Link copied!
Sign in / Sign up
8
Shares

ಹೆರಿಗೆ ನಂತರದ ೨೪ ಗಂಟೆಗಳು: ನೀವು ತಿಳಿದುಕೊಂಡಿರಬೇಕಾದದ್ದು

ಗರ್ಭಧಾರಣೆಯ ದಿನಗಳಲ್ಲಿ, ಮೊದಲು ಅಥವಾ ನಂತರದ ಸಮಯಗಳಲ್ಲಿ ಶರೀರದಲ್ಲಾಗುವ ಮಾರ್ಪಾಡುಗಳ ಬಗ್ಗೆ ನೀವು ಧಾರಾಳವಾಗಿ ತಿಳಿದುಕೊಂಡಿರಬಹುದು. ಆದರೆ, ಮಗುವನ್ನು ಪ್ರಸವಿಸಿದ ಗಂಟೆಗಳೊಳಗೆ ನಿಮ್ಮ ಶರೀರದಲ್ಲಾಗುವ  ಮಾರ್ಪಾಡುಗಳೇನೆಂಬುದನ್ನು ತಿಳಿದುಕೊಂಡಿದ್ದೀರಾ ?  ಇಲ್ಲವಾದರೆ, ಮುಂದೆ ಓದಿರಿ.

ಪ್ರಸವಿಸಿದ ತಕ್ಷಣ ಏನಾಗುತ್ತದೆ ?

ಜನಿಸಿದೊಡನೆ, ಮಗುವನ್ನು ನಿಮ್ಮ ಎದೆಯ ಮೇಲಿಟ್ಟು ನಿಮ್ಮ ಚರ್ಮದ ಪರಿಚಯವನ್ನು ಮಗುವಿಗೆ ನೀಡಲಾಗುವುದು. ಮಗುವನ್ನು ನಿಮ್ಮ ಪಕ್ಕದಲ್ಲಿ ಮಲಗಿಸಿ ಎದೆಹಾಲನ್ನು ಉಣಿಸಲಾಗುವುದು.ಯೋನಿಯ ಹರಿದ ಭಾಗದಲ್ಲಿ ಬೇರೇನಾದರೂ ಸುಶ್ರೂಷೆಯ ಅಗತ್ಯವಿದೆಯೇ ಎಂದು ಪರೀಕ್ಷಿಸಲಾಗುವುದು.

ಮಾನಸಿಕ ಹಾಗೂ ಶಾರೀರಿಕ ಬದಲಾವಣೆಗಳು 

ನಿಮ್ಮ ಪ್ರಸವದ ಸ್ವಭಾವವನ್ನು ಅವಲಂಬಿಸಿ, ವಿವಿಧ ರೀತಿಯ ಮಾನಸಿಕ ತುಮುಲಗಳು ನಿಮ್ಮನ್ನು ಕಾಡುವುದು.ನಿಮ್ಮ ಮನಸ್ಸಿನಲ್ಲಿ ಸಂತೋಷ, ಆಹ್ಲಾದ, ದುಃಖ,ಬೇಸರ, ಕ್ಷೀಣ ಅಥವಾ ಎಲ್ಲಾ ಭಾವನೆಗಳ ಸುರಿಮಳೆಯಾಗುವುದು. ಯೋನಿಯಿಂದ ರಕ್ತಸ್ರಾವ ಉಂಟಾಗುವುದು. “ಪ್ರಸವ ಸೆಲೆ”ಅಥವಾ “ಲಾಚಿಯ”  ಎಂದು ಕರೆಯಲ್ಪಡುವ ಈ ಸ್ರಾವವು ಸಾಧಾರಣವಾಗಿ, ೪-೬ ತಿಂಗಳವರೆಗೆ ರಕ್ತದ ಗಂಟುಗಳಿಂದೊಡಗೂಡಿ ಸ್ರವಿಸುವುದು.

ಮಹಿಳೆಯರ ಗರ್ಭಪಾತ್ರೆಯು ಮೊದಲಿನ ಅವಸ್ಥೆಯನ್ನು ತಲುಪಲು ಸಂಕುಚಿಸಲ್ಪಡುವುದರಿಂದ, ಕೆಲವು ಮಹಿಳೆಯರು ಸಹಿಸಲಸಾಧ್ಯವಾದ ನೋವನ್ನು ಅನುಭವಿಸುವರು. ಎರಡನೇ ಅಥವಾ ಮೂರನೇ ಪ್ರಸವವಾಗಿದ್ದರೆ ಈ ನೋವಿನ ಪ್ರಮಾಣವೂ ಹೆಚ್ಚಾಗಿರುವುದು. ವೈದ್ಯರಲ್ಲಿ ನೋವು ನಿವಾರಕಗಳನ್ನು ಕೇಳಿ ಸೇವಿಸುವುದರಿಂದಲೂ, ಬಿಸಿನೀರಿನ ಶಾಖವನ್ನು ಸೊಂಟ ಅಥವಾ ಹೊಟ್ಟೆಯ ಭಾಗಗಳಿಗೆ ನೀಡುವುದರಿಂದಲೂ ನೋವನ್ನು ಶಮನಗೊಳಿಸಬಹುದು.

ನಿಮ್ಮ ಯೋನಿ ದ್ವಾರವು ಕೆಲವೊಮ್ಮೆ ಬಾತು ಕೊಂಡಿರಬಹುದು. ಈ ನೋವಿನಿಂದ ಮುಕ್ತಿ ಪಡೆಯಲು ನೀವು ವಿಶ್ರಾಂತಿಯನ್ನು ತೆಗೆದುಕೊಳ್ಳಬಹುದು. ಎರಡರಿಂದ ನಾಲ್ಕು ಗಂಟೆಗಳಿಗಾವರ್ತಿಸಿ ೨೦ ನಿಮಿಷಗಳ ಕಾಲ ಮಂಜುಗಡ್ಡೆಯನ್ನು ಸವರಬಹುದು. ಆಸರೆಗಾಗಿ ಬಿಗಿಯಾದ ಒಳ ಉಡುಪುಗಳನ್ನು ಅಥವಾ ಮೆಟರ್ನಿಟಿ ಪಾಡನ್ನು ಕೂಡ ಬಳಸಬಹುದು. ಮಾತ್ರವಲ್ಲದೆ ನಿಮಗೆ ಆರಾಮದಾಯಕವೆನಿಸುವ ಕೆಲವು ಸರಳ ವ್ಯಾಯಾಮಗಳನ್ನು ಮಾಡಬಹುದು ಯೋನಿ ದ್ವಾರದ ನೋವು ತೀರಾ ಕಡಿಮೆಯಾಗಿಲ್ಲವೆಂದಾದರೆ, ನಿಮ್ಮ ವೈದ್ಯರ ಅನುಮತಿಯ ಮೇರೆಗೆ ಔಷಧಿಗಳನ್ನು ಸೇವಿಸಬಹುದು. ಒಂದೆರಡು ವಾರಗಳಲ್ಲೇ ಈ ಭಾಗದ ಹೊಲಿಗೆಯು ಮಾಯವಾಗುವುದು. ಶುದ್ಧವಾದ ನೀರಿನಿಂದ ಸ್ವಚ್ಛಗೊಳಿಸಿರಿ. ಯಾವಾಗಲೂ ಸ್ವಚ್ಛತೆಯನ್ನು ಕಾಪಾಡಿರಿ. ಧಾರಾಳ ನೀರು ಹಾಗೂ ಫೈಬರ್ ಯುಕ್ತ ಆಹಾರಗಳನ್ನು ಸೇವಿಸುವುದರಿಂದ ಸುಲಭವಾಗಿ ಮಲ ವಿಸರ್ಜನೆಯಾಗುತ್ತದೆ. ಮಲಬದ್ಧತೆಯಿದ್ದರೆ, ಅದನ್ನು ಸಡಿಲಗೊಳಿಸುವ ಮಾತ್ರೆಗಳನ್ನು ಕೇಳಿ ಪಡೆಯಿರಿ.

ನಿಮ್ಮ ಸ್ತನಗಳಲ್ಲಿ ಹಾಲೂಡಿಸುವ ಕೋಲೋಸ್ಟ್ರಾಂಗಳು ಉತ್ಪಾದಿಸಲ್ಪಡುತ್ತದೆ. ಸಾಧಾರಣವಾಗಿ ಬಹಳ ಕಡಿಮೆ ಪ್ರಮಾಣದಲ್ಲಿ ಮಾತ್ರ ಉತ್ಪಾದಿಸಲ್ಪಡುತ್ತದೆ .

ನಾನು ಯಾವಾಗ ಮನೆಗೆ ತೆರಳಬಹುದು ?

ಸರಕಾರಿ ಆಸ್ಪತ್ರೆಗಳಲ್ಲಿ, ಸಾಧಾರಣ ಹೆರಿಗೆಯಾಗಿದ್ದರೆ, ೨೪ ಗಂಟೆಗಳೊಳಗಾಗಿ ನಿಮ್ಮನ್ನು ಡಿಸ್ಚಾರ್ಜ್ ಮಾಡುವರು. ಆದರೆ, ಖಾಸಗಿ ಆಸ್ಪತ್ರೆಗಳು ಸ್ವಲ್ಪ ದಿನ ಕಳೆದ ಬಳಿಕ ಮಾತ್ರವೇ ನಿಮ್ಮನ್ನು ಬಿಡುಗಡೆಗೊಳಿಸುವುದು.

ನಿಮಗೆ ಸಿಸೇರಿಯನ್ ಹೆರಿಗೆಯಾಗಿದ್ದರೆ, ಇನ್ನೂ ಹೆಚ್ಚಿನ ಕಾಲ ಆಸ್ಪತ್ರೆಯಲ್ಲಿ ತಂಗಬೇಕಾಗುತ್ತದೆ.

ನಿಮಗೆ ಯಾವುದೇ ರೀತಿಯ ಅಸ್ವಸ್ಥತೆಗಳ ಅನುಭವವಾದರೆ ವೈದ್ಯರನ್ನು ಭೇಟಿಯಾಗಲು ಹಿಂಜರಿಯದಿರಿ.

ನಾವಿದನ್ನು ಸರಾಸರಿ ಸ್ತ್ರೀಯರ ಮನೋವೇಗಕ್ಕೆ ಅನುಗುಣವಾಗಿ ಸಿದ್ಧಪಡಿಸಿದ್ದೇವೆ. ಆದರೆ ಎಲ್ಲಾ ತಾಯಂದಿರು ಮನೋಭಾವವು ಬೇರೆ ಬೇರೆಯಾಗಿರುವುದು. ಆದಕಾರಣ, ಯಾವುದೇ ಪರಿಸ್ಥಿತಿಯಲ್ಲೂ ಸಂಕೋಚಪಡದೆ ನಿಮ್ಮ ವೈದ್ಯರ ನೆರವನ್ನು ಕೋರಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon