Link copied!
Sign in / Sign up
1
Shares

ಹೆರಿಗೆ ನಂತರ ಇದನ್ನು ನೀವು ಮಾಡಲೇಬೇಕು !

ಅಭಿನಂದನೆಗಳು ತಾಯಿ, ನೀವು ಈಗ ಅಮ್ಮ ಎಂಬ ಹೊಸ ಪಟ್ಟವನ್ನು ಅಲಂಕರಿಸಿರುವಿರಿ, ಹೆರಿಗೆಯ ನಂತರ ನಿಮ್ಮ ಮುದ್ದು ಕಂದನ ದರ್ಶನ ನಿಮ್ಮ ಎಲ್ಲಾ ನೋವುಗಳನ್ನು ಮರೆಸುವಂತೆ ಮಾಡಿದೆ. ಆದರೆ ಈಗ ನೀವು ನಿಮ್ಮ ಮುದ್ದು ಕಂದಮ್ಮನ ಮತ್ತು ನಿಮ್ಮ ದೇಹದ ಕಾಳಜಿ ಮತ್ತು ಪೋಷಣೆ ಮಾಡುವುದು ತುಂಬಾ ಮುಖ್ಯವಾಗಿದೆ.

ಹೆರಿಗೆ ನಂತರ ನಿಮ್ಮ ದೇಹ ಹಲವು ಬದಲಾವಣೆಗಳಿಗೆ ಒಳಗಾಗುತ್ತದೆ. ಜೊತೆಗೆ ಇದು ಕೆಲವು ಬೇಡಿಕೆಗಳನ್ನು ತರುವುದರಿಂದ ಅವುಗಳನ್ನು ನೀವು ಒದಗಿಸುವ ಅವಶ್ಯಕತೆ ಇರುತ್ತದೆ.

ಇಲ್ಲಿರುವ ಕೆಲವು ವಿಷಯಗಳನ್ನು ನೀವು ಹೆರಿಗೆಯ ನಂತರ ನೆನಪಿನಲ್ಲಿ ಇರಿಸಿಕೊಂಡಿರಬೇಕು.

ಹೆರಿಗೆ ನಂತರ ಏನನ್ನು ನಿರೀಕ್ಷಿಸಬಹುದು?

ಹೆರಿಗೆಯ ನಂತರ, ನಿಮ್ಮ ದೇಹವು ಭಾವನಾತ್ಮಕ ಮತ್ತು ದೈಹಿಕವಾಗಿ ಹಲವು ಬದಲಾವಣೆಗಳನ್ನು ಕಾಣುತ್ತದೆ.

ದೈಹಿಕವಾಗಿ ನೀವು ಇದನ್ನು ನಿರೀಕ್ಷಿಸಬಹುದು

೧.ಮಲಬದ್ಧತೆ

೨.ನೋವುವುಳ್ಳ ಸ್ತನ

೩.ರಕ್ತ ಹೆಪ್ಪುಗಟ್ಟುವಿಕೆ

೪.ಶಾಖ ಮತ್ತು ಶೀತ

೫.ಮೂತ್ರನಾಳದ ಅಸಂಯಮ

ಭಾವನಾತ್ಮಕವಾಗಿ, ನೀವು ಇದನ್ನು ನಿರೀಕ್ಷಿಸಬಹುದು

೧.ಬೇಬಿ ಬ್ಲೂ

೨.ಪ್ರಸವ ನಂತರ ಖಿನ್ನತೆ

೩.ಕಿರಿಕಿರಿ

೪.ಆತಂಕ

೫.ಮನಸ್ಥಿತಿ ಬದಲಾವಣೆ

೬.ತಪ್ಪು ಮನೋಭಾವ

ಇವುಗಳು ಸಾಮಾನ್ಯವಾಗಿ ಹೊಸ ತಾಯಿಯಂದಿರಲ್ಲಿ ಕಾಣಿಸಿಕೊಳ್ಳುವ ಗುಣಲಕ್ಷಣಗಳಾಗಿವೆ. ನಿಮ್ಮ ದೇಹವು ಹಲವು ಹಾರ್ಮೋನುಗಳ ಮತ್ತು ದೈಹಿಕವಾಗಿ ಬದಲಾವಣೆಯನ್ನು ಕಾಣುತ್ತದೆ, ಮತ್ತು ಅದಕ್ಕೆ ತರುವಾಗಿ ಮತ್ತು ಮಗುವಿನ ಅಗತ್ಯಕ್ಕೆ ತಕ್ಕಂತೆ ನಿಮ್ಮ ದೇಹವು ಹೊಂದಿಕೊಳ್ಳುವುದು.

ಹೆರಿಗೆ ನಂತರ ನೀವು ತಿಳಿದಿರಬೇಕಾದ ವಿಷಯಗಳು

ಹೆರಿಗೆ ನಂತರ ನೀವು ಕೆಲವು ಸಣ್ಣ ವಿಷಯಗಳನ್ನು ಮರೆತಿರಬಹುದು, ಆದರೆ ಇವುಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಹೆರಿಗೆಯ ನಂತರ ಪ್ರತಿ ತಾಯಿಯ ಕರ್ತವ್ಯ. ಅವುಗಳನ್ನು ತಿಳಿಯೋಣ ಬನ್ನಿ.

೧.ನಿಮ್ಮ ದೇಹಕ್ಕೆ ವಿಶ್ರಾಂತಿ ನೀಡಿ

ಪ್ರತಿ ಮಕ್ಕಳು ತಮ್ಮದೇ ಆದ ಸಮಯವನ್ನು ಹೊಂದಿರುವರು. ಅದನ್ನು ಹೊಸ ಪೋಷಕರು ಕೂಡ ಚೆನ್ನಾಗಿ ಅರಿತು ಅದನ್ನು ನಿಭಾಯಿಸುವ ಜವಾಬ್ದಾರಿಯನ್ನು ಕಲಿಯುವರು. ಸಮಾನವ್ಯವಾಗಿ ನವಜಾತ ಶಿಶುವು ಪ್ರತಿ ಮೂರು ಗಂಟೆಗೆ ಒಮ್ಮೆ ಏಳುತ್ತದೆ. ಈ ಸಮಯದಲ್ಲಿ ಮಗುವಿಗೆ ಹಾಲುಣಿಸುವುದು ಮತ್ತು ಶುಚಿ ಮಾಡುವುದನ್ನು ಮಾಡಿದ ನಂತರ ಮಗುವು ಪುನಃ ನಿದ್ರೆಗೆ ಜಾರುತ್ತದೆ.

ನೀವು ಹೆರಿಗೆ ನಂತರ ಕೆಲವು ವಾರಗಳು ಮಗುವಿಗೆ ಹಾಲುಣಿಸುವುದನ್ನು ಬಿಟ್ಟರೆ ಬೇರೆ ಯಾವ ಕೆಲಸಗಳನ್ನು ಮಾಡಬೇಡಿ. ನಿಮ್ಮ ದೇಹಕ್ಕೆ ಸಂಪೂರ್ಣ ವಿಶ್ರಾಂತಿಯನ್ನು ನೀಡಿ.

ಮಗುವು ಮಲಗಿದಾಗ ನೀವು ಮಲಗಿ ಮಗುವು ಎಚ್ಚರವಿರುವಾಗ ನೀವು ಎಚ್ಚರವಾಗಿರಲು ಪ್ರಯತ್ನಿಸಿ.

ನಿಮ್ಮ ಮಗುವನ್ನು ನಿಮ್ಮ ಹತ್ತಿರದಲ್ಲೇ ಮಲಗಿಸಿಕೊಳ್ಳಿ. ಪದೇ ಪದೇ ನೀವು ಎದ್ದು ಕೂತು ಮಾಡಬೇಡಿ.

ಸ್ವಲ್ಪ ದೂರ ನಡೆದಾಡಿ. ಕೆಲವು ಸರಳ ವ್ಯಾಯಾಮವನ್ನು ಅಥವಾ ಕೈ ಕಾಲು ಆಡಿಸುವುದನ್ನು ಮಾಡಿ.

೨.ನಿಮ್ಮ ದೇಹಕ್ಕೆ ಪೋಷಕತ್ವ ಒದಗಿಸಿ

ಪೌಷ್ಟಿಕಾಂಶಗಳ ಸೇವನೆಯಿಂದ ನೀವು ಬೇಗನೆ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ.

ವೈದ್ಯರು ಹೇಳುವಂತೆ ನಿಮಗೆ ಹಸಿವಾದಾಗಲೆಲ್ಲಾ ನೀವು ಊಟ ಮಾಡಿ.

ನಿಮಗೆ ಹಸಿವಾದಾಗ ಆರೋಗ್ಯಕರವಾದ ಯಾವುದೇ ಆಹಾರವನ್ನು ನೀವು ಸೇವಿಸಬಹುದು.

ಹೆಚ್ಚು ಹಣ್ಣು, ಹಸಿರು ತರಕಾರಿ, ಧಾನ್ಯಗಳನ್ನು ಸೇವಿಸಿ.

ನಿಮಗೆ ಸಹಾಯದ ಅಗತ್ಯ ಎನಿಸಿದರೆ ನೀವು ಯಾವುದೇ ಸಂಕೋಚ ಅಥವಾ ಮುಜುಗರ ಪಡದೆ ನಿಮ್ಮ ಆಪ್ತರ ಸಹಾಯವನ್ನು ಪಡೆಯಿರಿ. ಚಿಂತಿಸಬೇಡಿ, ಈ ಸಮಯದಲ್ಲಿ ನಿಮ್ಮ ಬಳಿ ಯಾರಾದರೂ ಒಬ್ಬರು ಇರುವುದು ಉತ್ತಮ ಮತ್ತು ಈ ಸಮಯದಲ್ಲಿ ನಿಮಗೆ ಬೇರೆಯವರ ಸಹಾಯದ ಅಗತ್ಯವಿರುತ್ತದೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon