Link copied!
Sign in / Sign up
12
Shares

ಸಿಸೇರಿಯನ್ ಆದ ನಂತರ ಹೊಟ್ಟೆ ಕರಗಿಸಲು 5 ಸರಳ ಮಾರ್ಗಗಳು

ಪ್ರಸವದ ನಂತರ ನಿಮ್ಮ ಮನಸ್ಸಿನಲ್ಲಿ ಮೊದಲು ಬರುವ ಚಿಂತೆ –“ಒಮ್ಮೆ ಮೊದಲಿನ ಸುಂದರ ಶರೀರವನ್ನು ಮರಳಿ ಪಡೆಯುವಂತಾಗಿರುತ್ತಿದ್ದರೆ...” ಎಂದಾಗಿರುವುದು.ಸಿಸೇರಿಯನ್ ಆಗಿದ್ದರೆ ಪ್ರಸವದ ನಂತರವೂ ಶರೀರವು ತನ್ನ ಮೊದಲಿನ ಅದೇ ಸೌಂದರ್ಯವನ್ನು ಉಳಿಸಿಕೊಳ್ಳುವಂತೆ ವ್ಯಾಯಾಮ ಮಾಡಲು ಒಂದೆರಡು ತಿಂಗಳುಗಳಾದರೂ ಕಾಯಬೇಕಾಗುವುದು ಹಾಗಾದರೆ ನಾವೇನು ಮಾಡಬಹುದು...? ಎಲ್ಲಿಂದ ಪ್ರಾರಂಭಿಸಬೇಕು...?

ನಿಮ್ಮ ಶರೀರವನ್ನು ಸುಂದರ ರೂಪದಲ್ಲಿ ಕೆತ್ತಲು ನೀವು ಮಾಡಬೇಕಾದ ಕೆಲವು ಸರಳ ಮಾರ್ಗಗಳು

(೧) ನೀರಿನ ವ್ಯಾಯಾಮ

ಶರೀರಕ್ಕೆ ಯಾವುದೇ ಆಯಾಸ ನೀಡದೆ ಮಾಡಬಹುದಾದ ಕೆಲವು ವ್ಯಾಯಾಮಗಳಲ್ಲಿ ನೀರಿನ ವ್ಯಾಯಾಮವೂ ಒಂದು. ಕೇವಲ ಈಜು ಮಾತ್ರವಲ್ಲದೆ, ನೀರಿನಡಿಯಲ್ಲಿ ಪ್ರಯೋಗಿಸಬಹುದಾದ ಕೆಲವು ಕಸರತ್ತುಗಳು ಕೂಡ ಇವೆ. ನೆಲದ ಮೇಲೆ ಮಾಡಬಹುದಾದ ಹಲವಾರು ವ್ಯಾಯಾಮಗಳನ್ನು ನೀರಿನ ಅಡಿಯಲ್ಲೂ ಪರೀಕ್ಷಿಸಬಹುದು. ನೀರಿನಡಿಯಲ್ಲಿ ನಡೆಯುವುದು, ಕಾಲಿನ ಮಾಂಸ ಪೇಶಿಗಳಿಗೆ ವ್ಯಾಯಾಮವನ್ನು ನೀಡುತ್ತದೆ. ಈ ರೀತಿ ನಡೆಯುವುದರಿಂದ ಶರೀರಕ್ಕೆ ಯಾವುದೇ ಆಯಾಸವನ್ನು ನೀಡದೇ ಹಲವಾರು ಪ್ರಮಾಣದಲ್ಲಿ ಕ್ಯಾಲೋರಿಗಳನ್ನು ಕರಗಿಸಬಹುದು ಎನ್ನುವುದೇ ಇದರ ಪ್ರಥಮ ಆಕರ್ಷಣೆ. ಕ್ರಮೇಣ ಶರೀರವು ಈ ರೀತಿಯ ವ್ಯಾಯಾಮಗಳಿಗೆ ಹೊಂದಿಕೊಳ್ಳುವುದು. ಪ್ರಾರಂಭಿಕ ಹಂತಗಳಲ್ಲಿ ಇಪ್ಪತ್ತು ಮಿನಿಟುನಿಂದ ಪ್ರಾರಂಭಿಸಿ, ಎರಡು ವಾರಗಳ ಬಳಿಕ ೩೦ ಮಿನುಟುಗಳಿಗೇರಿಸಿ, ಎರಡು ತಿಂಗಳಾಗುವಷ್ಟರಲ್ಲಿ ೪೫ ಮಿನಿಟುಗಳಷ್ಟು ಸಮಯವನ್ನು ಈ ವ್ಯಾಯಾಮಕ್ಕಾಗಿ ವಿನಿಯೋಗಿಸಿ.

 

(೨) ಆರೋಗ್ಯಕರ ಆಹಾರ

ರೆಫ್ರಿಜರೇಟರುಗಳಲ್ಲಿ ಆರೋಗ್ಯ ಪೂರಕ ಕುರುಕುಲು ತಿಂಡಿಗಳನ್ನು ತುಂಬಿಸಿಡಿ. ಬಾಳೆಹಣ್ಣು, ಸೇಬು ಅಥವಾ ದ್ರಾಕ್ಷಿಗಳಂತಹ ಹಣ್ಣುಗಳನ್ನು ಶೇಖರಿಸಿಡುವುದರಿಂದ, ಯಾವಾಗ ಬೇಕಾದರೂ ಅದನ್ನು ಹೊಟ್ಟೆಗೆ ಹಾಕಿಕೊಳ್ಳಬಹುದು. ಯೋಗರ್ಟ್, ಗೇರು ಬೀಜ ಹಾಗೂ ಒಣ ದಾಕ್ಷೆಗಳಂತಹ ಹಣ್ಣುಗಳನ್ನು ತಂದಿಡಬಹುದು. ಬಾಯಿಯು ಹುಳಿ- ಖಾರಕ್ಕಾಗಿ ಬಯಸುವಾಗ, ತರಕಾರಿಗಳಿಂದ ತುಂಬಿದ ಬೇಲ್ಪುರಿಯು ಉತ್ತಮ ಆಯ್ಕೆಯಾಗುವುದು.

 

(೪) ಎದೆಹಾಲೂಡಿಸುವಿಕೆ

ತುಂಬಾ ಸುಲಭವಾದ ಹಾಗೂ ಉತ್ತಮವಾದ ವ್ಯಾಯಾಮವಿದು. ಮೊಲೆಯೂಡಿಸುವಿಕೆಯಿಂದ ತಾವು ತಮ್ಮ ಮೊದಲಿನ ಸುಂದರ ಶರೀರದ ರೂಪವನ್ನು ಮರಳಿಪಡೆದೆವೆಂದು ಹಲವಾರು ಸೆಲೆಬ್ರಿಟಿಗಳು ಹೇಳಿಕೊಳ್ಳುತ್ತಿದ್ದಾರಾದರೂ, ಸರಿಯಾದ ವ್ಯಾಯಾಮ ಮತ್ತು ಆರೋಗ್ಯಕರ ಆಹಾರ ಸೇವನೆಯು ಇದರೊಂದಿಗೆ ನಡೆಯಬೇಕು. ಆದರೆ ಮೂಲೆಯೂಸುವುದರಿಂದ ಸಿಗುವ ಲಾಭಗಳ ಬಗ್ಗೆ ಅಲಕ್ಷ್ಯ ಮಾಡಬೇಕೆನ್ನುವುದು ಈ ಮಾತಿನ ಅರ್ಥವಲ್ಲ.

 

(೫) ಸಮತೋಲನಾಹಾರ

ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುವ ಆಹಾರ ಪದಾರ್ಥಗಳತ್ತ ನಮ್ಮ ಕೈ ಬೇಗನೇ ತಲುಪುತ್ತದೆ. ಪ್ರಸವದ ನಂತರ ಶರೀರದ ತೂಕವನ್ನು ಇಳಿಸಿಕೊಳ್ಳಲು ಬಯಸುತ್ತಿದ್ದರೆ, ಮೊದಲಿಗೆ ಬಾಯಿ ಚಪಲವನ್ನು ಬಿಟ್ಟು ಬಿಡಬೇಕು. ದಿನವೂ ಸೇವಿಸಬೇಕಾದ ಆಹಾರದ ಪಟ್ಟಿಯೊಂದನ್ನು ತಯಾರಿಸಿ,ಶರೀರಕ್ಕೆ ಸಿಗುವ ಪೋಷಕಾಂಶಗಳು ಯಾವುದೆಂದು ಗುರುತಿಸಿರಬೇಕು. ವಿಟಮಿನ್ಸ್ ,ಮಿನರಲ್ಸ್ , ಪ್ರೋಟೀನ್ಸ್ ಮತ್ತು ಪೂರಕ ಕೊಬ್ಬಿನಂಶಗಳು ಶರೀರಕ್ಕೆ ಲಭ್ಯವಾಗುವಂತಿರಬೇಕು. ಅಗತ್ಯವಾದ ಪೋಷಕಾಂಶಗಳನ್ನು ಶರೀರಕ್ಕೆ ಒದಗಿಸುವಂತೆ ಹೊಟ್ಟೆ ತುಂಬಿಸಿದರೆ, ಆರೋಗ್ಯಕ್ಕೆ ಸವಾಲಾಗುವಂತಹ ಕರಿದ ಪದಾರ್ಥಗಳನ್ನು ತಿನ್ನುವತ್ತ ಮನಸ್ಸು ವಾಲದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon