Link copied!
Sign in / Sign up
12
Shares

ನಿಮ್ಮ ಮಕ್ಕಳು ಇಷ್ಟಪಡುವ, 6 ಹೋಟೆಲ್ ರೀತಿಯ ಆರೋಗ್ಯಕರ ತಿನಿಸುಗಳು..!

ಕುರುಕಲು ತಿಂಡಿಗಳೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಪುಟ್ಟ ಕಂದಮ್ಮಗಳಿಂದ ಹಿಡಿದು ವಯಸ್ಸಾದವರಿಗೂ ಸಹ ಕುರಕಲು ತಿನಿಸುಗಳೆಂದರೆ  ಅಚ್ಚುಮೆಚ್ಚು. ಕುರುಕಲು ಎಂದ ಕೂಡಲೇ, ನಿಮ್ಮ ಮನಸ್ಸಿಗೆ ಪಾನಿ ಪುರಿ, ಗೋಬಿ ಮಂಚೂರಿಯಂತಹ ತಿನಿಸುಗಳು ನೆನಪಿಗೆ ಬರುತ್ತಿದೆಯೇ?  ಪ್ರತಿನಿತ್ಯದ ಅಡುಗೆ ಎಲ್ಲರಿಗು ಬೇಸರವೆನಿಸುವುದು ಸಹಜ, ಏನಾದರು ರುಚಿ ರುಚಿಯಾಗಿ ತಿನ್ನಬೇಕೆಂದು ಹೊರಗೆ ಹೋಗಿ ಅನಾರೋಗ್ಯಕರ ತಿನಿಸುಗಳ್ಳನ್ನು ತಿನ್ನುವ ಬದಲು, ಮನೆಯಲ್ಲೇ ಆರೋಗ್ಯಕರ ತಿನಿಸುಗಳನ್ನು ಮಕ್ಕಳಿಗೆ ನೀಡುವುದನ್ನು ರೂಢಿಸಿಕೊಳ್ಳಿ. ನಿಲ್ಲಿ, ನಾವಿಲ್ಲಿ ನಿಮ್ಮ ಕಂದಮ್ಮಗಳಿಗೆ ಆರೋಗ್ಯಕರ ಹಾಗು ರುಚಿಕರವಾದ ತಿನಿಸುಗಳನ್ನು, ಮನೆಯಲ್ಲೇ ತಯಾರಿಸುವುದು ಹೇಗೆಂದು ತಿಳಿಸುತ್ತೇವೆ.

ಮನೆಯಲ್ಲೇ ಲಭ್ಯವಿರುವ ತರಕಾರಿಗಳು, ಹಣ್ಣುಗಳಿಂದ ಹೋಟೆಲ್ ಸ್ಟೈಲ್ ತಿನಿಸುಗಳನ್ನು, ನಿಮ್ಮ ಮಗುವಿಗೆ ಇಷ್ಟವಾಗುವ ರೀತಿಯಲ್ಲಿ ಮಾಡುವುದು ಹೇಗೆ ಎಂಬುದನ್ನು ನೀವು ತಿಳಿಯಬೇಕೇ? ಹಾಗಾದರೆ, ಮುಂದೆ ಓದಿ.

೧. ಬೇಯಿಸಿದ ಬೀನ್ಸ್

ಚೆನ್ನಾಗಿ ಬೇಯಿಸಿದ ಬೀನ್ಸ್ ಕಾಳುಗಳ್ಳನ್ನು ಮಕ್ಕಳು ಹೆಚ್ಚಾಗಿ ಇಷ್ಟ ಪಡುತ್ತಾರೆ. ಇದರ ಮೃದುವಾದ ರುಚಿಯನ್ನು ಇಷ್ಟಪಡದ ಮಕ್ಕಳಿಲ್ಲ. ಹೌದು ಬೇಯಿಸಿದ ಕಾಳಿಗೆ, ಈರುಳ್ಳಿ, ಪೆಪ್ಪರ್, ಕೊತ್ತಂಬರಿ ಸೊಪ್ಪು ಸ್ವಲ್ಪ ಆಲಿವ್ ಎಣ್ಣೆ ಹಾಕಿ ಸಲಾಡ್ ರೂಪದಲ್ಲಿ ನೀಡಿದರೆ ಮಕ್ಕಳು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಬೀನ್ಸ್ ಕಾಳಿನಲ್ಲಿ, ಅತೀ ಹೆಚ್ಚಿನ ಪ್ರಮಾಣದ ಪ್ರೋಟೀನ್ ಇದ್ದು,  ನಿಮ್ಮ ಮಕ್ಕಳ ಶಾರೀರಿಕ ಹಾಗು ಮಾನಸಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ.

೨. ಹವೆಯಲ್ಲಿ ಬೇಯಿಸಿದ ಕ್ಯಾರಟ್

ಹಸಿ ಕ್ಯಾರಟ್ ಅನ್ನು ಪುಟ್ಟ ಕಂದಮ್ಮಗಳಿಗೆ ನೀಡಬೇಡಿ. ಇದನ್ನು ನುಂಗಲು ಕಷ್ಟವಾಗುವುದರಿಂದ, ಗಂಟಲಿನೊಳಗೆ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ನೀರಿನ ಹವೆಯಲ್ಲಿ, ಕ್ಯಾರಟ್ ಅನ್ನು ಚೆನ್ನಾಗಿ ಬೇಯಿಸಿ, ಸ್ವಲ್ಪ ಸಕ್ಕರೆ, ಹಾಲು, ಏಲ್ಲಕಿ ಪುಡಿಯೊಂದಿಗೆ ಬೆರಸಿ ಪಾಯಸದ ರೀತಿಯಲ್ಲಿ ತಿನ್ನಲು ಕೊಡಿ. ಕ್ಯಾರಟ್ ಮಕ್ಕಳ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುವುದಲ್ಲದೆ, ಮಕ್ಕಳ್ಳಲ್ಲಿ ರಾತ್ರಿ ಕುರುಡಿನ ಸಮಸ್ಯೆ ಬಾರದ ಹಾಗೆ ತಡೆಯುತ್ತದೆ.  

೩. ಕಲ್ಲಂಗಡಿ ಹಣ್ಣು ಹಾಗು ಟೊಮೇಟೊ

ಮೃದುವಾದ ತಾರಕಾರಿಗಳು, ಹಣ್ಣುಗಳ್ಳನ್ನು ತಿನ್ನುವಂತೆ, ನಿಮ್ಮ ಮುದ್ದು ಕಂದಮ್ಮಗಳಿಗೆ ಚಿಕ್ಕ ವಯಸ್ಸಿನಿಂದಲೇ ಅಭ್ಯಾಸ ಮಾಡಿಸಿ. ಕಲ್ಲಂಗಡಿ ಹಣ್ಣು, ಪೀಚ್ ಹಣ್ಣು, ಅವಕಾಡೋ ಹಣ್ಣು ಮುಂತಾದ ಮೃದುವಾದ ಹಣ್ಣುಗಳ್ಳನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ, ಮಗುವಿಗೆ ತಿನ್ನಲು ಕೊಡಿ. ನೀವು ತಿನ್ನಿಸುವುದಕ್ಕಿಂತ ಮಕ್ಕಳಿಗೆ ತಿನ್ನಲು ನೀಡಿ. ಹೀಗೆ ಮಾಡುವುದರಿಂದ ಮಕ್ಕಳು ಹಣ್ಣಿನ ಬಣ್ಣ ಹಾಗು ರುಚಿಗೆ ಮಾರು ಹೋಗಿ ತಾವಾಗಿಯೇ ತಿನ್ನಲು ನಿಮ್ಮನ್ನು ಕೇಳುತ್ತಾರೆ.

೪. ಬಟಾಣಿ

ಹೌದು, ಬಟಾಣಿಯನ್ನು ಚೆನ್ನಾಗಿ ನೀರಿನಲ್ಲಿ ಬೇಯಿಸಿ, ಮೇಲೆ ಹೇಳಿದ ಸಲಾಡ್ ರೂಪದಲ್ಲಿಯೂ ಸಹ ಮಕ್ಕಳಿಗೆ ನೀಡಬಹುದು. ಇದು ನಿಮ್ಮ ಪುಟ್ಟ ಕಂದಮ್ಮಗಳಿಗೆ ಹಲ್ಲು ಬರುವ ಸಮಯದಲ್ಲಿ ನೋವು ನಿವಾರಕವಾಗಿ ಕಾರ್ಯ ನಿರ್ವಹಿಸುತ್ತದೆ. ಬಟಾಣಿಯನ್ನು ಬೀಯಿಸದೆ ಹಾಗೆ ನೀಡಿದರೆ ಗಂಟಲಿಗೆ ಸಿಕ್ಕಿ ಹಾಕಿಕೊಳ್ಳುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ಚೆನ್ನಾಗಿ ಬೇಯಿಸಿದ ನಂತರವಷ್ಟೇ ನಿಮ್ಮ ಮಗುವಿಗೆ ನೀಡಿ.

೫.  ಚೆನ್ನಾಗಿ ಮಿಶ್ರಣ ಮಾಡಿದ ಮೊಟ್ಟೆ( ಸ್ಕ್ರಂಬೆಲ್ದ್ ಎಗ್ಗ್)

ಮೊಟ್ಟೆಯ ಬಿಳಿ ಭಾಗವನ್ನು ಒಂದು ವರ್ಷದ ಕೆಳಗಿನ ಮಕ್ಕಳಲ್ಲಿ, ಹೆಚ್ಚಿನ ಪ್ರಮಾಣದಲ್ಲಿ ನೀಡಬಾರದೆಂದು ನಾವು ಕೇಳಿದ್ದೇವೆ. ಆದರೆ, ಇತ್ತೀಚಿನ ಸಂಶೋಧನೆಯ ಪ್ರಕಾರ ಮೊಟ್ಟೆಯಲ್ಲಿರುವ ಪ್ರೋಟೀನ್, ಕಬ್ಬಿಣದ ಅಂಶ ಮಗುವಿನ ರೋಗ ನಿರೋಧಕ ಶಕ್ತಿಯನ್ನು ಇಮ್ಮಡಿಗೊಳಿಸುತ್ತದೆ.

ಒಂದು ಸಣ್ಣ ದೋಸೆಯ ತವವನ್ನು ಕಾಯಲು ಬಿಡಿ, ಇದಕ್ಕೆ ಆಲಿವ್ ಎಣ್ಣೆಯನ್ನು ಸವರಿ, ಮೊಟ್ಟೆಯನ್ನು ಒಡೆದು ಅದರ ಮೇಲೆ ಹಾಕಿ. ನಂತರ ಒಂದು ಚಮಚದಲ್ಲಿ ಮೊಟ್ಟೆಯನ್ನು ಸಣ್ಣ ಉಂಡೆಯಾಗುವ ಹಾಗೆ ಕೈಯಾಡಿ.

ಹೀಗೆ ಮೊಟ್ಟೆಯು ಸಣ್ಣ ಸಣ್ಣ ಉಂಡೆಯ ಹಾಗೆ ಕೂಡಿಕೊಳ್ಳುವವರೆಗೂ ಬೇಯಿಸಿ. ಇದನ್ನು ಪೆಪ್ಪರ್ ನೊಂದಿಗೆ ನಿಮ್ಮ ಮಗುವಿಗೆ ನೀಡಿ.

೬. ಸೌತೆಕಾಯಿ

ಸೌತೆಕಾಯಿಯನ್ನು ಒಂದು ಬಟ್ಟಲಿಗೆ ತುರಿದು, ಅದಕ್ಕೆ ಕ್ಯಾರಟ್ ತುರಿಯನ್ನು ಮಿಶ್ರಣ ಮಾಡಿ ನೀಡಬಹುದು. ಸೌತೆಕಾಯಿಯನ್ನು ಸಣ್ಣ ತುಂಡುಗಳಾಗಿ ಮಾತ್ರ ಕತ್ತರಿಸಬೇಡಿ. ಎಚ್ಚರ ತಾಯಂದಿರೇ! ಸೌತೆಕಾಯಿಯನ್ನು ಸಣ್ಣಗೆ ಕತ್ತರಿಸಿ ಮಗುವಿಗೆ ತಿನ್ನಲು ನೀಡಿದರೆ, ಅದನ್ನು ನುಂಗಲಾಗದೆ ನಿಮ್ಮ ಮಗು ಉಸಿರುಗಟ್ಟುವ ಸಾಧ್ಯತೆಗಳಿವೆ.

ಮೇಲೆ ಹೇಳಿದ ಆಹಾರ ತಿನಿಸುಗಳ್ಳನ್ನು  ನಿಮ್ಮ ಮನೆಯಲ್ಲಿ ಪ್ರಯೋಗಿಸಿ, ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಈ ಲೇಖನ ನಿಮಗೆ ಉಪಯುಕ್ತವೆನಿಸಿದರೆ, ನಿಮ್ಮಂತೆ ಮಗುವಿನ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಸಾವಿರಾರು ತಾಯಂದಿರೊಂದಿಗೆ ಇದನ್ನು ಹಂಚಿಕೊಳ್ಳಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon