Link copied!
Sign in / Sign up
11
Shares

ಕನ್ಯತ್ವ ಕಳೆದುಕೊಂಡ ಮೇಲೆ ಹೆಣ್ಣಿನ ದೇಹದಲ್ಲಿ ಆಗುವ 6 ಬದಲಾವಣೆಗಳು!

ಕನ್ಯತ್ವ ಕಳೆದುಕೊಳ್ಳುವುದರಿಂದ ಅನೇಕ ಆರೋಗ್ಯಕರ ಬೆಳವಣಿಗೆಗಳಿಗೆ ಬಾಗಿಲು ತೆರೆಯುತ್ತದೆ ಮತ್ತು ಅಷ್ಟೇ ಅಲ್ಲದೆ, ಅದರೊಂದಿಗೆ ಅದು ಎಂದಿಗೂ ಮುಗಿಯದ ಉಲ್ಲಾಸದ ಬುತ್ತಿಯಾಗಿರುತ್ತದೆ. ಲೈಂಗಿಕವಾಗಿ ಸಕ್ರಿಯವಾಗಿ ಇರುವುದರಿಂದ ಮಾನಸಿಕವಾಗಿ ಆರಾಮ ಹೊಂದಬಹುದು ಹಾಗು ದೈಹಿಕ ಆರಾಮ ಕೂಡ ಹೊಂದಬಹುದು. ಇದಲ್ಲದೇ ಜೀವನವು ಇನ್ನೂ ಹಲವು ರೀತಿಯಲ್ಲಿ ಬದಲಾಗುತ್ತದೆ.

ಹೆಂಗಸರಲ್ಲಿ ಕನ್ಯತ್ವ ಕಳೆದುಕೊಳ್ಳುವುದು ಎಂದರೆ ಅದು ಕೇವಲ ಲೈಂಗಿಕ ಕ್ರಿಯೆ ಮಾಡುವದು ಮಾತ್ರ ಅಲ್ಲ, ಅದು ಅವರು ಜೀವನವನ್ನ ನೋಡುವ ರೀತಿಯನ್ನೇ ಬದಲಿಸುವಂತ ಒಂದು ಹೆಜ್ಜೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಶುರು ಮಾಡಿದ ನಂತರ ಹೆಣ್ಣಿನ ದೇಹದಲ್ಲಿ ಆಗುವ ೬ ಬದಲಾವಣೆಗಳು ಇಲ್ಲಿವೆ.

೧. ಸ್ತನಗಳು ಸ್ಥಿರವಾಗುತ್ತವೆ

ದೇಹವು ಅನೇಕ ನೇರ ಬದಲಾವಣೆಗಳನ್ನ ಹೊಂದುತ್ತಾ ಹೋಗುತ್ತದೆ ಏಕೆಂದರೆ ಉದ್ರಿಕ್ತಗೊಂಡ ನರಮಂಡಲವು ರಕ್ತ ಕಣಗಳಲ್ಲಿನ ಕ್ರಿಯೆಗಳನ್ನ ಹೆಚ್ಚಿಸಿ ಸ್ತನಗಳು ದೊಡ್ಡದಾಗುವಂತೆ ಮಾಡುತ್ತದೆ. ಲೈಂಗಿಕ ಕ್ರಿಯೆ ನಡೆಸುವಾಗ ಮತ್ತು ಅದರ ನಂತರ ಸ್ತನಗಳು ಸುಮಾರು 25% ಗಾತ್ರದಲ್ಲಿ ದೊಡ್ಡದಾಗುತ್ತವೆ. ಸ್ತನಗಳ ಗಾತ್ರ ಮತ್ತು ಸ್ಥಿರತೆ ಉದ್ರಿಕ್ತತೆಯು ಎಷ್ಟಿದೆ ಎನ್ನುವುದರ ಮೇಲೆ ಆಧಾರಿತ ಆಗಿರುತ್ತವೆ.

೨. ಮೊಲೆತೊಟ್ಟುಗಳು ಹೆಚ್ಚು ಸೂಕ್ಷ್ಮವಾಗುತ್ತವೆ

ಹೆಚ್ಚು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದರಿಂದ ಆಗುವ ಮತ್ತೊಂದು ಬದಲಾವಣೆ ಎಂದರೆ ಅದು ಮೊಲೆತೊಟ್ಟು ಮತ್ತು ಅದರ ಸುತ್ತಲಿನ ಜಾಗದಲ್ಲಿನ ರಕ್ತ ಸಂಚಾರ ಮತ್ತು ಸ್ನಾಯುಗಳ ಒತ್ತಡ ಹೆಚ್ಚಿಸುವುದು. ಇದನ್ನ ವಾಸೋಕೆಂಜೆಷನ್ ಎನ್ನುವರು ಹಾಗು ಇದು ನಿಮ್ಮ ಸ್ತನಗಳನ್ನ ಗಟ್ಟಿ ಮಾಡುತ್ತದೆ, ಮೈನವಿರೇಳಿಸುತ್ತದೆ ಹಾಗು ಲೈಂಗಿಕ ಪರಾಕಾಷ್ಠೆ ಹೊಂದುವಂತೆ ಮಾಡುತ್ತದೆ. ಆದರೆ ಇನ್ನುಳಿದ ಸಮಯದಲ್ಲಿಯೂ ಕೂಡ ಮೊಲೆತೊಟ್ಟುಗಳು ಹೆಚ್ಚು ಸೂಕ್ಷ್ಮವಾಗಿಯೇ ಉಳಿಯಬಹುದು, ಅಂದರೆ ನಿಮಗೆ ಯಾವುದೇ ಲೈಂಗಿಕವಾಗಿ ಕೆರಳಿಸುವ ಯೋಚನೆಗಳು ಬರದೇ ಇದ್ದ ಸಮಯದಲ್ಲೂ.

೩. ಜಗತ್ತು ಆನಂದಮಯವಾಗಿ ಕಾಣುತ್ತದೆ

ಸೆಕ್ಸ್ ಅನ್ನುವುದು ನಿಮ್ಮನ್ನು ಹೆಚ್ಚು ಆನಂದಮಯವಾಗಿ ಮಾಡುತ್ತದೆ ಹಾಗು ಇದಕ್ಕೆ ಕಾರಣ ಖುಷಿಯ ಹಾರ್ಮೋನ್ ಆಕ್ಸಿಟೋಸಿನ್. ಲೈಂಗಿಕ ಕ್ರಿಯೆಯ ವೇಳೆ ಗಂಡಸರಿಗಿಂತ ಜಾಸ್ತಿ ಆಕ್ಸಿಟೋಸಿನ್ ಹೆಂಗಸರು ಬಿಡುಗಡೆ ಮಾಡುತ್ತಾರೆ. ಈ ಹಾರ್ಮೋನ್ ವ್ಯಕ್ತಿಯನ್ನು ಕ್ಷಣಮಾತ್ರದಲ್ಲೇ ಖುಷಿ ಪಡಿಸುತ್ತದೆ. ಏತನ್ಮಧ್ಯೆ, ಡೋಪಮೈನ್ ವ್ಯಕ್ತಿಯನ್ನು ಹೆಚ್ಚು ವಿಶ್ವಾಸ ಹೊಂದುವಂತೆ ಮಾಡುತ್ತದೆ ಹಾಗು ಟೆಸ್ಟೋಸ್ಟೆರಾನ್ ಹಾರ್ಮೋನ್ ವ್ಯಕ್ತಿಯನ್ನು ಹೆಚ್ಚು ಪ್ರತಿಷ್ಠಾಪಿತನನ್ನಾಗಿ ಮಾಡುತ್ತದೆ.

೪. ಚಂದ್ರನಾಡಿ ಮತ್ತು ಗರ್ಭಕೋಶ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿದುಕೊಳ್ಳುತ್ತವೆ

ಯೋನಿಯು ಕನ್ಯತ್ವ ಕಳೆದುಕೊಳ್ಳುವವರೆಗೂ ಅಪ್ರಯೋಜಕ ಎನಿಸಿದರೂ, ನೀವು ಅದೆಷ್ಟು ಬೇಗ ಅದು ಹಿಗ್ಗಲು ಮತ್ತು ಕುಗ್ಗಲು ಕಲಿಯುವುದು ಎಂದು ನೋಡಿದರೆ ನೀವು ಆಶ್ಚರ್ಯ ಚಕಿತರಾಗುತ್ತೀರಾ. ಸಂಭೋಗದ ಮೊದಲು ಮತ್ತು ಸಂಭೋಗದ ವೇಳೆಯಲ್ಲಿ, ಚಂದ್ರನಾಡಿ ಅಂದರೆ ಕ್ಲಿಟೋರಿಸ್ ಊದಿಕೊಳ್ಳುತ್ತದೆ ಮತ್ತು ನಿಮ್ಮ ಗರ್ಭಕೋಶವು ಸ್ವಲ್ಪ ಮೇಲಕ್ಕೇರುತ್ತದೆ. ಹೀಗೆ ನೀವು ಮುಂದಿನ ಬಾರಿ ಸಂಭೋಗ ನಡೆಸಿದಾಗ  ಪುನಃ ಇದೇ ರೀತಿ ಕಾರ್ಯ ನಿರ್ವಹಿಸಲು ಆಗಲು ಕಲಿಯುತ್ತದೆ.

೫. ಯೋನಿಯ ಎಲಾಸ್ಟಿಸಿಟಿ (ಸ್ಥಿತಿಸ್ಥಾಪಕತ್ವ) ಬದಲಾಗುತ್ತದೆ

ಕನ್ಯತ್ವ ಕಳೆದುಕೊಂಡ ಮೇಲೆ, ಯೋನಿಯ ಮುಂಚೆಗಿಂತ ಹೆಚ್ಚು ಹಿಗ್ಗುವುದರ ಮೂಲಕ ಲೈಂಗಿಕ ಕ್ರಿಯೆಗೆ ಒಗ್ಗಿಕೊಳ್ಳುತ್ತದೆ. ನೀವು ಲೈಂಗಿಕವಾಗಿ ಉದ್ರಿಕ್ತಗೊಂಡಾಗ, ನಿಮ್ಮ ಯೋನಿಯ ತುಟಿಗಳು ತೆರೆದುಕೊಂಡು, ಒಳಬರುವ ವಸ್ತುವನ್ನ ಸ್ವಾಗತ ಮಾಡಿಕೊಳ್ಳುತ್ತವೆ. ಇದು ಯೋನಿಯ ಮೆಮೊರಿ ಗೆ ಸೇರ್ಪಡೆ ಆಗುತ್ತದೆ ಹಾಗು ಮುಂದಿನ ಬಾರಿ ಇಂದ ಹೀಗೆಯೇ ಕಾರ್ಯ ನಿರ್ವಹಿಸುತ್ತದೆ. ಹೀಗಾಗಿ ಹೆಚ್ಚು ಬಾರಿ ಸಂಭೋಗದಲ್ಲಿ ತೊಡಗಿಕೊಳ್ಳುವುದರಿಂದ, ಶಿಶ್ನವನ್ನ ಒಳಗೆ ನುಗ್ಗಿಸಿಕೊಳ್ಳುವುದು ಹೆಚ್ಚು ಸುಲಭವಾಗುತ್ತದೆ.

೬. ನಯಗೊಳಿಸುವಿಕೆ ಬೇರೆ ರೀತಿಯೇ ಅನುಭವ ಆಗುತ್ತದೆ

ಲೂಬ್ರಿಕೇಷನ್ ಅಥವಾ ತೈಲಲೇಪನ ಅಥವಾ ನಯಗೊಳಿಸುವಿಕೆ. ಹೆಣ್ಣು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಶುರು ಮಾಡಿದ ನಂತರ, ಅಲ್ಲಿನ ವದ್ದೆತನ ಬೇರೇ ರೀತಿಯೇ ಅನುಭವವಾಗುತ್ತದೆ. ಹಸ್ತಮೈಥುನ ಹೆಣ್ಣನ್ನು ಆ ಜಾಗದಲ್ಲಿ ವದ್ದೆ ಮಾಡಿದರು, ಸಂಗಾತಿಯಿಂದ ಉದ್ರಿಕ್ತತೆಗೆ ಒಳಗಾಗಿ ಒದ್ದೆಯಾಗುವುದು ಹೆಚ್ಚು ತೀವ್ರವಾಗುತ್ತದೆ. ಈ ವದ್ದೆ ಆಗುವುದು ಹೆಣ್ಣಿನ ಜೀವನ ಪರ್ಯಂತ ಆಕೆಯ ಮುಟ್ಟಾಗುವಿಕೆ ಮತ್ತು ಭಾವನಾತ್ಮಕ ಸ್ಥಿತಿಯ ಆಧಾರದ ಮೇಲೆ ಬದಲಾಗುತ್ತಾ ಹೋಗುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon