ತಾಯಂದಿರು ತಮ್ಮ ಮಕ್ಕಳ ಹೆರಿಗೆಯ ನೋವನ್ನ ಬಹುಬೇಗ ಮರೆಯುತ್ತಾರೆ ಎಂದು ಹಾಗು ಹಾಗಾಗಿಯೇ ಅವರು ಇನ್ನೊಮ್ಮೆ ಮತ್ತೊಂದು ಪುಟ್ಟ ಜೀವಕ್ಕೆ ಜನ್ಮಕೊಡಲು ಉತ್ಸುಕರಾಗಿ ಸಿದ್ದರಾಗಿರುವವರು ಎಂದು ಹೇಳುತ್ತಾರೆ. ಹಾಗಿದ್ದರೆ ಹೆರಿಗೆಯ ಈ ಫೋಟೋಗಳು ಏಕೆ ಎಲ್ಲಾ ಭಾವನೆಗಳನ್ನ ಕೆರಳುತ್ತವೆ? ಅತಿಯಾದ ನೋವಿನಿಂದ ಹಿಡಿದು ಅತಿಯಾದ ಸಂತಸದವರೆಗೆ - ಎಲ್ಲವೂ ಮನದಾಳವೆಂಬ ಸಾಗರದಿಂದ ಹೊರಜಗತ್ತಿನ ತೀರಕ್ಕೆ ಎಷ್ಟು ಸುಂದರವಾಗಿ ಬಂದು ಅಪ್ಪಳಿಸುತ್ತವೆ ಅಲ್ಲವಾ?
ಏಕೆಂದರೆ ಕೆಲವು ಛಾಯಾಗ್ರಾಹಕರ ಕೈಚಳಕದಲ್ಲಿ ಅಂತಹ ಮಾಂತ್ರಿಕ ಶಕ್ತಿ ಇದ್ದು, ಅವರು ಚಿತ್ರಗಳಲ್ಲಿ ಕೇವಲ ಜನರನ್ನ ಅಷ್ಟೇ ಅಲ್ಲದೆ ಭಾವನೆಗಳನ್ನು ಸಹಾ ಸೆರೆಹಿಡಿದು ಇಂತಹ ಸ್ಮರಣೀಯ ಕ್ಷಣಗಳಿಗೆ ನ್ಯಾಯ ಒದಗಿಸುವವರು. ಅಂತಹ ಮಾಂತ್ರಿಕರಲ್ಲಿ ಲೀಲಾನಿ ರಾಜರ್ಸ್ ಕೂಡ ಒಬ್ಬರು. ಆಕೆಯು ಸೆರೆಹಿಡಿದಿರುವ ಕೆಲವೊಂದು ಅತ್ಯಂತ ಅಪರೂಪದ ಛಾಯಾಚಿತ್ರಗಳು ಇಲ್ಲಿವೆ. ಮನೆಯಲ್ಲಿನ ಸ್ವಾಭಾವಿಕ ಹೆರಿಗೆಗಳಿಂದ ಹಿಡಿದು ಆಸ್ಪತ್ರೆಯಲ್ಲಿನ ಹೆರಿಗೆಗಳವರೆಗೆ ತರಾವರಿ ಹೆರಿಗೆಗಳು ಇವರ ಕ್ಯಾಮೆರಾದಲ್ಲಿ ಸರೆಯಾಗಿದೆ. ಅವರ ಆ ಚಿತ್ರಗಳು ಹಾಗು ಅವರ ಮಾತಿನಲ್ಲೇ ಆ ಚಿತ್ರಗಳ ಬಗೆಗಿನ ವಿಶ್ಲೇಷಣೆ ನೀವು ಕಾಣಬಹುದು.
“ಈ ಮಗುವಿನ 7 ವರ್ಷದ ಮಗಳಿಗೆ ತನ್ನ ತಾಯಿಯ ಹೆರಿಗೆಯ ಸಂದರ್ಭದ ಭಾಗವಗಬೇಕೆಂಬ ಆಸೆ. ಹಾಗಾಗಿ ಆಕೆ ಶಾಂತವಾಗಿ ಕೋಣೆಯೊಳಗೆ ಬಂದು ತನ್ನ ಪುಟ್ಟ ಸಹಾಯಹಸ್ತ ನೀಡಿದಳು”
“6 ಬೆರಳುಗಳೊಂದಿಗೆ ಹುಟ್ಟಿದ ಮಗು! ಇದು ನಿಜಕ್ಕೂ ಅಚ್ಚರಿಯಾದರು ವಿಶೇಷವಾದ ಅಚ್ಚರಿ. ಆ ಆರನೇ ಬೆರಳಿನಲ್ಲಿ ಮೂಳೆಯಿಲ್ಲ, ಆದರೆ ಉಗುರಿದೆ. ವಿಚಿತ್ರ ಅಲ್ವ?”
“ಆಸ್ಪತ್ರೆಯಲ್ಲಿನ ಮತ್ತೊಂದು ಅವಿಸ್ಮರಣೀಯ ಕ್ಷಣ.ನಾನು ಮನೆಗೆ ಬಂದು ಚಿತ್ರವನ್ನ ಎಡಿಟ್ ಮಾಡುವಾಗಲೇ ಗೊತ್ತಾಗಿದ್ದು, ಈ ಮಗುವು ತನ್ನ ಕೈ ಬೆರಳುಗಳ ಮೂಲಕ ತಾನು ಭೂಮಿಗೆ ಬಂದಿಳಿದು ವಿಜಯಿಯಾದೆ ಎಂದು ಸೂಚಿಸುತ್ತಿದೆ ಎಂದು”
“ನಾನು ಸೆರೆ ಹಿಡಿಯಲೇ ಬೇಕು ಎಂದು ಅಂದುಕೊಂಡಿದ್ದು ಕೊನೆಗೂ ಈಡೇರಿತು. ಸರೋಗೇಟ್ ತಾಯಿಯಿಂದ ಮಗುವನ್ನ ಪಡೆಯುತ್ತಿರುವ ದಂಪತಿಗಳ ಮುಖದಲ್ಲಿ ಕೃತಜ್ಞತೆ ನೋಡಿ”
“ಮಗುವು ಭೂಮಿಗೆ ಬಂದು ಕೆಲವೇ ನಿಮಿಷಗಳು ಆಗಿರುವಾಗ ಕ್ಲಿಕ್ಕಿಸಿದ್ದು ಈ ಚಿತ್ರ”
“ಗರ್ಭಚೀಲ ಹಾಗು ಕರುಳಬಳ್ಳಿ ನೋಡುವ ಅದೃಷ್ಟ ನನ್ನದಾಯಿತು. ಇವುಗಳ ಕಾರ್ಯವು ಎಷ್ಟೊಂದು ದೊಡ್ಡದೋ, ಇವುಗಳನ್ನ ಪ್ರತ್ಯಕ್ಷವಾಗಿ ನೋಡಲಿಕ್ಕೆ ಅಷ್ಟೇ ಅದ್ಬುತವಾಗಿ ಇರುತ್ತದೆ
”
“ಕೆಲವೊಂದು ಬಾರಿ ಹೆರಿಗೆ ಅನ್ನುವುದು ಎಷ್ಟೊಂದು ಗಡಿಬಿಡಿ ಅಲ್ಲಿ ಆಗುತ್ತದೆ ಅಂದರೆ, ಇಲ್ಲಿ ಹೆರಿಗೆಯ ಟಬ್ ಕೂಡ ಹೊಂದಿಸಲು ಸಮಯವಿಲ್ಲದೆ ಈಕೆಯು ಸ್ನಾನದ ಟಬ್ ಅಲ್ಲೇ ತನ್ನ ಮಗುವಿಗೆ ಜನನ ನೀಡಿದಳು”
“ಮಗುವು ಇವಾಗ ತಾನೇ ತನ್ನ ಅಮ್ಮನ ಹೊಟ್ಟೆಯಿಂದ ಹೊರಗಡೆ ಬರುತ್ತಿದೆ. ತಾಯಿಯು ತನ್ನ ಮಗುವನ್ನ ಆಲಂಗಿಸಲು ಎಷ್ಟು ಹಪಹಪಿಸುತ್ತಿದ್ದಾಳೆ ಎಂದು ನೋಡುವುದಕ್ಕೆ ಕಣ್ಣು ತುಂಬಿ ಬರುತ್ತದೆ”

“ಈ ಮಗುವು ಈಗಷ್ಟೇ ತಾನೇ ತನ್ನ ಅಮ್ಮನ ಮಡಿಲಿನಲ್ಲಿ ಜನ್ಮ ತಾಳಿತು. ಆಕೆಯು ಅದನ್ನ ಹಿಡಿದೊಡನೆ ತನ್ನ ನೋವು ಮರೆತು ಆನಂದಭಾಷ್ಪ ಸುರಿಸುತ್ತಿದ್ದಾಳೆ”
“ತಾಯಿಯು ತನ್ನ ಮಗುವನ್ನ ಮೊದಲ ಬಾರಿ ಸ್ಪರ್ಶಿಸುತ್ತಿದ್ದಾಳೆ. ಅವಳ ಮುಖದಲ್ಲಿ ಇರುವ ಸಾರ್ಥಕತೆ, ಸಾಧನೆಯ ಭಾವನೆ ಹಾಗು ನಿರಾಳತೆ ಮನಕಲಕುವಂತದ್ದು”