Link copied!
Sign in / Sign up
4
Shares

ಹೆಣ್ಣಿನ ಲೈಂಗಿಕ ಪರಾಕಾಷ್ಟೆ (ಒರ್ಗೆಸಮ್) ಬಗ್ಗೆ ಯಾರೂ ಹೇಳದ 8 ಸಂಗತಿಗಳು!

೧. ಒರ್ಗೆಸಮ್(orgasm) ಡೇ

ನೀವು ನಂಬುತ್ತಿರೋ ಇಲ್ಲವೋ, ಆದರೆ ಹೆಂಗಸರ ಲೈಂಗಿಕ ಪರಾಕಾಷ್ಟೆಗೆ ಎಂದೇ ಒಂದು ದಿನ ಇದೆ. ಆಗಸ್ಟ್ 8 ರಂದು ಅಂತರಾಷ್ಟ್ರೀಯ ಹೆಂಗಸರ ಸಂಭೋಗದ್ರೇಕ ಪರಾಕಾಷ್ಟೆ ದಿನ ಎಂದು ಆಚಿರಸಲಾಗುತ್ತದೆ. ಈ ದಿನದ ಮುಖ್ಯ ಉದ್ದೇಶ ಎಂದರೆ ಅದು ಹೆಂಗಸರಿಗೆ ಒರ್ಗೆಸಮ್ ಎನ್ನುವುದು ನೈಸರ್ಗಿಕ ಎಂದು ತಿಳಿಸುವುದು ಮತ್ತು ಅದರ ಬಗ್ಗೆ ಸಮಾಜದಲ್ಲಿ ಇರುವ ಕೆಟ್ಟ ಭಾವ ಹೋಗಲಾಡಿಸಲಿಕ್ಕೆ. ಇದು ಹೆಂಗಸರಿಗೆ ಲೈಂಗಿಕ ಜೀವನದ ಬಗ್ಗೆ ಮುಕ್ತವಾಗಿ ಚರ್ಚಿಸಲಿಕ್ಕೆ ಮತ್ತು ತಜ್ಞರ ಬಳಿ ಯಾವುದೇ ಸಂಕೋಚವಿಲ್ಲದೆ ತಮ್ಮ ಸಮಸ್ಯೆಗಳನ್ನ ಹೇಳಲಿಕ್ಕೆ ಸುಲಭವಾಗುತ್ತದೆ.

೨. ಇದರ ಮೂಲ

ಎಲ್ಲರೂ ಅಂದುಕೊಂಡಂತೆ ಈ ಸಂಭೋಗದ್ರೇಕ ಪರಾಕಾಷ್ಟೆ ಅನ್ನುವುದು ನಿಮ್ಮ ಗುಪ್ತಾಂಗದಲ್ಲಿ ಹುಟ್ಟುವಂತದ್ದು ಅಲ್ಲ. ಹೆಂಗಸರು ತಮ್ಮ ದೈನಂದಿನ ಕಾರ್ಯಗಳ ಸಣ್ಣ ಕೆಲಸಗಳು ಮಾಡುವಾಗಲು ಪರಾಕಾಷ್ಟೆ ಅನುಭವಿಸಿದ್ದಾರೆ. ಉದಾಹರಣೆಗೆ ಒಂದು ರೀತಿಯಲ್ಲಿ ಹುಬ್ಬನ್ನು ಮುಟ್ಟಿಕೊಂಡರು ಕೂಡ ಇದಾಗಬಹುದು. ಕೆಲವೊಮ್ಮೆ ಲೈಂಗಿಕ ಪರಾಕಾಷ್ಟೆ ಬಗ್ಗೆ ಯೋಚಿಸಿದರೂ, ಅದನ್ನ ಅನುಭವಿಸಬಹುದು.

೩. ಮಗುವಿಗೆ ಜನ್ಮ ನೀಡುವಾಗ

ಇದು ನಿಮಗೆ ನಂಬಲು ಅಸಾಧ್ಯ ಎನಿಸಬಹುದು, ಆದರೆ ಬಹಳಷ್ಟು ಹೆಂಗಸರು ಹೆರಿಗೆ ನೋವಿನ ವೇಳೆ ಅಥವಾ ಮಗುವಿಗೆ ಜನ್ಮ ನೀಡುವ ವೇಳೆ ಲೈಂಗಿಕ ಪರಾಕಾಷ್ಟೆ ಅನುಭವಿಸಿದ್ದಾರೆ. ಹೆರಿಗೆ ಸಮಯದಲ್ಲಿ ಗುಪ್ತಾಂಗದ ಸುತ್ತಮುತ್ತಲಿನ ನಡೆಯುವ ಹಲವಾರು ಚಟುವಟಿಕೆಗಳ ಕಾರಣ ಇದು ಉಂಟಾಗಬಹುದು. ಕೆಲವೊಂದು ಬಾರಿ ಇದರ ಅನುಭವ ಆದರು, ಹೆರಿಗೆಯ ತಡೆಯಲಾಗದ ನೋವಿನಲ್ಲಿ ಇದು ಮಾಸಿ ಹೋಗುತ್ತದೆ.

೪. ಮೆದುಳಿನ ಚಟುವಟಿಕೆ

ಲೈಂಗಿಕ ಕಾರ್ಯದ ಮುಗಿಸುವಾಗ ಅಂದರೆ ಪರಾಕಾಷ್ಟೆ ಹೊಂದು ಕ್ಲೈಮಾಕ್ಸ್ ಅಲ್ಲಿ ನಮ್ಮ ಮೆದುಳಿನ ಒಂದು ಭಾಗವು ಸ್ಥಗಿತಗೊಳ್ಳುತ್ತದೆ. ಈ ಮೆದುಳಿನ ಭಾಗವು ನಮ್ಮ ಎಡಗಡೆ ಕಣ್ಣಿನ ಹಿಂಭಾಗದಲ್ಲಿ ಇರುತ್ತದೆ. ದೇಹದ ನಿಯಂತ್ರಣ ಮತ್ತು ಯೋಚನೆ ಮಾಡುವುದು ಈ ಭಾಗದ ಜವಾಬ್ದಾರಿ ಆಗಿರುತ್ತದೆ. ಇದೆ ಕಾರಣಕ್ಕೆ ನಾವು ಲೈಂಗಿಕ ಕ್ರಿಯೆಯ ಕೊನೆಯಲ್ಲಿ ಕ್ಲೈಮಾಕ್ಸ್ ಮಾಡುವಾಗ ಯಾವುದರ ಮೇಲೂ ಗಮನ ಇಡಲು ಆಗುವುದಿಲ್ಲ.

೫. ನೋವು ತೊಲಗಿಸುತ್ತದೆ

ನೀವು ಪೈನ್ ಕಿಲ್ಲರ್ ಗುಳಿಗೆಯನ್ನ ಸೇವಿಸಿದರೆ ನಿಮ್ಮ ದೇಹದ ಮೇಲೆ ಏನು ಪರಿಣಾಮ ಆಗುತ್ತದೆಯೋ, ಪರಾಕಾಷ್ಟೆ ಹೊಂದಿದರೆ ಅದೇ ಪರಿಣಾಮ ಉಂಟಾಗುತ್ತದೆ. ಈ ವೇಳೆಯಲ್ಲಿ ಬಿಡುಗಡೆ ಹೊಂದುವ ಆಕ್ಸಿಟೋಸಿನ್ ನಿಮ್ಮ ದೇಹಕ್ಕೆ ಆರಾಮ ನೀಡುತ್ತದೆ ಹಾಗು ಮಾನಸಿಕ ಒತ್ತಡವನ್ನೂ ಕೂಡ ಹೋಗಲಾಡಿಸುತ್ತದೆ. ಪರಾಕಾಷ್ಟೆಯ ಭಾವೋದ್ರೇಕವು ಉಳುಕುಗಳಿಂದ ಹಿಡಿದು ಆರ್ಥ್ರೈಟಿಸ್ ವರೆಗೂ ನೋವನ್ನ ಕಮ್ಮಿ ಮಾಡುತ್ತದೆ.

೬. ವಿಭಿನ್ನ ಒರ್ಗೆಸಮ್ ಗಳು

ಎಲ್ಲಾ ಹೆಂಗಸರು ಒಂದೇ ರೀತಿಯಲ್ಲಿ ಲೈಂಗಿಕ ಪರಾಕಾಷ್ಟೆ ಅನುಭವಿಸುವುದಿಲ್ಲ. ಕೇವಲ ಸಂಭೋಗ ಕಾರ್ಯ ಒರ್ಗೆಸಮ್ ನೀಡಬೇಕು ಎಂದಿಲ್ಲ. ಬಹಳಷ್ಟು ಹೆಂಗಸರು ಮೌಖಿಕ ಅಥವ ಕೈಯಿಂದ ಮಾಡುವ ಪ್ರಚೋದನೆಗೆ ಇನ್ನೂ ಚೆನ್ನಾಗಿ ಪ್ರತಿಕ್ರಿಯೆ ನೀಡುತ್ತಾರೆ. ನಿಮ್ಮ ಇಚ್ಛೆಗಳನ್ನ,ಆದ್ಯತೆಗಳನ್ನ ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಲು ಹಿಂದೆ ಮುಂದೆ ನೋಡಬೇಡಿ.

೭. ಸಿನಿಮಾದಲ್ಲಿ ನೋಡಿದಂತೆ ಅಲ್ಲ

ಸಂಭೋಗದ್ರೇಕ ಪರಾಕಾಷ್ಟೆಯು ಯಾವಾಗಲೂ ಸಿನಿಮಾಗಳಲ್ಲಿ ತೋರಿಸಿದಷ್ಟು ಸುಖಕರವಾಗಿ ಇರಬೇಕೆಂದಿಲ್ಲ. ಇದು ಯಾವಾಗಲು ನೀವು ಇನ್ನೊಮ್ಮೆ ಬೇಕು ಎನ್ನುವಷ್ಟು ತೀವ್ರವಾಗಿ ಅಥವಾ ಉಲ್ಲಾಸಕರವಾಗಿ ಇರುವುದಿಲ್ಲ. ಒರ್ಗೆಸಮ್ ಅನ್ನುವುದು ಯಾವಾಗಲು ಸುಖವನ್ನ ಹೆಚ್ಚಿಸುವುದಕ್ಕಿಂತ, ಮಾನಸಿಕ ಒತ್ತಡವನ್ನ ಇಳಿಸುವುದರ ಕಡೆ ಹೆಚ್ಚು ವಾಲಿರುತ್ತದೆ.

೮. ವಾತಾವರಣ

ಹೆಣ್ಣಿನ ಲೈಂಗಿಕ ಪರಾಕಾಷ್ಟೆ  ಗಂಡಸರ ಲೈಂಗಿಕ ಪರಾಕಾಷ್ಟೆಗಿಂತ ಜಾಸ್ತಿ ಸಾಮಾಜಿಕ ಅಂಶಗಳ ಮೇಲೆ ಅವಲಂಬಿತವಾಗಿದೆ. ವಾತಾವರಣ, ಒತ್ತಡದ ಪ್ರಮಾಣ, ಹೊಂದಾಣಿಕೆ ಇವೆಲ್ಲವೂ ಒಂದು ಹೆಣ್ಣು ಲೈಂಗಿಕ ಕ್ರಿಯೆಯ ಕೊನೆಯಲ್ಲಿ ಹೊಂದುವ ಪರಾಕಾಷ್ಟೆಯ ಮೇಲೆ ಪರಿಣಾಮ ಬೀರುತ್ತವೆ. ಕೆಲವೊಂದು ಹೆಂಗಸರಿಗೆ ಅನಾನುಕೂಲಕರ ಸಾಮಾಜಿಕ ಸಂಗತಿಗಳೇ ಅವರು ಇಚ್ಚಿಸುವಷ್ಟು ಲೈಂಗಿಕ ಪರಾಕಾಷ್ಟೆ ಹೊಂದದೆ ಇರಲು ಕಾರಣ ಆಗುತ್ತವೆ.    

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon