Link copied!
Sign in / Sign up
11
Shares

ಹೆರಿಗೆ ಸೆಕ್ಸ್ : ನೀವು ಅಂದುಕೊಂಡಂತೆ ಅಲ್ಲ!

ನಿಮ್ಮಲ್ಲಿ ಎಷ್ಟೊಂದು ಜನರಿಗೆ ಈ ವಿಷಯ ತಿಳಿದಿಲ್ಲ. ಅಲ್ಲದೆ ಇದು ಜಗತ್ತಿನಾದ್ಯಂತ ಎಷ್ಟೋ ದೇಶಗಳಲ್ಲಿ ಸಾಮಾನ್ಯವೂ ಕೂಡ. ಅಂದಹಾಗೆ ಇದನ್ನ ನೀವು ಯಾವ ಚೇಷ್ಟೆ ಎಂದು ಜರಿಯುವಂತಿಲ್ಲ. ಏಕೆಂದರೆ ಕೆಲವೊಂದು ಬಾರಿ ಗರ್ಭಧಾರಣೆಯ 36 ವಾರಗಳ ನಂತರ ಕೆಲವು ಪ್ರಕರಣಗಳಲ್ಲಿ ವೈದ್ಯರೇ ಇದನ್ನ ಮಾಡಲು ಸಲಹೆ ಮಾಡುತ್ತಾರೆ!

ಹೆರಿಗೆ ದಿನ ಹತ್ತಿರ ಬರುತ್ತಿದ್ದಂತೆ ಸಂಕೋಚನಗಳು ಶುರುವಾಗಲು ಸಹಾಯ ಮಾಡಲು ಸಂಭೋಗ ಮಾಡುವುದು ನಿಮಗೆ ಬಹುಶಃ ತಿಳಿದಿರಬಹುದು. ಈ ಸಮಯದಲ್ಲಿನ ಸಂಭೋಗದಿಂದ ವೀರ್ಯವು ಹೆಣ್ಣಿನ ಗರ್ಭಕಂಠವನ್ನ ಮೆತ್ತಗೆ ಮಾಡುವುದಲ್ಲದೆ ಹೆಣ್ಣಿನ ಲೈಂಗಿಕ ಪರಾಕಾಷ್ಟೆ ಇಂದ ಗರ್ಭಕೋಶದ ಸಂಕೋಚನಗಳು ಶುರು ಆಗುತ್ತವೆ. ಆದರೆ ಹೆರಿಗೆ ನೋವಿನ ವೇಳೆ ಲೈಂಗಿಕ ಕ್ರಿಯೆ? ಅದು ಸಾಧ್ಯವೇ? ಅದು ಸುರುಕ್ಷಿತವೆ?

ಬಹಳಷ್ಟು ತಾಯಂದಿರು ಲೈಂಗಿಕ ಕ್ರಿಯೆಯು ತಮ್ಮ ಹೆರಿಗೆಯ ಸಂಕೋಚನಗಳನ್ನ ತಂದವು ಎನ್ನುತ್ತಾರೆ. ಆದರೆ, ಲೈಂಗಿಕ ಕ್ರಿಯೆಯು ಹೆರಿಗೆಯ ಕಾರ್ಯಕ್ಕೆ ಚಾಲನೆ ನೀಡುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಇಲ್ಲ.

ಲೈಂಗಿಕ ಕ್ರಿಯೆಯು ಹೆರಿಗೆಗೆ ೩ ರೀತಿಯಲ್ಲಿ ಸಹಾಯಕಾರಿ ಆಗಬಹುದು. ಅವುಗಳೆಂದರೆ :

೧. ಲೈಂಗಿಕ ಪರಾಕಷ್ಟೆಯು ನಿಮ್ಮ ಗರ್ಭಕೋಶದ ಚಲನೆಗಳಿಗೆ ಚಾಲನೆ ನೀಡಬಹುದು.

೨. ಸಂಭೋಗದಲ್ಲಿ ತೊಡಗುವುದರಿಂದ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆ ಹೊಂದುತ್ತದೆ. ಈ ಹಾರ್ಮೋನ್ ನಿಮ್ಮ ಸಂಕೋಚನಗಳಿಗೆ ಸಹಾಯಕಾರಿ ಆಗುತ್ತದೆ.

೩. ವೀರ್ಯವು ನಿಮ್ಮ ಗರ್ಭಕಂಠವನ್ನ ಮೆತ್ತಗೆ, ಹಣ್ಣಾಗುವಂತೆ ಮಾಡಿ ಸಂಕೋಚನಗಳು ಶುರುವಾದೊಡನೆ ಅದು ತೆರೆದುಕೊಳ್ಳುವಂತೆ ಮಾಡುತ್ತದೆ. ವೀರ್ಯದಲ್ಲಿ ಪ್ರಾಸ್ಟಗ್ಲ್ಯಾಂಡಿನ್ ಎಂಬ ಹಾರ್ಮೋನ್ ಇದ್ದು ಇದು ಸ್ನಾಯುಗಳು ಆರಾಮಾಗಲು ಸಹಾಯ ಮಾಡುತ್ತದೆ.

ನಿಮ್ಮ ನೀರಿನ ಚೀಲ ಇನ್ನೂ ಒಡೆಯದೆ ಇದ್ದರೆ, ಲೈಂಗಿಕ ಕ್ರಿಯೆಯು ಸುರಕ್ಷಿತ. ನಿಮ್ಮ ನೀರಿನ ಚೀಲ ಒಡೆದ ಮೇಲೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಸೋಂಕು ಉಂಟು ಮಾಡಬಹುದು. ಅಲ್ಲದೆ ನಿಮ್ಮ ಗರ್ಭಚೀಲವು ತುಂಬಾ ಕೆಳಭಾಗದಲ್ಲಿ ಇದ್ದರೆ ಅಥವಾ ನಿಮ್ಮ ಯೋನಿಯಿಂದ ರಕ್ತಸ್ರಾವ ಆಗಿದ್ದರೆ/ಆಗುತ್ತಿದ್ದರೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಸೂಕ್ತವಲ್ಲ.

ಈ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಲು ಕಷ್ಟವಾಗುತ್ತದೆ. ನೀವು ನಿಮಗೆ ಯಾವ ಭಂಗಿ ಸುರಕ್ಷಿತ ಎನಿಸುತ್ತದೋ, ಆ ಭಂಗಿಯಲ್ಲೇ ಸಂಭೋಗ ನಡೆಸಬಹುದು.

ನಿಮಗೆ ಸಂಭೋಗ ನಡೆಸಲು ಇಷ್ಟವಿಲ್ಲ ಎಂದರೆ ನೀವು ಮೌಖಿಕ ಲೈಂಗಿಕತೆಯಲ್ಲಿ ಅಥವಾ ಮೊಲೆತೊಟ್ಟುಗಳ ಉದ್ದೀಪನ ಮಾಡಬಹುದು. ಮೊಲೆತೊಟ್ಟುಗಳ ಉತ್ತೇಜನದಿಂದ ಹೆರಿಗೆ ಸುಗುಮ ಆಗಿರುವುದಕ್ಕೆ ಅನೇಕ ಉದಾಹರಣೆಗಳು ಇವೆ ಹಾಗು ಸಾಬೀತು ಕೂಡ ಆಗಿದೆ.    

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon