Link copied!
Sign in / Sign up
0
Shares

ಹೆರಿಗೆ ನಂತರ ಕಾಡುವ ಸಾಮಾನ್ಯ ತೊಂದರೆಗಳು

ತಾನು ಗರ್ಭಧರಿಸಿದಾಗಿನಿಂದ ತನಗೆ ಆದ ಸಮಸ್ಯೆ ನೋವುಗಳು, ಅನುಭವಿಸಿದ ಹೆಣ್ಣಿಗೆ ಮಾತ್ರ ಗೊತ್ತು. ತನ್ನ ಉದರದೊಳಗೆ ಇನ್ನೊಂದು ಜೀವವನ್ನು ಬೆಳೆಸುವಾಗ ಆಕೆಯು ಸಾಹಸವನ್ನೇ ಮಾಡುತ್ತಾಳೆ. ೯ ತಿಂಗಳು ತನ್ನ ಮುದ್ದಾದ ಕಂದಮ್ಮನನ್ನು ನೋಡಲು ಹಲವು ಸವಾಲುಗಳನ್ನು ಎದುರಿಸಿ ಕಾಯುತ್ತಾಳೆ. ಹೆರಿಗೆಯಾದರೆ ನನ್ನ ಈ ಎಲ್ಲಾ ನೋವುಗಳಿಗೆ ಪರಿಹಾರ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಇರುವ ಮಹಿಳೆಯರು, ಹೆರಿಗೆಯ ನಂತರವೂ ಕೂಡ ಕೆಲವು ಸಮಸ್ಯೆಗಳನ್ನು ಎದುರಿಸಲು ಸಿದ್ಧರಾಗಿರಬೇಕು. ಇವುಗಳನ್ನು ತಿಳಿದು ಬಂದ ಮೇಲೆ ಗುಣಪಡಿಸಿಕೊಳ್ಳಲು ಬದಲು, ಅವು ಬರುವ ಮುಂಚೆಯೇ ಮುನ್ನೆಚ್ಚೆರಿಕೆಗಳನ್ನು ತಗೆದುಕೊಳ್ಳಿ.

ಹಾರ್ಮೋನು

ಶೇ.75ರಷ್ಟು ಮಹಿಳೆಯರಿಗೆ ಹೆರಿಗೆಯ ನಂತರ ತಮ್ಮ ಭಾವನೆಗಳಲ್ಲಿ ಬದಲಾವಣೆ, ಖಿನ್ನತೆ, ಮುಜುಗರ, ಹತಾಶೆ, ನಿದ್ರಾಹೀನತೆ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಹೆರಿಗೆಯ ನಂತರ ಮಹಿಳೆಯ ದೇಹದಲ್ಲಿ ಆಗುವ ಹಾರ್ಮೋನುಗಳ ಬದಲಾವಣೆಯೇ ಇದಕ್ಕೆ ಪ್ರಮುಖ ಕಾರಣ.

ಜನನಾಂಗದಲ್ಲಿ ಸಮಸ್ಯೆ

ಮಗುವಿಗೆ ಜನ್ಮ ನೀಡುವಾಗ ಅದು ಹಿಗ್ಗುವಿಕೆಯಾಗುವುದರಿಂದ ಅಥವಾ ಆಪರೇಷನ್ ಮಾಡಿ ಮಗು ಹೊರತೆಗೆದರೆ ಅದರ ನೋವು ಕೆಲ ದಿನಗಳವರೆಗೆ ಕಂಡುಬರುತ್ತದೆ. ಮತ್ತು ಬಾಣಂತಿಯರಿಗೆ ಶೀತವಾಗದಿರಲಿ ಎಂಬ ಕಾರಣಕ್ಕೆ ಹೆಚ್ಚು ನೀರು ಕೊಡುವುದಿಲ್ಲ ಇದು ಅಥವಾ ಹಾರ್ಮೋನುಗಳ ಬದಲಾವಣೆ ಅದು ಒಣಗುವಂತೆ ಮಾಡಬಹುದು. ಮತ್ತು ಸುಲಭವಾಗಿ ಮೂತ್ರವಿಸರ್ಜನೆ ಆಗದೆ ಇರಬಹುದು.

ದಪ್ಪ ಹೊಟ್ಟೆ

ಗರ್ಭದಲ್ಲಿ ಮಗು ಇದ್ದಾಗ ದಪ್ಪಗಾದ ಹೊಟ್ಟೆ ಮಗು ಹೊರ ಬಂದ ತಕ್ಷಣ ಮೊದಲಿನ ಸ್ಥಿತಿಗೆ ಬರುವುದಿಲ್ಲ, ಹೊಟ್ಟೆಯು ಅದಕ್ಕೆ ಹೊಂದಿಕೊಂಡಿರುತ್ತದೆ, ಅದು ಮೊದಲಿನ ಸ್ಥಿತಿಗೆ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.

ಸ್ತನ ಊತ

ಮೊದಲ ಬಾರಿ ಎದೆಹಾಲುಣಿಸುತ್ತಿರುವ ಹೊಸ ತಾಯಿಯಂದಿರಿಗೆ ಹಾಲುಣಿಸುವಾಗ ಮೊಲೆ ತೊಟ್ಟುಗಳು ನೋವಾಗಬಹುದು. ಸರಿಯಾಗಿ ಎದೆಹಾಲುಣಿಸದಿದ್ದರೆ ಸ್ತನ ಊದಿಕೊಳ್ಳಬಹುದು ಅದರಿಂದ ತಾಯಿಗೆ ತೊಂದರೆಯಾಗಬಹುದು.

ಅಜೀರ್ಣ ಸಮಸ್ಯೆ

ಈ ಸಮಯದಲ್ಲಿ ಜೀರ್ಣಕ್ರಿಯೆ ನಿಧಾನವಾಗಿ ನಡೆಯುವ ಕಾರಣ, ಸಾಮಾನ್ಯವಾಗಿ ಅಜೀರ್ಣ ಸಮಸ್ಯೆ ಕಂಡುಬರಬಹುದು. ಸರಿಯಾಗಿ ಜೀರ್ಣವಾಗದ ಕಾರಣ ಮಲಬದ್ಧತೆ ಅಥವಾ ವಾಂತಿ ಬರಬಹುದು. ಶುಂಠಿಯನ್ನು ಸೇವಿಸುವುದು ಒಳ್ಳೆಯದು. ಸರಿಯಾದ ಸಮಯಕ್ಕೆ ಬೇಕಾದಷ್ಟು ಮಾತ್ರ ಆಹಾರ ಸೇವನೆ ಮಾಡುವುದು ಒಳಿತು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon