Link copied!
Sign in / Sign up
3
Shares

ಹೆರಿಗೆ ನಂತರ ಶೇಕಡಾ 90ರಷ್ಟು ಮಹಿಳೆಯರು ಇವುಗಳನ್ನು ಅನುಭವಿಸುವರು !

ಅಭಿನಂದನೆಗಳು ನೀವು ಈಗ “ಅಮ್ಮ” ಎಂಬ ಹೊಸ ಸಾಟಿಯಿಲ್ಲದ ಪದವಿಯನ್ನು ಪಡೆದುಕೊಂಡಿರುವಿರಿ. ನೀವು ಮಗುವಿಗೆ ಜನ್ಮ ನೀಡಿದ ಬಳಿಕ ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ದುರ್ಬಲರಾಗಿರುವಿರಿ. ಗರ್ಭಾವಸ್ಥೆ ಮತ್ತು ಹೆರಿಗೆ ಮಹಿಳೆಯ ದೇಹದಲ್ಲಿ ತೀವ್ರ ಬದಲಾವಣೆಯನ್ನು ತರುತ್ತದೆ.

ನಿಮ್ಮ ದೇಹವನ್ನು ಮರಳಿ ಪಡೆಯುವುದು ನೀವು ದೂರದ ಕನಸು ಎಂದು ಭಾವಿಸಿರಬಹುದು. ಪ್ರತಿ ಮಹಿಳೆಯ ಕನಸು ತನ್ನ ಮೊದಲ ದೇಹವನ್ನು ಹೆರಿಗೆ ಬಳಿಕ ಬೇಗನೆ ಪಡೆದುಕೊಳ್ಳಬೇಕು ಎಂಬುದು. ಬೇಗನೆ ನಿಮ್ಮ ದೇಹವನ್ನು ಮೊದಲಿನ ಸ್ಥಿತಿಗೆ ತರಲು ಕಷ್ಟ ಆದರೆ ಸರಿಯಾದ ವಿಧಾನ ಮತ್ತು ಸಮಯವನ್ನು ನೀಡಿದರೆ ಖಂಡಿತ ನೀವು ನಿಮ್ಮ ಮೊದಲಿನ ದೇಹಸ್ಥಿತಿಯನ್ನು ಪಡೆಯಬಹುದು.

ಹೆರಿಗೆ ನಂತರ ಮಹಿಳೆ ಎದುರಿಸುವ ಸಾಮಾನ್ಯ ಸಮಸ್ಯೆಗಳೆಂದರೆ

೧.ಬೊಜ್ಜು ಅಥವಾ ದಪ್ಪ ಹೊಟ್ಟೆ

ಮಗುವಿಗೆ ಜನ್ಮ ನೀಡಿದ ನಂತರ ಬೇಗನೆ ಗರ್ಭಾವಸ್ಥೆಯ ತೂಕವನ್ನು ಕಳೆದುಕೊಳ್ಳುವಿರಿ, ಆದರೆ ಉಬ್ಬಿದ ಹೊಟ್ಟೆ ನಿಮಗೆ ಸಮಸ್ಯೆಯಾಗಿ ಕಾಡಬಹುದು. ಗರ್ಭವು ತನ್ನ ಪೂರ್ವಗರ್ಭಾವಸ್ಥೆಯ ಸ್ಥಿತಿಗೆ ಮರಳು ೬-೮ ವಾರಗಳ ಸಮಯವನ್ನು ತೆಗೆದುಕೊಳ್ಳುತ್ತದೆ.

ಈ ಸಮಯದಲ್ಲಿ ನೀವು ತಾಳ್ಮೆಯಿಂದ ಕೆಲ ಸಮಯ ಕಾದು ನಂತರ ವ್ಯಾಯಾಮ ಮತ್ತು ಸಮತೋಲನ ಆಹಾರ ಕ್ರಮಗಳಿಂದ ಮರಳಿ ನಿಮ್ಮ ೦ ಸೈಜ್ ಹೊಟ್ಟೆಯನ್ನು ಪಡೆಯಿರಿ.

೨.ಜೋತುಬಿದ್ದ ಮೊಲೆ

ಹೊಸ ತಾಯಿಯಂದಿರು ಅನುಭವಿಸುವ ಮತ್ತೊಂದು ಸಮಸ್ಯೆಯೆಂದರೆ ಕೆಳಗೆ ಬಂದ ಸ್ತನ. ಗರ್ಭಾವಸ್ಥೆಯಲ್ಲಿ ಮತ್ತು ಎದೆಹಾಲುಣಿಸುವ ಸಮಯದಲ್ಲಿ ಸ್ತನದಲ್ಲಿರುವ ಸ್ನಾಯುಗಳು ದೊಡ್ಡದಾಗುವಂತೆ ಹಾರ್ಮೋನುಗಳು ಮಾಡುತ್ತವೆ, ಇದು ಸ್ತನ ದೊಡ್ಡದಾಗಿ ಮತ್ತು ತುಂಬಿದ ಹಾಗೆ ಕಾಣಿಸುತ್ತದೆ. ನಂತರ ಇದು ಕಡಿಮೆ ಆಗುತ್ತದೆ ಆದರೆ ಚರ್ಮ ತನ್ನ ಸ್ಥಿತಿಸ್ಥಾಪಕತ್ವವನ್ನು ಕಳೆದುಕೊಳ್ಳುತ್ತದೆ ಆದ್ದರಿಂದ ಸ್ತನವು ಜೋತುಬಿದ್ದ ಹಾಗೆ ಕಾಣಿಸುತ್ತದೆ.

ಮೇಲ್ಮುಖವಾಗಿ ಬೆಚ್ಚನೆಯ ಎಣ್ಣೆಯಿಂದ ಮಸಾಜ್ ಮಾಡುವುದು ಇದಕ್ಕೆ ಪರಿಹಾರ. ವ್ಯಾಯಾಮ ಮಾಡುವುದರಿಂದ ಇದನ್ನು ಸರಿಪಡಿಸಿಕೊಳ್ಳಬಹುದು. ಸರಿಯಾದ ನಿಮಗೆ ಫಿಟ್ ಆದ ಬ್ರಾ ಧರಿಸಿ.

೩.ಯೋನಿಯಲ್ಲಿ ವಿಸರ್ಜನೆ

ಯೋನಿ ವಿಸರ್ಜನೆ ರಕ್ತ ಮತ್ತು ಗರ್ಭಕೋಶದ ಸ್ನಾಯುವಿನಲ್ಲಿ ಉಳಿದಿರುವ ಕಣಗಳಿಂದ ಆಗುತ್ತದೆ. ಹೆರಿಗೆ ನಂತರ ಇದು ಸಾಮಾನ್ಯ.

ಇದನ್ನು ನೀವು ಅನುಭವಿಸಿದರೆ, ಹೆಚ್ಚು ಕಾಳಜಿಯನ್ನು ವಹಿಸಬೇಕು ಮತ್ತು ದಿನಕ್ಕೆ ಹಲವು ಪ್ಯಾಡ್ ಗಳನ್ನು ಬಳಸಿ. Tampons ಅನ್ನು ಬಳಸಬೇಡಿ ಅವು ಈ ಸಮಯದಲ್ಲಿ ಸೋಂಕನ್ನು ಉಂಟುಮಾಡಬಹುದು.

ಶ್ರಮದಾಯಕ ಕೆಲಸಗಳನ್ನು ಮಾಡಬೇಡಿ, ಇದು ಸ್ರಾವವನ್ನು ಹೆಚ್ಚುಸುತ್ತದೆ. ನಿಮ್ಮ ದೇಹಕ್ಕೆ ಹೆಚ್ಚು ವಿಶ್ರಾಂತಿಯನ್ನು ನೀಡಿ.

೪.ಚರ್ಮದ ಬಣ್ಣ ಮಸುಕಾಗುವುದು

ಹೆರಿಗೆ ನಂತರ ಕೆಲವು ಮಹಿಳೆಯರು ತಮ್ಮ ತ್ವಚೆಯ ಹೊಳಪನ್ನು ಕಳೆದುಕೊಳ್ಳುವರು. ಮತ್ತು ಕೆಲವು ಮಹಿಳೆಯರು ತ್ವಚೆಯಲ್ಲಿ ಕಲೆಯನ್ನು ಕಾಣುವರು.

ಇದಕ್ಕೆ ದೇಹದಲ್ಲಿ ಬದಲಾಗುವ ಹಾರ್ಮೋನುಗಳೇ ಕಾರಣ, ಇದು ತ್ವಚೆ ಒಣಗುವಂತೆ ಮಾಡುತ್ತದೆ. ಇದು ತತಕಾಲಿಕವಾಗಿದ್ದು, ಕೆಲ ದಿನಗಳ ಬಳಿಕ ಸಂಪೂರ್ಣವಾಗಿ ಸರಿಹೋಗುತ್ತದೆ.

ಲೋಗಸರ ಮತ್ತು ಮುಂತಾದ ನೈಸರ್ಗಿಕ ವಿಧಾನಗಳನ್ನು ಬಳಸಿ ತ್ವಚೆಯ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ.

೫.ಜನನಾಂಗ ಒಣಗುವುದು

ಈಸ್ಟ್ರೋಜೆನ್ ಮಟ್ಟವನ್ನು ಸಮತೋಲನದಲ್ಲಿ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ರಾತ್ರಿ ಒದ್ದೆಯಾಗುವುದು ಒಣಗುವುದಕ್ಕೆ ಇದೆ ಕಾರಣ. ನೀವು ಹೆಚ್ಚು ನೀರನ್ನು ಕುಡಿಯುವುದು ಇದಕ್ಕೆ ಉತ್ತಮ ಪರಿಹಾರ.ದೇಹಕ್ಕೆ ಅವಶ್ಯವಾದ ಆರೋಗ್ಯಕರ ನೀರಿನಾಂಶ ಇರುವ ಆಹಾರಗಳನ್ನು ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು.

೬.ಊದಿಕೊಂಡ ನರಗಳು

ಗರ್ಭಾವಸ್ಥೆಯಲ್ಲಿ ಕೆಲವು ಮಹಿಳೆಯರು ಹಿಗ್ಗಿದ ರಕ್ತನಾಳಗಳನ್ನು ಅನುಭವಿಸುವರು, ಅದು ಮೇಲ್ಬಾಗದ ಚರ್ಮದ ಬಳಿ ಇರುವ ನಾಳಗಳಲ್ಲಿ, ಇದು ಹೆರಿಗೆ ನಂತರ ಸರಿಹೋಗುತ್ತದೆ. ಆದರೆ ಇದು ಸರಿಹೋಗಲು ಕೆಲವು ಮಹಿಳೆಯರಲ್ಲಿ ಕೆಲವು ತಿಂಗಳುಗಳ ಸಮಯಯನ್ನು ತೆಗೆದುಕೊಳ್ಳುತ್ತದೆ.

ಸ್ವಲ್ಪ ದೂರ ನಡೆಯುವುದು, ಕಾಲನ್ನು ಆಡಿಸುವುದು, ಸುಲಭ ವ್ಯಾಯಾಮ ಮಾಡುವುದರಿಂದ ಇದನ್ನು ಬೇಗನೆ ಸರಿಪಡಿಸಿಕೊಳ್ಳಬಹುದು.

ಸಲಹೆಗಳು

೧.ಹೆಚ್ಚು ವಿಶ್ರಾಂತಿ ಪಡೆಯಿರಿ

೨.ಬೇರೆಯವರಿಂದ ಸಹಾಯ ತೆಗೆದುಕೊಳ್ಳಿ.

೩.ಹಸಿರು ಎಲೆಯುಳ್ಳ ತರಕಾರಿ, ಸೊಪ್ಪು, ಹಣ್ಣು ಮತ್ತು ದಾನ್ಯಗಳನ್ನು ಒಳಗೊಂಡ ಸಮತೋಲನ ಆಹಾರವನ್ನು ಸೇವಿಸಿ.

೪.ನಿಮ್ಮ ದೇಹಕ್ಕೆ ಅವಶ್ಯವಿರುವಷ್ಟು ನೀರನ್ನು ಕುಡಿಯಿರಿ.

೫.ಪ್ರತಿದಿನ ಸ್ವಲ್ಪ ಸಮಯ ನಡೆಯಿರಿ.

೬.ವೈದ್ಯರ ಸಲಹೆ ನೀಡಿದ ಮೇಲೆ ವ್ಯಾಯಾಮ ಮಾಡಿರಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon