Link copied!
Sign in / Sign up
1
Shares

ಜಾತ್ರೆಯಿಂದ ವಾಪಾಸಾಗುತ್ತಿದ್ದ 13-ವರ್ಷದ ಹುಡುಗಿಯ ಮೇಲೆ 7 ಜನರ ಗ್ಯಾಂಗ್ ರೇಪ್:ಫುಲ್ ಡೀಟೇಲ್ಸ್

ಆ ದಿನ 13 ವರ್ಷ ವಯಸ್ಸಿನ ಆಕೆ ಊರಿನ ಜಾತ್ರೆಯಲ್ಲಿ ಸುತ್ತಾಡಿ, ತನ್ನ ಸಹೋದರನೊಂದಿಗೆ ಮನೆಗೆ ವಾಪಾಸ್ ಆಗುತ್ತಿದ್ದಳು. ಇನ್ನೂ ಆಡೋ ವಯಸ್ಸಿನ ಹುಡುಗಿ ಅವಳು. ಜಾತ್ರೆಯಲ್ಲಿ ಮಿಠಾಯಿ ತಿಂದು, ಬಣ್ಣ ಬಣ್ಣದ ಬಳೆಗಳು, ಕಿವಿಯೋಲೆಗಳನ್ನ ಖರೀದಿಸಿ, ಖುಷಿಯಿಂದ ಮನೆಗೆ ಮರಳುತ್ತಿದ್ದಳು. ಮನೆಗೆ ವಾಪಾಸ್ ಆಗುವ ದಾರಿಯಲ್ಲಿ ನಡೆಯುವ ಒಂದು ಘಟನೆ ಆಕೆಯ ಜೀವನವನ್ನೇ ಈಗ ಬದಲಿಸಿಬಿಟ್ಟಿದೆ.


ಅಂದಹಾಗೆ ಈ ಘಟನೆ ನಡೆದದ್ದು ಉತ್ತರ ಪ್ರದೇಶದ ಸಾಂದನ ನಗರದ ಬಳಿ. ಈ ಅಪ್ರಾಪ್ತ ಬಾಲಕಿ ತನ್ನ ಸಹೋದರನೊಂದಿಗೆ ಜಾತ್ರೆ ಇಂದ ರಾತ್ರಿ ಮನೆಗೆ ಮರಳುವ ಸಮಯದಲ್ಲಿ, 7 ಜನರ ಗುಂಪೊಂದು ಇವರನ್ನ ಸುತ್ತುವರೆದಿದೆ. ನಂತರ ಆ ಗುಂಪು ತಮ್ಮ ಜೇಬುಗಳಿಂದ ಚಾಕು-ಚೂರಿಗಳನ್ನ ಹೊರತೆಗೆದು ಆ ಇಬ್ಬರು ಮಕ್ಕಳನ್ನ ಹೆದರಿಸಿದ್ದಾರೆ. ಆ ಹುಡುಗಿಯ ಸಹೋದರನನ್ನ ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ನಂತರ, ಆ ಬಾಲಕಿಯನ್ನು ಇನ್ನೊಂದು ಜಾಗಕ್ಕೆ ಹೊತ್ತೊಯ್ದಿದ್ದಾರೆ. ಈ ಕಡೆ ಹುಡುಗನು ತಪ್ಪಿಸಿಕೊಂಡು ಮನೆಗೆ ಓಡಿ ಬಂದಿದ್ದಾನೆ. ಆದರೆ, ಎಲ್ಲರೂ ಜಾತ್ರೆಗೆ ಹೋಗಿದ್ದ ಕಾರಣ ಮನೆಯಲ್ಲಿ ಯಾರು ಇರಲಿಲ್ಲ. ಸ್ವಲ್ಪ ಹೊತ್ತಿನ ನಂತರ ಮನೆಮಂದಿ ವಾಪಸ್ ಆಗಿದ್ದಾರೆ.


ಆ 7 ಜನ ಕಾಮುಕರು ಈ 13-ವರ್ಷದ ಬಾಲಕಿಯನ್ನು ಯಾರು ಇಲ್ಲದ ಜಾಗಕ್ಕೆ ಹೊತ್ತೊಯ್ದು, ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅದೃಷ್ಟವಶಾತ್, ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಮತ್ತು ಆ ಗುಂಪು ಆಕೆಯ ಪ್ರಾಣ ತೆಗೆಯಲು ಮುಂದಾಗಿಲ್ಲ. ಅತ್ಯಾಚಾರ ನಡೆಸಿ, ಆ ಹುಡುಗಿಯನ್ನ ಇನ್ನ್ಯಾವುದೋ ರೋಡಿಗೆ ತಂದು ಬಿಟ್ಟು ಹೋಗಿದ್ದಾರೆ. ಆ ಹುಡುಗಿಯು ಬೆದರಿ, ಗಾಬರಿಯಲ್ಲಿ ಮನೆಯವರೆಗೂ ಓಡಿ ಬಂದು ನಡೆದದ್ದೆಲ್ಲಾ ಹೇಳಿದ್ದಾಳೆ. ಕೂಡಲೇ, ಮಧ್ಯರಾತ್ರಿಯಲ್ಲೇ ಹುಡುಗಿಯ ಪೋಷಕರು ಮತ್ತು ಸಂಬಂಧಿಕರು ಪೊಲೀಸ್ ಠಾಣೆಗೆ ತೆರೆಳಿ ದೂರು ದಾಖಲಿಸಿದ್ದಾರೆ.

ಈ ಘಟನೆಯ ತೀವ್ರತೆಯನ್ನ ಅರಿತ ಎಸ್ಪಿ ಆನಂದ್ ಸಿಂಗ್, ಮಧ್ಯರಾತ್ರಿಯಲ್ಲೇ ಮನೆಯಿಂದ ತೆರಳಿ ಠಾಣೆಗೆ ಬಂದು ವಿಚಾರಿಸಿದ್ದಾರೆ. ಹುಡುಗಿಯನ್ನ ವೈದ್ಯಕೀಯ ತಪಾಸಣೆಗೆ ಕಳುಹಿಸಿದ್ದಾರೆ. ಇತ್ತ ಈ ಕಾಮುಕರ ಗುಂಪಿನಲ್ಲಿ ಮೂವರನ್ನ ಗುರುತಿಸಲಾಗಿದ್ದು, ಅವರ ಹೆಸರುಗಳು ಇಂತಿವೆ - ಹಿಮಾಂಶು (18), ಧನ್ನು (20) ಮತ್ತು ಕಂಠ (20). ಇವರುಗಳ ಮೇಲೆ FIR ದಾಖಲಾಗಿದ್ದು, ಇನ್ನುಳಿದ ಕಾಮುಕರ ಬಂಧನಕ್ಕೆ ತೀವ್ರ ಶೋಧ ಶುರುವಾಗಿದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon