Link copied!
Sign in / Sign up
5
Shares

ಹೆರಿಗೆ ನಂತರ ನನ್ನ ಮೊದಲ ಮುಟ್ಟು !

ಗರ್ಭಾವಸ್ಥೆಯ ಸುಂದರ ಖುಷಿಯ ದಿನಗಳನ್ನು ಅನುಭವಿಸುವುದು ಮತ್ತು ಕೆಲವು ಆನಂದದ ನೋವನ್ನು ಅನುಭವಿಸಿರುವಿರಿ. ಇದರ ಜೊತೆಗೆ ೯ ತಿಂಗಳುಗಳ ಕಾಲ ನಿಮ್ಮ ಋತುಚಕ್ರದಿಂದ ದೂರವಿರುವಿರಿ. ಆದರೆ ಹೆರಿಗೆಯ ನಂತರ ಮತ್ತೆ ಮುಟ್ಟು ಬರುವ ದಿನ ಯಾವುದು ಅದು ಮೊದಲಿನಂತೆ ಸಾಮಾನ್ಯವಾಗಿರುತ್ತದೆಯೇ ಅಥವಾ ನಾನು ಏನನ್ನಾದರೂ ನಿರೀಕ್ಷಿಸಬಹುದೇ ಎಂಬ ಕುತೂಹಲ ನಿಮ್ಮಲ್ಲಿ ಮೂಡುವುದು ಸಹಜ. ಹೆರಿಗೆ ನಂತರ ನಿಮ್ಮ ಮೊದಲ ಮುಟ್ಟು ನೀವು ಎದೆಹಾಲು ನೀಡುತ್ತಿರುವುದರ ಮೇಲೆ ಅವಲಂಭಿತವಾಗಿದೆ.

ಹೆರಿಗೆ ನಂತರ ನನ್ನ ಮೊದಲ ಮುಟ್ಟು ಯಾವಾಗ?

ಒಂದು ವೇಳೆ ತಾಯಿಯು ಮಗುವಿಗೆ ಎದೆಹಾಲು ಉಣಿಸುತ್ತಿಲ್ಲ ಎಂದಾದರೆ, ಮಗುವಿಗೆ ಜನ್ಮ ನೀಡಿದ ೬ ರಿಂದ ೮ವಾರಗಳಲ್ಲಿ ತನ್ನ ಮೊದಲ ಋತುಚಕ್ರವನ್ನು ಅನುಭವಿಸುವಳು. ಒಂದು ವೇಳೆ ಅವಳು ಎದೆಹಾಲುಣಿಸುತ್ತಿದ್ದರೆ, ಇದರಲ್ಲಿ ವ್ಯತ್ಯಾಸವನ್ನು ನಾವು ಕಾಣಬಹುದು. ಕೆಲವು ಮಹಿಳೆಯರು ಎದೆಹಾಲುಣಿಸುವ ಸಮಯದಲ್ಲಿ ತಮ್ಮ ಋತುಚಕ್ರವನ್ನು ಅನುಭವಿಸುವುದಿಲ್ಲ. ಕೆಲವರು ನಾಲ್ಕೈದು ತಿಂಗಳ ನಂತರ ತಮ್ಮ ಮೊದಲ ಮುಟ್ಟನ್ನು ಅನುಭವಿಸುವರು.

ನೀವು ಎದೆಹಾಲುಣಿಸದೆ ಇರುವ ಮಹಿಳೆಯಾಗಿದ್ದು, ಬೇಗನೆ ನಿಮ್ಮ ಋತುಚಕ್ರವನ್ನು ನೀವು ಅನುಭವಿಸದೇ ಇದ್ದರೆ, ವೈದ್ಯರು ನಿಮಗೆ tamponsಗಳನ್ನು ಬಳಸದೆ ಇರಲು ಸೂಚಿಸುವರು. ಇದು ಏಕೆಂದರೆ, ನಿಮ್ಮ ದೇಹವು ಇನ್ನೂ ಚೇತರಿಸಿಕೊಳ್ಳುತ್ತಿರುವುದು, ಮತ್ತು tamponಗಳು ನಿಮಗೆ ಹಾನಿಯನ್ನು ಮಾಡುವುದು.

ಎದೆಹಾಲುಣಿಸುವ ಮಹಿಳೆಯರು ಬೇಗನೆ ಮುಟ್ಟನ್ನು ಅನುಭವಿಸುವುದಿಲ್ಲ ಏಕೆ?

ಹೆರಿಗೆ ನಂತರ ಎದೆಹಾಲುಣಿಸುವ ತಾಯಿಯಂದಿರು ಬೇಗನೆ ಋತುಚಕ್ರವನ್ನು ಅನುಭವಿಸುವುದಿಲ್ಲ, ಇದಕ್ಕೆ ನಿಮ್ಮ ದೇಹದಲ್ಲಿರುವ ಹಾರ್ಮೋನುಗಳು ಕಾರಣ. ಎದೆಹಾಲನ್ನು ಉತ್ಪತ್ತಿ ಮಾಡಲು ಅವಶ್ಯವಿರುವ ಪ್ರೊಲಾಕ್ಟಿನ್ ಎಂಬ ಹಾರ್ಮೋನುಗಳು ಸಂತಾನೋತ್ಪತ್ತಿ ಹಾರ್ಮೋನುಗಳನ್ನು ನಿಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಇದರ ಫಲಿತಾಂಶ ನೀವು ಅಂಡೋತ್ಪತ್ತಿ ಮಾಡಲು ಸಾಧ್ಯವಾಗುವುದಿಲ್ಲ, ಅಥವಾ ಫಲೀಕರಣ ಮಾಡಲು ಮೊಟ್ಟೆಯನ್ನು ಉತ್ಪತ್ತಿ ಮಾಡಲು ಸಾಧ್ಯವಿಲ್ಲ. ಈ ಪ್ರಕ್ರಿಯೆ ಇಲ್ಲದೆ ನೀವು ಮುಟ್ಟಾಗಲು ಸಾಧ್ಯವಿಲ್ಲ.

ಜನನ ನಿಯಂತ್ರಣ?

ಕೆಲವರು ಎದೆಹಾಲುಣಿಸುವುದನ್ನೇ ಜನನ ನಿಯಂತ್ರಣಕ್ಕೆ ನೈಸರ್ಗಿಕ ವಿಧಾನವಾಗಿ ಉಪಯೋಗಿಸುತ್ತಾರೆ. ಒಂದು ಸಂಶೋಧನೆಯ ಪ್ರಕಾರ ನಿರಂತರವಾಗಿ ಎದೆಹಾಲುಣಿಸುತ್ತಿದ್ದರೆ, ೧೦೦ರಲ್ಲಿ ಒಬ್ಬ ಮಹಿಳೆ ಮಾತ್ರ ಗರ್ಭಿಣಿಯಾಗುತ್ತಾಳೆ, ಅದು ಕಡಿಮೆ ಸಾಧ್ಯತೆ. ವೈದ್ಯರು ನಿಮ್ಮ ಮಗುವಿನ ಆರೋಗ್ಯ ದೃಷ್ಟಿಯಿಂದ ನೀವು ಕನಿಷ್ಠ ೬ರಿಂದ ೮ತಿಂಗಳು ಎದೆಹಾಲುಣಿಸುವುದು ಉತ್ತಮ ಎಂದು ಹೇಳುವರು.

ಹೆರಿಗೆ ನಂತರದ ಮುಟ್ಟು ಹೇಗೆ ವಿಭಿನ್ನವಾಗಿರಬಹುದು?

ನೀವು ಮರಳಿ ನಿಮ್ಮ ಮುಟ್ಟನ್ನು ಪಡೆದಿರುವಿರಿ ಅಥವಾ ಪಡೆಯುವಿರಿ ಆದರೆ ಇದು ನೀವು ಗರ್ಭಧರಿಸುವ ಮೊದಲು ಅನುಭವಿಸಿದ ಹಾಗೆ ಇರುವುದಿಲ್ಲ. ನಿಮ್ಮ ದೇಹವು ಋತುಚಕ್ರಕ್ಕೆ ಮತ್ತೆ ಹೊಂದಿಕೊಳ್ಳಬೇಕು. ಈ ಕೆಳಗಿನ ವ್ಯತ್ಯಾಸಗಳನ್ನು ನೀವು ಅನುಭವಿಸಬಹುದು,

೧.ಸೆಳೆತ - ಮೊದಲಿಗಿಂತ(ಸಾಮಾನ್ಯಕ್ಕಿಂತ) ಜಾಸ್ತಿ ಅಥವಾ ಕಡಿಮೆ ಆಗಬಹುದು.

೨.ಕಡಿಮೆ ಅಥವಾ ಸಣ್ಣ ರಕ್ತ ಕಲೆ.

೩.ಹೆಚ್ಚು ಹರಿವು.

೪.ಹರಿವು ನಿಲ್ಲುವಂತೆ ಭಾಸವಾಗಿ ಶುರುವಾಗುವುದು.

ನಿಮ್ಮ ಋತುಚಕ್ರವನ್ನು ಮುಂದುವರೆಸಿದಂತೆ ಅದು ಸಾಮಾನ್ಯಕ್ಕೆ ಮರಳುತ್ತದೆ. ಮಗುವು ಜನಿಸಿದ ನಂತರ ನಿಮ್ಮ ಗರ್ಭಕಾಲುವೆಯಲ್ಲಿ ಕೆಲವು ಸ್ನಾಯುಗಳು ಮತ್ತು ರಕ್ತಕಲೆಗಳು ಉಳಿದುಕೊಂಡಿರುವುದರಿಂದ ನೀವು ರಕ್ತಸ್ರಾವವನ್ನು ನಿರೀಕ್ಷಿಸಬಹುದು, ಜೊತೆಗೆ ಯೋನಿಯಿಂದ ವಿಸರ್ಜನೆಯನ್ನು ನಿರೀಕ್ಷಿಸಬಹುದು. ಹೆರಿಗೆ ನಂತರ ನಿಮ್ಮ ಮೊದಲ ಮುಟ್ಟಿನ ದಿನದಲ್ಲಿ ಹೆಚ್ಚು ರಕ್ತಸ್ರಾವವನ್ನು ಮತ್ತು ಹೆಪ್ಪುಗಟ್ಟಿದ ರಕ್ತವನ್ನು ನೀವು ನಿರೀಕ್ಷಿಸಬಹುದು. ಕ್ರಮೇಣ ಇದು ಕಡಿಮೆ ಆಗುತ್ತದೆ.

ಈ ಕೆಳಗಿನ ಚಿಹ್ನೆಗಳನ್ನು ನೀವು ಕಂಡರೆ ಎಚ್ಚರಿಕೆವಹಿಸುವುದು ಉತ್ತಮ,

೧.ಪ್ರತಿ ಗಂಟೆಗೆ ಒಂದಕ್ಕಿಂತ ಹೆಚ್ಚು ಪ್ಯಾಡ್ ಅಥವಾ tamponಗಳು ನೆನೆದರೆ(ವದ್ದೆಯಾದರೆ),

೨.ಧಿಡೀರ್ ಆಗಿ ರಕ್ತಸ್ರಾವ ಆಗುವುದು ಮತ್ತು ಸೆಳೆತ ಕಾಣಿಸಿಕೊಳ್ಳುವುದು,

೩.ಜ್ವರ ಬರುವುದು,

೪.ನಿರಂತರವಾಗಿ ರಕ್ತಸ್ರಾವ ಆಗುವುದು ಅದು ೭ದಿನಗಳಾದರೂ.

ಇವುಗಳನ್ನು ನೀವು ಗಮನಿಸಿದರೆ ವೈದ್ಯರನ್ನು ಭೇಟಿ ಮಾಡಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon