Link copied!
Sign in / Sign up
1
Shares

ಇಂದಿನ ರಾಶಿ ಭವಿಷ್ಯ..

ಮೇಷ

ಖರ್ಚು ವೆಚ್ಚದಲ್ಲಿ ಏರಿಕೆಯಾಗುತ್ತದೆ, ಉದಾರತೆ ಒಳ್ಳೆಯದಷ್ಟೇ ಆದರೆ ಅದನ್ನು ಒಂದು ಮಿತಿಯಲ್ಲಿಡಬೇಕು. ಇಮ್ಮ ಕೈಕೆಳಗೆ ಕೆಲಸಮಾಡುವವರು ಏನು ಹೇಳುತ್ತಾರೆಂದು ಕೇಳಿ. ಹೊರಹೋಗಲು ತಯಾರಿದ್ದಾರೆ ವಿಳಂಬವಾಗಬಹುದು.

ವೃಷಭ

ಅನಗತ್ಯ ವಿಷಯಗಳಿಗೆ ನೀವು ಯಾವಾಗಲು ತಲೆಕೆಡಿಸಿಕೊಳ್ಳುವಿರಿ. ಹೆಚ್ಚು ಹಣ ಗಳಿಸಬೇಕೆಂಬ ನಿಮ್ಮ ಆಲೋಚನೆಗೆ ತಕ್ಕಂತೆ ಸುಭದ್ರ ರೀತಿಯಲ್ಲಿ ಹಣವನ್ನು ಹೂಡಿಕೆ ಮಾಡಿ.

ಮಿಥುನ

ಇಂದು ಟ್ರಾಫಿಕ್ ನಲ್ಲಿ ರಸ್ತೆ ದಾಟುವಾಗ ಎಚ್ಚರ ವಹಿಸಿ. ಸಂಗಾತಿಯ ಜೊತೆ ಸಭ್ಯತೆ ಯನ್ನು ಕಾಪಾಡಿಕೊಳ್ಳಿ. ನಿಮ್ಮ ಸಂಗಾತಿಗೆ ಇಷ್ಟವಿಲ್ಲದಿದ್ದರು ನೀವು ಅವರನ್ನು ಒತ್ತಾಯಿಸಬಹುದು. ಇದರಿಂದ ನಿಮಗೆ ಬೇಜಾರಾಗುವುದು.

ಕಟಕ

ಇಂದು ನೀವು ಹಣವನ್ನು ಹೆಚ್ಚು ಗಳಿಸಬೇಕೆಂಬ ನಿರ್ಧಾರದಿಂದ ಶೇರ್ ಹಾಗು ಇತರ ವ್ಯವಹಾರಗಳಲ್ಲಿ ಹೂಡಿಕೆ ಮಾಡುವಿರಿ. ಇಂದು ಒತ್ತಡದಿಂದ ಕೂಡಿದ್ದರು ಲಾಭದಾಯಕವಾಗಿರುತ್ತ್ತದೆ.

ಸಿಂಹ

ನಿಮ್ಮ ಮುಂಗೋಪದಿಂದ ಸಂಗತಿಯಜೊತೆ ಜಗಳ ಉಂಟಾಗುವುದು.  ಸಂಬಂದಿಕರು ಹಾಗು ಸ್ನೇಹಿತರಿಂದ ಅನಿರೀಕ್ಷಿತ ಉಡುಗೊರೆ ಲಭಿಸುವುದು.

ಕನ್ಯಾ

ಆಹಾರ ಕ್ರಮದಲ್ಲಿ ಮುತುವರ್ಜಿ ವಹಿಸಿ, ಪಾನೀಯಗಳನ್ನು ಅತಿಯಾಗಿ ಸೇವಿಸುವುದನ್ನು ನಿಲ್ಲಿಸಿ. ನಿಮ್ಮ ಸ್ನೇಹಿತರ ಜಗಳದಿಂದ ನಿಮಗೆ ನೋವುಂಟಾಗಬಹುದು.

ತುಲಾ

ಇಬ್ಬರ ಜಗಳದಿಂದ ನಿಮಗೆ ಲಾಭವಾಗಬಹುದು. ಮನೆಕೆಲಸಗಳನ್ನು ಬೇಗನೆ ಮಾಡಿ ಮುಗಿಸಲು ನಿಮ್ಮ ಸಂಗಾತಿಯೊಂದಿಗೆ ಚರ್ಚಿಸಿ. ಮಕ್ಕಳಿಗೆ ಮನರಂಜನೆಯಲ್ಲಿ ತೊಡಗಲು ಅವಕಾಶ ಕೊಡಿ.

ವೃಶ್ಚಿಕ

ಕೆಲಸಗಳು ನೀವಂದು ಕೊಂಡ ರೀತಿ ಸಾಗುವುದಿಲ್ಲ ಇದರಿಂದ ಬೇರೆಯವರ ಮೇಲೆ ಕೋಪಗೊಳ್ಳಬೇಡಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಸಂಗಾತಿ  ಇಂದ ನಿರಾಶೆಗೊಳ್ಳಬಹುದು.

ಧನು

ನೀವು ಬೆಂಬಲಿಸುವವರಿಂದ ನಿಮಗೆ ನೀವಂದುಕೊಂಡ ರೀತಿಯಲ್ಲಿ ಬೆಂಬಲ ಸಿಗುವುದಿಲ್ಲ. ಏನೇ ಮಾಡಿದರು ನಿಮ್ಮ ಸಂಗಾತಿಗೆ ತಿಳಿಸಿನಂತರ ನಿರ್ಧಾರ ಕೈಗೊಳ್ಳಿ. ಸುಖಾಸುಮ್ಮನೆ ಕೋಪಗೊಳ್ಳಬೇಡಿ. ತಾಳ್ಮೆ ಇರಲಿ.

ಮಕರ

ನೀವು ಒಮ್ಮೊಮ್ಮೆ ವಿಚಿತ್ರರೀತಿಯಲ್ಲಿ ಯೋಚಿಸುತ್ತೀರಿ, ಅದರಿಂದ ಕೆಲವೊಮ್ಮೆ ಒಳ್ಳ್ಳೆಯದೆ ಆಗುತ್ತದೆ. ಒಳ್ಳೆಯ ದಿನಗಳು ನಿಮಗೆ ಕಾದಿದೆ. ಇಂದಿನ ಕೆಲಸವನ್ನು ಇಂದೇ ಪೂರ್ಣಗೊಳಿಸಿ.

ಕುಂಭ

ಎಷ್ಟೇ ಪ್ರಾಮಾಣಿಕವಾಗಿ ಕೆಲಸ ಮಾಡಿದರು ನಿಮಗೆ ಮನಸ್ಸಿಗೆ ನೋವುಂಟಾಗಬಹುದು. ನಿಮ್ಮ ಭವಿಷ್ಯದ ಯೋಜನೆಗಳಿಗೆ ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ. ವ್ಯಾಯಾಮದ ಮೂಲಕ ತೂಕವನ್ನುಇಳಿಸಲು ಪ್ರಯತ್ನಿಸಿ.

ಮೀನಾ

ನಿಮ್ಮ ಎಲ್ಲ ಯೋಹಣೆಗಳು ಪ್ರಗತಿಯನ್ನು ಕಾಣುವುದು. ಕೆಲಸದಲ್ಲಿ ಬಡ್ತಿ ಸಿಗುವುದು. ಮಾತನ್ನು ನಿಯಂತ್ರಿಸಲು ಪ್ರಯತ್ನಿಸಿ. ನಿಮ್ಮ ಗೌರವ, ಘನತೆ ಸಮಾಜದಲ್ಲಿ ಹೆಚ್ಚಾಗುವುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon