Link copied!
Sign in / Sign up
14
Shares

ಇಲ್ಲಿವೆ ನೋಡಿ ಹುಳಕಡ್ಡಿ ಸಮಸ್ಯೆಗೆ 5 ಮನೆಮದ್ದುಗಳು!

ಹುಳಕಡ್ಡಿ  ಎನ್ನುವುದು ಒಂದು ಫಂಗಲ್ ಕಾಯಿಲೆ ಆಗಿದ್ದು, ಇದಕ್ಕೆ ಡೆರ್ಮಟೊಫೈಟ್ಸ್ ಗುಂಪಿನ ಒಣ ಈಸ್ಟ್ ಕಾರಣ. ಈ ಗುಂಪಿನಲ್ಲಿ ಅತ್ಯಂತ ಸಹಜವಾದ ಎರಡು ರೀತಿಯ ಈಸ್ಟ್ ಎಂದರೆ ಅವು ಟ್ರೈಖೋಫೈಟಾನ್ ಮತ್ತು ಎಪಿಡೆರ್ಮೋಫೈಟಾನ್. ಒಂದು ವೇಳೆ ನೀವು ಈ ಸಮಸ್ಯೆಗೆ ಸರಿಯಾದ ಚಿಕಿತ್ಸೆ ತೆಗೆದುಕೊಳ್ಳಲಿಲ್ಲ ಎಂದರೆ, ಇದು ನಿಮ್ಮ ದೇಹದೆಲ್ಲೆಡೆ ಹಬ್ಬುತ್ತದೆ. ಇದು ನಿಮ್ಮ ತ್ವಚೆಗಷ್ಟೇ ಹಾನಿ ಮಾಡದೆ, ನಿಮ್ಮ ದೇಹದ ಜೊತೆ ನೇರ ಸಂಪರ್ಕ ಹೊಂದುವ ಅಥವಾ ನಿಮ್ಮ ಬಟ್ಟೆಯನ್ನು ಧರಿಸುವ ಇತರರಿಗೂ ಹಬ್ಬುತ್ತದೆ.

ಹುಳಕಡ್ಡಿ ಸಮಸ್ಯೆಯು ಎಲ್ಲಾ ವಯಸ್ಸಿನವರಲ್ಲೂ ಕಾಣಿಸುವಂತದ್ದು (ಕೆಲವೊಮ್ಮೆ ಕೆಲವು ವಸ್ತುಗಳಲ್ಲೂ ಇದು ಕಾಣಿಸಿಕೊಳ್ಳಬಹುದು). ಇದು ತುಂಬಾ ವದ್ದೆ ಪ್ರದೇಶದಲ್ಲಿ ಕೆಲಸ ಮಾಡುವವರಲ್ಲಿ, ಹೆಚ್ಚು ಬೆವೆಯುವವರಲ್ಲಿ, ನೈರ್ಮಲ್ಯತೆ ಕಾಪಾಡಿಕೊಳ್ಳದವರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಗೆ ನೀವು ನಿಮ್ಮ ವೈದ್ಯರು ನೀಡಿರುವ ಔಷಧಿಗಳ ಜೊತೆ, ಈ ಔಷಧಿಗಳು ಕಾರ್ಯ ನಿರ್ವಹಿಸುವಂತೆ ಸಹಾಯ ಮಾಡಲು ಮತ್ತು ಹುಳಕಡ್ಡಿಯು ಹರಡದಿರುವಂತೆ ಮಾಡಲು ಕೆಲವೊಂದು ಮನೆಮದ್ದುಗಳನ್ನು ಬಳಸಬಹುದು. ಹಾಗಿದ್ದರೆ ಅಂತಹ ಮನೆಮದ್ದುಗಳು ಯಾವುದೆಂದು ನೋಡೋಣ ಬನ್ನಿ :

 

೧. ಬೆಳ್ಳುಳ್ಳಿ

ಬೆಳ್ಳುಳ್ಳಿಗೆ ಬ್ಯಾಕ್ಟೀರಿಯಾ ನಿರೋಧಕ ಮತ್ತು ಫಂಗಲ್ ನಿರೋಧಕ ಗುಣಗಳಿದ್ದು, ಹುಳಕಡ್ಡಿ ಚಿಕಿತ್ಸೆಯಲ್ಲಿ ಬಹಳಷ್ಟು ಉಪಕಾರಿ. ಬೆಳ್ಳುಳ್ಳಿಯನ್ನು ಹುಳಕಡ್ಡಿ ಸಮಸ್ಯೆಗೆ ಬಳಸಲು ಮಾಡಬೇಕಿರುವುದು ಒಂದೇ ಕೆಲಸ, ಬೆಳ್ಳುಳ್ಳಿಯನ್ನು ಚೆನ್ನಾಗಿ ಜೇಜ್ಜಿಕೊಂಡು, ಜೇಜ್ಜಿದ ಬೆಳ್ಳುಳ್ಳಿಯನ್ನು ಸೋಂಕು ಉಂಟಾಗಿರುವ ಜಾಗದ ಚರ್ಮದ ಮೇಲೆ ಉಜ್ಜಿಕೊಳ್ಳಿ. ಹುಳಕಡ್ಡಿ ಸಮಸ್ಯೆ ಕಡಿಮೆ ಆಗುವವರೆಗೆ ನೀವು ಇದನ್ನು ದಿನಕ್ಕೆ ಒಮ್ಮೆ ಮಾಡಿ.

 

೨. ಅರಿಶಿನ

ಜನರು ಹೆಚ್ಚು ಉಪಯೋಗ ಮಾಡಿಕೊಳ್ಳಬೇಕಿರುವ, ವಯಸ್ಕರರು ಮತ್ತು ಮಕ್ಕಳು - ಇಬ್ಬರಲ್ಲೂ ಹುಳಕಡ್ಡಿ ಸಮಸ್ಯೆಗೆ ವಿರೋಧ ಒಡ್ಡುವ ಒಂದು ಮನೆ ಔಷಧಿ ಎಂದರೆ, ಅದು ಅರಿಶಿನ. ಅರಿಶಿನವು ಅತ್ಯಂತ ಶಕ್ತಿಶಾಲಿ ನೈಸರ್ಗಿಕ ಆಂಟಿಬಯೋಟಿಕ್. ಹುಳಕಡ್ಡಿ ಚಿಕಿತ್ಸೆಗೆಂದು ಇದನ್ನು ಬಳಸುವುದು ತುಂಬಾನೇ ಸುಲಭ. ಅರಿಶಿನ ಪುಡಿಗೆ ಸ್ವಲ್ಪ ನೀರನ್ನು ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಹುಳಕಡ್ಡಿ ಸೋಂಕು ಆಗಿರುವ ಜಾಗಗಳ ಮೇಲೆ ಹಚ್ಚಿಕೊಳ್ಳಿ.

 

೩. ಆಲಿವ್ ಆಯಿಲ್

ಸಂಶೋಧನೆಗಳ ಪ್ರಕಾರ ಆಲಿವ್ ಆಯಿಲ್ ಅಲ್ಲಿ ಅದ್ಭುತ ವೈರಲ್ ನಿರೋಧಕ ಗುಣಗಳಿವೆ ಎಂದು ಮತ್ತು ಇದು ಮನುಷ್ಯನ ದೇಹದಲ್ಲಿರುವ ನಿರ್ದಿಷ್ಟ ವೈರಾಣು ವ್ಯವಸ್ಥೆಯನ್ನೇ ಕಟ್ಟಿ ಹಾಕುತ್ತದೆ ಎಂದು ತಿಳಿದು ಬಂದಿದೆ. ವೈರಾಣುಗಳಿಗೆ ಬೇಕೇ ಬೇಕಾಗಿರುವ ಅಮೈನೊ ಆಸಿಡ್ ಪೂರೈಕೆಯನ್ನು ಇದು ಸ್ಥಗಿತಗೊಳಿಸಿ, ವೈರಾಣು ನಿಷ್ಕ್ರಿಯ ಆಗುವಂತೆ ಮಾಡುತ್ತದೆ. ಆಲಿವ್ ಆಯಿಲ್ ಕೇವಲ ಫಂಗಲ್- ನಿರೋಧಕ ಗುಣವನ್ನು ಹೊಂದಿರುವುದಷ್ಟೇ ಅಲ್ಲದೆ, ಇದನ್ನು ಸೇವಿಸಿದರೆ ಮನುಷ್ಯನ ಪ್ರತಿರಕ್ಷಣಾ ವ್ಯವಸ್ಥೆಯು ವೃಧ್ಹಿಸುತ್ತದೆ.

 

೪. ಲ್ಯಾವೆಂಡರ್ ಆಯಿಲ್

ಆರಾಮ ನೀಡಲು ಮತ್ತು ಖಿನ್ನತೆ ಶಮನಕ್ಕೆ ಬಳಸುವ ಸುಗಂಧಭರಿತ ಲ್ಯಾವೆಂಡರ್ ಆಯಿಲ್ ಉಪಯೋಗ ಅಷ್ಟಕ್ಕೇ ಮುಗಿಯುವುದಿಲ್ಲ. ಇದಕ್ಕೆ ಇರುವ ಫಂಗಲ್ ನಿರೋಧಕ ಗುಣವು ಇದನ್ನು ಹುಳಕಡ್ಡಿ ಮತ್ತು ಇನ್ನೂ ಹಲವು ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗೆ ಚಿಕಿತ್ಸೆಯಾಗಿ ಬಳಸಲು ಅತ್ಯುತ್ತಮ ಆಯ್ಕೆಯನ್ನಾಗಿ ಮಾಡುತ್ತದೆ. ಒಂದು ಸ್ಪೂನ್ ಅಷ್ಟು ತೆಂಗಿನ ಎಣ್ಣೆಗೆ 3-4 ಹನಿಗಳಷ್ಟು ಲ್ಯಾವೆಂಡರ್ ಆಯಿಲ್ ಅನ್ನು ಬೆರೆಸಿಕೊಂಡು ಸೋಂಕಿಗೆ ಒಳಗಾದ ಭಾಗಗಳ ಮೇಲೆ ಉಜ್ಜಿಕೊಳ್ಳಿ.

 

೫. ಲೋಳೆಸರ (ಆಲೋ ವೆರಾ)

ಲೋಳೆಸರವು ಬ್ಯಾಕ್ಟೀರಿಯಾ- ನಿರೋಧಕ, ಸೋಂಕು-ನಿರೋಧಕ, ಫಂಗಲ್- ನಿರೋಧಕ ಶಕ್ತಿಗಳನ್ನು ಹೊಂದಿರುವುದು ನಮಗೆಲ್ಲ ಸಾಮಾನ್ಯವಾಗಿ ಗೊತ್ತಿದೆ. ಇದು ಚರ್ಮಕ್ಕೆ ಮತ್ತು ಚರ್ಮದ ಸೋಂಕಿಗೆ ಅತ್ಯುತ್ತಮವಾದ ಗಿಡ. ಆಲೋ ವೆರಾ ಗಿಡದ ಎಲೆಗಳಲ್ಲಿ ಇರುವ ಸ್ಯಾಪೊನಿನ್ಸ್ ಎನ್ನುವ ಜೆಲ್ ರೀತಿಯ ಅಂಶವು ಬ್ಯಾಕ್ಟೀರಿಯಾ-ನಿರೋಧಕ ಮತ್ತು ಫಂಗಲ್-ನಿರೋಧಕ ಗುಣಗಳನ್ನು ಹೊಂದಿದ್ದು, ಈ ಗಿಡವು ನಿಮಗೆ ಹುಳಕಡ್ಡಿ ಚಿಕಿತ್ಸೆಗೆ ನೆರವಾಗುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon