Link copied!
Sign in / Sign up
19
Shares

ಕಣ್ಣಿನ ಕೆಳಗಿನ ಡಾರ್ಕ್ ಸರ್ಕಲ್ ಅನ್ನು ಈ ಮನೆಮದ್ದಿನಿಂದ ಸುಲಭವಾಗಿ ತೊಲಗಿಸಬಿಡಿ!

ನಿಮ್ಮ ಮುಖದ ಮೇಲೆ ನೀವು ಕ್ರೀಮ್ ಹಚ್ಚಿದ್ದೀರಿ ,ನೈಸರ್ಗಿಕವಾಗಿ ನಿಮ್ಮಲ್ಲಿ ಹೊಳಪನ್ನು ಹೊರ ತರುವ ಪ್ರಕಾಶಮಾನವಾದ ಲಿಪ್ ಸ್ಟಿಕ್  ಮತ್ತು ನಿಮ್ಮ ಕಣ್ಣುಗಳನ್ನು ಬೆಳಗಿಸಲು ಸಹಾಯ ಮಾಡುವ ಕಾಡಿಗೆಯನ್ನು ಹಚ್ಚಿದ್ದೀರಿ, ಆದರೆ ನೀವು ಹೊರ ಹೋಗುವ ಮೊದಲು ಇನ್ನೂ ಹಿಂಜರಿಯುತ್ತೀರಾ?ನಿಮ್ಮ ಕಣ್ಣುಗಳ ಅಡಿಯಲ್ಲಿ ಆ ಕಪ್ಪು ವಲಯಗಳು ನಿಮ್ಮನ್ನು ಸ್ವಲ್ಪ ಸ್ವ ಪ್ರಜ್ಞೆಯಿಂದ ಇರುವಂತೆ ಮಾಡುತ್ತವೆಯೇ ?

ಎಲ್ಲವನ್ನೂ ಪ್ರಯತ್ನಿಸಿದ್ದರೂ, ಏನೂ ಕೆಲಸ ಮಾಡುತ್ತಿಲ್ಲ ಎಂಬ ಕಾರಣದಿಂದಾಗಿ ಮಹಿಳೆಯರ ನರಗಳ ಮೇಲೆ ಕಪ್ಪು ವರ್ತುಲಗಳು ಇರುತ್ತವೆ .ತಳಮಳಗೊಳ್ಳದಿರಿ ಮಹಿಳೆಯರೇ ,ನಾವು ನಿಮಗೆ ಪರಿಹಾರ ನೀಡಲಿದ್ದೇವೆ . ಈ ಮನೆಯ ಪರಿಹಾರಗಳು ಆ ವೃತ್ತಗಳನ್ನು ಬೆಳಗಿಸಲು ಸಹಾಯ ಮಾಡುತ್ತವೆ ಮತ್ತು ನಿಮ್ಮ ನೈಸರ್ಗಿಕ ಸೌಂದರ್ಯವನ್ನು ಹೊರ ತರುತ್ತವೆ .

ನಾವು ಪರಿಹಾರಗಳನ್ನು ಪಡೆಯುವ ಮೊದಲು, ಈ ಡಾರ್ಕ್ ವಲಯಗಳು ಹೇಗೆ ಉಂಟಾಗುತ್ತವೆ  ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ.ನಿದ್ರಾಹೀನತೆ, ಖಿನ್ನತೆ, ಒತ್ತಡ, ಸೂರ್ಯನ ಬಿಸಿಲಿಗೆ ವಿಪರೀತವಾಗಿ ಒಡ್ಡುವಿಕೆ ,ವಿಟಮಿನ್ ಬಿ ೧೨ ರ ಕೊರತೆ ,ಅನಾರೋಗ್ಯಕರವಾಗಿರುವುದು ಮತ್ತು ದಣಿವು,ಇವು  ಕಣ್ಣುಗಳ ಅಡಿಯಲ್ಲಿ ಕಪ್ಪು ವೃತ್ತಗಳು ಅಥವಾ ತೇಪೆಗಳಿಗೆ ಕಾರಣವಾಗಬಹುದಾದ ಕೆಲವು ವಿಷಯಗಳು.

ಆ ಅಸಹ್ಯ ಕಪ್ಪು ವಲಯಗಳನ್ನು ತೊಡೆದುಹಾಕಲು ಕೆಲವು ಮನೆ ಪರಿಹಾರಗಳು ಇಲ್ಲಿವೆ:

೧.ಹಸಿ ಹಾಲು

ಹಸಿ ಹಾಲಿನಲ್ಲಿ ಹತ್ತಿ ಚೆಂಡನ್ನು ಅದ್ದಿ ಮತ್ತು ಅದನ್ನು ನಿಮ್ಮ ಕಣ್ಣುಗಳ ಕೆಳಗೆ ನಿಧಾನವಾಗಿ ಮಸಾಜ್ ಮಾಡಿ.ನಿಯಮಿತವಾಗಿ ಇದನ್ನು ಮಾಡುವುದರಿಂದ ನೀವು ಕಪ್ಪು ವಲಯಗಳನ್ನು ಶಾಶ್ವತವಾಗಿ ತೊಡೆದುಹಾಕಲು ಸಹಾಯ ಮಾಡುತ್ತದೆ.

೨. ಸೌತೆಕಾಯಿ, ಆಲೂಗಡ್ಡೆ ಮತ್ತು ಜೇನುತುಪ್ಪ

ಸೌತೆಕಾಯಿ ಮತ್ತು ಆಲೂಗಡ್ಡೆ ಗಳ ಕೆಲವು ತುಂಡುಗಳನ್ನು ಕತ್ತರಿಸಿ ಪೇಸ್ಟ್ ಆಗಿ ರುಬ್ಬಿಕೆಲವು ಟೀ ಚಮಚ ಜೇನುತುಪ್ಪ ಮತ್ತು ಸ್ವಲ್ಪ ಅಲೋ ವೆರಾ (ಲೋಳೆಸರ )ಜೆಲ್ ಸೇರಿಸಿ.ಪೀಡಿತ ಪ್ರದೇಶದ ಮೇಲೆ ಈ ಮಿಶ್ರಣವನ್ನು ಹಚ್ಚಿರಿ ಮತ್ತು ಕೆಲವು ನಿಮಿಷಗಳ ಕಾಲ ಇರಲು ಅವಕಾಶ ನೀಡಿ ನಂತರ ತೊಳೆಯಿರಿ .ಈ ಪರಿಹಾರವು ನಿಮ್ಮ ಮುಖವನ್ನು ಬೆಳಗಿಸುತ್ತದೆ.

೩.ಗುಲಾಬಿ ಜಲ

ಕೆಲವು ನಿಮಿಷಗಳ ಕಾಲ ಗುಲಾಬಿ ಜಲದಲ್ಲಿ ಹತ್ತಿಯ ಪ್ಯಾಡನ್ನು ನೆನೆಸಿ .ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ನಿಮ್ಮ ಕಣ್ಣಿನ ಮೇಲೆ ಈ ಹತ್ತಿ ಪ್ಯಾಡ್ ಇರಿಸಿ.೫ ರಿಂದ ೧೦ ನಿಮಿಷಗಳ ಕಾಲ ಇಟ್ಟೊಕೊಂಡು ನಂತರ ಅದನ್ನು ತೆಗೆದುಹಾಕಿ.ಇದು ನಿಮ್ಮ ಕಣ್ಣುಗಳ ಸುತ್ತಲಿನ ಸೂಕ್ಷ್ಮ ಚರ್ಮವನ್ನು ಜಲೀಕರಣಗೊಳಿಸಿ ಪೋಷಿಸುತ್ತದೆ .ಕೌತುಕ ಹುಟ್ಟಿಸುವ ವ್ಯತ್ಯಾಸವನ್ನು ನೋಡಲು ಇದನ್ನು ದೈನಂದಿನವಾಗಿ ಮುಂದುವರೆಸಿ.

೪.ಜೇನುತುಪ್ಪ ಮತ್ತು ಬಾದಾಮಿ ಎಣ್ಣೆ

ಸ್ವಲ್ಪ ಜೇನುತುಪ್ಪ ಮತ್ತು ಬಾದಾಮಿ ಎಣ್ಣೆ ಯನ್ನು ತೆಗೆದುಕೊಂಡು ಮಿಶ್ರಣಗೊಳಿಸಿ .ನೀವು ಹಾಸಿಗೆಗೆ ಹೋಗುವ ಮೊದಲು ಕಪ್ಪು ವರ್ತುಲಗಳ ಮೇಲೆ ಅದನ್ನು ಮೃದುವಾಗಿ ಮಸಾಜ್ ಮಾಡಿ. ನೀವು ಮರುದಿನ ಎದ್ದಾಗ ಅದನ್ನು ಅಳಿಸಿ ತಣ್ಣನೆಯ ನೀರಿನಲ್ಲಿ ನಿಮ್ಮ ಮುಖವನ್ನು ತೊಳೆಯಿರಿ.ದು ನಿಮ್ಮ ಕಣ್ಣುಗಳನ್ನು ಪ್ರಶಾಂತವಾಗಿರಿಸುತ್ತದೆ ,ಇದರಿಂದ ಆ ಕಪ್ಪು ವರ್ತುಲಗಳನ್ನು ತೊಲಗಿ ಹೋಗುತ್ತವೆ.

೫.ಪುದೀನಾ ರಸ

ಕೆಲವು ತಾಜಾ ಪುದೀನಾ ಎಲೆಗಳನ್ನು ರುಬ್ಬಿ ನಯವಾದ ಪೇಸ್ಟ್ ಅನ್ನು ನಿಮ್ಮ ಕಣ್ಣುಗಳ ಸುತ್ತಲೂ ಹಚ್ಚಿಕೊಳ್ಳಿ .ತಕ್ಷಣದ ಫಲಿತಾಂಶಗಳನ್ನು ನೋಡಲು 5 ನಿಮಿಷಗಳ ನಂತರ ಅದನ್ನು ತೊಳೆಯಿರಿ. ಆದರೆ ನೀವು ಯಾವುದೇ ರೀತಿಯ ಸುಡುವ ಸಂವೇದನೆಯನ್ನು ಅನುಭವಿಸಿದರೆ ಅದನ್ನು ತಕ್ಷಣವೇ ತೆಗೆದುಹಾಕಬೇಕೆಂದು ಖಚಿತಪಡಿಸಿಕೊಳ್ಳಿ.

ಇವುಗಳಲ್ಲಿ ಯಾವುದಾದೊಂದರನ್ನು ನೀವು ಪ್ರಯತ್ನ್ನಿಸಿದ್ದೀರಾ ಅಥವಾ ಪ್ರಯತ್ನಿಸಲು ಬಯಸುತ್ತೀರಾ ? ಕಾಮೆಂಟ್ ವಿಭಾಗದಲ್ಲಿ ನಮಗೆ ತಿಳಿಸಿ. ಆದರೆ ಯಾವಾಗಲೂ ಆ ಕಪ್ಪು ವರ್ತುಲಗಳೊಂದಿಗೆ ಅಥವಾ ಅದರ ಹೊರತಾಗಿ ನೀವು ಸುಂದರವಾಗಿ ಕಾಣುತ್ತೀರೆಂದು ನೆನಪಿಡಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon