Link copied!
Sign in / Sign up
59
Shares

ಹೆರಿಗೆ ನಂತರ ಸುಂದರವಾಗಿ ಮತ್ತು ಹದಿಹರೆಯದವರಂತೆ ಕಾಣಲು ಈ 7 ಸಲಹೆಗಳು

ಮಗು ಜನನದ ನಂತರ ಮಹಿಳೆಯ ದೇಹ ರಚನೆಯಲ್ಲಿ ಏರುಪೇರಾಗುವುದು ಸಾಮಾನ್ಯ. ಅವಳು ತನ್ನ ಮೊದಲಿನ ಸೌoದರ್ಯವನ್ನು ಕಳೆದುಕೊಳ್ಳುತ್ತಾಳೆ. ಮಹಿಳೆಯರಲ್ಲಿ ಮಗು ಜನನದ ನಂತರ  ಕೂದಲು ಉದುರುವುದು, ತ್ವಚೆ ಕಾಂತಿ ಕಡಿಮೆಯಾಗುವುದು, ಚರ್ಮದ ಸಮಸ್ಯೆ ಮತ್ತು ದೇಹದ ಸಮಸ್ಯೆಗಳು ಸರ್ವೇ ಸಾಮಾನ್ಯ. ಅವರು ಇದರಿಂದ ಹೊರಬರಲು ಹಾತೊರೆಯುತ್ತಾರೆ. ನೀವು ಮೊದಲಿನಂತೆ ಹದಿಹರೆಯದವರಂತೆ ಮತ್ತು ಸುಂದರವಾಗಿ ಕಾಣಲು ಕೆಲ ಸಲಹೆಗಳು ಇಲ್ಲಿವೆ.

೧. ಮುನ್ನಡೆಯುತ್ತಿರಿ

ಕಷ್ಟ ಪಟ್ಟರೆ ಸುಖ ಎಂಬ ಹಿರಿಯರ ಮಾತಿನಂತೆ ವ್ಯಾಯಾಮ ಮಾಡುವುದರಿಂದ ಸುಂದರವಾಗಿಯೂ ಕಾಣಬಹುದು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಎಳೆಯರಂತೆ ಕಾಣಲು ವ್ಯಾಯಾಮ ತುಂಬಾ ಸಹಕಾರಿ. ಮಗು ಜನಿಸಿದ ನಂತರ ತಾಯಿಯ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ, ವ್ಯಾಯಾಮ ಮಾಡುವುದರಿಂದ ಇಂತಹ ಆರೋಗ್ಯ ಸಮಸ್ಯೆಯಿಂದಲೂ ಮುಕ್ತಿಹೊಂದಬಹುದು. ಪ್ರಸವದ ನಂತರ ನೋವು ಇರುವುದು ಸಾಮಾನ್ಯ ಆದ್ದರಿಂದ ಮಗು ಜನಿಸಿದ ಕೆಲ ದಿನಗಳ ಬಳಿಕ ವ್ಯಾಯಾಮ ಆರಂಭಿಸುವುದು ಒಳ್ಳೆಯದು, ಮತ್ತು ಅದು ೧೦ ರಿಂದ ೧೫ ನಿಮಿಷ ಮಾಡಿದರೆ ಉತ್ತಮ. ಇದು ಕಷ್ಟ ಎನಿಸಿದರೆ ಬೆಳಿಗ್ಗೆ ಎದ್ದಾಗ ಸೂರ್ಯ ನಮಸ್ಕಾರ ಮಾಡಿದರೆ ಸಾಕು. ಅದು ನಿಮ್ಮ ಮನಸ್ಸನ್ನು ಶಾಂತಿಯಾಗಿರುಸುತ್ತದೆ ಮತ್ತು ನಿಮ್ಮ ಒತ್ತಡವನ್ನು ಕಡಿಮೆಮಾಡುತ್ತದೆ.

೨. ಜೀವಸತ್ವ / ವಿಟಮಿನ್ಸ್ ಗಳನ್ನು  ಸೇವಿಸಿ

ಒಳ್ಳೆಯ ಆಹಾರ ಕ್ರಮ ಸೇವನೆಯಿಂದ  ತಾಯಿ ಮತ್ತು ಮಗು ಇಬ್ಬರಿಗೂ ಒಳ್ಳೆಯದು. ಸರಿಯಾದ ಆಹಾರ ಸೇವಿಸುವುದರಿಂದ ದೇಹಕ್ಕೆ ಪುಷ್ಠಿ, ಶಕ್ತಿ ಮತ್ತು ಆರೋಗ್ಯ ಹೆಚ್ಚುತ್ತದೆ. ನೀವು ಸೇವಿಸುವ ಆಹಾರವನ್ನು ನಿಮ್ಮ ಮಗುವೂ  ಸೇವಿಸುವುವುದರಿಂದ ಸರಿಯಾದ ಪ್ರಮಾಣದ ನೀರು, ಪ್ರೋಟೀನ್, ಒಣ ಹಣ್ಣುಗಳು, ಹಸಿರು ಸೊಪ್ಪು ತರಕಾರಿಗಳನ್ನು ಸೇವಿಸುವುದು ಒಳ್ಳೆಯದು. ಇದರಿಂದ ತಾಯಿಯ ಸೌಂದರ್ಯ ಮತ್ತು ಆರೋಗ್ಯದ ಜೊತೆಗೆ ಮಗುವಿನ ಬೆಳೆವಣಿಗೆಯೂ ಚೆನ್ನಾಗಿರುತ್ತದೆ.

೩. ಕೂದಲನ್ನು ಮರುಗಳಿಸಿ

ಹೆಚ್ಚು ಬಾಣಂತಿಯರಲ್ಲಿ ಕೂದಲು ಉದರುವಿಕೆ ಸಮಸ್ಯೆ ಸಾಮಾನ್ಯ. ಹೆಣ್ಣಿನ ಸೌಂದರ್ಯ ಹೆಚ್ಚಿಸುವಲ್ಲಿ ಕೂದಲುಕೂಡ ಪ್ರಮುಖ  ಪಾತ್ರವಯಿಸುವುದರಿಂದ ಅವರು ಕೂದಲು ಉದರುವಿಕೆಯನ್ನು ದೊಡ್ಡ ಸಮಸ್ಯೆಯಾಗಿ ಪರಿಗಣಿಸುತ್ತಾರೆ. ಅದನ್ನು ತಡೆಯಲು ಬೇಕಾದ ಅವಶ್ಯಗಳನ್ನು ಮಾಡಿಕೊಳ್ಳಬೇಕು. ಕೂದಲು ಉದರುವಿಕೆ ತಡೆಯಲು ಬೇಕಾದ ವಿಟಮಿನ್ ಬಿ ಮತ್ತು ಸಿ ಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿ. ರಾಸಾಯನಿಕ ಪದಾರ್ಥಗಳನ್ನು ಕೂದಲಿಗೆ ಹಾಕುವುದನ್ನು ಆದಷ್ಟು ಕಡಿಮೆಗೊಳಿಸಿ.

೪. ತ್ವಚೆಯ ಕಾಂತಿಯನ್ನು ಹೆಚ್ಚಿಸಿ

ನಿಮ್ಮ ತ್ವಚೆಯ ಕಾಂತಿ ಹೆಚ್ಚಿಸಲು ರಾಸಾಯನಿಕ ಪದಾರ್ಥಗಳನ್ನು ಹಾಕದೆ, ನೈಸರ್ಗಿಕ ಮತ್ತು ನೀರನ್ನು ಹೆಚ್ಚು ಉಪಯೋಗಿಸಿ ಕಾಂತಿಯನ್ನು ಕಾಪಾಡಿಕೊಳ್ಳಿ. ರಾಸಾಯನಿಕ ಪದಾರ್ಥಗಳನ್ನು ಉಪಯೋಗಿಸುವುದರಿಂದ ಚರ್ಮದ ಸಮಸ್ಯೆ ಉಂಟಾಗಬಹುದು. ನಿಮ್ಮ ತ್ವಚೆಯ ತೇವಾಂಶ ಕಾಪಾಡಿಕೊಳ್ಳಲು ಬೆಚ್ಚನೆ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ, ಬೆಳಿಗ್ಗೆ ರಾತ್ರಿ ಎರಡು ಸಮಯ ಇದನ್ನು ಮಾಡುವುದು ತ್ವಚೆಯನ್ನು ತೇವಾಂಶದಿಂದ ಇಡಲು ಸಹಾಯಮಾಡುತ್ತದೆ. ಇದರ ಜೊತೆಗೆ ತೆಂಗಿನ ಎಣ್ಣೆ ಉಪಯೋಗಿಸುವುದು ಒಳ್ಳೆಯದು.

೫. ಯೌವ್ವನ ಪಡೆಯಿರಿ

ನಿಮ್ಮ ಯೌವ್ವನವನ್ನು ಮರುಪಡೆಯಲು ಸ್ಪಾ ಗಳಲ್ಲಿ ಪಾಲ್ಗೊಳ್ಳಿ. ಅಲ್ಲಿ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಿ, ನಿಮ್ಮ ದೇಹಕ್ಕೆ  ಅಂಗಮರ್ದನ(ಮಸಾಜ್) ಮಾಡಿಸಿಕೊಳ್ಳಿ. ಸ್ಪಾ ಗಳಿಗೆ ಹೋಗಲು ಸಮಯವಿಲ್ಲದಿದ್ದರೆ ಕೆಲವು ಮನೆಗೆ ಬಂದು ಸೇವೆಕೋಡುವ ಸ್ಪಾ ಗಳನ್ನು ಆಯ್ಕೆಮಾಡಿಕೊಳ್ಳಿ.

೬. ಸರಿಯಾದ ಉಡುಪು ಧರಿಸುವುದು

ನಿಮ್ಮ ಉಡುಪು ನಿಮ್ಮ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದ್ದರಿಂದ ನಿಮ್ಮ ಅಳತೆಗೆ ತಕ್ಕಂತೆ ನಿಮಗೆ ಹೊಂದುವ ಸುಂದರವಾಗಿ ಕಾಣುವ ಬಟ್ಟೆಯನ್ನು ಹಾಕಿಕೊಳ್ಳುವುದರಿಂದ ನೀವು ಹದಿಹರೆಯದವರಂತೆ ಕಾಣಬಹುದು.

೭. ನೆಡೆದಾಡುವುದು

ಸೂರ್ಯನ ಹೊಂಗಿರಣದಲ್ಲಿ ನೆಡೆದಾಡುವುದರಿಂದ ಒತ್ತಡದಿಂದಾದ ಮುಖದ ಕಲೆಗಳು ಮತ್ತು ಕಣ್ಣಿನ ಕೆಳಗಡೆ ಆದ ಕಪ್ಪು ಕಲೆಗಳನ್ನು ಹೋಗಿಸಬಹುದು. ಬೆಳಗಿನ ಸೂರ್ಯನ ಕಿರಣಗಳಿಂದ ವಿಟಮಿನ್ ಡಿ ಸಿಗುತ್ತದೆ ಇದು ಆರೋಗ್ಯಕ್ಕೂ ಒಳ್ಳೆಯದು ಆದ್ದರಿಂದ ಹೊಂಗಿರಣದಲ್ಲಿ ನಡೆದಾಡುವುದು ಒಂದು ಉತ್ತಮ ಅಭ್ಯಾಸ. ನೀವು ನಿಮ್ಮ ಖುಷಿಯ ಕ್ಷಣಗಳನ್ನು ಸವಿಯುವಾಗ ನಿಮ್ಮ ಮಗುವಿನ ರಕ್ಷಣೆ, ಆರೈಕೆ, ಪೋಷಣೆಗಾಗಿ ನಿಮ್ಮ ಪತಿ, ಸೋದರಿ ಅಥವಾ ನಿಮ್ಮ ಕುಟುಂಬದವರನ್ನು ನೇಮಿಸಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
100%
Like
0%
Not bad
0%
What?
scroll up icon