Link copied!
Sign in / Sign up
4
Shares

ಸ್ನೇಹ ಮಾಡಿದರೆ ಈ 5 ರಾಶಿಯವರ ಸ್ನೇಹವನ್ನೇ ಮಾಡಬೇಕು!

ಎಲ್ಲಾ ರಾಶಿಯು ಒಂದೇ ರೀತಿ ಇರುವುದಿಲ್ಲ, ಹೀಗಾಗಿ ಪ್ರತಿಯೊಂದು ರಾಶಿಯವರೂ ಇನ್ನೊಂದು ರಾಶಿಯವರಿಗಿಂತ ಭಿನ್ನವಾಗಿರುತ್ತಾರೆ. ಹೀಗಾಗಿ ಕೆಲವು ಜನರು ನಮ್ಮೊಂದಿಗೆ ಬೇಗನೆ ಹೊಂದುಕೊಂಡುಬಿಡುವರು, ಬೇಗ ಆತ್ಮೀಯರಾಗಿ ಬಿಡುವರು, ಅಲ್ಲಿ ದಿಢೀರನೆ ಒಂದು ಗಟ್ಟಿಯಾದ ಸ್ನೇಹ ಬೆಳೆದು ಬಿಡುತ್ತದೆ.

ಜ್ಯೋತಿಷ್ಯದ ಪ್ರಕಾರ, ಕೆಲವು ಜನರಲ್ಲಿ ಈ ಸ್ನೇಹದ ಬಾಂಧವ್ಯವು ರಕ್ತದಲ್ಲೇ ಬಂದಿರುತ್ತದೆ ಮತ್ತು ಇನ್ನೂ ಕೆಲವು ರಾಶಿಗಳಲ್ಲಿನ ಜನರಿಗೆ ಮೊದಲಿನಿಂದಲೇ ಎಂಥವರಿಗೂ ಅದ್ಭುತ ಗೆಳೆಯರಾಗುವ ಕಲೆ ಒಲಿದಿರುತ್ತದೆ, ಇನ್ನೂ ಕೆಲವು ರಾಶಿಗಳಲ್ಲಿನ ಜನರು ಒಳ್ಳೆಯ ಸ್ನೇಹಿತರಾಗಲು ಸ್ವಲ್ಪ ಶ್ರಮವಹಿಸಬೇಕು.

ಜ್ಯೋತ್ಯಿಷ್ಯದ ವಿಷಯಕ್ಕೆ ಬಂದಾಗ, ಎಲ್ಲಾ ರಾಶಿಗಳಿಗೂ ತಮ್ಮದೇ ಆದಂತಹ ಶಕ್ತಿಗಳು ಮತ್ತು ದುರ್ಬಲತೆಗಳು ಇರುತ್ತವೆ. ಹೀಗಾಗಿ, ನಿಷ್ಠೆ ಎನ್ನುವುದು ಎಲ್ಲರ ಶಕ್ತಿಯಾಗಿರುವುದಿಲ್ಲ. ಕೆಲವೊಮ್ಮೆ ಇಂತವರು ತಮ್ಮ ಮಹತ್ವಾಕಾಂಕ್ಷೆಗಳನ್ನ ಈಡೇರಿಸಿಕೊಳ್ಳುವ ಭರದಲ್ಲಿ ತಮಗೆ ಯಾವುದು ಒಳ್ಳೆಯದೆಂದು ಮಾತ್ರ ನೋಡಿಕೊಳ್ಳಬಹುದು, ಕೆಲವೊಮ್ಮೆ ಅದು ತನ್ನ ಸ್ನೇಹಿತನಿಗೇನೇ ತೊಂದರೆ ಉಂಟು ಮಾಡಿದರೂ.

ಹೀಗೆಂದ ಮಾತ್ರಕ್ಕೆ ನಾವು ಕೇವಲ ಒಬ್ಬ ವ್ಯಕ್ತಿಯ ರಾಶಿಯನ್ನು ನೋಡಿ ಆತ ಸ್ನೇಹಕ್ಕೆ ಅರ್ಹನಲ್ಲ ಎಂದಾಗಲಿ ಅಥವಾ ಆತ ಕೆಟ್ಟವನು ಎಂದರ್ಥವಲ್ಲ. ನಮ್ಮ ಮಾತಿನ ಅರ್ಥ, ಆ ವ್ಯಕ್ತಿಯಲ್ಲಿನ ಶಕ್ತಿಗಳಲ್ಲಿ ಸ್ನೇಹಕ್ಕೆ ಸಂಬಂಧಿಸಿರುವುದು ಯಾವುದು ಇಲ್ಲವೆಂಬುದು ಅಥವಾ ಆತನ ಕೆಲವೊಂದು ದುರ್ಬಲತೆಗಳು ಸ್ನೇಹಕ್ಕೆ ತೊಂದರೆಗಳನ್ನ ತಂದಿಡಬಹುದು ಎಂಬುದು.

ಅದೇನೇ ಇರಲಿ, ನಿಮಗೆ ನಂಬಿಕೆ ಇಡಬಹುದಾದಂತಹ ಸ್ನೇಹ ಅಥವಾ ಸ್ನೇಹಿತರು ಬೇಕಿದ್ದರೆ, ನಾವು ಕೆಳಗೆ ತಿಳಿಸಿರುವ ರಾಶಿಯ ಜನರೊಂದಿಗೆ ಹೆಚ್ಚು ಬೆರೆಯಿರಿ. ಅಲ್ಲದೆ, ಇದರಿಂದ ಇತರರಿಗೆ ನೀವೆಷ್ಟು ಪ್ರಾಮಾಣಿಕ ಗೆಳೆಯ ಆಗಿದ್ದೀರಾ ಎಂಬುದನ್ನು ನೀವು ತಿಳಿದಿಕೊಳ್ಳಬಹುದು.

 

೧. ವೃಷಭ ರಾಶಿ

ನೀವು ಇವರನ್ನ ನಂಬಿಕೊಳ್ಳಬಹುದು. ವೃಷಭ ರಾಶಿಯವರ ಎರಡು ಅತ್ಯಂತ ಶಕ್ತಿಶಾಲಿ ಗುಣಗಳು ಎಂದರೆ ಅದು ಅವರ ಭಕ್ತಿ ನಿಷ್ಠೆ ಮತ್ತು ವಿಶ್ವಾಸ ಇಡಬಹುದಾದಂತಹ ವ್ಯಕ್ತಿತ್ವ. ಇವೆರೆಡು ಗುಣಗಳು ಉತ್ತಮ ಗೆಳೆಯನೊಬ್ಬನಿಗೆ ಇರಬೇಕಾದವು. ನೀವು ಅವರನ್ನ ಮುಖ್ಯ ಸಮಾರಂಭ ಆಗಲಿ ಅಥವಾ ಘಟನೆಗೆ ಸಾಕ್ಷಿಯಾಗಲು, ಸಹಾಯ ಮಾಡಲು ಆಹ್ವಾನಿಸಿ, ಒಂದೇ ಮಾತಿಗೆ ಅವರು ನಿಮ್ಮೊಂದಿಗೆ ನಿಲ್ಲುತ್ತಾರೆ.

ಅಲ್ಲದೆ ವೃಷಭ ರಾಶಿಯವರು ಒಮ್ಮೆ ಮಾತು ಕೊಟ್ಟರೆ, ಅದನ್ನು ತಪ್ಪುವುದಿಲ್ಲ. ನಿಮ್ಮ ಪ್ಲಾನ್ಸ್ ಅನ್ನು ಅವರು ಕ್ಯಾನ್ಸಲ್ ಮಾಡುವುದಿಲ್ಲ. ಅಲ್ಲದೆ ಅವರಿಗೆ ನಿಷ್ಠೆ ಅನ್ನುವುದು ತುಂಬಾ ಇರುವ ಕಾರಣ, ಇತರರ ಮುಂದೆ ನಿಮ್ಮನ್ನು ಬಿಟ್ಟು ಕೊಡುವುದಿಲ್ಲ.

 

೨. ಕಟಕ ರಾಶಿ

ಕಟಕ ರಾಶಿಯವರು ತುಂಬಾನೇ ಭಾವನತ್ಮಕ ಜೀವಿಗಳು. ಪ್ರತಿಯೊಂದು ಭಾವನೆಯನ್ನು ಇವರು ತುಂಬಾ ಆಳವಾಗಿ ಅನುಭವಿಸುತ್ತಾರೆ. ಒಬ್ಬರು ತನ್ನನ್ನ ನೋಯಿಸಿದರೆ ಎಷ್ಟು ಕಠಿಣವೆನಿಸುತ್ತದೆ, ಎಷ್ಟು ಕಷ್ಟವೆನಿಸುತ್ತದೆ ಎಂಬುದು ಇವರಿಗೆ ಗೊತ್ತಿರುವ, ಅನುಭವಿಸಿರುವ ಕಾರಣ, ಇವರು ಇತರರಿಗೆ ನೋವು ಉಂಟು ಮಾಡುವುದಿಲ್ಲ. ಅಲ್ಲದೆ ಇವರ ಕರುಣಾಮಯಿ ಗುಣ ಕೂಡ ಇವರನ್ನು ಹೀಗೆ ಮಾಡುತ್ತದೆ.

ಇನ್ನೊಬ್ಬರ ಬಗ್ಗೆ ಕರುಣೆ ಹೊಂದಿರುವವರು ತನ್ನ ಸ್ನೇಹಿತರಿಗೆ ಎಂದೂ ಮೋಸ ಮಾಡುವುದಿಲ್ಲ. ಒಬ್ಬ ಮೋಸಗಾರ ಸ್ನೇಹಿತನಿಂದ ಒಬ್ಬ ವ್ಯಕ್ತಿಯ ಮನಸ್ಸಿಗೆ ಎಷ್ಟು ನೋವಾಗುತ್ತದೆ ಎಂಬುದು ಅವರಿಗೆ ಗೊತ್ತಿರುತ್ತದೆ. ಕಟಕ ರಾಶಿಯವರು ತಮ್ಮ ಸುತ್ತಮುತ್ತಲಿನ ಜನರೊಂದಿಗೆ ಬಹಳ ಬೇಗನೆ ಆತ್ಮೀಯತೆ ಬೆಳೆಸಿಕೊಂಡು ಬಿಡುತ್ತಾರೆ. ಈ ಕಾರಣಗಳಿಂದ, ಅವರು ನಿಮ್ಮ ಸ್ನೇಹಕ್ಕೆ ಕೊಡುವ ಬೆಳೆಯಿಂದ, ಅವರು ನಿಮ್ಮ ಸ್ನೇಹವನ್ನ ಉಳಿಸಿಕೊಳ್ಳಲು ಏನು ಬೇಕಾದರೂ ಮಾಡುವರು.

 

೩. ತುಲಾ ರಾಶಿ

ತುಲಾ ರಾಶಿಯನ್ನು ಒಂದು ಪ್ರಾಮಾಣಿಕ ರಾಶಿಯೆಂದೇ ಗುರುತಿಸಲಾಗುತ್ತದೆ. ಈ ಕಾರಣದಿಂದ ಈ ರಾಶಿಯವರು ಸ್ನೇಹದಲ್ಲಿ ನಿಮಗೆ ನೋವು ಉಂಟು ಮಾಡುವುದಿಲ್ಲ ಎಂಬುದಂತೂ ಸ್ಪಷ್ಟ. ಅವರು ಏನೇ ಆದರೂ ನಿಮ್ಮ ಬೆನ್ನ ಹಿಂದೆ ಇರುತ್ತಾರೆ. ಒಂದು ವೇಳೆ ನೀವು ಮತ್ತು ನಿಮ್ಮ ತುಲಾ ರಾಶಿಯ ಸ್ನೇಹಿತ ಎಲ್ಲಾದರೂ ಸಿಲುಕಿ ಹಾಕಿಕೊಂಡಿದ್ದು, ಕೇವಲ ಒಬ್ಬರು ಮಾತ್ರವೇ ಅದರಿಂದ ಹೊರಬರಬಹುದು ಎಂದಿದ್ದರೆ, ನಿಮ್ಮ ಸ್ನೇಹಿತ ಅಲ್ಲಿಂದ ಹೊರಬರುವ ಬದಲು ನಿಮ್ಮ ಜೊತೆಯಲ್ಲೇ ಇರುವಂತಹ ವ್ಯಕ್ತಿ ಆಗಿರುತ್ತಾನೆ.

ಇವರೂ ಕರುಣಾಮಯಿಗಳು ಆಗಿರುವುದರಿಂದ ಇವರ ದೃಢವಾದ ಸ್ನೇಹದ ಬೇರು ಒಳ್ಳೆಯ ನೆಲದಿಂದಲೇ ಬರುತ್ತದೆ. ಇದರ ಅರ್ಥ, ನೀವು ಅವರಿಗೆ ಏನು ನೀಡಬಹುದು, ಎಷ್ಟು ನೀಡಬಹುದು ಎಂಬುದನ್ನು ನೋಡಿ ಅವರು ನಿಮ್ಮ ಸ್ನೇಹವನ್ನು ರೇಟ್ ಮಾಡುವುದಿಲ್ಲ.

 

೪. ವೃಶ್ಚಿಕ

ಇನ್ನೊಬ್ಬ ನಿಷ್ಠಾವಂತ ಗೆಳೆಯ ಎಂದರೆ ಅದು ವೃಶ್ಚಿಕ. ಕೆಲವೊಮ್ಮೆ ಈ ರಾಶಿಯ ವ್ಯಕ್ತಿಗಳು ತಮ್ಮ ಹಠಮಾರಿತನ ಮತ್ತು ತಾನು ಹೇಳಿದ್ದೆ ಆಗಬೇಕು ಎಂಬ ಹುಂಬತನದಿಂದ ನಿಮಗೆ ತಲೆನೋವಾಗಿ ಪರಿಣಮಿಸಿದರೂ, ನಿಮ್ಮ ಕಷ್ಟದ ಸಮಯದಲ್ಲಿ ಅಲುಗಾಡದೆ ನಿಮ್ಮ ಬೆನ್ನ ಹಿಂದೆ ನಿಲ್ಲುತ್ತಾರೆ. ವೃಶ್ಚಿಕ ರಾಶಿಯವರು ಎಂತಹವರು ಎಂಬ ಉದಾಹರಣೆಗೆ, ಶಾಲೆಯಲ್ಲಿ ಯಾವುದಾದರೂ ಹುಡುಗನನ್ನು ತರಗತಿಯ ಇತರೆ ಹುಡುಗರು ಸೇರಿಕೊಂಡು ಗೋಳು ಹೊಯ್ದುಕೊಳ್ಳುತ್ತಿದ್ದರೆ, ಆ ಪಾಪದ ಹುಡುಗನ ರಕ್ಷಣೆಗೆ ಇಡೀ ಪುಂಡ ಹುಡುಗರ ವೈರತ್ವ ಕಟ್ಟಿಕೊಳ್ಳಲು ಮುಂದಾಗುವ ಹುಂಬ, ಆದರೆ ನಿಷ್ಠಾವಂತ ಸ್ನೇಹಜೀವಿ ವೃಶ್ಚಿಕ ರಾಶಿಯವನು.

 

೫. ಮೀನಾ

ಮೀನಾ ರಾಶಿಯ ಸ್ನೇಹಿತನಿಗೆ ನೀವು ಉಟ್ಟ ಬಟ್ಟೆಯನ್ನು ಬಿಚ್ಚಿಕೊಡು ಎಂದರೆ ಕೊಡುವನು. ಇವರು ನಿಸ್ವಾರ್ಥಿಗಳು ಆಗಿರುತ್ತಾರೆ ಮತ್ತು ಧಾರಾಳತನವನ್ನು ಮೈಗೂಡಿಸಿಕೊಂಡಿರುತ್ತಾರೆ. ಈ ಗುಣವೇ ಅವರನ್ನು ನಿಷ್ಠಾವಂತ ಸ್ನೇಹಿತರನ್ನಾಗಿ ಮಾಡುತ್ತದೆ. ಅವರು ಬೇಕಿದ್ದರೆ ತಾವು ತೊಂದರೆ ಮಾಡಿಕೊಂಡು ತಮ್ಮ ಸ್ನೇಹಿತರನ್ನ ಖುಷಿ ಪಡಿಸುತ್ತಾರೆ.

ಅಲ್ಲದೆ ಇವರು ಜನರನ್ನ ಬಲುಬೇಗನೆ ನಂಬುತ್ತಾರೆ ಮತ್ತು ಭೇಟಿ ಆದವರೆಲ್ಲರ ಜೊತೆ, ಮಾತು ಆಡಿದವರ ಜೊತೆಯಲೆಲ್ಲಾ ಸಂಪೂರ್ಣವಾಗಿ ಆತ್ಮೀಯವಾಗಿ ಬಿಡುತ್ತಾರೆ. ಇತರರ ಮೇಲೆ ಅನುಮಾನ ಪಡುವ ಅಥವಾ ನಂಬಿಕೆ ಇಡದಂತಹ ವ್ಯಕ್ತಿಗಳು, ತಮಗೆ ಏನಾಗಿ ಬಿಡುತ್ತದೋ ಎಂಬ ಭಯದಿಂದಲೇ ತಮಗೆ ಯಾವುದು ಒಳ್ಳೆಯದೋ ಅದನ್ನು ಮಾಡಿಬಿಡುತ್ತಾರೆ. ಆದರೆ ಮೀನಾ ರಾಶಿಯವರು ಇಂತವರಲ್ಲ. ಕಾಡಿನ ನಡುವೆ ನೀವು ಸಿಕ್ಕಿ ಹಾಕಿಕೊಂಡಿದ್ದರೂ, ನಡುರಸ್ತೆಯಲ್ಲಿ ನಿಮ್ಮ ಟೈಯರ್ ಪಂಚರ್ ಆಗಿದ್ದರೂ, ಇವರು ಒಂದೇ ಮಾತಿಗೆ ನಿಮ್ಮಲ್ಲಿಗೆ ಸಹಾಯ ಮಾಡಲು ಬರುತ್ತಾರೆ. ಮರುಪ್ರಶ್ನೆಯನ್ನು ಕೇಳದೆ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon