Link copied!
Sign in / Sign up
3
Shares

ನಿಮಗೂ ಹೆರಿಗೆ ನೋವಿನ ಭಯವೇ? ಹಾಗಿದ್ದರೆ ಇದನ್ನ ಓದಿ

ನಿಮ್ಮ ಯೋನಿಯಿಂದ ಒಂದು ಪುಟ್ಟ, ಹೊಸ ಜೀವವನ್ನ ಹೊರಹಾಕಬೇಕೆಂಬ ಯೋಚನೆಯು ನಿಮ್ಮಲ್ಲಿ ಸ್ವಲ್ಪ ಭಯ ಹುಟ್ಟಿಸಿದ್ದರೆ, ನೀವು ಖಂಡಿತವಾಗಿ ಒಬ್ಬಂಟಿಯಲ್ಲ. ಆದರೆ ನೀವು ಒಂದನ್ನು ತಿಳಿಯಬೇಕು : ಹೆರಿಗೆ ನೋವಿನ ಭಯವನ್ನು ನೀವು ಇಟ್ಟುಕೊಂಡಷ್ಟು ನಿಮ್ಮ ನೋವಿನ ಹೆರಿಗೆಯೂ ಇನ್ನಷ್ಟು ವಿಳಂಬವಾಗುತ್ತದೆ. ವಾಸ್ತವದಲ್ಲಿ, ಹೆರಿಗೆ ನೋವಿನ ಬಗ್ಗೆ ಹೆದರಿಕೊಳ್ಳುವ ಹೆಂಗಸರು ತಮ್ಮ ಹೆರಿಗೆ ಸಂಪೂರ್ಣಗೊಳಿಸಲು ಹೆದರಿಕೊಳ್ಳದ ಹೆಂಗಸರಿಗಿಂತ 1 ಘಂಟೆ 32 ನಿಮಿಷಗಳಷ್ಟು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ ಎಂದು ಹೇಳುತ್ತದೆ ಯೂರೋಪಿನ ಒಂದು ಅಧ್ಯಯನ.

ಹೆರಿಗೆ ನೋವಿನ ಬಗೆಗಿನ ಕೊಂಚ ಮಟ್ಟದ ಭಯ ಸಹಜ. ಆದರೆ ಕೆಲವು ಹೆಂಗಸರು ಇದರ ಬಗ್ಗೆ ಅಪಾರ ಆತಂಕ ಹೊಂದುವರು ಹಾಗು ಇದು ಅವರ ಹೆರಿಗೆ ಸಮಯದಲ್ಲಿ ಅವರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಒತ್ತಡಕ್ಕೆ ಒಳಗಾದಾಗ ಬಿಡುಗಡೆ ಹೊಂದುವ ಹಾರ್ಮೋನ್ ಆದ ಎಪಿನೆಫ್ರೈನ್ ಭಯಗೊಂಡಿರುವ ಗರ್ಭಿನಿಯರಲ್ಲಿ ಹೆಚ್ಚೆಚ್ಚು ಬಿಡುಗಡೆ ಹೊಂದುತ್ತದೆ, ಇದು ಗರ್ಭಕೋಶದ ಸಂಕೋಚನಗಳಿಗೆ ತಡೆಯೊಡ್ದುತ್ತದೆ. ಇದು ಹೆರಿಗೆಯನ್ನ ಮತ್ತಷ್ಟು ದೀರ್ಘವಾದ ಪ್ರಕ್ರಿಯೆಯನ್ನಾಗಿ ಮಾಡುತ್ತದೆ.

ಭಯವನ್ನ ಕಡಿಮೆ ಮಾಡುವುದು ಹೇಗೆ?

ಅದೃಷ್ಟವಶಾತ್, ಭಾವೀ ತಾಯಂದಿರು ಅವರ ಭಯವನ್ನ ಕಡಿಮೆ ಮಾಡಿಕೊಳ್ಳಲು ಕೆಲವು ದಾರಿಗಳಿವೆ.

೧. ಸೂಲಗಿತ್ತಿಯನ್ನು ನೇಮಿಸಿಕೊಳ್ಳಿ

ಇದರೊಂದಿಗೆ ಕೇವಲ ನೀವೊಬ್ಬರೇ ವ್ಯವಹರಿಸಬೇಡಿ. ಕಾಕ್ರೆನ್ ಸಮ್ಮರಿಸ್ ಅವರು ನಡೆಸಿದ ೧೫೦೦೦ ಗರ್ಭಿಣಿ ಹೆಂಗಸರ ಮೇಲಿನ ಅಧ್ಯಯನದ ಪ್ರಕಾರ, ಸೂಲಗಿತ್ತಿಯ ಸಹಾಯ ಪಡೆದ ಹೆಂಗಸರು ಹೆಚ್ಚು ಸಮರ್ಥವಾಗಿ ಹಾಗು ತಮ್ಮ ನಿಯಂತ್ರಣದಲ್ಲಿ ಹೆರಿಗೆ ಮುಗಿಸಿದರು ಎಂಬುದು ತಿಳಿದು ಬಂದಿದೆ. ಅಲ್ಲದೆ ಹೀಗೆ ಸಹಾಯ ಪಡೆದವರಿಗೆ ಹೆಚ್ಚು ನೋವು ನಿವಾರಕ ಔಷಧಿಗಳು ಬೇಕಾಗಿರಲಿಲ್ಲ ಹಾಗು ಇವರ ಹೆರಿಗೆಗಳು ತೃಪ್ತಿಕರವಾಗಿ ಹಾಗು ಸ್ವಲ್ಪ ಅವಧಿಯಲ್ಲೇ ಆಗಿದ್ದವು.

ಬೆಂಬಲವನ್ನ ನಿಮ್ಮ ಸಂಗಾತಿ, ಅಪ್ಪ, ಅಮ್ಮ, ಅಕ್ಕ ಅಥವಾ ಯಾರಾದರು ನೀಡಬಹುದು. ಆದರೆ ಸೂಲಗಿತ್ತಿಯರಂತೆ ಹೆರಿಗೆ ಪ್ರಕ್ರಿಯೆ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವವರು ಜೊತೆಯಲ್ಲೇ ಇರುವುದು ತುಂಬಾ ಸಹಾಯಕಾರಿ.

೨. ನೀವು ಹೆರಿಗೆಗೆ ಹೋಗುವ ಮುನ್ನ ನಿಮ್ಮ ಭಯಗಳನ್ನ ಹಂಚಿಕೊಳ್ಳಿ

ಹೆರಿಗೆ ನೋವಿನ ಬಗೆಗಿನ ನಿಮ್ಮ ಭಯವನ್ನ ನಿಮ್ಮ ಹೆರಿಗೆ ತಜ್ಞರೊಂದಿಗೆ ಹಂಚಿಕೊಳ್ಳಿ. ಅವರು ನಿಮಗೆ ಲೇಬರ್ ಅಂಡ್ ಡೆಲಿವರಿ ರೂಮಿನ ಒಂದು ಸುತ್ತು ಹಾಕಿ ಬರಲು ಅಥವಾ ಹೆಂಗಸರ ಆರೋಗ್ಯ ತಜ್ಞರ ಭೇಟಿ ಮಾಡಲು ಸೂಚಿಸಬಹುದು. ಹೆರಿಗೆಯ ವೇಳೆ ಹೆಂಗಸರು ಖಂಡಿತವಾಗಿ ಆತಂಕಕ್ಕೆ ಒಳಗಾಗಬಾರದು ಎಂದು ಹೇಳುತ್ತಾರೆ ವೈದ್ಯರು. ನೀವು ನಿಮ್ಮ ಹೆರಿಗೆ ತಜ್ಞರೊಂದಿಗೆ ಮಾತನಾಡಿ, ಅವರು ನಿಮ್ಮ ಭಯಗಳನ್ನ ನಿವಾರಿಸಲು ಸಹಾಯ ಮಾಡಿ ನಿಮ್ಮಲ್ಲಿ ವಿಶ್ವಾಸ ತುಂಬುವರು.  

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon