Link copied!
Sign in / Sign up
7
Shares

ಈ ಸಮಯದಲ್ಲಿ ಖಂಡಿತವಾಗಿಯೂ ಎದೆಹಾಲನ್ನು ನೀಡಬೇಡಿ

ಮಕ್ಕಳು ಆರೋಗ್ಯವಾಗಿ ಬೆಳೆಯಲು ಆಹಾರದ ಅಗತ್ಯವಿದೆ. ಆದರೆ ಶಿಶುಗಳಲ್ಲಿ ಆಹಾರವನ್ನು ಜೀರ್ಣಿಸಿಕೊಳ್ಳುವ ಶಕ್ತಿಯು ಸಂಪೂರ್ಣವಾಗಿ ಅಭಿವೃದ್ದಿಯಾಗಿರುವುದಿಲ್ಲ. ಆದ್ದರಿಂದ ಇಡೀ ವಿಶ್ವದಲ್ಲೇ ಅತ್ಯಂತ ಸರ್ವಶ್ರೇಷ್ಠವಾದ ತಾಯಿಯು ತನ್ನ ಎದೆಹಾಲನ್ನು ಉಣಿಸುವಳು. ಹೊಸದಾಗಿ ಈ ಜಗತ್ತಿಗೆ ಕಾಲಿಟ್ಟ ಪುಟ್ಟ ಕಂದಮ್ಮ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ. ಎದೆಹಾಲು ಮಕ್ಕಳಿಗೆ ಅಮೃತವಿದ್ದಂತೆ. ಆದರೆ ಕೆಲವು ಸಂದರ್ಭಗಳಲ್ಲಿ ಈ ಅಮೃತವು ಮಗುವಿಗೆ ಹಾನಿಮಾಡಬಹುದು.

ನಮಗೆ ಜ್ವರ ಬಂದಾಗ ಮಗುವಿಗೆ ಎದೆಹಾಲುಣಿಸಬಹುದೇ? ಇದು ಸಾಮಾನ್ಯವಾಗಿ, ಎಲ್ಲಾ ತಾಯಿಯಂದಿರಲ್ಲು ಕಾಡುವ ಪ್ರಶ್ನೆ. ನೀರಿನ ವ್ಯತ್ಯಾಸ, ವಾತಾವರಣದಲ್ಲಿ ಬದಲಾವಣೆ, ಕಾರಣ ಏನೇ ಇರಲಿ, ನಿಮಗೆ ಜ್ವರ ಅಥವಾ ಕಾಯಿಲೆ ಬಂದಾಗ ಮಗುವಿಗೆ ಎದೆಹಾಲುಣಿಸುವುದು ಸೂಕ್ತವೇ? ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.

ಸಾಮಾನ್ಯವಾಗಿ, ಜ್ವರ ಬಂದರೆ ಅಥವಾ ಕಾಯಿಲೆ ಬಂದರೆ ಮಗುವಿಗೆ ಎದೆಹಾಲುಣಿಸುವುದನ್ನು ತಾಯಿಯಂದಿರು ನಿಲ್ಲಿಸುತ್ತಾರೆ. ಕೆಲವು ವೈದ್ಯರು ಇದನ್ನು ಸರಿ ಎಂದರು, ಕೆಲವರು ನಿಮ್ಮ ಮಗುವಿಗೆ ನಿಮ್ಮ ಎದೆಹಾಲಿನ ಅಗತ್ಯವಿದೆ ಅದನ್ನು ನಿಲ್ಲಿಸಬೇಡಿ, ಮಗುವಿಗೆ ಎದೆಹಾಲುಣಿಸಿ ಎಂದು ಹೇಳುತ್ತಾರೆ. ಇದು ತಾಯಿಯಂದಿರು ಗೊಂದಲಕ್ಕೆ ಗುರಿಯಾಗುವಂತೆ ಮಾಡುತ್ತದೆ.

ನಿಮಗೆ ಜ್ವರ ಬಂದಾಗ ನಿಮ್ಮ ಎದೆಹಾಲಿನ ಮೂಲಕ ಹಲವು ರೋಗಕಾರಕಗಳನ್ನು ಮಗುವಿನ ದೇಹಕ್ಕೆ ವರ್ಗಾವಣೆ ಮಾಡುತ್ತೀರಿ. ಇದು ನಿಮಗೆ ತಿಳಿದೇ ಇರುವುದಿಲ್ಲ. ತಾಯಿಗೆ ಕಾಯಿಲೆ ಬಂದಾಗ ಮಗುವು ರೋಗಕ್ಕೆ ತುತ್ತಾಗುವುದು ಸಹಜ. ಏಕೆಂದರೆ ಎದೆಹಾಲಿನ ಮೂಲಕ ಕೆಲವು ಬ್ಯಾಕ್ಟೀರಿಯಾಗಳು ನಿಮ್ಮ ಮಗುವಿನ ದೇಹವನ್ನು ಪ್ರವೇಶಿಸುತ್ತವೆ.

೧.ನಿಮಗೆ ಕಾಯಿಲೆ ಇದ್ದಾಗ ಮಗುವಿಗೆ ಎದೆಹಾಲುಣಿಸುವುದರಿಂದ ನಿಮ್ಮ ದೇಹದಲ್ಲಿರುವ ಕಲ್ಮಶಗಳು ಹಾಲಿನ ಮೂಲಕ ಮಗುವಾನ್ನಿ ಸೇರಿ, ಮಗುವಿಗು ರೋಗ ಹರಡ ಬಹುದು, ಮಗುವಿಗೆ ರೋಗ ನೀರೋಧಕಗಳನ್ನು ಕೊಡುವುದರಿಂದ ಆ ಕಲ್ಮಶಗಳು ಮಗುವಿನ ವಿಸರ್ಜನೆಯ ಮೂಲಕ ದೇಹದಿಂದ ಹೊರ ಹೋಗಲು ಸಹಾಯ ಮಾಡುತ್ತದೆ.

೨.ಪ್ರತಿಜೀವಕಗಳನ್ನು ತೆಗೆದುಕೊಳ್ಳಿ, ಯಾವುದೇ ಕಾಯಿಲೆಗೆ ಗುರಿಯಾಗದಂತೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ. ಯಾವುದೇ ತರಹದ ಮಾತ್ರೆಗಳನ್ನು ತೆಗೆದುಕೊಳ್ಳುವ ಮುನ್ನ ಅದರಿಂದ ಮಗುವಿಗೆ ಯಾವುದೇ ಅಪಾಯವಿಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳಿ. ವೈದ್ಯರ ಸಲಹೆ ಪಡೆಯುದು ತುಂಬಾ ಒಳ್ಳೆಯದು. ಅವರ ಸಲಹೆ ಇಲ್ಲದ ಯಾವುದೇ ಮಾತ್ರೆ ಅಥವಾ ಔಷಧಿಗಳನ್ನು ತಗೆದುಕೊಳ್ಳುವುದು ಮಗುವಿಗೆ ಅಪಾಯವಾಗಬಹುದು.

೩.ಜ್ವರ ಅಥವಾ ಯಾವುದೇ ಕಾಯಿಲೆ ಬಂದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ, ಮತ್ತು ಮೊದಲು ಈ ಸಮಯದಲ್ಲಿ ಎದೆಹಾಲುಣಿಸುವುದರಿಂದ ಮಗುವಿಗೆ ಯಾವುದೇ ತೊಂದರೆಯಾಗುವುದಿಲ್ಲವೇ ಎಂಬುದನ್ನು ಕೇಳಿ ಖಚಿತಮಾಡಿಕೊಂಡು ನಂತರ ಅವರ ಸಲಹೆಯಂತೆ ನಡೆದುಕೊಳ್ಳಿ.

೪.ಇತ್ತೀಚಿಗೆ ಜ್ವರ ಹರಡುವುದು ಹೆಚ್ಚಾಗಿದೆ ಆದ್ದರಿಂದ ಮನೆಯನ್ನು ಮತ್ತು ಮನೆಯ ಸುತ್ತಮುತ್ತಲಿನ ಪರಿಸರವನ್ನು ಶುಚಿಯಾಗಿಟ್ಟುಕೊಂಡು ರೋಗಗಳು ಹರಡದಂತೆ ಮುನ್ನಚ್ಚೆರಿಕೆವಹಿಸಿ.

೫.ಒಂದು ವೇಳೆ ನಿಮಗೆ ಜ್ವರ ಬಂದಿದ್ದರೆ, ಅದರ ವಿಧವನ್ನು ತಿಳಿಯಿರಿ, ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾದಂತಹ ಜ್ವರಗಳು ನಿಮಗೆ ತುಂಬಾ ಅಪಾಯಕಾರಿ, ಒಂದು ಇಂತಹ ಸಮಯದಲ್ಲಿ ನಿಮ್ಮ ಎದೆಹಾಲು ಮಗುವಿನ ದೇಹ ಪ್ರವೇಶಿಸಿದರೆ, ಪುಟ್ಟ ಕಂದಮ್ಮ ಅದನ್ನು ತಡೆಯುವ ಶಕ್ತಿಯನ್ನು ಹೊಂದಿರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ನೀವು ಖಂಡಿತವಾಗಿ ಎದೆಹಾಲುಣಿಸುವುದನ್ನು ನಿಲ್ಲಿಸಬೇಕು.

ಖಂಡಿತವಾಗಿ ಈ ಸಮಯದಲ್ಲಿ ಎದೆಹಾಲನ್ನು ನೀಡಬೇಡಿ

೧.ನಿಮಗೆ ಯಾವುದೇ ಕಾಯಿಲೆ ಬಂದಿದ್ದು, ನೀವು ವೈದ್ಯರ ಔಷಧಿಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದಾದರೆ.

೨.ಜ್ವರ ಬಂದರೆ.

೩.ನಿಮಗೆ ಯಾವುದೇ ತರಹದ ವೈರಸ್ ಆಕ್ರಮಿಸಿದ್ದರೆ.

ಯಾವಾಗ ಎದೆಹಾಲುಣಿಸಬಹುದು

ನಿಮಗೆ ಸಾಮಾನ್ಯ ತಲೆ ನೋವು, ಶೀತ, ಕೆಮ್ಮು ಇದ್ದರೆ, ಆದರೆ ನಿಮ್ಮಲ್ಲಿರುವ ಸೋಂಕು ಮಗುವಿಗೆ ಯಾವುದೇ ರೀತಿಯಿಂದಲೂ ಹರಡಬಾರದು (ಉದಾಹರಣೆಗೆ: ನೀವು ಕೆಮ್ಮಿದಾಗ, ನಿಮ್ಮ ಉಸಿರಿನಿಂದ ಮಗುವಿಗೆ ಹೋಗಬಹುದಾದ ಕ್ರಿಮಿಗಳು/ಸೂಕ್ಷ್ಮ ಜೀವಿಗಳು). ವೈದ್ಯರನ್ನು ಕೂಡಲೇ ಬೇಟಿಮಾಡಿ ಸಲಹೆ ಪಡೆಯಿರಿ. ಒಂದು ವೇಳೆ ವೈದ್ಯರು ಎದೆಹಾಲುಣಿಸುವುದು ಬೇಡ ಎಂದರೆ, ಮಗುವಿಗೆ ಪರ್ಯಾಯ ವ್ಯವಸ್ಥೆ ಮಾಡಿ.

Click here for the best in baby advice
What do you think?
0%
Wow!
100%
Like
0%
Not bad
0%
What?
scroll up icon