Link copied!
Sign in / Sign up
11
Shares

ಹೆಣ್ಣಿನ ದೇಹದ 9 ಕಾಮಪ್ರಚೋದಕ ಭಾಗಗಳು ಮತ್ತು ಅವುಗಳ ಬಗೆಗಿನ ಕೆಲವು ಸಲಹೆಗಳು

ನಿಮ್ಮ ದೇಹದ ಅತ್ಯಂತ ಸೂಕ್ಷ್ಮ ಭಾಗಗಳು ಯಾವುಗಳೆಂದು ಇತ್ತೀಚಿಗಷ್ಟೇ ಒಂದು ಅಧ್ಯಯನದಿಂದ ತಿಳಿದು ಬಂದಿದೆ. ಹೌದು, ನಿಮ್ಮ ಚಂದ್ರನಾಡಿಯೇ (ಕ್ಲಿಟೋರಿಸ್) ಆ ಪಟ್ಟಿಯ ಅಗ್ರಸ್ಥಾನ ಪಡೆದಿದ್ದು - ಆದರೆ ಕೇವಲ ಅದೊಂದು ಸೂಕ್ಷ್ಮಭಾಗ ಮಾತ್ರ ನಿಮ್ಮನ್ನು ರೊಚ್ಚಿಗೇಳಿಸುವುದಲ್ಲ. ಇನ್ನು ನಿಮ್ಮ ಯಾವ ಯಾವ ಭಾಗಗಳ ಮೇಲೆ ಆ ಸುಖದ ಸಮಯದಲ್ಲಿ ನಿಮ್ಮ ಸಂಗಾತಿಯು ಗಮನ ಹರಿಸಬೇಕು ಮತ್ತು ಅವುಗಳೊಂದಿಗೆ ನಿಮ್ಮ ಸುಖ ದುಪ್ಪಟ್ಟು ಮಾಡಿಕೊಳ್ಳುವುದು ಹೇಗೆ ಎಂಬ ಸಲಹೆಗಳು ಕೂಡ ಇಲ್ಲಿವೆ.

೧. ಚಂದ್ರನಾಡಿ

ಇದು ಹೆಣ್ಣಿನ ದೇಹದ ಅತ್ಯಂತ ಸೂಕ್ಷ್ಮ ಭಾಗ. ಮೆಲ್ಲನೆ ಸ್ಪರ್ಶದಿಂದ ಶುರು ಮಾಡಿ, ಸ್ವಲ್ಪವೇ ಒತ್ತಡವನ್ನು ಹೆಚ್ಚಿಸಿಕೊಳ್ಳುತ್ತಾ ರುಬ್ಬುವ ರೀತಿಯಲ್ಲಿ ಬೆರಳುಗಳನ್ನು ವೃತ್ತಾಕಾರದಲ್ಲಿ ಆಡಿಸುತ್ತಾ ಹೋಗಿ.

 

೨. ಯೋನಿ

ಕೆಗೆಲ್ ವ್ಯಾಯಾಮಗಳು ನಿಮ್ಮ ಯೋನಿಯ ಸೂಕ್ಷ್ಮತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಮತ್ತು ಲೈಂಗಿಕ ಪರಾಕಾಷ್ಠೆ ಹೊಂದುವ ಸಾಧ್ಯತೆಗಳನ್ನೂ ಹೆಚ್ಚಿಸುತ್ತವೆ.


೩. ಬಾಯಿ/ತುಟಿಗಳು

ನಿಮ್ಮ ತುಟಿಗಳು ಬಹಳ ಸೂಕ್ಷ್ಮವಾಗಿರುತ್ತವೆ. ಇದೇ ಕಾರಣಕ್ಕೆ ತುಟಿ-ತುಟಿಯ ಚುಂಬನ ಅಷ್ಟೊಂದು ಮಜಭರಿತವೆನಿಸುವುದು. ಮೊದಲು ಒಂದು ಮೃದುವಾಗಿ ಮುತ್ತು ಕೊಟ್ಟರೆ, ಅದರ ನಂತರ ಒಮ್ಮೆ ದೀರ್ಘವಾದ ಬಿಗಿಯಾದ ಚುಂಬನ ನೀಡಿ. ಹೀಗೆ ಒಂದು ಬಾರಿ ಅದು, ಒಂದು ಬಾರಿ ಇದು ಮಾಡುತ್ತಾ ಹೋಗಿ.


೪. ಕತ್ತಿನ ಹಿಂಭಾಗ

ಈ ಭಾಗವು ಅಷ್ಟೊಂದು ಸೂಕ್ಷ್ಮವಿರಲು ಕಾರಣ ಅಲ್ಲಿ ಬಹಳಷ್ಟು ನರತುದಿಗಳು ಇರುತ್ತವೆ. ಯಾವುದೇ ರೀತಿಯ ಚುಂಬನ, ಸ್ಪರ್ಶ, ಸವರಿಕೆ ಅಥವಾ ಬೆರಳಾಡಿಸುವಿಕೆ, ಹೆಣ್ಣಿನ ದೇಹದಲ್ಲೆಲ್ಲಾ ನಡುಕ ತರಿಸುತ್ತದೆ.


೫. ಸ್ತನಗಳು

ನಿಮ್ಮ ಸಂಗತಿಯು ನಿಮ್ಮ ಸ್ತನಗಳನ್ನ ಮುಟ್ಟಿದಾಗ ನಿಮ್ಮ ದೇಹವು ಆಕ್ಸಿಟೋಸಿನ್ ಎಂಬ ಖುಷಿಯ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ.


೬. ಮೊಲೆತೊಟ್ಟುಗಳು

ಹೆಂಗಸರಿಗೆ ಸೂಕ್ಷ್ಮವಾದ ಮೊಲೆತೊಟ್ಟುಗಳು ಇರುತ್ತವೆ. ಆದರೆ ಅವರು ಪ್ರಚೋದನೆಗೆ ಒಳಗಾಗಲು ಮೆಲ್ಲನೆ ಸವರಿಕೆಯಿಂದ ಮೃದು ಬೆರಳಾಡಿಸುವಿಕೆಯವರೆಗೂ, ಒಬ್ಬರಿಂದ ಒಬ್ಬರಿಗೆ ಭಿನ್ನವಾದ ಆದ್ಯತೆಗಳು ಇರುತ್ತವೆ.


೭. ತೊಡೆಯ ಒಳಭಾಗ

ಈ ಭಾಗವು ನರಗಳ ಗುಂಪಿನೊಂದಿಗೆ ತುಂಬಿರತ್ತದೆ. ಆದರೆ ಬೇರೆ ಭಾಗಗಳಿಗಿಂತ ಈ ಭಾಗದ ಭಾಗದಲ್ಲಿ  ಪ್ರಚೋದಿಸಲು ಸ್ವಲ್ಪ ಹೆಚ್ಚು ಒತ್ತಡ ಹಾಕಬೇಕು. ನಿಮ್ಮ ಸಂಗತಿಯು ಇಲ್ಲಿ ಬೆರಳಾಡಿಸಬಹುದು, ಚುಂಬಿಸಬಹುದು ಅಥವಾ ತಣ್ಣೀರಿನ ಹನಿಗಳಲನ್ನೂ ಸಿಂಪಡಿಸಬಹುದು!


೮. ಕಿವಿಗಳು

ಬಹುತೇಕ ಎಲ್ಲರ ಕಿವಿಗಳು ಸೂಕ್ಷ್ಮವಾಗಿರುತ್ತವೆ. ನಿಮ್ಮ ಸಂಗಾತಿಗೆ ನಿಮ್ಮ ಕಿವಿಯ ಅಂಚಿನ್ನು ಬೆರಳಿನಿಂದ ಸವರುತ್ತಾ ನಿಮ್ಮ ಕಿವಿಗಳಲ್ಲಿ ಏನಾದರೂ ಹೇಳುವಂತೆ ಕೇಳಿ. ಅವರು ಬೆರಳುಗಳ ಪ್ರಚೋದನೆ ಮತ್ತು ನಿಮ್ಮ ಕಿವಿಗೆ ಅವರ ಮಾತಿನಿಂದ ತಾಕುವ ಬಿಸಿ ಗಾಳಿ ನಿಮ್ಮನ್ನು ರೊಚ್ಚಿಗೇಳಿಸುವುದು.


೯. ಸೊಂಟ

ನಿಮ್ಮ ಮೌಖಿಕ ಸೆಕ್ಸ್ ಮತ್ತು ಮುಂಕೇಳಿ ಜೊತೆ ನೀವು ಸೇರಿಸಿಕೊಳ್ಳಬೇಕಿರುವುದು ಎಂದು ಅದು ಒಂದು ಒಳ್ಳೆಯ ಮಸಾಜ್. ನೀವು ಸಂಭೋಗ ಕಾರ್ಯಕ್ಕೆ ಇಳಿಯುವ ಮುನ್ನ ಒಮ್ಮೆ ನಿಮ್ಮ ಸಂಗಾತಿ ಬಳಿ ಬೆನ್ನು ಮತ್ತು ಸೊಂಟ ಮಸಾಜ್ ಮಾಡಿಸಿಕೊಳ್ಳುವುದು ಒಳ್ಳೆಯದು. ಇದು ಕೇವಲ ಒಂದು ಕಾಮಪ್ರಚೋದಕ ಭಾಗ ಅಷ್ಟೇ ಅಲ್ಲದೆ, ಇದನ್ನು ಮಸಾಜ್ ಮಾಡುವ ಮೂಲಕ ನಿಮ್ಮ ಸೊಂಟದ ಭಾಗಕ್ಕೆ ಆರಾಮ ದೊರೆಯುತ್ತದೆ. ಇದರಿಂದ ನೀವು ನಿಮ್ಮ ಲೈಂಗಿಕ ಕ್ರಿಯೆಯನ್ನು ಇನ್ನೂ ಹಿತಕರ ಮಾಡಿಕೊಳ್ಳಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon