Link copied!
Sign in / Sign up
2
Shares

ಹೆರಿಗೆ ನಂತರ ಈ 5 ಲಕ್ಷಣಗಳನ್ನು ನಿರ್ಲಕ್ಷಿಸಲೇ ಬಾರದು!

ಪ್ರಸವ ಹಾಗೂ ಮಗುವಿನ ಜನನವು ಜೀವನದ ಅತ್ಯಂತ ಮಹತ್ವಪೂರ್ಣ ಹಾಗೂ ಆನಂದದಾಯಕ ಸಮಯ. ಒಂಭತ್ತು ತಿಂಗಳುಗಳು ಅನುಭವಿಸಿದ ಕಾತರತೆ, ಆಯಾಸ, ಸಂಕಟ, ದುಃಖ ದುಮ್ಮಾನಗಳಿಗೆ ವಿದಾಯ ಹಾಡಿ,ಜೀವನದ ಮಧುರ ಸಂಗೀತವನ್ನು ಆಲಿಸುವ ಸಮಯ. ಎಷ್ಟೇ ಆನಂದ ಕಡಲಲ್ಲಿ ತೇಲಾಡಿದರೂ, ನೀವು ಅಲಕ್ಷಿಸಬಾರದಂತಹ ತಕ್ಷಣವೇ ಪರಿಶೋಧಿಸಲ್ಪಡಬೇಕಾದಂತಹ ಕೆಲವು ಲಕ್ಷಣಗಳ ಬಗ್ಗೆ ತಿಳಿಯೋಣ ಬನ್ನಿ.....

(೧) ತಲೆನೋವು ಅಥವಾ ಸೊಂಟ ನೋವು

ಪ್ರಸವದ ಸಮಯಗಳಲ್ಲಿ ನೀಡಲಾಗುವ ಅರಿವಳಿಕೆ ಮದ್ದು ಅಥವಾ ಎಪಿಡ್ಯುರಲ್ ಗಳ ಇನ್ನಿತರ ಚುಚ್ಚುಮದ್ದುಗಳ ಪಾರ್ಶ್ವಫಲದಿಂದಾಗಿ ಕೆಲವೊಮ್ಮೆ ತಲೆನೋವು ಅಥವಾ ಸೊಂಟನೋವು ಕಾಣಿಸಿಕೊಳ್ಳಬಹುದು. ಆದ ಕಾರಣ ತಲೆನೋವು ಅಥವಾ ಸೊಂಟ ನೋವು ಕಾಣಿಸಿಕೊಂಡರೆ ತಡಮಾಡದೇ ವೈದ್ಯರಲ್ಲಿ ಚಿಕಿತ್ಸೆ ಮಾಡಿಸಿಕೊಳ್ಳಿ.ಕೆಲವೊಮ್ಮೆ ಈ ಸೊಂಟ ನೋವು, ಪ್ರಸವ ಸಂಬಂಧಿತ ಹೆಚ್ಚಿನ ರಕ್ತದೊತ್ತಡದ ಫಲವೂ ಆಗಿರಬಹುದು.

 
(೨) ವಿಭ್ರಾಂತರಾಗುವುದು ಅಥವಾ ಕೆಟ್ಟ ಆಲೋಚನೆಗಳು ತುಂಬಿರುವುದು

ಆಗಾಗ ಮೂಡಿನಲ್ಲಿ ಬದಲಾವಣೆಯಾಗುತ್ತಿದ್ದರೆ, ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ತುಂಬಿರುತ್ತಿದ್ದರೆ ಅಥವಾ ಮಾನಸಿಕ ತೊಂದರೆಗೊಳಗಾಗುತ್ತಿದ್ದರೆ, ಅದು ಪ್ರಸವಾನಂತರದ ಡಿಪ್ರೆಷನ್ ಅಥವಾ ವಿಷಾದ ರೋಗವಾಗಿರಬಹುದು. ಇದರ ಬಗ್ಗೆ ಮಾಹಿತಿಯಿರದ ಜನರು, ನಂತರ ಹಲವಾರು ದೊಡ್ಡ ದುರಂತಗಳಿಗೊಳಗಾಗುವರು. ಆದಕಾರಣ, ವೈದ್ಯರ ಸರಿಯಾದ ಸಲಹೆಯಂತೆ ಮುಂಜಾಗರೂಕತಾ ಕ್ರಮಗಳನ್ನು ಪಾಲಿಸುವುದು ಒಳ್ಳೆಯದು.

 
(೩) ಅತಿ ರಕ್ತಸ್ರಾವ

ಪ್ರಸವಾನಂತರ ನಾವು ಜಾಗರೂಕರಾಗಿರಬೇಕಾದ ಇನ್ನೊಂದು ಅವಸ್ಥೆಯೇ ಅತಿ ರಕ್ತಸ್ರಾವ. ಪ್ರಸವದ ನಂತರ ಕೆಲವು ದಿನಗಳಲ್ಲಿ ರಕ್ತ ಸ್ರಾವವಾಗುವುದು ಸಾಮಾನ್ಯ. ಆದರೆ ಅಸಾಮಾನ್ಯವಾದ ರಕ್ತಸ್ರಾವವುಂಟಾದರೆ ವೈದ್ಯರ ಚಿಕಿತ್ಸೆಗೊಳಗಾಗಬೇಕು.

 
(೪) ಎದೆ ನೋವು

ಎದೆ ಹಾಲುಣಿಸುವಾಗ, ಎದೆ ನೋವು ಅಥವಾ ಉಸಿರಾಟದ ತೊಂದರೆಯನ್ನು ಅನುಭವಿಸುವುದು ಕೆಲವೊಮ್ಮೆ ಪ್ರಸವದ ವೇಳೆಯಲ್ಲಿ ಯಾವುದಾದರೂ ಸೋಂಕಿಗೊಳಗಾದ ಕಾರಣವಾಗಿರಬಹುದು. ತಡಮಾಡದೇ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆಯನ್ನು ಕಂಡುಕೊಳ್ಳಿ.

 
(೫) ತೀವ್ರ ಜ್ವರ

ಜ್ವರ ವೆನ್ನುವುದು ಶರೀರವು ಅಸೌಖ್ಯಕ್ಕೊಳಗಾಗಿರುವ ಸೂಚನೆಯಾಗಿರಬಹುದು ಅಥವಾ ಮೊದಲೇ ಕಾಣಿಸಿಕೊಂಡ ಅಸೌಖ್ಯವು,ನಮ್ಮ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿದೆಯೆಂಬುದರ ಬಗೆಗಿನ ಸೂಚನೆಯೂ ಆಗಿರಬಹುದು. ಆಂಟಿಬಾಡಿಸುಗಳ ತೀವ್ರವಾದ ಪ್ರವರ್ತನೆಗಳಿಂದಲೂ ಆಗಿರಬಹುದು. ಆದ ಕಾರಣ ಜ್ವರ ಕಾಣಿಸಿಕೊಂಡಾಗ ತಡಮಾಡದೇ ವೈದ್ಯರನ್ನು ಭೇಟಿ ಮಾಡುವುದು ಒಳಿತು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon