Link copied!
Sign in / Sign up
165
Shares

ಹೊಸವರ್ಷದ ಟಾಪ್ 10 ಟ್ರೆಂಡಿಂಗ್ ಹೆಣ್ಣು ಮಗು ಹೆಸರುಗಳು

ಪ್ರಪಂಚವು ನಮ್ಮನ್ನು ಗುರುತಿಸುವುದು ನಮ್ಮ ಹೆಸರಿನಿಂದ. ಜಗತ್ತು ನಮ್ಮನ್ನು ವ್ಯಾಖ್ಯಾನಿಸುತ್ತದೆ, ನಮಗೆ ವ್ಯಕ್ತಿತ್ವವನ್ನು ನೀಡುತ್ತದೆ ಮತ್ತು ನಾವು ಯಾರು ಎಂದು ಇಡೀ ವಿಶ್ವಕ್ಕೆ ಪರಿಚಯಿಸುವುದು ನಮ್ಮ ಹೆಸರಿನಿಂದ. ಆದರೆ ಕೆಲವೊಮ್ಮೆ, ವಿಶಿಷ್ಟವಾದ ಮತ್ತು ವಿಭಿನ್ನವಾದ ಹೆಸರನ್ನು ಹೊಂದಿರುವುದರಿಂದ ಅದರ ವಿಭಿನ್ನವಾದ ಪರಿಣಾಮವು ಸಂಪೂರ್ಣ ವಿಭಿನ್ನ ರೀತಿಯಲ್ಲಿ ನಮಗೆ ಕಾಣಸಿಗಬಹುದು. ಆದ್ದರಿಂದ ನಿಮ್ಮ ಮುದ್ದು ಕಂದಮ್ಮನಿಗೆ ಕೆಲವು ಅನನ್ಯವಾದ ಹೆಸರಗಳನ್ನು ಅದರ ಅರ್ಥದೊಂದಿಗೆ ನಿಮಗೆ ಸಲಹೆ ನೀಡಿದ್ದೇವೆ.


೧. ಅಹಲ್ಯ

ರಿಷಿ ಗೌತಮನ ಬಗ್ಗೆ ಕೇಳಿರುತ್ತೀರ. ಅಹಲ್ಯ ಎಂಬುದು ರಿಷಿ ಗೌತಮನ ಪತ್ನಿಯ ಹೆಸರು. 


೨. ಆಶಿತಾ

ನಿಮ್ಮ ಮಗಳು ನಿಮ್ಮ ಮನೆಗೆ ಖುಷಿಯ ಧಾರೆ ಆಗಿರುತ್ತಾಳೆ. ಹೀಗಾಗಿ ಅವಳಿಗೆ ಯಮುನಾ ನದಿಯ ಇನ್ನೊಂದು ಹೆಸರಾದ ಆಶಿತಾ ಎಂಬ ಹೆಸರನ್ನ ನೀಡಬಹುದು.


೩. ಬೃಂದಾ

ದಿನ ಬೆಳಗ್ಗೆ ಹೆಂಗಸರು ತುಳಸಿಯ ಪೂಜೆ ಮಾಡುತ್ತಾರೆ, ಏಕೆಂದರೆ ತುಳುಸಿಗೆ ಕೇವಲ ಸಾಂಪ್ರದಾಯಿಕವಾಗಿ ಅಷ್ಟೇ ಅಲ್ಲದೆ, ವೈಜ್ಞಾನಿಕವಾಗಿಯೂ ಮಹತ್ವದ್ದಾಗಿದೆ. ತುಳಸಿಗೆ ಇನ್ನೊಂದು ಹೆಸರೇ ಬೃಂದಾ.


೪. ಜಯಿತಾ

ನಿಮ್ಮ ಮಗಳು ಜೀವನದಲ್ಲಿ ಯಾವುದರಲ್ಲೂ ಸೋಲಬಾರದು ಎಂಬ ಆಶಯ ನಿಮ್ಮದಾಗಿದ್ದರೆ ಅವಳಿಗೆ ಈ ಹೆಸರು ಕೊಡಿ. ಜಯಿತಾ ಎಂದರೆ ವಿಜಯಶಾಲಿ ಎಂದರ್ಥ.


೫. ಕಾಮ್ಯ

ಕಾಮ್ಯ ಎಂದರೆ ಸಮರ್ಥಳು ಎಂದರ್ಥ.


೬. ಖ್ಯಾತಿ

ಮನೆಗೆ ಹೆಸರು ತರುವಳು ನಿಮ್ಮ ಮಗಳು. ಜಗತ್ತೇ ಅವಳ ಹೆಸರನ್ನ ನೆನಪಿಡುವಂತೆ ಪ್ರಸಿದ್ಧಳಾಗಬೇಕು ಎಂದರೆ ಅವಳಿಗೆ ಈ ಹೆಸರನ್ನ ನೀಡಿ. ಖ್ಯಾತಿ ಎಂದರೆ ಪ್ರಸಿದ್ದಿ ಹೊಂದಿರುವವಳು ಎಂದರ್ಥ.


೭. ಲಿಪಿಕಾ

ಲಿಪಿಕಾ ಎಂದರೆ ಸಣ್ಣದೊಂದು ಪತ್ರ ಎಂದರ್ಥ.


೮. ಮಾನ್ವಿ

ನಿಮ್ಮ ಮಗಳು ಸಮಾಜಮುಖಿ ಕೆಲಸಗಳಲ್ಲಿ ಗುರುತಿಸಿಕೊಳ್ಳಬೇಕು ಎಂದರೆ ಅವಳಿಗೆ ಈ ಹೆಸರು ಹೊಂದುತ್ತದೆ. ಮಾನ್ವಿ ಎಂದರೆ ಮಾನವೀಯತೆ ಉಳ್ಳವಳು ಎಂದು.


೯. ನಿಶಿಕಾಂತ

ನಿಮ್ಮ ಮನೆಯ ಸೌಂದರ್ಯ ಹೆಚ್ಚಿಸುವ, ನಿಮ್ಮ ಕಣ್ಣಿನ ನಕ್ಷತ್ರ, ಚಂದ್ರ ನಿಮ್ಮ ಮಗಳು. ಹೀಗಾಗಿ ಅವಳಿಗೆ ಚಂದ್ರ ಎಂಬ ಅರ್ಥ ಕೊಡುವ ನಿಶಿಕಾಂತ ಎಂಬ ಹೆಸರು ನೀಡಬಹುದು.


೧೦. ಪರಿಧಿ

ಪರಿಧಿ ಎಂದರೆ ಸಾಮ್ರಾಜ್ಯ ಎಂದರ್ಥ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
50%
Wow!
50%
Like
0%
Not bad
0%
What?
scroll up icon