Link copied!
Sign in / Sign up
13
Shares

ಈ 6 ಸರಳ ಮನೆಮದ್ದುಗಳಿಂದ ಇನ್ನುಮುಂದೆ ಮನೆಮಂದಿಯ ತಲೆ ಹೇನಿನ ಸಮಸ್ಯೆ ಮಾಯವಾಗುತ್ತದೆ !

ತಲೆಯ ಹೇನುಗಳು ಪರೋಪಜೀವಿಗಳು ಆಗಿದ್ದು ಇವುಗಳು ನಮ್ಮ ರಕ್ತವನ್ನು ಸೇವಿಸಿಕೊಂಡು ಬದುಕುತ್ತವೆ. ಇದು ಚಿಕ್ಕ ಮಕ್ಕಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಒಂದ ತೊಂದರೆ. ವಾಸ್ತವದಲ್ಲಿ ನೀವು ಬೆಲೆಬಾಳುವ ಶ್ಯಾಂಪೂಗಳನ್ನು ಬಳಸಿ ಇವುಗಳನ್ನು ಹೋಗಲಾಡಿಸಬಹುದು. ಆದರೆ ಬಹುತೇಕ ಸಮಯ ಈ ಶ್ಯಾಂಪೂಗಳು ಹಾನಿಕಾರಕ ರಾಸಾಯನಿಕ ಪದಾರ್ಥಗಳನ್ನು ಹೊಂದಿದ್ದು, ಇವು ಮಕ್ಕಳಿಗೆ ಸೂಕ್ತವಾಗಿರುವುದಿಲ್ಲ. ಹೀಗಾಗಿ, ಮನೆಯಲ್ಲೇ ತಯಾರಿಸಬಹುದಾದ ಮದ್ದುಗಳಿಂದಲೇ ತಲೆಯ ಹೇನುಗಳನ್ನ ಮತ್ತು ಅವುಗಳ ಮೊಟ್ಟೆಗಳನ್ನು ತೊಲಗಿಸಬಹುದು. ಹಾಗಿದ್ದರೆ, ಅಂತಹ ಮನೆಮದ್ದುಗಳು ಯಾವು ಎಂದು ನೋಡೋಣ ಬನ್ನಿ :

೧. ತೆಂಗಿನ ಎಣ್ಣೆ

ತೆಂಗಿನ ಎಣ್ಣೆಯು ಹೇನುಗಳಿಗೆ ಒಂದು ಕೂದಲ ಬುಡದಿಂದ ಇನ್ನೊಂದರ ಬುಡಕ್ಕೆ ಸುಲಭವಾಗಿ ಹೋಗಿ ಸೇರಲು ತಡೆಯೊಡ್ಡಿ, ಅವುಗಳ ಸಂತತಿ ಹೆಚ್ಚದಂತೆ ನೋಡಿಕೊಳ್ಳುತ್ತವೆ. ಮೊದಲು ನಿಮ್ಮ ಕೂದಲನ್ನು ಆಪಲ್ ವಿನೇಗರ್ ಇಂದ ತೊಳೆಯಿರಿ ಮತ್ತು ಒಣಗಲು ಬಿಡಿ. ನಂತರ ನಿಮ್ಮ ಕೂದಲು ಮತ್ತು ನೆತ್ತಿಗೆ ಚೆನ್ನಾಗಿ ತೆಂಗಿನ ಎಣ್ಣೆಯನ್ನು ಲೇಪಿಸಿ.

ಲೇಪಿಸಿದ ನಂತರ ತಲೆಗೆ ಟವೆಲ್ ಅಥವಾ ಇನ್ನ್ಯಾವುದಾದರೂ ಬಟ್ಟೆಯನ್ನು ಕಟ್ಟಿಕೊಂಡು ರಾತ್ರಿ ಮಲಗಿ. ಎದ್ದಮೇಲೆ (ಅಂದರೆ 6-8 ಗಂಟೆಗಳ ನಂತರ) ಅದನ್ನು ಬಿಚ್ಚಿ, ತಲೆ ಬಾಚಿಕೊಳ್ಳಿ ಮತ್ತು ಸಾಮಾನ್ಯ ಶ್ಯಾಂಪೂ ಬಳಸಿ ತಲೆ ತೊಳೆದುಕೊಳ್ಳಿ. ಹೀಗೆ ಪ್ರತಿದಿನ ಒಂದು ವಾರದವರೆಗೆ ಮಾಡಿದರೆ, ತಲೆಯ ಹೇನನ್ನು ಸಂಪೂರ್ಣವಾಗಿ ತೊಲಗಿಸಬಹುದು.


೨. ಎಳ್ಳೆಣ್ಣೆ

ಎಳ್ಳೆಣ್ಣೆಯಲ್ಲಿ ಬ್ಯಾಕ್ಟೀರಿಯಾ ಮತ್ತು ಫಂಗೈ ವಿರೋಧಿ ಅಂಶಗಳನ್ನ ಮತ್ತು ನೈಸರ್ಗಿಕ ಕೀಟನಾಶಕ ಗುಣಗಳನ್ನು ಹೊಂದಿದ್ದು, ಹೇನುಗಳನ್ನ ತೊಲಗಿಸಲು ಬಳಸಬಹುದು. ಕಾಲು ಕಪ್ ಅಷ್ಟು ಎಳ್ಳೆಣ್ಣೆ, ಎಳ್ಳೆಣ್ಣೆಯ ಅರ್ಧದಷ್ಟು ಬೇವಿನ ಎಣ್ಣೆ, ಅರ್ಧ ಸ್ಪೂನ್ ನೀಲ್ಗಿರಿ ಎಣ್ಣೆ ಮತ್ತು ಹತ್ತು ಚಮಚ ಲ್ಯಾವೆಂಡರ್ ಎಣ್ಣೆಯನ್ನು ಬೆರೆಸಿ ಚೆನ್ನಾಗಿ ಕಲಿಸಿ.

ಇಲ್ಲಿಯೂ ಕೂಡ ನಿಮ್ಮ ತಲೆಯನ್ನು ಆಪಲ್ ವಿನೇಗರ್ ಇಂದ ತೊಳೆದು, ಎಳ್ಳೆಣ್ಣೆಯ ಮಿಶ್ರಣವನ್ನು ತಲೆಗೆ ಲೇಪಿಸಿಕೊಂಡು ರಾತ್ರಿಯೆಲ್ಲಾ ಹಾಗೆಯೇ ಬಿಡಿ. ಬೆಳಗ್ಗೆ ಸಣ್ಣ ಹಲ್ಲಿನ ಬಾಚಣಿಕೆಯಲ್ಲಿ ತಲೆಯನ್ನು ಬಾಚಿ, ಶ್ಯಾಂಪೂವಿನಿಂದ ತೊಳೆಯಿರಿ.


೩. ಬೆಳ್ಳುಳ್ಳಿ

ಬೆಳ್ಳುಳ್ಳಿಯ ಗಾಢ ವಾಸನೆಯು ಹೇನಿನ ಉಸಿರುಗಟ್ಟಿಸಿ ಅವುಗಳು ಸಾಯುವಂತೆ ಮಾಡುತ್ತದೆ. ಮೊದಲಿಗೆ 10 ಬೆಳ್ಳುಳ್ಳಿಗಳನ್ನು ಚೆನ್ನಾಗಿ ಜೇಜ್ಜಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟಿಗೆ 2-3 ಸ್ಪೂನ್ ಅಷ್ಟು ನಿಂಬೆರಸ ಬೆರೆಸಿ. ಈ ಮಿಶ್ರಣವನ್ನು ನಿಮ್ಮ ತಲೆಗೆ ಹಚ್ಚಿಕೊಂಡು 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಬಿಸಿ ನೀರಿನಲ್ಲಿ ನಿಮ್ಮ ತಲೆಯನ್ನು ತೊಳೆಯಿರಿ.


೪. ಬೇಬಿ ಆಯಿಲ್

ಹೇನು ತೊಲಗಿಸಲು ನಿಮಗೆ ಬೇಕಿರುವುದು ಬೇಬಿ ಆಯಿಲ್, ಬಟ್ಟೆ ಸೋಪು ಮತ್ತು ಸ್ವಲ್ಪ ವಿನೇಗರ್. ಬೇಬಿ ಆಯಿಲ್ ಕೂಡ ಹೇನುಗಳಿಗೆ ಉಸಿರುಗಟ್ಟಿಸುತ್ತದೆ ಎಂದು ಹೇಳಲಾಗಿದೆ. ನಿಮ್ಮ ಕೂದಲಿಗೆ ಸ್ವಲ್ಪ ಬೇಬಿ ಆಯಿಲ್ ಅನ್ನು ಹಚ್ಚಿರಿ ಮತ್ತು ಸಣ್ಣ ಹಲ್ಲಿನ ಬಾಚಣಿಕೆಯಲ್ಲಿ ಅವುಗಳನ್ನು ಬಾಚಿರಿ. ನಂತರ ನಿಮ್ಮ ಕೂದಲನ್ನು ಬಟ್ಟೆ ಸೋಪ್ ಮತ್ತು ಬಿಸಿನೀರಿನಿಂದ ತೊಳೆಯಿರಿ.

ಹೀಗೆ ಮಾಡಿದ ಮೇಲೆ, ರಾತ್ರಿ ಮಲಗುವಾಗ ನಿಮ್ಮ ಕೂದಲಿಗೆ ಬಿಳಿ ವಿನೇಗರ್ ಹಚ್ಚಿ , ತಲೆಗೆ ಟವೆಲ್ ಅನ್ನು ಕಟ್ಟಿಕೊಂಡು ಮಲಗಿ. ಬೆಳಗ್ಗೆ ನಿಮ್ಮ ತಲೆಯನ್ನು ಶ್ಯಾಂಪೂವಿನಿಂದ ತೊಳೆಯಿರಿ.


೫. ಉಪ್ಪು

ಕಾಲು ಕಪ್ ಅಷ್ಟು ಉಪ್ಪು ಮತ್ತು ಕಾಲು ಕಪ್ ಅಷ್ಟು ವಿನೆಗರ್ ಅನ್ನು ಚೆನ್ನಾಗಿ ಬೆರೆಸಿ. ನಂತರ ಈ ಮಿಶ್ರಣವನ್ನು ನಿಮ್ಮ ತಲೆಯ ಎಲ್ಲಾ ಭಾಗದಲ್ಲೂ ಸಿಂಪಡಿಸಿ (ಸ್ಪ್ರೇ ಮಾಡಿಕೊಳ್ಳಿ). ನಂತರ 2 ಗಂಟೆಗಳ ಕಾಲ ಹಾಗೆಯೇ ಬಿಡಿ. ಪ್ರತಿ ಮೂರು ದಿನಕ್ಕೊಮ್ಮೆ ಹೀಗೆ ಮಾಡಿ.


೬. ವ್ಯಾಸೆಲಿನ್

ನಿಮ್ಮ ಕೂದಲಲ್ಲಿ ಹರಿದಾಡುತ್ತಿರುವ ಹೇನುಗಳನ್ನು ಮಟ್ಟಹಾಕಲು ಸಹಾಯ ಮಾಡುವ ಇನ್ನೊಂದು ವಸ್ತು ಎಂದರೆ ಅದು ವ್ಯಾಸೆಲಿನ್. ನಿಮ್ಮ ನೆತ್ತಿಗೆ ಮತ್ತು ಕೂದಲಿಗೆ ವ್ಯಾಸೆಲಿನ್ ಅನ್ನು ಹಚ್ಚಿಕೊಳ್ಳಿ. ನಂತರ ಟೋಪಿ ಅಥವಾ ಟವೆಲ್ ಅನ್ನು ಸುತ್ತಿಕೊಂಡು ರಾತ್ರಿಯೆಲ್ಲಾ ಹಾಗೆಯೇ ಬಿಡಿ.

ಬೆಳಗ್ಗೆ ಎದ್ದ ನಂತರ ಬೇಬಿ ಆಯಿಲ್ ಅನ್ನು ಬಳಸಿ ವ್ಯಾಸೆಲಿನ್ ಅನ್ನು ತೆಗೆದುಹಾಕಿ ಮತ್ತು ಬಾಚಣಿಕೆಯಿಂದ ಬಾಚಿ ತಲೆಯಲ್ಲಿನ ಸತ್ತು ಹೋದ ಹೇನುಗಳನ್ನು ಹೊರಹಾಕಿರಿ. ಇದನ್ನು ನೀವು ಸ್ವಲ್ಪ ದಿನಗಳ ಕಾಲ ಪ್ರತಿ ರಾತ್ರಿ ಮಾಡಬೇಕು.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon