Link copied!
Sign in / Sign up
3
Shares

ನಿಮ್ಮ ಮಗುವಿನ ಹೃದಯವನ್ನು ಶಕ್ತಿಶಾಲಿಯಾಗಿಸಲು ಆಹಾರ ಪದಾರ್ಥಗಳು

ನೀವು ಗರ್ಭಿಣಿಯಾದ ಎರಡನೇ ತಿಂಗಳಿಗೆ ಕಾಲಿಡುತ್ತಿದ್ದಂತೆಯೇ, ನಿಮ್ಮ ಪುಟಾಣಿಯ ಹೃದಯವು ತನ್ನ ಕೈಚಳಕವನ್ನು ಶುರುಮಾಡುತ್ತದೆ. ಶರೀರದ ಇತರ ಎಲ್ಲಾ ಭಾಗಗಳಿಗೂ ರಕ್ತ ಸರಬರಾಜು ಪ್ರಾರಂಭಿಸುತ್ತದೆ. ನಿಮ್ಮ ಪುಟಾಣಿಗೆ ಬೇಕಾದ ಎಲ್ಲಾ ಪೋಷಕಾಂಶಗಳನ್ನು ನೀಡಿ ಬೆಳವಣಿಗೆಗೆ ಬೇಕಾದ ಅನುಕೂಲ ಪರಿಸ್ಥಿತಿಯನ್ನು ನಿರ್ಮಾಣ ಮಾಡುವುದರಲ್ಲಿ ಸರಿಯಾದ ರೀತಿಯ ಆಹಾರ ಸೇವನೆಯು ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಮಗುವಿನ ಆ ಪುಟಾಣಿ ಹೃದಯವನ್ನು ಆರೋಗ್ಯಯುತವಾಗಿ ಕಾಪಾಡಲು ನಿಮಗೆ ಸಹಾಯ ಮಾಡುವ ಕೆಲವು ಆಹಾರಗಳನ್ನು ದಿನನಿತ್ಯವೂ ಸೇವಿಸಬೇಕು.

೧.ಪ್ರೊಟೀನ್

ಪ್ರೊಟೀನ್‍ನಲ್ಲಿ ಅಡಕವಾಗಿರುವ ಅಮೈನೋ ಆಸಿಡ್‍ಗಳು ಮಗುವಿನ ಬೆಳವಣಿಗೆಯ ತಳಹದಿ. ಮಾಂಸ, ಮೀನು ಮತ್ತು ಚಿಕನ್‍ಗಳು ಪ್ರೊಟೀನ್‍ನ ಆಗರವೂ ಹೌದು. ಆದರೆ ಕರಿದ ಹಾಗೂ ತುಪ್ಪದಿಂದ ತಯಾರಿಸಿ ಅವುಗಳನ್ನು ಸೇವಿಸಬಾರದು. ನೀವು ಸಸ್ಯಾಹಾರಿಗಳಾಗಿದ್ದರೆ, ಬೀನ್ಸ್, ಹಾಲು ಮತ್ತು ಬೆಣ್ಣೆಯಂತಹ ಪ್ರೋಟಿನ್ ಭರಿತ ಆಹಾರಗಳನ್ನು ನಿಮ್ಮ ಆಹಾರದಲ್ಲಿ ಸೇರ್ಪಡಿಸಬೇಕು.

೨.ಬೀಜಗಳು

ಗೇರು ಬೀಜ, ಬಾದಾಮಿ ಮತ್ತು ವಾಲ್ನಟ್ಗಳು ಆರೋಗ್ಯಕರ ಹೃದಯಕ್ಕೆ ಅಗತ್ಯವಾದ ಪ್ರೊಟೀನ್ ಮತ್ತು ಕೋಪರ್‍ಅನ್ನು ಒಳಗೊಂಡಿದೆ. ಹೆಚ್ಚು ಕಡಿಮೆ ಎಲ್ಲಾ ಪ್ರಸೂತಿ ತಜ್ಞರು ದಿನವೂ ರಾತ್ರಿ ಐದು ಬಾದಾಮಿ ಬೀಜವನ್ನು ನೆನೆಸಿಟ್ಟು, ಮರುದಿನ ಬೆಳಗ್ಗೆ ಸೇವಿಸಲು ಉಪದೇಶಿಸುತ್ತಾರೆ. ದಿನವೂ ಬಾದಾಮಿಯನ್ನು ಸೇವಿಸುವುದು, ನಿಮಗೂ ನಿಮ್ಮ ಮಗುವಿಗೂ ಉತ್ತಮ.

೩.ಹಸುರೆಲೆ ತರಕಾರಿಗಳು

ಹಸಿರೆಲೆ ತರಕಾರಿಗಳು ಯಾವತ್ತೂ ಆರೋಗ್ಯದಾಯಕ. ಅದರಲ್ಲೂ ಗರ್ಭಿಣಿಯರಿಗಂತೂ ಹೇಳಿ ಮಾಡಿಸಿದ್ದು. ಆದರೇ ದಿನವೂ ಹರಿವೆ ಮಾತ್ರ ಸೇವಿಸಬೇಕೆಂದೇನಿಲ್ಲ. ಕ್ಯಾಬೇಜ್,ಬ್ರೊಕೋಲಿ,ಮೊಳಕೆ ಬರಿಸಿದ ಬ್ರುಸೆಲ್ಸ್, ಕೇಲ್ ಅಥವಾ ಲೆಟ್ಯೂಸ್‍ಗಳನ್ನು ಪದಾರ್ಥ, ಸಲಾಡ್ ಮತ್ತು ಸ್ಮೂತಿಗಳನ್ನು ತಯಾರಿಸಿ ಕೂಡ ಸೇವಿಸಬಹುದು.

೪.ಧಾನ್ಯಗಳು

ಗೋಧಿ,ಓಟ್ಸ್ ,ಕೆಂಪು ಅಕ್ಕಿ ಮತ್ತು ಬಾರ್ಲಿ ಹೃದಯದ ಆರೋಗ್ಯಕರ ಬೆಳವಣಿಗೆಗೆ ಅತಿ ಮಹತ್ವವುಳ್ಳದ್ದಾಗಿದೆ. ಆಟ್ಟ ಮತ್ತು ಓಟ್ಸ್ ಕಂಪನಿಗಳು, ಅವುಗಳಿಂದ ತಯಾರಿಸಿದ ಬ್ರೆಡ್ ಅನ್ನು ಹಾಗೂ ಬಿಳಿ ಅನ್ನಕ್ಕೆ ಬದಲಾಗಿ ಕೆಂಪು ಅಕ್ಕಿಯನ್ನು ಹೇಗೆ ಬಳಸಬಹುದೆಂಬ ಜಾಹೀರಾತು ನೀಡುವುದನ್ನು ನೀವೂ ಗಮನಿಸಿರಬಹುದು.

೫.ಹಾಲು ಹಾಗೂ ಹಾಲಿನ ಉತ್ಪನ್ನಗಳು

ಹುಟ್ಟಲಿರುವ ಮಗುವಿನ ಎಲುಬು ಗಟ್ಟಿಯಾಗಿ ಬೆಳೆಯಲು ಕ್ಯಾಲ್ಸಿಯಂಗಳು. ಅತ್ಯಂತ ಪ್ರಮುಖವಾದದ್ದು. ಹಾಲು ಹಾಗೂ ಹಾಲಿನ ಉತ್ಪನ್ನಗಳು ಹೇರಳವಾಗಿ ಕಾಲ್ಷಿಯಂ ಒಳಗೊಂಡಿದೆ. ಪಾಷ್ಚರೀಕರಿಸದ ಹಾಲನ್ನು ಬಳಸಬಾರದು. ಪ್ಯಾಕೆಟ್ನಲ್ಲಿ ಸಿಗುವ ಪಾಷ್ಚರೀಕರಿಸಿದ ಹಾಲಾದರೂ, ಕುದಿಸಿಲ್ಲ... ಅಲ್ಲವೇ...? ಆದ ಕಾರಣ, ಯಾವುದೇ ಹಾಲಿನ ಉತ್ಪನ್ನಗಳನ್ನು ಖರೀದಿಸುವಾಗ ತಯಾರಿಸಿದ ತಾರೀಖನ್ನು ದಯವಿಟ್ಟು ಗಮನಿಸಿ. ಸ್ಕಿಮ್ಮ್ಡ್ ಮಿಲ್ಕ್ ಅಥವಾ ಕಡಿಮೆ ಕೊಬ್ಬಿನ ಹಾಲಿನ ಉತ್ಪನ್ನಗಳನ್ನು ಖರೀದಿಸುವುದು ಆರೋಗ್ಯಕ್ಕೆ ಉತ್ತಮ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon