Link copied!
Sign in / Sign up
3
Shares

ಹೆರಿಗೆ ನಂತರದ 24 ಗಂಟೆಗಳಲ್ಲಿ ನಿಮ್ಮ ದೇಹಕ್ಕೆ ಹೀಗೆಲ್ಲಾ ಆಗುತ್ತದೆ

ಕೊನೆಗೂ ನೀವು ಮಾಡಿ ಮುಗಿಸಿಬಿಟ್ಟಿರಿ ! 40 ವಾರಗಳ (ಅಥವಾ ಅದಕ್ಕಿಂತ ಕಡಿಮೆ) ಕಠಿಣ ಗರ್ಭಧಾರಣೆಯ ಪ್ರಯಾಣ ಮುಗಿಸಿ ಕೊನೆಗೂ ಒಂದು ಮುದ್ದಾದ ಮಗುವನ್ನು ಪಡೆದುಕೊಂಡಿರಿ. ಆದರೆ ಈಗೇನು? ಹೆರಿಗೆಯಾದ ನಂತರದ 24 ಗಂಟೆಗಳಲ್ಲಿ ನಿಜವಾಗಲೂ ಆಗುವುದೇನು? ನೀವು ಈಗಷ್ಟೇ ಚೇತರಿಸಿಕೊಂಡು ನಿಮ್ಮ ಮಗುವಿನೊಂದಿಗಿನ ಹೊಸ ಬಾಂಧವ್ಯ ಬೆಳೆಸಿಕೊಳ್ಳುತ್ತಿದ್ದೀರಾ, ಆದರೆ ಇದೇ ಸಮಯದಲ್ಲಿ ನೀವು ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಕೆಲವೊಂದು ವಿಷಯಗಳಿಗೆ ಸಿದ್ಧತೆಯು ಮಾಡಿಕೊಳ್ಳಬೇಕು.

ಕೆಲವೊಂದು ಹೆಂಗಸರು ತಮ್ಮ ದೇಹದ ಎಲ್ಲಾ ಭಾಗಗಳಲ್ಲೂ ನಡುಕ ಅನುಭವಿಸುತ್ತಾರೆ. ಈ ನಡುಕವು ಹೆರಿಗೆ ನೀಡಿದ ನಂತರ ದೇಹದಲ್ಲಿನ ಹಾರ್ಮೋನುಗಳ ದಿಢೀರ್ ಏರುಪೇರಿನಿಂದ ಆಗುತ್ತದೆ. ಕೆಲವೊಮ್ಮೆ ನಿಮಗೆ ಹೆರಿಗೆ ಆದಮೇಲೂ ನಿಮ್ಮಲ್ಲಿ ಚಿಕ್ಕ ಬಸುರಿ ಹೊಟ್ಟೆಯು ಹಾಗೆಯೇ ಉಳಿದುಕೊಳ್ಳಬಹುದು. ಗರ್ಭಧಾರಣೆಯ ಸಮಯದಲ್ಲಿ ಗರ್ಭಕೋಶ, ಉದರದ ಸ್ನಾಯುಗಳು, ಮತ್ತು ಚರ್ಮವು ಒಂಬತ್ತು ತಿಂಗಳುಗಳ ಕಾಲ ಹಿಗ್ಗಿರುತ್ತವೆ. ಹೀಗಾಗಿ ಅವು ಪುನಃ ಮೊದಲಿನ ಸ್ಥಿತಿಗೆ ಕುಗ್ಗಲು ಕೆಲವು ವಾರಗಳಷ್ಟು ಸಮಯ ತೆಗೆದುಕೊಳ್ಳುತ್ತವೆ. ನೀವು ಸಿಸೇರಿಯನ್ ಸರ್ಜರಿಗೆ ಒಳಗಾಗಿದ್ದರೆ, ನೀವು ಆಯಾಸ ಮತ್ತು ಊತ ಅನುಭವಿಸಬಹುದು.

ಪ್ರಸವ ಹೊಂದಿದ ನಂತರದಲ್ಲೇ ಹೆಣ್ಣು 4.5 ಕೆಜಿ ಇಂದ 5.8 ಕೆಜಿಗಳಷ್ಟು ತೂಕ ಕಳೆದುಕೊಳ್ಳಬಹುದು. ಇದು ಮಗುವಿನ ತೂಕ, ಗರ್ಭಚೀಲ ಮತ್ತು ಆಮ್ನಿಯೋಟಿಕ್ ದ್ರವ್ಯವನ್ನು ಒಳಗೊಂಡಿರುತ್ತದೆ. ಒಂದು ವೇಳೆ ನೀವು ಸಿಸೇರಿಯನ್ನಿಗೆ ಒಳಗಾಗಿದ್ದರೆ, ನಿಮ್ಮ ದೇಹವು ಬಾವುಗೊಳ್ಳುವುದನ್ನು (ಊದಿಕೊಳ್ಳುವುದು) ಕಾಣಬಹುದು. ಇದಕ್ಕೆ ಕಾರಣ ಹೆರಿಗೆ ಸಮಯದಲ್ಲಿ ವೈದ್ಯರು ನೀಡಿದ ಇಂಟ್ರಾ-ವೇನಲ್ ದ್ರವ್ಯಗಳು. ಇನ್ನೂ ಸುಲಭವಾಗಿ ಹೇಳಬೇಕೆಂದರೆ ಮಗುವಾದ ಮೊದಲ 24 ಗಂಟೆಗಳಲ್ಲಿ ನೀವು ತುಂಬಾನೇ ಬೆವರುವುದು ಮತ್ತು ಮೂತ್ರವಿಸರ್ಜನೆ ಮಾಡುವುದನ್ನು ಕಾಣುತ್ತೀರಾ. ಇದಲ್ಲದೆ ಗರ್ಭಕೋಶವು ಸಂಕೋಚನಗಳಿಗೆ ಒಳಗಾಗಿ ತನ್ನ ಮೊದಲ ಗಾತ್ರಕ್ಕೆ ಕುಗ್ಗುವಾಗ ನಿಮಗೆ ರಕ್ತಸ್ರಾವ ಕೂಡ ಉಂಟಾಗಬಹುದು. ಇದನ್ನು ಲೊಚಿಯ ಎಂದು ಕರೆಯುತ್ತಾರೆ.

ಬಹುತೇಕ ಹೆಂಗಸರು ಸ್ವಲ್ಪ ಗಂಟೆಗಳು ಕಳೆದಂತೆ ತಮ್ಮ ಸ್ಥಿತಿಯ ಮೇಲೆ ಹಿಡಿತ ಪಡೆದುಕೊಳ್ಳುತ್ತಾರೆ. ಅಬ್ಬಬ್ಬಾ ಎಂದರೆ ಒಂದೆರೆಡು ದಿನಗಳಲ್ಲಿ ಎಲ್ಲವು ಸಹಜ ಸ್ಥಿತಿಗೆ ಮರಳುತ್ತದೆ. ಆದರೆ, ನಿಮಗೆ ನೋವು ತುಂಬಾನೇ ಕಾಣಿಸಿಕೊಂಡರೆ ಮತ್ತು ನಿಮ್ಮ ಅಸ್ವಸ್ಥತೆ ಹೆಚ್ಚುತ್ತಾ ಹೋದರೆ, ಅಥವಾ ಈ ಕೆಳಗಿನ ಲಕ್ಷಣಗಳಲ್ಲಿ ಯಾವುದಾದರು ಕಂಡರೆ ಕೂಡಲೇ ವೈದ್ಯಕೀಯ ನೆರವು ಪಡೆದುಕೊಳ್ಳಿ :

ತೀವ್ರವಾದ ಜ್ವರ ಅಥವಾ ತೀವ್ರ ನಡುಕ

ದುರ್ವಾಸನೆ ಬೀರುವ ಯೋನಿಯ ವಿಸರ್ಜನೆ

ಹೆಪ್ಪುಗಟ್ಟಿದ ರಕ್ತದ ಮುದ್ದೆಗಳನ್ನು ಹೊರಹಾಕುತ್ತಿದ್ದರೆ

ಮೂತ್ರವಿಸರ್ಜನೆ ವೇಳೆ ನೋವು, ಉರಿ ಕಾಣಿಸಿಕೊಂಡರೆ

ಸಿಕ್ಕಾಪಟ್ಟೆ ಸೆಡೆತಗಳಿಗೆ ಒಳಗಾಗುವುದು ಮತ್ತು ಔಷಧಿ ಸೇವಿಸಿದ ಮೇಲೂ ಹೊಟ್ಟೆ ನೋವು ಕಡಿಮೆ ಆಗದಿದ್ದರೆ

ಮೈ ಮೇಲೆ ತುಂಬಾನೇ ದದ್ದುಗಳು, ಊತ, ತೆರೆಚಿದ ಗಾಯಗಳು ಕಾಣಿಸಿಕೊಂಡರೆ, ಅಥವಾ ನಿಮ್ಮ ಹೆರಿಗೆಯ ಹೊಲಿಗೆಗಳು ಬಿಚ್ಚಿಕೊಂಡರೆ

ಕಣ್ಣು ಮಂಜಾದರೆ

ತೀವ್ರ ತಲೆ ನೋವು ಅಥವಾ ಮೂರ್ಛೆ ಹೋಗುವಂತೆ ಅನಿಸುವುದು

ಪ್ರಸವ ನಂತರದ ಖಿನ್ನತೆಯ ಯಾವುದೇ ಲಕ್ಷಣಗಳು

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon