

ಕುಂಭ

ಲೋಹದ ವಸ್ತುಗಳನ್ನು ಮಾರುವ ವ್ಯಾಪಾರಿಗಳು ಹಾಗು ರಿಯಲ್ ಎಸ್ಟೇಟ್ ನಲ್ಲಿ ತೊಡಗುವವರು ಎಚ್ಚರದಿಂದಿರಿ. ಕೆಲಸಮಾಡುವ ಜಗದಲ್ಲಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಕಷ್ಟವಾಗಬಹುದು.

ಮೀನಾ

ಒಬ್ಬ  ಆಧ್ಯಾತ್ಮಿಕ ವ್ಯಕ್ತಿಯನ್ನುಭೇಟಿ ಮಾಡುವಿರಿ ಅದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ, ಮನೆಯ ಕೆಲಸಗಳನ್ನು ಮಾಡುವುದರ ಜೊತೆಗೆ ಆರೋಗ್ಯದಕಡೆ ಗಮನಹರಿಸಿ. ಒಳ್ಳೆಯದೇ ಆಗುವುದು.


Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon