Link copied!
Sign in / Sign up
5
Shares

ಹುಟ್ಟುತ್ತಲೇ ಉದ್ದುದ್ದ ಕೂದಲಿನಿಂದ ಕೂಡಿದ ಮಗು,ನಂತರ ವೈದ್ಯರು ಹೇಳಿದ ಮಾತು ಕೇಳಿ ಅಮ್ಮ ಗಾಬರಿ!

ಇಂಗ್ಲೆಂಡಿನ ಮಗುವೊಂದು ತನ್ನ ಕೇಶರಾಶಿಯಿಂದ ಜಗತ್ತೇ ತನ್ನೆಡೆಗೆ ತಿರುಗಿ ನೋಡುವಂತೆ ಮಾಡಿದೆ. ಜೂನಿಯರ್ ಕಾಕ್ಸ್-ನೂನ್ ಎಂಬ ಹೆಸರಿನ ಈ ಮಗುವು ಬ್ರೈಟಾನ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಜನಿಸಿತು. ಕೇವಲ ಒಂಬತ್ತು ವಾರಗಳಲ್ಲಿಯೇ ಮಗುವಿನ ಮೇಲೆ ಎಷ್ಟೊಂದು ಕೂದಲು ಇತ್ತು ಎಂದರೆ, ಎಲ್ಲರೂ ಆ ಮಗುವಿಗೆ ಆಶ್ಚರ್ಯ ಮತ್ತು ಪ್ರೀತಿಯಿಂದ ಕರಡಿ ಮರಿ ಎಂದು ಕರೆಯುತ್ತಿದ್ದರು.


“ಅವನು ಹೊರಬರುತ್ತಿರುವಾಗ ಅವನ ಮೈಮೇಲೆ ಕೂದಲಿರುವುದನ್ನ ನಾನು ಗಮನಿಸಿದೆ. ಅವನು ಪೂರ್ತಿಯಾಗಿ ಹೊರಬಂದಾಗಲೂ ಅವನ ಮೇಲೆ ಅಷ್ಟೊಂದು ಕೂದಲು ಇವೆ ಎಂದು ನನಗೆ ಗೊತ್ತಾಗಲಿಲ್ಲ. ಆದರೆ, ಮಗುವಿಗೆ ಮೊದಲ ಬಾರಿಗೆ ಸ್ನಾನ ಮಾಡಿಸುವಾಗ ಅವನ ಕೂದಲು ಎಷ್ಟಿವೆ ಎಂದು ನೋಡಿ ನಿಬ್ಬೆರಗಾದೆ” ಎನ್ನುತ್ತಾರೆ ಈ ಮಗುವಿನ ತಾಯಿ ಚೆಲಸೀ ನೂನ್.

“ಆಸ್ಪತ್ರೆಯಲ್ಲಿದ್ದ ಎಲ್ಲಾ ಸಿಬ್ಬಂದಿಗಳಿಗೂ, ವೈದ್ಯಕೀಯ ಸಲಹೆಗಾರರಿಗೂ ನನ್ನ ಮಗು ಒಂದು ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತ. ಎಲ್ಲರೂ ಬಂದು ಮಗುವಿನ ಬಗ್ಗೆ ವಿಚಾರಿಸುತ್ತಿದ್ದರು. ಆದರೆ ಅವರು ಹೇಳುತ್ತಿದ್ದದನ್ನು ಕೇಳಿ ಗಾಬರಿ ಆಗುತ್ತಿತ್ತು. ಅವರು ಸಾಮಾನ್ಯವಾಗಿ ಮಗುವಿನ ಕೂದಲು ಗೋಡೆ ಅಥವಾ ಮಂಚಕ್ಕೆ ಉಜ್ಜಿ ಬೇಗ ಬೇಗ ಉದುರಿ ಹೋಗುತ್ತವೆ ಎನ್ನುತ್ತಿದ್ದರು” ಎನ್ನುತ್ತಾರೆ ಚೆಲಸೀ ನೂನ್.


ಚೆಲಸೀ ಅವರಿಗೆ ಅವರ ಗರ್ಭಧಾರಣೆ ಮತ್ತು ಹೆರಿಗೆ ಬಗ್ಗೆ ಕೇಳಿದಾಗ, “ನನ್ನ ಪ್ರೆಗ್ನನ್ಸಿ ಸಹಜವಾಗಿಯೇ ಇತ್ತು, ಆದರೆ ಹೆರಿಗೆ ಮಾತ್ರ ತುಂಬಾ ಕಷ್ಟಕರವಾಗಿತ್ತು. ಅವನ ತಲೆಯು ಹೊರಬರದೆ ಸಿಲುಕಿಕೊಂಡಿತ್ತು. ಆಗ ನಾವು ತುರ್ತು ನಿಗಾ ಸಿಬ್ಬಂದಿಗಳನ್ನ ಕರೆತರಬೇಕಾಯಿತು. ನಾನು ಸಿಕ್ಕಾಪಟ್ಟೆ ರಕ್ತವನ್ನ ಕಳೆದುಕೊಂಡೆ. ಅದು ನಿಜಕ್ಕೂ ಯಮಯಾತನೆ ಆಗಿತ್ತು ನನಗೆ” ಎಂದು ಉತ್ತರಿಸಿದರು.


2007 ರಲ್ಲಿ ಜಾನ್ಸ್ ಹೋಪ್ಕಿನ್ಸ್ ಯೂನಿವರ್ಸಿಟಿ ಅಲ್ಲಿ ನಡೆದ ಸಂಶೋಧನೆಯಲ್ಲಿ, ಪ್ರೆಗ್ನನ್ಸಿ ಸಮಯದಲ್ಲಿ ಯಾವೆಲ್ಲಾ ಹೆಂಗಸರಿಗೆ ತುಂಬಾನೇ ಎದೆಯುರಿ ಉಂಟಾಗುತ್ತದೋ, ಅವರಿಗೆ ಉದ್ದ ಕೂದಲಿರುವ ಮಕ್ಕಳು ಹುಟ್ಟುತ್ತಾರೆ ಎಂಬುದು ತಿಳಿದು ಬಂದಿದೆ. ಇದಕ್ಕೆ ಕಾರಣ ಆ ಹೆಂಗಸರ ದೇಹದಲ್ಲಿ ಹೆಚ್ಚುವರಿ ಈಸ್ಟ್ರೋಜೆನ್ ಹಾರ್ಮೋನ್ ಇರೋದು. ಗರ್ಭಿಣಿಯರಲ್ಲಿ ಎದೆಯುರಿಗೆ ಕಾರಣವಾಗುವ ಈ ಹಾರ್ಮೋನೇ ಮಗುವಿನ ಕೂದಲ ಬೆಳವಣಿಗೆಗೂ ಕಾರಣ ಆಗುವುದೇ ಇದಕ್ಕೆ ಕಾರಣ ಎನ್ನುತ್ತಾರೆ ತಜ್ಞರು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon