Link copied!
Sign in / Sign up
56
Shares

ನಿಮ್ಮ ಪತಿ ಶಿಶ್ನ ಹೊರಗೆಳೆದು ವೀರ್ಯ ಹೊರಹಾಕಿದರೂ ನೀವು ಗರ್ಭಿಣಿ ಆಗಬಹುದು!

ನೀವು ನಿಮ್ಮ ಸಂಗಾತಿಯೊಂದಿಗೆ ಯಾವಾಗಾದರೂ ಒಂದು ದಿನ ಪ್ರಚೋದಿತರಾಗಿ ಜನನ ನಿಯಂತ್ರಣ ವಿಧಾನಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಸ್ವಲ್ಪ ಬಿಸಿ ಬಿಸಿ ಸಮಯ ಕಳೆದೇ ಇರುತ್ತೀರಾ. ನನ್ನ ಬಹಳಷ್ಟು ಸ್ನೇಹಿತೆಯರು ಇದೇ ರೀತಿಯಲ್ಲಿ ಅಪೇಕ್ಷೆ ಮಾಡದಂತೆ ಮೂರನೇ ಮಗುವಿಗೆ ತಾಯಿ ಆಗಿದ್ದಾರೆ. ಇಂತಹ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡಾಗ, ಕ್ಲೈಮಾಕ್ಸ್ ಅಲ್ಲಿ ಗಂಡಸರು ಮೊರೆ ಹೋಗುವ ತಂತ್ರವೇ ಹೊರಗೆಳೆಯುವುದು. ಆದರೆ ಇದು ಯಾವಾಗಲು ಪರಿಣಾಮಕಾರಿ ಆಗಿ ಇರುತ್ತದೆಯೇ? ವೀರ್ಯ ಹೊರಹಾಕುವ ಕೊನೆಯ ಸಮಯದಲ್ಲಿ ಶಿಶ್ನ ಹೊರಗೆಳೆಯುವುದು ಎಷ್ಟು ಬಾರಿ ಕೆಲಸ ಮಾಡುತ್ತದೆ?

ಗಂಡಸರು ಲೈಂಗಿಕ ಪರಾಕಾಷ್ಠೆ ಹೊಂದಿ ವೀರ್ಯವನ್ನು ಹೊರಹಾಕುತ್ತಾರೆ. ಈ ವೀರ್ಯವು ನಿಮ್ಮ ಅಂಡಾಣು ಜೊತೆ ಫಲೀಕರಣ ಹೊಂದಿದರೆ ನೀವು ಗರ್ಭತಾಳುತ್ತೀರ ಎಂಬುದು ನಿಮಗೆ ತಿಳಿದಿದೆ. ವೀರ್ಯ ಹೇಗಿರುತ್ತದೆ ಎಂಬುದು ನೀವು ಬಹುಷಃ ನೋಡಿರುತ್ತೀರಾ, ಇದು ಲೈಂಗಿಕ ಕ್ರಿಯೆಯ ಕೊನೆಯಲ್ಲಿ ಹೊರಬರುವುದು ಎಂದು ತಿಳಿದಿರುತ್ತೀರಾ ಹಾಗು ಇದರಿಂದಲೇ ನೀವು ಗರ್ಭ ಧರಿಸುವುದು ಎಂದು ಅಂದುಕೊಂಡಿರುತ್ತೀರಾ. ಆದರೆ ಇದರಲ್ಲಿ ಎಲ್ಲವೂ ಸತ್ಯವಲ್ಲ.

ಗಂಡಸರು ಲೈಂಗಿಕ ಕ್ರಿಯೆಯ ಕೊನೆಗೆ ಹೊರಹಾಕುವ ವೀರ್ಯವಷ್ಟೇ ಅವರ ಶಿಶ್ನ ಹೊರಸೂಸುವ ದ್ರವ್ಯ ಅಲ್ಲ. ಬದಲಿಗೆ, ಅವರು ಲೈಂಗಿಕ ಪರಾಕಾಷ್ಠೆ ಹೊಂದುವ ಮುಂಚೆಯೇ ಅವರ ಶಿಶ್ನವು ಇನ್ನೊಂದು ದ್ರವ್ಯವನ್ನ ಹೊರಸೂಸುತ್ತಿರುತ್ತದೆ. ಈ ದ್ರವ್ಯವನ್ನು ನಿಮಿರಿದ ಶಿಶ್ನವು ಸಂಭೋಗದಲ್ಲಿ ತೊಡಗುವ ಮುಂಚೆಯೇ ಹೊರಹಾಕುತ್ತಿರುತ್ತದೆ. ನಿಮಿರಿದ ಶಿಶ್ನದ ತುದಿಯಲ್ಲಿ ಕಾಣಿಸಿಕೊಳ್ಳುವ ಒಂದು ಹನಿಯಷ್ಟು ದ್ರವ್ಯವೇ ಇದು. ಸಂಭೋಗದಲ್ಲಿ ತೊಡಗುವ ಮುನ್ನವೇ ಶಿಶ್ನದ ತುದಿ ವದ್ದೆ ಆಗಲಿಕ್ಕೆ ಕಾರಣ ಈ ದ್ರವ್ಯ. ಇದರ ಮೇಲೆ ಗಂಡಸರಿಗೆ ಯಾವುದೇ ಹಿಡಿತ ಇರುವುದಿಲ್ಲ ಹಾಗು ಇದು ಹೊರಹಾಕುತ್ತಿರುವುದು ಅವರ ಗಮನಕ್ಕೆ ಬರುವುದಿಲ್ಲ. ನೀವು ಈ ದ್ರವ್ಯದ ಒಂದೆರೆಡು ಹನಿಯನ್ನು ನಿಮಿರಿದ ಶಿಶ್ನದ ಮೇಲೆ ನೋಡಬಹುದು. ಇದನ್ನು “ಪ್ರೀಕಮ್” (precum) ಎನ್ನುವರು.

ಈಗ ವಿಷಯಕ್ಕೆ ಬರೋಣ. ನಿಮ್ಮ ಪತಿಯು ಬೇಡದ ಗರ್ಭ ನಿವಾರಿಸಲಿಕ್ಕೆ ವೀರ್ಯ ಹೊರಬರುವಂತೆ ಅನಿಸಿದೊಡನೆ ಶಿಶ್ನವನ್ನ ಯೋವಿಯಿಂದ ಹೊರತೆಗೆಯುತ್ತಾರೆ. ಆದರೆ, ಸಂಭೋಗ ಕಾರ್ಯದ ಅಷ್ಟೂ ಸಮಯ ಈ ಪ್ರೀಕಮ್ ಅವರ ಶಿಶ್ನದಿಂದ ಹನಿ ಹನಿಯಾಗಿ ಹೊರಬರುತ್ತಲೇ ಇರುತ್ತದೆ. ಇದು ಅವರಿಗೂ ಗೊತ್ತಾಗುವುದಿಲ್ಲ. ಮೊದಲಿಗೆ ನಡೆದ ಕೆಲವು ಸಂಶೋಧನೆಗಳಲ್ಲಿ ಈ ಪ್ರೀಕಮ್ ಅಲ್ಲಿ ಯಾವುದೇ ವೀರ್ಯಾಣು ಇರುವುದಿಲ್ಲ ಮತ್ತು ಇದು ಗರ್ಭ ಧರಿಸಲು ಕಾರಣ ಆಗುವುದಿಲ್ಲ ಎಂಬ ಫಲಿತಾಂಶ ಸಿಕ್ಕಿದೆ ಎಂದು ಸಂಶೋಧಕರು ಹೇಳಿದ್ದರು. ಆದರೆ 2011 ರಲ್ಲಿ ನಡೆದ ಒಂದು ಸಂಶೋಧನೆ ಹೇಳುವುದೇ ಬೇರೆ!

ಈ ಸಂಶೋಧನೆಯಲ್ಲಿ ಆರೋಗ್ಯಕರ, ಫಲವತ್ತಾದ 27 ಗಂಡಸರನ್ನ ಪರಿಗಣನೆಗೆ ತೆಗೆದುಕೊಳ್ಳಲಾಗಿತ್ತು. ಈ ಸಂಶೋಧನೆಯಲ್ಲಿ ತಿಳಿದು ಬಂದಿದ್ದು ಏನೆಂದರೆ, ಪ್ರೀಕಮ್ ಅಲ್ಲಿ ವೀರ್ಯಾಣುಗಳು ಇರುತ್ತವೆ ಎಂಬುದು! ಈ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ಅರ್ಧದಷ್ಟು ಗಂಡಸರ ಪ್ರೀಕಮ್ ಅಲ್ಲಿ ವೀರ್ಯಾಣುಗಳು ಇದ್ದವು ಹಾಗು ಅದಕ್ಕಿಂತ ಆಶ್ಚರ್ಯಕರ ಸಂಗತಿ ಎಂದರೆ ಅವುಗಳಲ್ಲಿ ಬಹುತೇಕ ವೀರ್ಯಾಣುಗಳು ಜೀವಂತ ಚಲನೆಯನ್ನ ಕೂಡ ಹೊಂದಿದ್ದವು.

ಕೇವಲ ಒಂದೆರೆಡು ಹನಿಗಳಲ್ಲಿ ನೀವು ಗರ್ಭ ಧರಿಸುವಷ್ಟು ವೀರ್ಯಾಣುಗಳು ಇರುತ್ತವೆ ಎಂಬುದು ನಿಮಗೆ ಆಶ್ಚರ್ಯ ತರಬಹುದು. ಆದರೆ ಒಂದು ವೀರ್ಯಾಣು ಎಷ್ಟು ಚಿಕ್ಕ ಗಾತ್ರದ್ದಾಗಿರುತ್ತದೆ ಎಂಬುದು ನೀವು ತಿಳಿದರೆ, ನೀವು ಆಶ್ಚರ್ಯ ಪಡುವುದಿಲ್ಲ. ಇವುಗಳ ಸರಾಸರಿ ಗಾತ್ರ 0.0001 ಮೀಟರ್ ಅಷ್ಟು ಇರುತ್ತದೆ, ಹೀಗಾಗಿ ಕೇವಲ ಒಂದು ಹನಿಯಷ್ಟು ದ್ರವ್ಯದಲ್ಲೂ ನೂರಾರು ವೀರ್ಯಾಣುಗಳು ಇರಬಹುದು. ಹೀಗಾಗಿ ನಿಮ್ಮ ಪತಿ ಲೈಂಗಿಕ ಕ್ರಿಯೆಯ ಕೊನೆಯಲ್ಲಿ ಶಿಶ್ನ ಹೊರಗೆಳೆದು ವೀರ್ಯ ಹೊರಹಾಕಿದರು, ಅವರಿಗೆ ಗೊತ್ತಿಲ್ಲದೆ ಹೊರಬರುವ ಹನಿಗಳಷ್ಟು ಪ್ರೀಕಮ್ ನಿಮ್ಮನ್ನು ಗರ್ಭಿಣಿ ಮಾಡಬಹುದು.

ಈ ಹೊರಗೆಳೆಯುವ ತಂತ್ರ ಬಳಸುವ ನೂರು ದಂಪತಿಗಳಲ್ಲಿ, 4 ದಂಪತಿಗಳು ಮಕ್ಕಳನ್ನ ಪಡೆದುಕೊಳ್ಳುತ್ತಾರೆ. ಆದರೆ ಕಾಪರ್-T ಬಳಸಿದ ದಂಪತಿಗಳಲ್ಲಿ ನೂರಕ್ಕೆ ಒಬ್ಬರು ಮಾತ್ರ ಗರ್ಭ ಧರಿಸುತ್ತಾರೆ. ಹೀಗಾಗಿ ನಿಮಗೆ ಬೇಡದ ಗರ್ಭಧಾರಣೆ ಇಂದ ದೂರ ಇರಲು ಕಾಂಡೊಮ್ ಬಳಸಿ. ಅಥವಾ ನಿಮಗೆ ಮಕ್ಕಳಾಗಿದ್ದು, ಇನ್ನಷ್ಟು ಬೇಡವೆಂದರೆ IUD ಸಾಧನಗಳಾದ ಕಾಪರ್-T ಅಂತವುಗಳನ್ನ ಬಳಸಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon