Link copied!
Sign in / Sign up
77
Shares

ಜೇಬಿನಿಂದ ಮೊಬೈಲ್ ಹೊರತೆಗೆಯುವಂತೆ,ಕಾರಲ್ಲಿ ಕುಳಿತಲ್ಲೇ ಯೋನಿಯಿಂದ ಮಗು ಹೊರತೆಗೆದ ಅಮ್ಮ!

ನೀವು ಎಷ್ಟೊಂದು ವಿಚಿತ್ರವಾದ ಹೆರಿಗೆ ಕಥೆಗಳ ಬಗ್ಗೆ ಕೇಳಿರುತ್ತೀರಾ. ರಸ್ತೆಯಲ್ಲೇ ಹೆರಿಗೆಯಾಗುವುದು, ಆಂಬುಲೆನ್ಸ್ ಅಲ್ಲಿ ಹೆರಿಗೆ ಆಗುವುದು ಅಥವಾ ಆಸ್ಪತ್ರೆಯ ಬಾಗಿಲಿನಲ್ಲೇ ಹೆರಿಗೆ ಆಗುವುದು, ಹೀಗೆ ಇನ್ನೂ ಹಲವು. ಇವೆಲ್ಲವುಗಳಲ್ಲಿ ಒಂದು ಸಾಮಾನ್ಯವಾದ ಅಂಶ ಏನು ಎಂದರೆ, ಈ ಎಲ್ಲಾ ಪ್ರಕರಣಗಳಲ್ಲಿಯೂ ತಾಯಿಗೆ ಹೆರಿಗೆ ನೋವು ಕಾಣಿಸಿಕೊಂಡಿರುತ್ತದೆ ಮತ್ತು ಅವರು ಸೂಕ್ತ ವೈದ್ಯಕೀಯ ನೆರವು ಸಿಗುವ ಮುನ್ನವೇ ಅಥವಾ ಸಿಗದೆಯೇ ಮಗುವಿಗೆ ಜನ್ಮ ನೀಡಿರುತ್ತಾರೆ.

ಆದರೆ ಇಲ್ಲಿ ನಡೆದ ಘಟನೆಯೊಂದರಲ್ಲಿ ತಾಯಿಗೆ ತನ್ನ ಮಗು ಹೊರಬರುವ ಅನುಭವ ಆಗುವುದಿರಲಿ, ಹೆರಿಗೆ ನೋವು ಕೂಡ ಕಾಣಿಸಿಕೊಂಡಿಲ್ಲ. ಈಕೆ ಹೀಗೆ ತನ್ನ ಪತಿಯೊಂದಿಗೆ ಕಾರ್ ಅಲ್ಲಿ ಕುಳಿತುಕೊಂಡು ಎಲ್ಲಿಗೋ ಹೋಗುತ್ತಿರುವಾಗ, ಇದ್ದಕ್ಕಿದ್ದಂತೆ ತನ್ನ ಯೋನಿಯಿಂದ ಏನೋ ಹೊರಬರುತ್ತಿರುವಂತೆ ಈಕೆಗೆ ಅನುಭವವಾಗಿದೆ. ಆ ಕ್ಷಣವೇ ಆಕೆ ತನ್ನ ಪ್ಯಾಂಟ್ ಅನ್ನು ಸ್ವಲ್ಪ ಕೆಳಗಿಳಿಸಿ ನೋಡಿದರೆ, ಅಲ್ಲಿ ಹೊರಬಂದಿದ್ದು ಆಕೆಯ ಉದರದಲ್ಲಿದ್ದ ಮಗು! ಜೇಬಿನಿಂದ ಮೊಬೈಲ್ ಹೊರತೆಗೆಯುವಂತೆ ಈಕೆ ತನ್ನ ಮಗುವನ್ನ ತನ್ನ ಯೋನಿಯಿಂದ ಪ್ಯಾಂಟ್ ಹೊರತೆಗೆದು ಸಲೀಸಾಗಿ ಎತ್ತಿಕೊಳ್ಳುತ್ತಾಳೆ. ಆ ಮಗುವನ್ನ ಎತ್ತಿಕೊಂಡು ಮೊದಲ ಬಾರಿಗೆ ಅದರ ಮುಖವನ್ನ ನೋಡಿದಾಗ ಆಕೆಯ ಮುಖದ ಮೇಲಿನ ಸಂತೋಷವನ್ನ ಗಮನಿಸಿ.

ಇದಕ್ಕೆ ಅಲ್ಲವೇ ಹೇಳುವುದು ಸೃಷ್ಟಿಯ ಅದ್ಭುತ, ಸೃಷ್ಟಿಯೇ ಅದ್ಭುತವೆಂದು. ತಾಯ್ತನ, ಹೆರಿಗೆ, ಇವೆಲ್ಲವೂ ಒಂದೇ ರೀತಿ ಆಗದೇ ಇದ್ದರೂ, ಬಾಂಧವ್ಯ ಮಾತ್ರ ಒಂದೇ. ನೋಡಿ ಈ ವಿಡಿಯೋ ಈ ಕೆಳಗೆ :

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon