Link copied!
Sign in / Sign up
2
Shares

ಹೊಟ್ಟು ನಿವಾರಿಸಲು ಮನೆಯಲ್ಲಿ ತಯಾರಿಸಿದ ಸರಳ ಮತ್ತು ಪ್ರಾಯೋಗಿಕ ಚಿಕಿತ್ಸೆಗಳು (Simple And Practical Homemade Cures For Dandruff in Kannada)

ತಲೆಯಲ್ಲಿ ಹೊಟ್ಟಿರುವುದು ನಿಮ್ಮ ನೆತ್ತಿಗೆ ಹಾಗೂ ನಿಮ್ಮ ಆತ್ಮವಿಶ್ವಾಸಕ್ಕೆ ಹಾನಿಕಾರಕ. ಇದು ಪ್ರತಿ ೧೦ ರಲ್ಲಿ ೯ ಜನರಿಗೆ ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ಆದರೂ ಇದು ಗಂಭೀರವಾದ ಸಮಸ್ಯೆಯೇನೂ ಅಲ್ಲ. ಹಾಗಾಗಿಯೇ ನಿಮ್ಮ ಮನೆಯಲ್ಲಿಯೇ ಲಭ್ಯವಿರುವ ಸಾಮಗ್ರಿಗಳನ್ನು ಉಪಯೋಗಿಸಿ ಮನೆಯ ಮದ್ದು ತಯಾರಿಸುವುದನ್ನು ಪರಿಗಣಿಸುವುದು ಒಳಿತು. ಈ ಲೇಖನದಲ್ಲಿ ಹೊಟ್ಟನ್ನು ಹೇಗೆ ನಿವಾರಿಸಬೇಕು ಮತ್ತು ಅದನ್ನು ನಿವಾರಿಸಲು ಬಳಸಬಹುದಾದ ಮನೆಯಮದ್ದುಗಳಾವುವು ಎನ್ನುವುದರ ಬಗ್ಗೆ ತಿಳಿಸಲಾಗಿದೆ. 

ಪರಿವಿಡಿ:

೧. ಹೊಟ್ಟು ಎಂದರೇನು? (What Is Dandruff? in Kannada)

೨. ಈ ತೊಂದರೆ ಶಾಶ್ವತವೇ? (Is This Condition A Permanent One? in Kannada)

೩. ಹೊಟ್ಟಿನಿಂದಾಗಿ ಕೂದಲುದುರುವಿಕೆಯಾಗಬಹುದೇ? (Can Hairfall Occur Due To Dandruff? in Kannada)

೪. ಹೊಟ್ಟಿಗೆ ಕಾರಣವೇನು? (What Are The Causes Of Dandruff? in Kannada)

೫. ಹೊಟ್ಟನ್ನು ಚಿಕಿತ್ಸಿಸಲು ಪ್ರಮುಖ ೫ ಮನೆಮದ್ದುಗಳು (Top 5 Home Remedies For Dandruff in Kannada)

     * ಗ್ರೀನ್ ಟೀ (Green tea in Kannada)

     * ಬೇವಿನ ಎಳೆಗಳು (Neem Leaves in Kannada)

     * ಆಪಲ್ ಸೈಡರ್ ವಿನೆಗರ್ (Apple Cider Vinegar in Kannada)

     * ನಿಂಬೆ ರಸ (Lemon Juice in Kannada)

     * ಕಿತ್ತಳೆ ಸಿಪ್ಪೆ (Orange Peels in Kannada) 

೧. ಹೊಟ್ಟು ಎಂದರೇನು? (What Is Dandruff? in Kannada)

ಹೊಟ್ಟು ನೆತ್ತಿಯ ಸಾಮಾನ್ಯ ತೊಂದರೆಗಳಲ್ಲಿ ಒಂದು. ಇದು ಒಣಗಿದ ನೆತ್ತಿ ಅಥವಾ ನೆವೆಭರಿತ ಚರ್ಮದ ಕಾರಣದಿಂದ ಶುರುವಾಗುತ್ತದೆ. ಬ್ಯಾಕ್ಟೀರಿಯಾದ ಬೆಳವಣಿಗೆ ಮತ್ತು ಶಿಲೀಂಧ್ರಗಳ ರಚನೆಯು ಕೂಡ ತಲೆಹೊಟ್ಟಿಗೆ ಕಾರಣವಾಗಬಹುದು. ಇವುಗಳನ್ನು ಚಿಕಿತ್ಸಿಸದೇ ಬಿಟ್ಟಲ್ಲಿ, ನೆತ್ತಿಯ ನೆವೆ ಮತ್ತು ಸತ್ತ ಜೀವಕೋಶಗಳ ರಚನೆಗೂ ಕಾರಣವಾಗಬಹುದು. ಇವೆಲ್ಲಗಳ ಬಗ್ಗೆ ಅಗತ್ಯ ಮಾಹಿತಿ ಇಲ್ಲಿದೆ. 

[Back To Top]

೨. ಈ ತೊಂದರೆ ಶಾಶ್ವತವೇ? (Is This Condition A Permanent One? in Kannada)

ಸೈದ್ಧಾಂತಿಕವಾಗಿ ಹೊಟ್ಟಿನ ತೊಂದರೆ ನಿವಾರಿಸಲು ಯಾವುದೇ ಶಾಶ್ವತ ಪರಿಹಾರಿಯವಿಲ್ಲ. ಆದರೆ ಅದನ್ನು ಸೂಕ್ತ ರೀತಿಯಲ್ಲಿ .ನಿಯಂತ್ರಿಸಬಹುದು. "ಹೊಟ್ಟನ್ನು ಹೇಗೆ ನಿವಾರಿಸಬೇಕು?" ಎನ್ನುವ ಪ್ರಶ್ನೆಗೆ ಸ್ವಯಂ-ಆರೈಕೆಯ ಹವ್ಯಾಸಗಳೇ ಉತ್ತರ. ಆದರೆ ಯಾವುದೇ ರೀತಿಯ ರೋಗ ನಿವಾರಣಾ ಪದ್ಧತಿಯನ್ನು ನೆಂಪಾಲಿಸುವ ಮುನ್ನ, ಸಮಸ್ಯೆಯ ಮೂಲವನ್ನು ಪರಿಗಣಿಸುವುದು ಉತ್ತಮ. ಈ ಸಮಸ್ಯೆಯ ಮೂಲ ಒಬ್ಬರಿಂದೊಬ್ಬರಿಗೆ ಬದಲಾಗಬಹುದು. ಹೊಟ್ಟನ್ನು ತಡೆಗಟ್ಟಲು ಹಲವಾರು ಸುಲಭ ಮನೆಮದ್ದುಗಳನ್ನು ತಿಳಿದುಕೊಳ್ಳಲು ಈ ಲೇಖನವನ್ನು ಓದಿ. 

೩. ಹೊಟ್ಟಿನಿಂದಾಗಿ ಕೂದಲುದುರುವಿಕೆಯಾಗಬಹುದೇ? (Can Hair fall Occur Due To Dandruff? in Kannada)

ನೆತ್ತಿಯ ಮೇಲೆ ಸತ್ತ ಜೀವಕೋಶಗಳ ಶೇಖರಣೆಯಾಗಿ ಹೊಟ್ಟಾಗುತ್ತದೆ. ಈ ದೀರ್ಘಕಾಲದ ಸಮಸ್ಯೆಯಿಂದ ನೆವೆಯುಂಟಾಗುತ್ತದೆ. ಆದರೆ ಹೊಟ್ಟು ಚಿಕಿತ್ಸಿಸದೇ ಬಿಟ್ಟಲ್ಲಿ ಕೂದಲುದುರುವಿಕೆಯ ತಾತ್ಕಾಲಿಕ ಕಾರಣವಾಗಬಹುದು. ತಜ್ಞರು ಹೇಳುವ ಪ್ರಕಾರ, ಹೊಟ್ಟು ಕೂದಲುದುರುವಿಕೆಗೆ ನೇರವಾಗಿ ಸಂಬಂಧಿಸದೆ ಇದ್ದರೂ, ಅದಕ್ಕೆ ವೈದ್ಯಕೀಯ ಕಾರಣಗಳಿರಬಹುದು. ಉದಾಹರೆಣೆಗೆ ಸೊರಿಯಾಸಿಸ್.

[Back To Top]

೪. ಹೊಟ್ಟಿಗೆ ಕಾರಣವೇನು? (What Are The Causes Of Dandruff? in Kannada)

ಹಲವರು ತಮ್ಮ ಹೊಟ್ಟಿನ ಸಮಸ್ಯೆಗೆ ಕಾರಣ ಒರಟು ಚರ್ಮ, ಎಣ್ಣೆಯುಕ್ತ ಚರ್ಮದ ನೈರ್ಮಲ್ಯ ಅಥವಾ ಒತ್ತಡ ಎಂದು ಭಾವಿಸುತ್ತಾರೆ. ಆದರೆ ಹೊಟ್ಟಿಗೆ ಮತ್ತು ನಮ್ಮ ಅನಾರೋಗ್ಯಕ್ಕೆ ಒತ್ತಡದ ಜೀವನಶೈಲಿ ಮತ್ತು ನಮ್ಮ ಜೀವಿಸುವ ವಾತಾವರಣವೂ ಕಾರಣ.  ಅದರಲ್ಲಿ ಪ್ರಮುಖ ಕಾರಣಗಳು ಇಲ್ಲಿವೆ. 

೧. ಕಿರಿಕಿರಿಯುಂಟು ಮಾಡುವ ಎಣ್ಣೆಯುಕ್ತ ಚರ್ಮ: ನಿಮ್ಮ ಚರ್ಮ ಕೆಂಪಾಗಿ, ಜಿಡ್ಡುಯುಕ್ತವಾಗಿ, ಬಿಳಿ ತೆಳುವಾದ ಪದರದ ತುಂಡುಗಳನ್ನು ಉದುರಿಸುತ್ತಿದ್ದರೆ, ನಿಮಗೆ ಕಿರಿಕಿರಿಯಾಗಬಹುದು. ನಿಮ್ಮ ಎಣ್ಣೆಯುಕ್ತವೂ ಆಗಬಹುದು. ಈ ರೀತಿಯ ಸಮಸ್ಯೆಯಿಂದ ನಿಮ್ಮ ನಿತ್ತಿಗೆ ಮತ್ತು ನಿಮ್ಮ ದೇಹದ ಇತರೆ ಭಾಗಗಳಿಗೆ ನೇರವಾಗಿ ಪರಿಣಾಮ ಬೀರಬಹುದು. 

೨. ಶುಷ್ಕ ಚರ್ಮ: ನಿಮ್ಮ ಚರ್ಮ ಶುಷ್ಕವಾಗಿದ್ದರೆ, ನಿಮ್ಮ ನೆತ್ತಿ ಕೂಡಾ ಶುಷ್ಕವಾಗಿ, ಅದರ ಪದರಿನ ತುಂಡುಗಳ ಕಾರಣದಿಂದಾಗಿ ನೆವೆ ಬರಬಹುದು. 

೩. ಶ್ಯಾಂಪೂವಿನಿಂದ ಕೂದಲನ್ನು ಸರಿಯಾಗಿ ತೊಳೆದುಕೊಳ್ಳದಿದ್ದಾರೆ: ನಿಮ್ಮ ಕೂದಲಲ್ಲಿ ಎಣ್ಣೆಯ ಉತ್ಪಾದನೆ ತಡೆಯಲು ನಿಯಮಿತವಾಗಿ ನಿಮ್ಮ ಕೂದಲನ್ನು ತೊಳೆದುಕೊಳ್ಳುವುದು ಒಳಿತು. ಇದರಿಂದಾಗಿ ಹೊಟ್ಟನ್ನು ದೂರವಿಡಬಹುದು. ಆದರೆ ಶ್ಯಾಂಪೂವಿನಿಂದ ನಿಮ್ಮ ಕೂದಲನ್ನು ಪದೇ ಪದೇ ತೊಳೆದುಕೊಳ್ಳುವುದರಿಂದ ನಿಮ್ಮ ನೆತ್ತಿ ಒಣಗಿ, ಹೊಟ್ಟನ್ನು ಉಂಟುಮಾಡಬಹುದು. ಹಾಗಾಗಿ, ಪ್ರತಿ ಪರ್ಯಾಯ ದಿನದಂದು ನಿಮ್ಮ ಕೂದಲನ್ನು ತೊಳೆದುಕೊಳ್ಳುವುದು ಆರೋಗ್ಯಕರ. 

೪. ಅನಿಯಮಿತವಾಗಿ ಕೂದಲನ್ನು ಬಾಚಿಕೊಳ್ಳುವುದು: ನೀವು ಕೂದಲನ್ನು ನಿಯಮಿತವಾಗಿ ಬಾಚಿಕೊಳ್ಳದೇ ಇದ್ದರೆ, ನಿಮ್ಮ ನೆತ್ತಿಯಲ್ಲಿ ಸತ್ತ ಜೀವಕೋಶಗಳ ನಿರ್ಮಾಣವಾಗುತ್ತದೆ. ಇದರಿಂದ ಹೊಟ್ಟಾಗುವ ಸಾಧ್ಯತೆ ಹೆಚ್ಚುತ್ತದೆ. 

೫. ಮಾಲಿನ್ಯ: ಕೆಲವು ಬಾರಿ, ವಾಯು ಮಾಲಿನ್ಯದಿಂದ ಹೊಟ್ಟು ಉಂಟಾಗಬಹುದು. ಗಾಳಿಯಲ್ಲಿರುವ ರಾಸಾಯನಿಕಗಳು ನಿಮ್ಮ ಚರ್ಮದ ಮೇಲೆ ನೇರ ಪರಿಣಾಮ ಬೀರಬಹುದು. ಇದರಿಂದ ನಿಮ್ಮ ಚರ್ಮಕ್ಕೆ ಸೋಂಕು ತಾಗಿ, ನಿಮ್ಮ ನೆತ್ತಿಯ ಮೇಲೆ ಸೋಂಕುಂಟಾಗಬಹುದು. 

೬. ಅನಾರೋಗ್ಯಕರ ಆಹಾರ: ನೀವು ಸಮತೋಲಿತ ಆಹಾರವನ್ನು ಸೇವಿಸದೇ ಇದ್ದಲ್ಲಿ, ಹೊಟ್ಟು ಉಂಟಾಗಬಹುದು. ಹಾಗಾಗಿ, ಅನಾರೋಗ್ಯಕರ ಆಹಾರವನ್ನು ತಡೆಗಟ್ಟಿ, ವಿಟಮಿನ್ ಬಿ, ಪ್ರೋಟೀನ್ ಮತ್ತು ಕೊಬ್ಬಿನಂಶ ಇರುವ ಆಹಾರವನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ. 

೫. ಹೊಟ್ಟನ್ನು ಚಿಕಿತ್ಸಿಸಲು ಪ್ರಮುಖ ೫ ಮನೆಮದ್ದುಗಳು (Top 5 Home Remedies For Dandruff in Kannada):

ಸಂಶೋಧಕರು ಸಂಶೋಧಿಸಿದ ಪ್ರಕಾರ, ಹೊಟ್ಟು ಪ್ರಮುಖವಾಗಿ ಬಸಿಟೇರಿಯಲ್ ಸೋಂಕು ಅಥವಾ ಶಿಲಿಂಧ್ರಗಳ ಸೋಂಕಿನಿಂದ ಆಗುತ್ತದೆ. ಆದರೆ, ಈ ಸಮಸ್ಯೆಗಳನ್ನು ನಿವಾರಿಸಲು ನೈಸರ್ಗಿಕವಾದ ಮಾರ್ಗಗಳಿವೆ. ಅದರಲ್ಲಿ ಪ್ರಮುಖ ೫ ಮನೆ ಮದ್ದುಗಳನ್ನು ಇಲ್ಲಿ ನೀಡಲಾಗಿದೆ. 

೧. ಗ್ರೀನ್ ಟೀ (Green tea in Kannada):

ಅಗತ್ಯತೆಗಳು: ಗ್ರೀನ್ ಟೀ,  ಪುದೀನಾ ಸಾರಭೂತ ತೈಲಗಳು, ಬಿಳಿ ವಿನೆಗರ್

ವಿಧಾನ: 

* ಒಂದು ಕಪ್ ಗ್ರೀನ್ ಟೀ ತಯಾರಿಸಿ, ಅದಕ್ಕೆ ೨-೩ ಹನಿ ಪುದೀನಾ ಸಾರಭೂತ ಎಣ್ಣೆಯನ್ನು ಬೆರೆಸಿ. 

* ಇದಕ್ಕೆ ಒಂದು ಚಮಚ ಬಿಳಿ ವಿನೆಗರ್ ಸೇರಿಸಿ, ತಣ್ಣಗಾಗಲು ಬಿಡಿ. 

* ನಿಮ್ಮ ಕೂದಲನ್ನು ಹಸಿ ಮಾಡಿಕೊಂಡು, ಈ ಗ್ರೀನ್ ಟೀಯಲ್ಲಿ ನೆನೆಸಿ. 

* ಐದು ನಿಮಿಷಗಳ ಕಾಲ ನಿಮ್ಮ ನೆತ್ತಿಯನ್ನು ಮಸಾಜ್ ಮಾಡಿ. 

* ನಂತರ ಸೌಮ್ಯವಾದ, ಸಲ್ಫೇಟ್-ಮುಕ್ತ ಶ್ಯಾಂಪೂವಿನಿಂದ ನಿಮ್ಮ ಕೂದಲನ್ನು ತೊಳೆದುಕೊಳ್ಳಿ. 

ಯಾವಾಗ ಹಚ್ಚಿಕೊಳ್ಳಬೇಕು: ಸ್ನಾನಕ್ಕೆ ಹೋಗುವ ಮೊದಲು 

ಹೇಗೆ ಸಹಾಯ ಮಾಡುತ್ತದೆ? 

ಗ್ರೀನ್ ಟೀ ಹೊಟ್ಟಿಗೆ ಅತಿ ಸೂಕ್ತ ಮನೆಮದ್ದುಗಳಲ್ಲಿ ಒಂದು. ಗ್ರೀನ್ ಟೀ ಮತ್ತು ಪುದೀನಾ ಸಾರಭೂತ ತೈಲಗಳು ಆಂಟಿಓಕ್ಸಿಡಾಂಟ್ಸ್ ಮತ್ತು ಆಂಟಿಬಾಸಿಟೇರಿಯಲ್ ಗುಣಗಳನ್ನು ಹೊಂದಿದ್ದು, ನಿಮ್ಮ ಕೇಶವನ್ನು ಸೊಂದರವಾಗಿಸಿ, ನಿಮ್ಮ ನೆತ್ತಿಯನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. 

೨. ಬೇವಿನ ಎಳೆಗಳು (Neem Leaves in Kannada):

ಅಗತ್ಯತೆಗಳು: ಬೇವಿನ ಎಳೆಗಳು 

ಹೇಗೆ ಬಳಸಬೇಕು: 

* ಕೆಲವು ಬೇವಿನ ಎಲೆಗಳನ್ನು ೪-೫ ಕಪ್ ಬಿಸಿ ನೀರಿನಲ್ಲಿ ರಾತ್ರಿಯಿಡಿ ನೆನೆಯಿಡಿ. 

* ಮುಂಜಾನೆ, ಈ ದ್ರವವನ್ನು ನಿಮ್ಮ ನೆತ್ತಿಗೆ ಲೇಪಿಸಿರಿ. 

* ಇದರಿಂದ ಕಣಕವನ್ನೂ ತಯಾರಿಸಿ, ಬಳಸಬಹುದು. 

* ಒಂದು ಗಂಟೆಯ ನಂತರ, ನಿಮ್ಮ ಕೂದಲನ್ನು ತೊಳೆದುಕೊಳ್ಳಿ.

ಯಾವಾಗ ಹಚ್ಚಿಕೊಳ್ಳಬೇಕು? 

* ಸಸ್ನಾನಕ್ಕೆ ಹೋಗುವ ಒಂದು ಘಂಟೆಯ ಮೊದಲು, ಅಥವಾ 

* ರಾತ್ರಿ ನಿದ್ರೆ ಮಾಡುವ ಮೊದಲು. 

ಹೇಗೆ ಸಹಾಯ ಮಾಡುತ್ತದೆ?

* ನೆವೆಯನ್ನು ತಡೆಗಟ್ಟುತ್ತದೆ. 

* ಶಿಲಿಂದ್ರಗಳ ವಿರುದ್ಧ ಹೋರಾಡಿ, ಹೊಟ್ಟನ್ನು ತಡೆಗಟ್ಟುತ್ತದೆ. 

[Back To Top]

೩. ಆಪಲ್ ಸೈಡರ್ ವಿನೆಗರ್ (Apple Cider Vinegar in Kannada):

ಅಗತ್ಯತೆಗಳು: ಆಪಲ್ ಸೈಡರ್ ವಿನೆಗರ್, ಶುದ್ಧ ನೀರು

ಹೇಗೆ ಬಳಸಬೇಕು? 

* ಎರಡು ಸಾಮಗ್ರಿಗಳನ್ನು ಶೇಖಡಾ ೫೦ರಷ್ಟು ತೆಗೆದುಕೊಂಡು, ಮಿಶ್ರಣ ತಯಾರಿಸಿ. 

* ಈ ದ್ರವವನ್ನು ಶ್ಯಾಂಪೂವಿಗೆ ಪರ್ಯಾಯವಾಗಿ ಬಳಸಬಹುದು. 

ಯಾವಾಗ ಬಳಸಬೇಕು? ಪ್ರತಿ ಸಲ ನಿಮ್ಮ ಕೂದಲನ್ನು ನೀವು ತೊಳೆದುಕೊಂಡಾಗ, ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿಕೊಳ್ಳಬೇಕು 

ಹೇಗೆ ಸಹಾಯ ಮಾಡುತ್ತದೆ: 

* ಆಪಲ್ ಸೈಡರ್ ವಿನೆಗರ್ ನೈಸರ್ಗಿಕ ಕಾರ್ಯಗಾರಿಯಾಗಿದ್ದು, ಹೊತ್ತಿನ ವಿರುದ್ಧ ಹೋರಾಡುತ್ತದೆ. 

* ಆಪ್ಲೆ ಸೈಡರ್ ವಿನೆಗರ್ ತ್ವರಿತವಾಗಿ ನೆವೆಯನ್ನು ಕಡಿಮೆಗೊಳಿಸುತ್ತದೆ. 

೪. ನಿಂಬೆ ರಸ (Lemon Juice in Kannada):

ಅಗತ್ಯತೆಗಳು: ನಿಂಬೆ ರಸ, ನೀರು 

ಹೇಗೆ ಬಳಸಬೇಕು: 

* ಎರಡು ಚಮಚ ನಿಂಬೆ ರಸವನ್ನು ನಿಮ್ಮ ನೆತ್ತಿಗೆ ಮಸಾಜ್ ಮಾಡಿ. 

* ಒಂದು ಚಮಚ ನಿಂಬೆ ರಸವನ್ನು ಒಂದು ಕಪ್ ನೀರಿನಲ್ಲಿ ಸೇರಿಸಿ, ನಿಮ್ಮ ಕೂದಲನ್ನು ಈ ಮಿಶ್ರಣದಿಂದ ತೊಳೆದುಕೊಳ್ಳಿ. 

* ಈ ಪ್ರಕ್ರಿಯೆಯನ್ನು ನಿಮ್ಮ ಹೊಟ್ಟು ಕಡಿಮೆಯಾಗುವವರೆಗೂ ಪ್ರತಿದಿನ ಪಾಲಿಸಿರಿ.

ಯಾವಾಗ ಹಚ್ಚಿಕೊಳ್ಳಬೇಕು? ಪ್ರತಿದಿನ ನಿಮ್ಮ ಸ್ನಾನಕ್ಕಿಂತ ಮೊದಲು 

ಅದು ಹೇಗೆ ಸಹಾಯ ಮಾಡುತ್ತದೆ: 

* ನಿಂಬೆ ರಸದಲ್ಲಿರುವ ನೈಸರ್ಗಿಕ ಆಮ್ಲಗಳು ನಿಮ್ಮ ನೆತ್ತಿಯ ಮೇಲಿನ ಬ್ಯಾಕ್ಟೀರಿಯಾ ಮತ್ತು ಶೀಲಿಂಧ್ರಗಳ ರಚನೆಯನ್ನು ಒಡೆಯುತ್ತದೆ.

* ಸತ್ತ ಜೀವಕೋಶಗಳನ್ನು ನಿವಾರಿಸಿ, ಶೀಲಿಂಧ್ರಗಳನ್ನು ಕೊಂದು, ನಿಮ್ಮ ನೆತ್ತಿಗೆ ಮತ್ತು ಕೂದಲಿನ ಬೇರಿಗೆ ಯಾವುದೇ ಹಾನಿಯಾಗದಂತೆ ಕಾಪಾಡುತ್ತದೆ. 

* ಈ ವಿಧಾನ ನಿಮ್ಮ ಕೂದಲನ್ನು ಸುಂದರವಾಗಿ ಹಾಗೂ ಆರೋಗ್ಯಕರವಾಗಿ ಇರಿಸುತ್ತದೆ. 

೫.  ಕಿತ್ತಳೆ ಸಿಪ್ಪೆ (Orange Peels in Kannada):

ಅಗತ್ಯತೆಗಳು: ಒಣಗಿದ ಕಿತ್ತಳೆ ಸಿಪ್ಪೆಗಳು, ನಿಂಬೆ ರಸ, ಶ್ಯಾಂಪೂ 

ಹೇಗೆ ಬಳಸಬೇಕು: 

* ೩-೪ ಒಣಗಿದ ಕಿತ್ತಳೆ ಸಿಪ್ಪೆಗಳನ್ನು, ೫-೬ ಚಮಚ ನಿಂಬೆ ರಸದೊಂದಿಗೆ ಸೇರಿಸಿ, ರುಬ್ಬಿ. 

* ರುಬ್ಬಿದ ನಂತರ ಬರುವ ಕಣಕವನ್ನು ನಿಮ್ಮ ನೆತ್ತಿಗೆ ಲೇಪಿಸಿಕೊಂಡು, ಮೂವತ್ತು ನಿಮಿಷಗಳವರೆಗೆ ಬಿಡಿ.

* ಶ್ಯಾಂಪೂವಿನಿಂದ ತೊಳೆದುಕೊಳ್ಳಿ. 

ಯಾವಾಗ ಹಚ್ಚಿಕೊಳ್ಳಬೇಕು: 

* ಸ್ನಾನಕ್ಕಿಂತ ಮೊದಲು ಉಪಯೋಗಿಸಿ. 

* ಈ ಪ್ಯಾಕ್ ಅನ್ನು ವಾರದಲ್ಲಿ ಮೂರು ಬಾರಿ ಬಳಸಿದರೆ ಸಾಕು.

 ಹೇಗೆ ಸಹಾಯ ಮಾಡುತ್ತದೆ: 

* ಕಿತ್ತಳೆ ಹಣ್ಣಿನ ಸಿಪ್ಪೆಗಳಿಗೆ ಹಲವಾರು ಪ್ರಯೋಜನಗಳಿವೆ. ಅದರಲ್ಲಿ ಒಂದು ನಿಮ್ಮ ನೆತ್ತಿಯ ಅತಿಯಾದ ತೈಲವನ್ನು ಕಡಿಮೆಗೊಳಿಸುವುದು. 

* ಕಿತ್ತಳೆ ಸಿಪ್ಪೆಯೊಂದಿಗೆ ಸೇರಿಸಿರುವ ನಿಂಬೆ ರಸ ಹೊಟ್ಟಿನ ವಿರುದ್ಧ ಹೋರಾಡಿ, ಅದರ ಮರುಳುವಿಕೆಯನ್ನು ತಪ್ಪಿಸುತ್ತದೆ. 

ಹೊಟ್ಟಿನ ವಿಷಯದ ಕುರಿತು ಎಲ್ಲಾ ಕಾರಣಗಳನ್ನು ನೀವು ಈಗ ತಿಳಿದುಕೊಂಡಿದ್ದೀರಿ. ಈ ಮನೆಮದ್ದುಗಳನ್ನು ಬಳಸಿಕೊಂಡು ಹೊಟ್ಟನ್ನು ದೂರವಿಡಿ ಹಾಗೂ ಈ ಮನೆಮದ್ದುಗಳಲ್ಲಿ ಯಾವುದೇ ನಿಮಗೆ ಸೂಕ್ತವೆನಿಸಿತು ಎನ್ನುವುದನ್ನು ನಮಗೂ ತಿಳಿಸಿ. 

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon