Link copied!
Sign in / Sign up
59
Shares

ಕಡಿಮೆ ಸಮಯದಲ್ಲಿ ತೂಕ ಕಡಿಮೆ ಮಾಡಿಕೊಳ್ಳಲು ಸಿಂಪಲ್(ಸುಲಭ) ಉಪಾಯಗಳು

ಆರೋಗ್ಯಕರವಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಅನುಕ್ರಮವಾದ ಪ್ರಕ್ರಿಯೆ. ಆದರೆ ನಿಮ್ಮ ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಗಳನ್ನು ನೀವು ಮಾಡಿಕೊಳ್ಳುವುದು ತ್ವರಿತವಾಗಿ ಅಂದರೆ ೧೫ದಿನಗಳ ಒಳಗೆ ನಿಮ್ಮ ತೂಕವನ್ನು ಆರೋಗ್ಯಕರವಾಗಿ ಕಡಿಮೆ ಮಾಡಿಕೊಳ್ಳಬಹುದು. ಅವುಗಳ ಕೆಲವು ಸಲಹೆಗಳನ್ನು ಇಲ್ಲಿ ತಿಳಿಯಿರಿ.

೧.ಹೆಚ್ಚು ಫೈಬರ್ ಅನ್ನು ಸೇವಿಸಿ

ಆಹಾರ ಸೇವಿಸುವ ಮೂಲಕ ತೂಕ ಕಡಿಮೆ ಮಾಡಿಕೊಳ್ಳಲು ಇರುವ ಒಂದು ಉತ್ತಮ ಮಾರ್ಗವೆಂದರೆ, ಅಧಿಕ ಫೈಬರ್ ಅನ್ನು ಸೇವಿಸುವುದು. ದಿನಕ್ಕೆ ೩೦ಗ್ರಾಂ ಫೈಬರ್ ಅನ್ನು ಸೇವಿಸಲು ಶಿಫಾರಸ್ಸು ಮಾಡುವೆವು. ಆದರೆ ಹಲವು ಜನರು ಫೈಬರ್ ಅನ್ನು ಹೆಚ್ಚು ಸೇವಿಸುವುದಿಲ್ಲ.

ಇದು ಹೇಗೆ ಸಹಾಯವಾಗುತ್ತದೆ?

ಫೈಬರ್ ಅಲ್ಲಿ ಎರಡು ತರ ಇದೆ, ಒಂದು ನೀರಿನಲ್ಲಿ ಕರಗುತ್ತದೆ, ಇನ್ನೊಂದು ಕರಗುವುದಿಲ್ಲ. ನೀರಿನಲ್ಲಿ ಕರಗಬಲ್ಲ, ಫೈಬರ್ ನೀರನ್ನು ಹೀರಿಕೊಳ್ಳುತ್ತದೆ ಮತ್ತು ಜೀರ್ಣಕ್ರಿಯೆ ನಡೆಯುವಾಗ ಜೆಲ್ ಅನ್ನು ಬಿಡುಗಡೆ ಮಾಡುತ್ತದೆ. ಕರಗದ ಫೈಬರ್ ಆಗೆಯೇ ಉಳಿದುಕೊಳ್ಳುತ್ತದೆ. ಎರಡು ವಿಧದ ಫೈಬರ್ ಗಳು ಜೀರ್ಣಕ್ರಿಯೆಯನ್ನು ನಿಧಾನವಾಗಿ ಆಗುವಂತೆ ಮಾಡುತ್ತವೆ. ಮತ್ತು ನಿಮಗೆ ದೀರ್ಘ ಕಾಲದ ವರೆಗೆ ಹಸಿವಾಗದಂತೆ ಅಥವಾ ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುತ್ತದೆ.

೨.ಕಾರ್ಬೋಹೈಡ್ರೇಟ್ ಗಳ ಸೇವನೆಯನ್ನು ಕಡಿಮೆ ಮಾಡಿ

ಇವುಗಳು ಹಲವು ಜನರ ಪ್ರತಿದಿನದ ಆಹಾರದಲ್ಲಿ ಇರುತ್ತದೆ. ನಿಜವೆಂದರೆ, ಹೆಚ್ಚಿನ ಜನರು ಇವುಗಳನ್ನು ಸೇವಿಸುವರು. ಇದು ನೀವು ಸಣ್ಣಗಾಗಲು ಸಮಸ್ಯೆಯನ್ನು ಮಾಡುವುದು ಏಕೆಂದರೆ, ಇದರ ಪ್ರತಿ ಗ್ರಾಂ ನಲ್ಲಿ, ನಾಲ್ಕು ಕ್ಯಾಲೋರಿಗಳಿರುತ್ತವೆ.

ಇದು ಹೇಗೆ ಸಹಾಯವಾಗುತ್ತದೆ?

ಕಾರ್ಬೋಹೈಡ್ರೇಟ್ ಗಳ ಸೇವನೆಯಿಂದ ನಿಮ್ಮ ಪ್ರತಿದಿನದ ಸೇವನೆಯಲ್ಲಿ ನೀವು ಅಧಿಕ ಕ್ಯಾಲೋರಿಗಳನ್ನು ಸೇವಿಸುವಿರಿ. ನೀವು ಸಣ್ಣಗಾಗಲು ನಿಮ್ಮ ದೇಹದಲ್ಲಿರುವ ಕ್ಯಾಲೋರಿಯನ್ನು ಕಡಿಮೆ ಮಾಡಿಕೊಳ್ಳಬೇಕು, ಆದ್ದರಿಂದ ಇದರ ಕಡಿಮೆ ಸೇವನೆ ನಿಮಗೆ ಸಣ್ಣಗಾಗಲು ಉಪಯೋಗವಾಗುತ್ತದೆ.

೩.ಆರೋಗ್ಯಕಾರ ಫ್ಯಾಟ್ಸ್ ಸೇವಿಸಿ

ಪ್ರಚಲಿತ ಫ್ಯಾಟ್ ದೇಹಕ್ಕೆ ಒಳ್ಳೆಯದಲ್ಲ ಎಂಬ ವದಂತಿ ಇದೆ, ಆದರೆ ಇದು ಸಂಪೂರ್ಣ ನಿಜವಲ್ಲ. ದೇಹಕ್ಕೆ ಅವಶ್ಯವಿರುವ ಆರೋಗ್ಯಕರ ಫ್ಯಾಟ್ಸ್ ಮತ್ತು ಬೇಡವಾದ ಫ್ಯಾಟ್ಸ್ ಎರಡು ಇದೆ ಅದನ್ನು ಆಯ್ಕೆ ಮಾಡಿಕೊಳ್ಳುವಾಗ ನೀವು ಎಚ್ಚರವಹಿಸುವುದು ಉತ್ತಮ.

ಇದು ಹೇಗೆ ಸಹಾಯವಾಗುತ್ತದೆ?

ಬಹುತೇಕ ಎಲ್ಲಾ ಜಂಕ್ ಫುಡ್ಸ್ ದೇಹಕ್ಕೆ ಬೇಡವಾದ ಅಥವಾ ಸ್ಯಾಚುರೇಟೆಡ್ ಫ್ಯಾಟ್ ಗಳನ್ನು ಹೊಂದಿರುತ್ತದೆ. ನೀವು ಕಾಯಿಲೆಗೆ ಬೀಳಲು ಅವುಗಳೇ ಕಾರಣ, ಆದರೆ ಅನ್ ಸ್ಯಾಚುರೇಟೆಡ್ ಫ್ಯಾಟ್ಸ್ ಗಳು ನಿಮ್ಮ ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಇವುಗಳನ್ನು ನೀವು ಅವಕ್ಯಾಡೊ(ಬೆಣ್ಣೆ ಹಣ್ಣು), ಆಲಿವ್ ಎಣ್ಣೆ, ಧಾನ್ಯಗಳು ಮತ್ತು ಬೀಜಗಳಲ್ಲಿ ಕಾಣಬಹುದು. ಇವುಗಳನ್ನು ಸೇವಿಸುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

೪.ಕಟ್ಟುಪಾಡನ್ನು ಜೀವನಕ್ಕೆ ಅಳವಡಿಸಿಕೊಳ್ಳುವುದು

ಬೇಗ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ಇದನ್ನು ಮಾಡಲೇ ಬೇಕು, ಆದರೆ ಕೆಲವರಿಗೆ ಇಷ್ಟವಾಗುವುದಿಲ್ಲ, ಕೆಲವರಿಗೆ ಹಲವು ಕಾರಣಗಳಿಂದ ಮಾಡಲು ಆಗುವುದಿಲ್ಲ, ನಾವು ಏನು ಮಾಡಬೇಕು ಎಂಬ ಪ್ರಶ್ನೆ ಕಾಡಬಹುದು, ಚಿಂತಿಸಬೇಡಿ, ನೀವು ಪ್ರತಿದಿನ ಸ್ವಲ್ಪ ದೂರ ನಡೆಯಿರಿ, ಮತ್ತು ಬೆನ್ನನ್ನು ನೇರವಾಗಿ ಇರಿಸಿ ತೊಡೆಮಡಚಿಕೊಂಡು ಕುಳಿತು ೩ನಿಮಿಷ ಧ್ಯಾನ ಮಾಡಿ. ಸಾದ್ಯವಾದರೆ ಸುಲಭವಾದ ವ್ಯಾಯಾಮ ಮಾಡಿ.

ಇದು ಹೇಗೆ ಸಹಾಯವಾಗುತ್ತದೆ?

ಸ್ವಲ್ಪ ವ್ಯಾಯಾಮ ಮಾಡುವುದು ಮಾಡದೇ ಇರುವುದಕ್ಕಿಂತ ಉತ್ತಮ ಅಲ್ಲವೇ? ಸ್ವಲ್ಪ ದೂರ ನಡೆಯುವುದು ಅಥವಾ ಸುಲಭ ವ್ಯಾಯಾಮ ಮಾಡುವುದು ದೇಹದಲ್ಲಿನ ಕ್ಯಾಲೋರಿಯನ್ನು ಕಡಿಮೆ ಮಾಡಲು ನೆರವಾಗುತ್ತದೆ ಮತ್ತು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.

೫.ಸ್ನ್ಯಾಕ್ಸ್ ಅನ್ನು ಸರಿಯಾಗಿ ಆಯ್ಕೆ ಮಾಡಿಕೊಳ್ಳಿ

ದಿನಕ್ಕೆ ಮೂರು ಬಾರಿ ಆಹಾರ ಸೇವಿಸುವುದು, ಮಧ್ಯದ ಸಮಯದಲ್ಲಿ ನಿಮಗೆ ಹಸಿವಾಗುವಂತೆ ಮಾಡಬಹುದು, ಮತ್ತು ಹೆಚ್ಚಿನ ಜನರು ಇಲ್ಲಿ ತಮ್ಮ ಎಲ್ಲಾ ಆಸೆಯನ್ನು ಕರಗಿಸಿಕೊಳ್ಳುವರು. ನಾವು ಆಹಾರದಲ್ಲಿ ಸರಿಯಾಗಿ ಕ್ರಮವಾಗಿ ಸೇವಿಸಿದರು ಮತ್ತು ನಿಯಮಿತವಾಗಿ ಇದ್ದರು, ಸ್ನ್ಯಾಕ್ಸ್ ಅನ್ನು ಸೇವಿಸಿದಾಗ ನಿಮ್ಮ ಆ ದಿನದ ಎಲ್ಲಾ ಶ್ರಮವು ವ್ಯರ್ಥವಾಗುವುದು.  ಇದಕ್ಕಾಗಿ ಈ ಸಮಯದಲ್ಲಿ ನೀವು ಸರಿಯಾದ ಉಪಹಾರಗಳನ್ನು ಆಯ್ಕೆಮಾಡಿಕೊಳ್ಳುವುದು ಉತ್ತಮ.

೬.ಹೆಚ್ಚು ನೀರನ್ನು ಕುಡಿಯಿರಿ

ನಿಮ್ಮ ದೇಹಕ್ಕೆ ಅಗತ್ಯವಿರುವ ನೀರನ್ನು ಕುಡಿಯುವುದು ನಿಜಕ್ಕೂ ಅವಶ್ಯಕವಾಗಿದೆ. ನಿಮ್ಮ ದೇಹಕ್ಕೆ ಅಗತ್ಯ ಇರುವ ನೀರಿಗಿಂತ ಕಡಿಮೆ ನೀರನ್ನು ನೀವು ಸೇವಿಸುವುದರಿಂದ ತೂಕ ಪಡೆಯುವ ಸಾಧ್ಯತೆಗಳು ಹೆಚ್ಚಿವೆ.

ಇದು ಹೇಗೆ ಸಹಾಯವಾಗುತ್ತದೆ?

ಕೆಲವೊಮ್ಮೆ ದಣಿವು ನಿಮ್ಮನ್ನು ಆಹಾರ ಸೇವಿಸುವಂತೆ ಮಾಡುವುದು, ಆದರೆ ಆ ಸಮಯದಲ್ಲಿ ಮೊದಲು ನಿಮಗೆ ನಿಜವಾಗಿಯೂ ನೀರಿನ ಅವಶ್ಯವಿದೆ. ಆದ್ದರಿಂದ ಮೊದಲು ನೀವು ನಿಮಗೆ ಹಸಿವಾಗಿದೆಯೇ ಅಥವಾ ದಣಿವಾಗಿದೆಯೇ ಎಂದು ತಿಳಿದುಕೊಳ್ಳಿ. ನಿಮಗೆ ತಿಳಿಯಲಿಲ್ಲ ಎಂದರೆ ಮೊದಲು ಒಂದು ಲೋಟ ನೀರನ್ನು ಕುಡಿದು ನಂತರ ಆಹಾರವನ್ನು ಸೇವಿಸಿ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon