Link copied!
Sign in / Sign up
20
Shares

ಹೊಟ್ಟೆ ನೋವೆಂದು ಆಸ್ಪತ್ರೆಗೆ ಬಂದ ಹೆಂಗಸಿನ ಹೊಟ್ಟೆ ಒಳಗಿರುವುದನ್ನು ನೋಡಿ ವೈದ್ಯರು ಗಾಬರಿ,ಕಕ್ಕಾಬಿಕ್ಕಿ!

ನೇಹಾ ಬೇಗಮ್ ಎಂಬಾಕೆಯು ಕಳೆದ ಕೆಲವು ವಾರಗಳಿಂದ ಸತತವಾಗಿ ವಾಂತಿ ಮಾಡಿಕೊಳ್ಳುತ್ತಲೇ ಇದ್ದಳು. ಈ ಕಾರಣದಿಂದ ಅವಳನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಕೆ.ಜಿ. ನಂದ ಆಸ್ಪತ್ರೆಯಲ್ಲಿ ವೈದ್ಯರು ಈಕೆಯ ತಪಾಸಣೆ ನಡೆಸಿದಾಗ, ಈಕೆಯ ಕರುಳಿನ ಕಾರ್ಯಗಳಿಗೆ ಏನೋ ಒಂದು ಅಡ್ಡಿ ಮಾಡುತ್ತಿರುವುದು ತಿಳಿದು ಬಂದಿತು. ಹೀಗಾಗಿ ಉತ್ತರ ಪ್ರದೇಶದ ಛಂದೌಲಿ ನಗರದ ನೇಹಾಳನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು.

ಸುಮಾರು ಸತತ ನಾಲ್ಕು ಗಂಟೆಗಳ ಸುದೀರ್ಘ ಶಸ್ತ್ರಚಿಕಿತ್ಸೆಯ ನಂತರ ವೈದ್ಯರು ಆಕೆಯ ದೇಹದೊಳಗೆ ಇದ್ದದ್ದು ಏನು ಎಂದು ನೋಡು ಗಾಬರಿ ಆಗಿ ಹೋದರು! ಈಕೆಯ ಹೊಟ್ಟೆಯಲ್ಲಿ ಇದದ್ದು 10 ಇಂಚಿನ ಹುಳಗಳು. ಅದು ಕೂಡ, ಒಂದಲ್ಲ, ಎರಡಲ್ಲ, ಮೂರಲ್ಲ, ಬರೋಬ್ಬರಿ 150 ಹುಳುಗಳು!

ಆಸ್ಪತ್ರೆಯ ಸ್ತ್ರೀರೋಗತಜ್ಞರಾದ ಡಾ ।। ಆನಂದ್ ಪ್ರಕಾಶ್ ತಿವಾರಿ ಅವರು “ನಾನಂತೂ ಶಾಕ್ ಆದೆ. ಇದೊಂದು ಅತ್ಯಂತ ಅಪರೂಪದ ಪ್ರಕರಣ” ಎಂದು ಹೇಳಿದ್ದಾರೆ.

“ನಾನು ಇಲ್ಲಿಯವರೆಗೆ ಮನುಷ್ಯನ ದೇಹದಲ್ಲಿ ಇಷ್ಟೊಂದು ಹುಳಗಳು ಇರುವುದನ್ನ ನೋಡಿರಲೇ ಇಲ್ಲ. ನನ್ನ ವೈದ್ಯಕೀಯ ಅನುಭವದಲ್ಲಿ, ನಾನು ಕಂಡ ರೋಗಿಗಳಲೆಲ್ಲಾ ಅಬ್ಬಬ್ಬಾ ಎಂದರೆ 3 ಅಥವಾ 4 ಹುಳಗಳು ಇರುತ್ತಿದ್ದವು. ಇದೇ ಮೊದಲ ಬಾರಿಗೆ ನಾನು ಇಷ್ಟು ದೊಡ್ಡ ಸಂಖ್ಯೆಯ ಹುಳಗಳನ್ನ ವ್ಯಕ್ತಿಯ ದೇಹದೊಳಗೆ ನೋಡುತ್ತಿರುವುದು” ಎಂದು ಹೇಳುತ್ತಾರೆ ಪ್ರಕಾಶ್ ತಿವಾರಿ.

ಈ ಹುಳಗಳು ಅದೃಷ್ಟವಶಾತ್ ಆಕೆಯ ಮೆದುಳಿಗೆ ಹೋಗಿಲ್ಲ. ಏಕೆಂದರೆ, ಈ ರೀತಿ ದೇಹದಲ್ಲಿ ಹುಳಗಳು ಸೇರಿಕೊಂಡಾಗ, ಅವುಗಳು ಮೆದುಳಿನವರೆಗೂ ಹೋಗಿ ಜೀವಕ್ಕೆ ಕುತ್ತು ತರುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇವುಗಳ ಬಗ್ಗೆ ವೈದ್ಯರು ಮತ್ತಷ್ಟು ಮಾಹಿತಿ ನೀಡಿದರು.

ಅವರು ಹೇಳುವ ಪ್ರಕಾರ ನಾವು ನೈರ್ಮಲ್ಯತೆ ಕಾಪಾಡಿಕೊಳ್ಳದ ಅಂದರೆ ಸ್ವಚ್ಛವಾಗಿ ಇರದೇ ಗಲೀಜಾದ ಜೀವನಶೈಲಿ ಪಾಲಿಸುವುದರಿಂದ ಈ ಹುಳಗಳು ನಮ್ಮ ದೇಹ ಸೇರುತ್ತವೆ. ಸಾಮಾನ್ಯವಾಗಿ ಇಂತಹ ಹುಳಗಳ ಮೊಟ್ಟೆಗಳು ಹಸಿರು ತರಕಾರಿ ಅಥವಾ ಫಿಲ್ಟರ್ ಮಾಡಿರದ ನೀರಿನಲ್ಲಿ ಕಾಣಿಸಿಕೊಳ್ಳುತ್ತವೆ. ಹೀಗಾಗಿಯೇ ವೈದ್ಯರು ಯಾವಾಗಲೂ ತರಕಾರಿಗಳನ್ನ ಅಡುಗೆಗೆ ಬಳಸುವ ಮುನ್ನ ಚೆನ್ನಾಗಿ ತೊಳೆಯಿರಿ ಎಂದು ಹೇಳುತ್ತಾರೆ.

ದೇಹವನ್ನ ಮತ್ತು ನಮ್ಮ ಸುತ್ತಮುತ್ತಲಿನ ಜಾಗವನ್ನ ಸ್ವಚ್ಛವಾಗಿ ಇಟ್ಟುಕೊಳ್ಳುವುದಷ್ಟೇ ಸಾಕು ಈ ಹುಳಗಳಿಂದ ದೂರವಿರಲು. ಈ ಹುಳಗಳು ರಕ್ತದಲ್ಲಿ ಸೇರಿಕೊಂಡು ನಮ್ಮ ದೇಹದಲ್ಲೇ ಬೆಳೆಯಲು ಶುರು ಮಾಡುತ್ತವೆ.

ನೇಹಾ ಈಗ ಸುಧಾರಿಸಿಕೊಳ್ಳುತ್ತಿದ್ದು, ಮುಂಚೆಗಿಂತ ಆಕೆಯ ಸ್ಥಿತಿ ಈಗ ಸಮಾಧಾನಕರವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon