Link copied!
Sign in / Sign up
6
Shares

ಹೆಣ್ಣು ಲೈಂಗಿಕ ಪರಾಕಾಷ್ಠೆ (ಒರ್ಗ್ಯಾಸಮ್) ಹೊಂದುವ ಕ್ಷಣದಲ್ಲಿ ಅವಳ ದೇಹದಲ್ಲಿ ಆಗುವುದೇನು?

ನಿಮ್ಮಲ್ಲಿ ಯಾರೆಲ್ಲಾ ಲೈಂಗಿಕ ಪರಾಕಾಷ್ಠೆ (ಒರ್ಗ್ಯಾಸಮ್) ಅನುಭವಿಸಿದ್ದಿರೋ, ಅವರಿಗೆಲ್ಲಾ ಅದು ಎಂತಹ ಸಿಹಿಯಾದ ಮತ್ತು ತೃಪ್ತಿದಾಯಕ ಅನುಭವ ಎಂಬುದು ತಿಳಿದಿರುತ್ತದೆ. ಪ್ರತಿಯೊಂದು ಹೆಣ್ಣು ವಿಭಿನ್ನ - ಕೆಲವರು ಬಲು ಬೇಗನೆ ಒರ್ಗ್ಯಾಸಮ್ ಹೊಂದುತ್ತಾರೆ ಮತ್ತು ಇನ್ನು ಕೆಲವರಿಗೆ ಹೆಚ್ಚಿನ ಸಮಯ ಮತ್ತು “ಕಾವು” ಬೇಕಾಗುತ್ತದೆ. ಅದು ಆದಾಗಲಂತೂ, ನಿಮ್ಮ ಸಂಪೂರ್ಣ ದೇಹ ಮತ್ತು ಚಿತ್ತ ಎರಡಕ್ಕೂ ಅದ್ಭುತವೆನಿಸುತ್ತದೆ. ಹಾಗಿದ್ದರೆ, ನೀವು ಲೈಂಗಿಕ ಕ್ರಿಯೆಯ ಕೊನೆಯಲ್ಲಿ ಲೈಂಗಿಕ ಪರಾಕಾಷ್ಠೆ ಹೊಂದುವಾಗ, ಅಂದರೆ ಆ ಕೊನೆ ಕ್ಷಣದಲ್ಲಿ ನಿಮ್ಮ ದೇಹದಲ್ಲಿ ಏನೆಲ್ಲಾ ಆಗುತ್ತಿರುತ್ತೆ ಎಂದು ಯೋಚಿಸಿದ್ದೀರಾ? ಇಲ್ಲಿದೆ ನೋಡಿ ಅದಕ್ಕೆ ಉತ್ತರ :

೧. ಹೆಣ್ಣು ಒಂದು ಬಾರಿ ಲೈಂಗಿಕ ಪ್ರಚೋದನೆಗೆ ಒಳಗಾದಳು ಎಂದರೆ, ಆಕೆಯ ಹೃದಯಬಡಿತ ಹೆಚ್ಚುತ್ತದೆ ಮತ್ತು ಆಕೆ ವೇಗವಾಗಿ ಉಸಿರಾಡಲು ಶುರು ಮಾಡುತ್ತಾಳೆ. ಆಕೆಯ ದೇಹದ ಹಲವು ಸ್ನಾಯುಗಳನ್ನು ಆಕೆ ಬಿಗಿಯಾಗಿಸುತ್ತಾಳೆ. ಆಕೆಯ ಸ್ತನಗಳು ಸ್ವಲ್ಪ ಮಟ್ಟಿಗೆ ಹಿಗ್ಗುತ್ತವೆ ಮತ್ತು ಆಕೆಯ ಮೊಲೆತೊಟ್ಟುಗಳು ನಿಮಿರುತ್ತವೆ. ಕೆಲವು ಹೆಂಗಸರಲ್ಲಿ ಅವರ ಮುಖ, ಕತ್ತು ಮತ್ತು ಎದೆಯು ಚದುರಿ ಹೋದಂತ ಅನುಭವ ಉಂಟಾಗುತ್ತದೆ. ಇದರೊಂದಿಗೆ, ಅವರ ಚಂದ್ರನಾಡಿ (ಕ್ಲಿಟೋರಿಸ್) ಕೂಡ ಗಾತ್ರದಲ್ಲಿ ಹೆಚ್ಚುತ್ತದೆ.

೨. ಆಕೆಯು ತನ್ನ ಯೋನಿಯು ಈಗಾಗಲೇ ವದ್ದೆ ಆಗಿರುವುದುನ್ನು ಕಾಣಬಹುದು. ಅದು ಲೈಂಗಿಕ ಕ್ರಿಯೆಗೆ ಲೂಬ್ರಿಕೇಷನ್ (ಎರೆ ಸವರಿಕೆ) ನೀಡಿ, ಕ್ರಿಯೆಯನ್ನು ಹಿತಕರ ಮಾಡುತ್ತದೆ.

೩. ಆಕೆಯ ಲಾಬಿಯ (ಯೋನಿಯ ಹೊರ ತುಟಿಗಳು) ಸಪಾಟವಾಗುತ್ತವೆ ಮತ್ತು ತೆರೆದುಕೊಳ್ಳುತ್ತವೆ. ಒಳಗಡೆಯು ಕೂಡ ಯೋನಿಯು ಮತ್ತಷ್ಟು ಉದ್ದ ಮತ್ತು ಅಗಲವಾಗುತ್ತದೆ. ಇದಕ್ಕೆಲ್ಲಾ ಕಾರಣ ರಕ್ತವು ಶ್ರೋಣಿಯ ಭಾಗಕ್ಕೆ ರಭಸವಾಗಿ ಹರಿಯುವುದು - ಇದನ್ನು ತೊಡಗುಕೊಳ್ಳುವಿಕೆ ಎನ್ನುವರು. ಇದು ಆ ಭಾಗದಲ್ಲಿ ಬೆಚ್ಚನೆ ಭಾವ ಮೂಡಿಸುತ್ತದೆ.

೪. ಲೈಂಗಿಕ ಕೆರಳಿಕೆ ಮುಂದುವರೆದಂತೆ, ಎಲ್ಲವೂ ಗಾತ್ರದಲ್ಲಿ ಮತ್ತಷ್ಟು ಹಿಗ್ಗುತ್ತಾ ಹೋಗುತ್ತವೆ, ಹಾಗು ಮೇಲೆ ಹೇಳಿದ ಎಲ್ಲಾ ಬದಲಾವಣೆಗಳು ಮತ್ತಷ್ಟು ಗೋಚರವಾಗುತ್ತವೆ. ಆದರೆ ಚಂದ್ರನಾಡಿ ಮಾತ್ರ ಹೆಣ್ಣು ಲೈಂಗಿಕ ಪರಾಕಾಷ್ಠೆ ಇನ್ನೇನು ಅನುಭವಿಸುವಳು ಅನ್ನುವಾಗ ಗಾತ್ರದಲ್ಲಿ ಅರ್ಧದಷ್ಟು ಕುಗ್ಗುತ್ತದೆ.

೫. ಹೆಣ್ಣು ಲೈಂಗಿಕ ಪರಾಕಾಷ್ಠೆ (ಒರ್ಗ್ಯಾಸಮ್) ಹೊಂದಿದೊಡನೆ, ಆಕೆಯ ಚರ್ಮವು ಏನನ್ನೋ ಹೊರಹಾಕುತ್ತಿರುವಂತೆ ಅನಿಸುತ್ತದೆ ಮತ್ತು ಆಕೆಯ ದೇಹದಲ್ಲಿನ ಎಲ್ಲಾ ಸ್ನಾಯುಗಳು ಸಂಕೋಚನಗಳಿಗೆ ಒಳಗಾಗುವುದನ್ನು ಮುಂದುವರೆಸುತ್ತವೆ. ರಕ್ತದೊತ್ತಡ, ಹೃದಯಬಡಿತ ಮತ್ತು ಉಸಿರಾಟದ ವೇಗ ಇನ್ನಷ್ಟು ಹೆಚ್ಚುತ್ತಲೇ ಹೋಗುತ್ತವೆ.

೬. ಯೋನಿಯ ಒಳಗಡೆ ಅಂಚಿನಲ್ಲಿ, ಗರ್ಭಕೋಶದಲ್ಲಿ ಮತ್ತು ಗುದದ್ವಾರದಲ್ಲಿ ಆಕೆ ಲಯಬದ್ಧ ಸಂಕೋಚನಗಳನ್ನು ಅನುಭವಿಸುತ್ತಾಳೆ. ಇಂತಹ ತೀವ್ರವಾದ ಚಿತ್ತವೃತ್ತಿಗಳು ಪ್ರತಿ ಸೆಕೆಂಡಿಗೆ ಒಮ್ಮೆ ದೇಹದಲ್ಲಿ ಹರಿದಾಡುತ್ತವೆ. ಮೃದು ಒರ್ಗ್ಯಾಸಮ್ 3-5 ಚಿತ್ತವೃತ್ತಿಗಳು (ಪುಲ್ಸಸ್ ) ಒಳಗೊಂಡಿದ್ದರೆ, ತೀವ್ರ ಸುಖದ ಒರ್ಗ್ಯಾಸಮ್ 10-15 ಚಿತ್ತವೃತ್ತಿಗಳನ್ನು ಒಳಗೊಂಡಿರುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon