Link copied!
Sign in / Sign up
20
Shares

ಹೆರಿಗೆಯ ನಂತರ ತೂಕ ಕಡಿಮೆ ಮಾಡುವುದು ಹೇಗೆ?

ಪ್ರಸವದ ನಂತರದ ತಾಯಂದಿರಿಗೆ, ತಮ್ಮ ದೇಹದ ತೂಕವನ್ನು ಇಳಿಸುವುದು ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ದೇಹದಲ್ಲಾಗುವ hormoneಗಳ ಏರು-ಪೇರಿನಿಂದ ದೇಹದ ತೂಕದಲ್ಲಿ ಸದಾಕಾಲ ವ್ಯತ್ಯಾಸವಾಗುತ್ತಿರುತ್ತದೆ. ಯಾವ ಆಹಾರವನ್ನು ಸೇವಿಸಬೇಕು, ಯಾವುದನ್ನು ಮಿತವಾಗಿ ಸೇವಿಸಬೇಕು ಎಂಬುದನ್ನು ತಿಳಿಯಬೇಕೇ? ಹಾಗದರೆ ಬನ್ನಿ ವೈದ್ಯರು ಹೇಳಿರುವ ಆಹಾರಗಳು.

ಯಾವುದೆಂದು ನಾವು ತಿಳಿಯೋಣ
೧.ಗೋಧಿ ನುಚ್ಚು

ಇದರ ಆರೋಗ್ಯದ ಪ್ರಯೋಜನಗಳು ಅಪಾರ. ಗೋಧಿ ನುಚ್ಚನ್ನು ಸುಲಭವಾಗಿ ಬೇಯಿಸಿ ಬಾಣಂತಿಯರಿಗೆ ನೀಡಿದರೆ, ಅವರ ಜೀರ್ಣ ಕ್ರಿಯೆ ವೃದ್ಧಿಸಿ, ತೂಕ ಇಳಿಸಲು ಸಹಕಾರಿಯಾಗುತ್ತದೆ. ಇದರೊಂದಿಗೆ ಪೋಹ ಕೂಡ ದೇಹದ ತೂಕವನ್ನು ಇಳಿಸುವಲ್ಲಿ ಸಹಕಾರಿಯಾಗಿದೆ.

೨.ಪ್ರೋಟೀನ್

ನೈಸರ್ಗಿಕ ಪ್ರೋಟೀನ್ ಗಳಾದ ಮೊಟ್ಟೆ, ಪನ್ನೀರ್ ದೇಹದಲ್ಲಿರುವ ಬೇಡದ ಕೊಬ್ಬಿನ ಕಣಗಳನ್ನು ಸುಲಭವಾಗಿ ಕರಗಿಸಲು ಸಹಕಾರಿಯಾಗುತ್ತದೆ.  ಇದರೊಂದಿಗೆ ಹೆಸರುಬೇಳೆಯಲ್ಲಿರುವ ಕಬ್ಬಿಣ ಹಾಗು ಪ್ರೋಟೀನ್, ನಿಮ್ಮ ದೇಹಕ್ಕೆ ಶಕ್ತಿ ನೀಡಿ, ತೂಕವನ್ನು ಕಡಿಮೆಗೊಳಿಸುತ್ತದೆ.

೩.Dry fruits(ಒಣ ಹಣ್ಣುಗಳು)

ಬಾದಾಮಿ ಬೀಜಗಳು ನಿಮ್ಮ ಕೂದಲು ಹಾಗು ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ. ಪಿಸ್ತಾ, ಗೋಡಂಬಿ, ಒಣ ದ್ರಾಕ್ಷಿಯನ್ನು ಸೇವಿಸುವುದರಿಂದ ಜೀವ ಕೋಶಗಳಿಗೆ ಶಕ್ತಿಯನ್ನು ನೀಡಿ, ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಹಾಗು ನಿಮ್ಮ ಶರೀರದ ತೂಕವನ್ನು ಸಹ ಕ್ರಮೇಣವಾಗಿ ಇಳಿಸುತ್ತದೆ.

೪.ಸೊಂಪು

ಇದನ್ನು ಊಟದ ನಂತರ ಸೇವಿಸುವುದರಿಂದ ಜಠರದ ಪಚನ ಶಕ್ತಿ ವೃದ್ಧಿಯಾಗಿ ದೇಹದಲ್ಲಿರುವ ಅಧಿಕ ಕೊಬ್ಬನ್ನು ಕಡಿಮೆ ಮಾಡುತ್ತದೆ. ಜೀರ್ಣ ಕ್ರಿಯೆ ವೃದ್ಧಿಸುವ  ಮಾತ್ರೆಗಳ ಸೇವನೆಯ ಬದಲಿಗೆ, ಒಂದು ಚಮಚ ಸೊಂಪು ಅನ್ನು  ಪ್ರತ್ರಿನಿತ್ಯ ಸೇವಿಸಿ.

೫.ಮಜ್ಜಿಗೆ

ದೇಹವನ್ನು ತಂಪುಗೊಳಿಸುವುದಲ್ಲದೆ, ಶರೀರಕ್ಕೆ ಕ್ಯಾಲ್ಸಿಯಂ ಹಾಗು ಪ್ರೋಟೀನ್ ಅನ್ನು ಪೂರೈಸುತ್ತದೆ ಹಾಗು ಮಜ್ಜಿಗೆಯೊಳಗಿನ ನೀರು, ಕರುಳಿನ ಚಲನ ಕ್ರಿಯೆಗೆ ಸಹಕರಿಸುತ್ತದೆ.

೬.ಸೋರೆಕಾಯಿ.

ಇದರಲ್ಲಿನ ಅಧಿಕ ಪ್ರಮಾಣದ ಪ್ರೋಟೀನ್, ನಾರು ದೇಹದ ತೂಕವನ್ನು ಕ್ಷಿಪ್ರೇವಾಗಿ ಕಡಿಮೆಗೊಳಿಸುತ್ತದೆ. ಆದ್ದರಿಂದ ಪ್ರತಿನಿತ್ಯ ಸೋರೆಕಾಯಿ ಜ್ಯೂಸು ಅನ್ನು ಕಾಲಿ ಹೊಟ್ಟೆಗೆ ಸೇವಿಸಿ.

೭.ಆರೋಗ್ಯಕರ ಕಾರ್ಬೋಹೈಡ್ರೇಟ್ಸ್ ಗಳು

ಕಡ್ಲೆ ಕಾಳು, ಆಲಿವ್ ಎಣ್ಣೆ, ಮೀನು ನಿಮ್ಮ ದೇಹಕ್ಕೆ ಒಳ್ಳೆಯ ಕಾರ್ಬೋಹೈಡ್ರೇಟ್ ಗಳ್ಳನ್ನು ಪೂರೈಸುತ್ತದೆ. ಹಾಗೆಂದ ಮಾತ್ರಕ್ಕೆ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸದಿರಿ.

ತೂಕ ಇಳಿಸಲು ಯಾವ ಯಾವ ಆಹಾರವನ್ನು ತಿನ್ನಬಾರದೆಂದು ತಿಳಿಯೋಣ ಬನ್ನಿ.

೧. ಮದ್ಯಪಾನ

೨.  ಫ್ರೋಜನ್ ಆಹಾರಗಳು.

೩. ಸಕ್ಕರೆ ಪ್ರಮಾಣ ಹೆಚ್ಚಿರುವ ಆಹಾರಗಳು.

೪. ಬೇಕರಿ ತಿನಿಸುಗಳು.

೫. ತಂಪು ಪಾನೀಯಗಳು.

೬. ಕೆಟ್ಟ ಎಣ್ಣೆಯಲ್ಲಿ ಬೇಯಿಸಿದ ತಿನಿಸುಗಳು.

೭. ಫ್ರೆಂಚ್ ಫ್ರೈಸ್.

೮. ಬೆಳ್ಳಗಿನ ಬ್ರೆಡ್, ಕೇಕ್

೯. ಫ್ರೋಜನ್ ಐಸ್ಕ್ರೀಂ

ಹೊಸ ತಾಯಂದಿರಿಗೆ ತೂಕ ಇಳಿಸಲು ಸಣ್ಣ ಕಿವಿಮಾತು

೧. ಪ್ರತಿನಿತ್ಯ ವಾಯುವಿಹಾರಕ್ಕೆ ತೆರಳಿ. ಆದರೆ ಇದನ್ನು ಮಾಗುವಾದ ೬ ವಾರಗಳ ನಂತರ ಪ್ರಾರಂಭಿಸಿ. ಕ್ರಮೇಣ ನಿಮ್ಮ ವಾಕಿಂಗ್ ಸಮಯವನ್ನು ಹೆಚ್ಚಿಸಿ.

೨. ಹಾಲುಣಿಸುವುದರಿಂದ ಬೇಗನೆ ತೂಕ ಕಡಿಮೆ ಮಾಡಬಹುದು.

೩. ಪ್ರತಿನಿತ್ಯ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸೇವಿಸಿ.

ಮೇಲೆ ಹೇಳಿದ ಎಲ್ಲ ವಿಧಾನವನ್ನು ಅನುಸರಿಸಿ, ನಿಮ್ಮ ಅಭಿಪ್ರಾಯವನ್ನು commentಗಳ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon