Link copied!
Sign in / Sign up
29
Shares

ಟಾಪ್ 10 ಹೆಣ್ಣು ಮಗು ಹೆಸರುಗಳು

ಹೆಣ್ಣು ಮಗುವಿನೊಂದಿಗಿನ ಜೀವನ ಉಲ್ಲಾಸದಿಂದ ಕೂಡಿರುತ್ತದೆ. ಏಕೆಂದರೆ ಅಪ್ಪಂದಿರು ತಮ್ಮ ಮಗಳು ಮಾಡುವ ಹುಡುಗಿ ತರಲೆಗಳನ್ನ ನೋಡಬಹುದು ಹಾಗು ಅಮ್ಮಂದಿರು ಮಗಳನ್ನು ಗೊಂಬೆ ರೀತಿ ಬಟ್ಟೆ ತೊಡಿಸಿ ತಯಾರು ಮಾಡಿ ಕಣ್ಣು ತುಂಬಿಕೊಳ್ಳಬಹುದು. ಒಂದು ಹೆಣ್ಣು ಮಗು ಹಡೆದು ಆಕೆಯೂ ಬಾನೆತ್ತರಕ್ಕೆ ಬೆಳೆಯುವುದನ್ನ ನೋಡುವುದೇ ಪೋಷಕರಿಗೆ ಹೆಮ್ಮೆ. ಹೆಣ್ಣು ಮಕ್ಕಳು ಖಂಡಿತವಾಗಿಯೂ ದೇವರು ಪೋಷಕರಿಗೆ ನೀಡಿದ ಕಾಣಿಕೆ.

ಎಲ್ಲರು ಹೇಳುವ ಪ್ರಕಾರ ಮಗುವಿನ ಸ್ವಭಾವ ಅದು ಭೂಮಿಗೆ ಕಾಲಿಟ್ಟ ಕ್ಷಣದಿಂದ ರೂಪುಗೊಳ್ಳಲು ಶುರುವಾಗುತ್ತದೆ. ಹಾಗಾಗಿ ನಿಮ್ಮ ಪುಟ್ಟ ಮಗಳಿಗೆ ಅವಳ ಸ್ವಭಾವಕ್ಕೆ ತಕ್ಕುವ ಒಂದು ಒಳ್ಳೆಯ ಹೆಸರು ಬೇಕು.

ಹೀಗಾಗಿ ನಾವು ನಿಮಗೆಂದೇ ಈ ತಿಂಗಳ ಟಾಪ್ 10 ಟ್ರೆಂಡಿ, ವಿಶಿಷ್ಟ ಹೆಣ್ಣು ಮಗುವಿನ ಹೆಸರುಗಳ ಪಟ್ಟಿ ಮಾಡಿದ್ದೇವೆ ಓದಿ.

೧. ಆದಿತಾ

ನಿಮ್ಮ ಮಗಳು ನಿಮ್ಮ ಜೀವನದ ಹೊಸದೊಂದು ಅಧ್ಯಾಯ ಶುರು ಮಾಡಲಿದ್ದಾಳೆ. ಹೀಗಾಗಿ ಅವಳಿಗೆ ಈ ಹೆಸರು ನೀಡಬಹುದು. ಆದಿತಾ ಎಂದರೆ ಆರಂಭದಿಂದಲೂ ಎಂದರ್ಥ.


೨. ಆಶಿನಿ

ಆಶಿನಿ ಎಂದರೆ ಮಿಂಚು ಎಂದರ್ಥ. ನಿಮ್ಮ ಜೀವನದಲ್ಲಿ ಪ್ರೀತಿಯ ಮಳೆ ಸುರಿಸಿ, ಬೆಳಕಾಗುವ ನಿಮ್ಮ ಮಗಳಿಗೆ ಈ ಹೆಸರು ಸೂಕ್ತ.


೩. ಜಶಿಕಾ

ಮಕ್ಕಳು ನಮಗೆ ಚಿಕ್ಕ ಚಿಕ್ಕ ವಿಷಯಗಳಲ್ಲೂ ಖುಷಿ, ಸೌಂದರ್ಯ ಕಾಣುವುದನ್ನು ಹೇಳಿಕೊಡುತ್ತಾರೆ. ಜಶಿಕಾ ಎಂದರೆ ಎಲ್ಲರೂ ಪ್ರೀತಿಸುವಂತದ್ದು, ಎಲ್ಲರಲ್ಲೂ ಜೀವ ತುಂಬುವಂತದ್ದು ಎಂದರ್ಥ.


೪. ಚಂದ್ರಾಣಿ

ನಿಮ್ಮ ಮಗಳಿಗೆ ಚಂದ್ರನನ್ನ ತೋರಿಸಿ ಊಟ ಮಾಡಿಸುವಿರಿ. ಆದರೆ, ಆ ಚಂದ್ರನನ್ನೇ ನಿಮ್ಮ ಮಗಳಿಗೆ ಬರೆದು ಕೊಡಬೇಕೆಂದರೆ ನೀವು ಈ ಹೆಸರನ್ನು ನಿಮ್ಮ ಮಗಳಿಗೆ ಇಡಬಹುದು. ಚಂದ್ರಾಣಿ ಎಂದರೆ ಚಂದ್ರನ ಹೆಂಡತಿ ಎಂದರ್ಥ.


೫. ಗತಿಕ

ಹಾಡು ಕಿವಿಗೆ ಇಂಪು, ಮಕ್ಕಳು ಮನಸಿಗೆ ತಂಪು. ಗತಿಕ ಎಂದರೆ ಹಾಡು ಎಂದರ್ಥ. ನಿಮ್ಮ ಮಗಳಿಗೆ ಇದೊಂದು ಮುದ್ದಾದ ಹೆಸರು.


೬. ನಮ್ರಹ

ಯಾರಿಗೆ ತಾನೇ ತಮ್ಮ ಮಗಳು ಕಿತ್ತೂರಿನ ಚೆನ್ನಮ್ಮ, ಒನಕೆ ಓಬ್ಬವ್ವಳ ರೀತಿ ವೀರ ವನಿತೆ ಆಗಬೇಕು ಎಂಬ ಆಸೆ ಇರುವುದಿಲ್ಲ ಹೇಳಿ. ನಿಮ್ಮ ಮಗಳದ್ದು ಕೂಡ ಇಂತಹ ದಿಟ್ಟ ವ್ಯಕ್ತಿತ್ವ ಎಂದರೆ ಆಕೆಗೆ ಇದು ಸೂಕ್ತ ಹೆಸರು. ಇದರ ಅರ್ಥ ಹೆಣ್ಣು ಹುಲಿ ಎಂದು.


೭. ನಸೀನ್

ಹೆಣ್ಣು ಮಗಳು ಮನೆಗೆ ಬಂದರೆ ಆ ಮನೆಗೆ ಶಾಂತಿ, ನೆಮ್ಮದಿ ಬಂದಂತೆ. ಬಿರು ಬಿಸಿಲಲ್ಲೂ ತಂಗಾಳಿ ಬೀಸಿದಂತೆ. ಹೀಗಾಗಿ ನಿಮ್ಮ ಮಗಳಿಗೆ ತಂಗಾಳಿ ಎಂಬ ಅರ್ಥದ ಈ ಹೆಸರನ್ನೇ ಇಡಬಹುದಿತ್ತು.


೮. ಪರಿಧಿ

ಪರಿಧಿ ಎಂದರೆ ಸೂರ್ಯ ಅಥವಾ ಚಂದಿರನ ಸುತ್ತ ಇರುವ ವೃತ್ತ.


೯. ಸಹಿ

ನಿಮ್ಮ ಜೀವನದ ಹೊಸ ಅಧ್ಯಾಯಕ್ಕೆ ನೀವು ದೇವರಿಗೆ ಅಪ್ಪಣೆ ಪಡೆಯಲು ಬರೆದು ಹಾಕಿದ ಅರ್ಜಿಗೆ ದೇವರು ಮಗುವನ್ನು ರುಜುವಾತಿನಂತೆ ನಿಮಗೆ ಕಳುಹಿಸಿದ್ದಾನೆ. ಹೀಗಾಗಿ ನಿಮ್ಮ ಮಗುವಿಗೆ ಸಹಿ ಎಂದು ಹೆಸರಿಡಬಹುದು.


೧೦. ವಿಭಾವರಿ

ನಿಮ್ಮ ಕಣ್ಣಿನ ನಕ್ಷತ್ರವು ನಿಮ್ಮ ಮಗಳು. ನಿಮ್ಮ ಮಗಳ ಜೀವನವು ಚಂದ್ರ, ನಕ್ಷತ್ರಗಳ ಬೆಳಕಿನಿಂದ ತುಂಬಿರಲಿ. ಹೀಗಾಗಿ ಅವಳಿಗೆ ನಕ್ಷತ್ರಗಳು ತುಂಬಿರುವ ರಾತ್ರಿ ಎಂಬ ಅರ್ಥ ಕೊಡುವ ಈ ಹೆಸರು ನೀಡಬಹುದು.

ಈ ಹೆಸರುಗಳು ನಿಮಗೆ ಇಷ್ಟವಾಗಿದ್ದರೆ, ಈ ಲೇಖನವನ್ನು ಶೇರ್ ಮಾಡಿ. ನಮ್ಮ ಫೇಸ್ಬುಕ್ ಪೇಜ್ ಅಲ್ಲಿ ನಿಮ್ಮ ಮಗುವಿನ ಹೆಸರನ್ನು ಕಾಮೆಂಟ್ ಮಾಡಿ. 
Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon