Link copied!
Sign in / Sign up
9
Shares

ಹೆರಿಗೆ ನಂತರ ನಿಮ್ಮ ಹೊಟ್ಟೆ ಸಣ್ಣಗಾಗಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ?

ಸಾಮಾನ್ಯವಾಗಿ ಶಿಶುಗಳು ಜನಿಸುವಾಗ ಸರಾಸರಿ ಸರಿಸುಮಾರು 3.2kg ತೂಕವನ್ನು ಹೊಂದಿರುತ್ತವೆ. ಆದರೆ ನೀವು ಹೆರಿಗೆಗೆ ಮುನ್ನ ಎಷ್ಟು ತೂಕವನ್ನು ಹೊಂದಿದ್ದೀರಿ? ಮತ್ತು ನಿಮ್ಮ ಮೊದಲಿನ ದೇಹ ಸ್ಥಿತಿಯನ್ನು ಪಡೆಯಲು ಎಷ್ಟು ಸಮಯ ಬೇಕು? ಇದು ಹಲವು ಅಂಶಗಳ ಮೇಲೆ ನಿರ್ಧಾರ ಆಗಿರುತ್ತದೆ - ಉದಾಹರಣೆಗೆ ನಿಮ್ಮ ಗರ್ಭಾವಸ್ಥೆಯಲ್ಲಿ ನೀವು ಎಷ್ಟು ತೂಕವನ್ನು ನೀವು ಪಡೆದಿರುವಿರಿ. ಎದೆಹಾಲುಣಿಸುತ್ತಿರುವಿರಾ ಅಥವಾ ಇಲ್ಲವೇ? ನಿಮ್ಮ ಆಹಾರ ಪದ್ಧತಿ.

ಜನ್ಮ ನೀಡಿದ 24 ಗಂಟೆಗಳ ನಂತರ

ಮಹಿಳೆಯು ಮಗುವಿಗೆ ಜನ್ಮ ನೀಡಿದ ನಂತರ ಬೇಗನೆ 5.4kg ಯಷ್ಟು ತೂಕವನ್ನು ಕಳೆದುಕೊಳ್ಳುವಳು. ಈ ೨೪ ಗಂಟೆಗಳ ಸಮಯದಲ್ಲಿ, ನಿಮ್ಮ ಹೆರಿಗೆ ನಂತರದ ಹೊಟ್ಟೆ ಉಬ್ಬು ಕೆಳಗೆ ಇಳಿಯಲು ಪ್ರಾರಂಭಿಸಿರುತ್ತದೆ. ನಿಮ್ಮ ದೇಹದ ಹೆಚ್ಚಿನ ತೂಕ ಮಗುವಿನದ್ದು. ನೀವು ಮಗುವನ್ನು ಪಡೆದಿರುವಿರಿ, ರಕ್ತ, ದ್ರವ್ಯ ಮತ್ತು ಆಮ್ನಿಯೋಟಿಕ್ ದ್ರವವನ್ನು ದೇಹದಿಂದ ಹೊರಗೆ ಹರಿಸಿರುವಿರಿ.

ಒಂದು ವಾರದ ನಂತರ

ನೀವು ಇನ್ನು ಮೂತ್ರದ ಮೂಲಕ ಅಥವಾ ಮೂತ್ರ ಹೋಗುವ ಜಾಗದ ಮೂಲಕ ಹೆಚ್ಚು ದ್ರವವನ್ನು ಹೊರ ಹಾಕುತ್ತಿರುವಿರಿ. ಅದರಲ್ಲೂ ವಿಶೇಷವಾಗಿ ನೀವು ಎಪಿಡ್ಯೂರಲ್ ಗೆ ಒಳಗಾಗಿದ್ದರೆ, ಇದರ ಅರ್ಥ ನೀವು ತೂಕವನ್ನು ಕಳೆದು ಕೊಳ್ಳುತ್ತಿರುವಿರಿ ಎಂದು ಕ್ರೀಗರ್ ಹೇಳುತ್ತಾರೆ.

ಎದೆಹಾಲುಣಿಸುವುದು ಕೂಡ ತೂಕವನ್ನು ಕಡಿಮೆ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮಗುವಿನ ಪೋಷಣೆಯನ್ನು ಮಾಡುವಾಗ ತಾಯಿಯರಿಗೆ ದಿನಕ್ಕೆ ೫೦೦ ಕ್ಯಾಲೋರಿಯಷ್ಟು ಆಹಾರವನ್ನು ಹೆಚ್ಚು ಸೇವಿಸಲು ಸಲಹೆ ನೀಡುತ್ತಾರೆ. ಮಹಿಳೆಯರು ಮಗುವಿಗೆ ಜನ್ಮ ನೀಡಿದ ನಂತರ ಎದೆಹಾಲನ್ನು ಕುಡಿಸುತ್ತಿದ್ದರೆ, ಬೇಗನೆ ತೂಕವನ್ನು ಕಳೆದುಕೊಳ್ಳುವರು, ಏಕೆಂದರೆ ಎದೆಹಾಲುಣಿಸುವುದರಿಂದ ದೇಹದಲ್ಲಿನ ಹೆಚ್ಚಿನ ಕ್ಯಾಲೋರಿಯನ್ನು ಕಳೆದುಕೊಳ್ಳುವೆವು.

ಎರಡು ವಾರದ ನಂತರ

ಹೆರಿಗೆ ನಂತರ ಮಹಿಳೆಯರು ಎರಡು ವಾರಗಳು ತೂಕವನ್ನು ಪಡೆಯುವರು ಎಂದು ಹೇಳಲಾಗುತ್ತದೆ, ಆದರೆ ಅದು ಸುಳ್ಳು. ಏಕೆಂದರೆ ತಾಯಿಯು ಮಗುವಿಗೆ ಎದೆಹಾಲುಣಿಸಲು ಪ್ರಾರಂಭಿಸಿದ ಕ್ಷಣದಿಂದ ತನ್ನ ದೇಹದ ತೂಕವನ್ನು ಕಳೆದುಕೊಳ್ಳಲು ಪ್ರಾರಂಭಿಸುವಳು, ಮತ್ತು ಅವಳ ದೇಹದಲ್ಲಿನ ಹಾರ್ಮೋನುಗಳು ಕೂಡ ಕಡಿಮೆ ಆಗುತ್ತದೆ.

ಒಂದು ತಿಂಗಳ ನಂತರ

ಇದು ಕೇಳಲು ನಿಜಕ್ಕೂ ಖುಷಿ ಎನಿಸುವ ವಿಷಯ, ಹೆರಿಗೆ ಆದ ಒಂದು ತಿಂಗಳ ನಂತರ ಮಹಿಳೆಯು 9.2kg ಯಷ್ಟು ತೂಕವನ್ನು ಕಳೆದುಕೊಳ್ಳುವಳು. ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ೧೧ ರಿಂದ ೧೩ kg ಯಷ್ಟು ತೂಕವನ್ನು ಪಡೆದುಕೊಂಡಿರುವಿರಿ, ಹೆರಿಗೆ ಆದ ಒಂದು ತಿಂಗಳ ನಂತರ ೯kg ಯಷ್ಟು ತೂಕ ಕಳೆದುಕೊಂಡಿರುವಿರಿ ಎಂದರೆ ನೀವು ಬಹುತೇಕ ನಿಮ್ಮ ಮೊದಲ ದೇಹದ ಸ್ಥಿತಿಗೆ ಮರುಳಿರುವಿರಿ ಎಂದರ್ಥ.

ಆರು ವಾರಗಳ ನಂತರ

ಗರ್ಭಾಶಯವು ಈ ಸಮಯದಲ್ಲಿ ಪೆಲ್ವಿಸ್ ಗೆ ಮರಳುತ್ತದೆ. ಆದ್ದರಿಂದ ನಿಮ್ಮ ಸೊಂಟ ನೋಡಲು ಈಗ ಸಣ್ಣದಾಗಿ ಕಾಣುತ್ತದೆ.

ಕೆಲವು ತಿಂಗಳ ನಂತರ

ತಜ್ಞರ ಪ್ರಕಾರ ನೀವು ಆರೋಗ್ಯಕರ ಆಹಾರ ಸೇವನೆಯ ಅಭ್ಯಾಸ ಮಾಡಿಕೊಂಡಿದ್ದು, ಅದನ್ನೇ ಪಾಲಿಸುತ್ತಿದ್ದರೆ ಮಗುವಿಗೆ ಜನ್ಮ ನೀಡಿದ ಕೆಲವು ತಿಂಗಳ ನಂತರ ಸಂಪೂರ್ಣ ಮೊದಲ ದೇಹ ತೂಕವನ್ನು ನೀವು ಮರುಗಳಿಸಬಹುದು.

೯ ತಿಂಗಳ ನಂತರ

ಪ್ರತಿ ಮಹಿಳೆಯು ಹೆರಿಗೆ ನಂತರ ತನ್ನ ಮೊದಲಿನ ತೂಕವನ್ನು ಅವರದ್ದೇ ಆದ ಸಮಯದಲ್ಲಿ ಪಡೆಯುವರು. ಇದು ನೀವು ಯಾವ ಆಹಾರ ಸೇವನೆ ಮಾಡುವಿರಿ? ಎಷ್ಟು ನೀರು ಕುಡಿಯುವಿರಿ? ನೀವು ಸೇವಿಸುವ ಆಹಾರದಲ್ಲಿ ಎಷ್ಟು ಪ್ರೊಟೀನ್, ಕ್ಯಾಲ್ಸಿಯಂ ಮತ್ತು ಪೌಷ್ಟಿಕಾಂಶಗಳಿವೆ ಎಂಬುದರ ಮೇಲೆ ಅವಲಂಭಿತವಾಗಿರುತ್ತದೆ.

ಸರಿಯಾದ ಪೋಷ್ಟಿಕಾಂಶವುಳ್ಳ, ಪ್ರೊಟೀನ್ ಇರುವ ಆರೋಗ್ಯಕರ ಆಹಾರವನ್ನು ಸೇವಿಸುವುದರಿಂದ ಹೊಸ ತಾಯಿಯಂದಿರು ಬೇಗನೆ ತಮ್ಮ ದೇಹವನ್ನು ಮೊದಲಿನ ಆಕಾರಕ್ಕೆ ತರಿಸಿಕೊಳ್ಳಬಹುದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon