Link copied!
Sign in / Sign up
2
Shares

ಹೆಣ್ಣಿನ ಲೈಂಗಿಕ ಆಸಕ್ತಿ ಹೆಚ್ಚಿಸಲು ನೈಸರ್ಗಿಕ ದಾರಿಗಳು

ಆರೋಗ್ಯಕರ ಲೈಂಗಿಕ ಆಸಕ್ತಿಯು ಹೆಣ್ಣಿನ ಭಾವನಾತ್ಮಕ ಒಳಿತಿಗೆ ಮತ್ತು ಆಕೆಯ ಸಂಬಂಧಕ್ಕೆ ತುಂಬಾನೇ ಮುಖ್ಯವಾದದ್ದು. ಸಹಜವಾಗಿ ಬಹುತೇಕ ಹೆಂಗಸರು ತಮ್ಮ ಜೀವನದ ವಿವಿಧ ಹಂತಗಳಲ್ಲಿ ಲೈಂಗಿಕ ಆಸಕ್ತಿ ಕಳೆದುಕೊಳ್ಳುತ್ತಾರೆ. ಆದರೆ ಕಡಿಮೆ ಲೈಂಗಿಕ ಆಸಕ್ತಿ ಹೊಂದಿರುವುದೆಂದರೆ ಅದು ವೈದ್ಯಕೀಯ ತೊಂದರೆ ಅಲ್ಲ, ಆದರೆ ಅದರಿಂದ ಹೆಣ್ಣಿಗಾಗಲಿ ಅಥವಾ ಆಕೆಯ ಪತಿಗಾಗಲಿ ತೊಂದರೆ ಆಗುತ್ತಿದ್ದರೆ, ಅದಕ್ಕೆ ಚಿಕಿತ್ಸೆ ಪಡೆಯಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಲೈಂಗಿಕ ಆಸಕ್ತಿ ಹೆಚ್ಚಿಸುತ್ತದೆ ಎಂದು ಹೇಳಿಕೊಂಡು ಅನೇಕ ಔಷಧಿಗಳು ಬಂದಿವೆ. ಆದರೆ ನೀವು ನಿಮ್ಮ ಲೈಂಗಿಕ ಆಸಕ್ತಿ ಹೆಚ್ಚಿಸಿಕೊಳ್ಳಲು ಮನೆಯಲ್ಲೇ ಕೆಲವೊಂದು ವಿಷಯಗಳನ್ನು ಪಾಲಿಸಬಹುದು. ಅವುಗಳು ಯಾವುದೆಂದರೆ :

I . ಹೆಣ್ಣಿನ ಲೈಂಗಿಕ ಆಸಕ್ತಿ ಹೆಚ್ಚಿಸುವಂತಹ ಆಹಾರ

ಹೆಣ್ಣಿನ ಲೈಂಗಿಕ ಆಸಕ್ತಿ ಹೆಚ್ಚಿಸುವುದರಲ್ಲಿ ಆಹಾರವು ಬಹಳ ಮುಖ್ಯವಾದ ಪಾತ್ರವಹಿಸುತ್ತದೆ. ಹೀಗಾಗಿ ನೀವು ಮಂಚದ ಮೇಲೆ ಉತ್ಸುಕರಾಗಿ ಮತ್ತು ಶಕ್ತಿಶಾಲಿಯಾಗಿರಬೇಕು ಎಂದರೆ ನೀವು ಎಲ್ಲಾ ಪೋಷಕಾಂಶಗಳನ್ನ ಒಳಗೊಂಡ ಆಹಾರ ಸೇವಿಸಬೇಕು. ಅಂತಹ ಕೆಲವು ಆಹಾರ ಎಂದರೆ ಅವುಗಳು :


೧. ಮೀನು

ನಮಗೆ ತಿಳಿದಿರುವ ಹಾಗೆ ಮೀನಿನಲ್ಲಿ ಬಹಳಷ್ಟು ಒಮೇಗಾ-೩ ಕೊಬ್ಬಿನ ಆಮ್ಲ ಇದ್ದು, ಇದು ದೇಹದ ಉರಿಯೂತ ಕಡಿಮೆ ಮಾಡಿ, ಹೃದಯದ ಅರೋಗ್ಯ ಕಾಪಾಡಿ, ಲೈಂಗಿಕ ಆಸ್ಕತಿಯನು ಹೆಚ್ಚಿಸುತ್ತವೆ ಮತ್ತು ಖಿನ್ನತೆಯನ್ನು ದೂರ ಇಡುತ್ತದೆ. ಹೀಗಾಗಿ ನೀವು ಒಮೇಗಾ-೩ ಅಂಶ ಹೆಚ್ಚಿರುವ ಬಂಗುಡೆ, ರವಾಸ್ ಮೀನುಗಳನ್ನು ಸೇವಿಸಬೇಕು.

 

೨. ದವಸ-ಧಾನ್ಯಗಳು

ಧಾನ್ಯಗಳು ನಮಗೆ ವಿಟಮಿನ್ ಬಿ, ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳನ್ನು ನೀಡುತ್ತದೆ. ಮುಖ್ಯವಾಗಿ ವಿಟಮಿನ್ ಬಿ ಪಾತ್ರ ಲೈಂಗಿಕ ಆಸಕ್ತಿ ಹೆಚ್ಚಿಸುವುದರಲ್ಲಿ  ದೊಡ್ಡದು. ತಯಾರಿಸಿರುವ ತಿನಿಸುಗಳಾದ ಬ್ರೆಡ್, ಪಾಸ್ತಾ ಅಥವಾ ಇನ್ನ್ಯಾವುದೋ ತಿನಿಸುಗಳಿಂದ ನೀವು ಧಾನ್ಯಗಳನ್ನ ಸೇವಿಸಬಹುದು.


೩. ಹಣ್ಣು ಮತ್ತು ತರಕಾರಿಗಳು

ನೀವು ಉತ್ಕರ್ಷಣ ನಿರೋಧಕ ಅಂಶ ಹೆಚ್ಚಿರುವ ಹಣ್ಣುಗಳಾದ ಟೊಮೇಟೊ, ಬೆರಿ ಹಣ್ಣು, ಗೆಣೆಸು, ಎಲೆಕೋಸು ಮತ್ತು ಇತರೆ ಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು.


೪. ಕಾಳು, ಬೀಜಗಳು ಮತ್ತು ಅವಕ್ಯಾಡೊ

ಸಾಮಾನ್ಯವಾಗಿ ಹೇಳಬೇಕೆಂದರೆ ಕಾಳುಗಳು, ಬೀಜಗಳು ನಿಮ್ಮ ದೇಹಕ್ಕೆ ಬೇಕಿರುವ ಅಗತ್ಯವಾದ ಕೊಬ್ಬನ್ನು ನೀಡಿ ನಿಮ್ಮ ಯೋನಿಯು ಶುಷ್ಕತೆಗೆ ಒಳಗಾಗದಂತೆ ನೋಡಿಕೊಳ್ಳುತ್ತವೆ ಮತ್ತು ನಿಮ್ಮ ಲೈಂಗಿಕ ಅನುಭವವನ್ನು ಮತ್ತಷ್ಟು ಹಿತಕರಗೊಳಿಸುತ್ತವೆ. ಅಲ್ಲದೆ ಸಂಶೋಧನೆಗಳ ಪ್ರಕಾರ ಅವಕ್ಯಾಡೊ ಸೇವಿಸುವುದರಿಂದ ಲೈಂಗಿಕ ಆಸಕ್ತಿಯು ಬಹಳಷ್ಟು ಹೆಚ್ಚುತ್ತದೆ ಎಂಬುದು ತಿಳಿದು ಬಂದಿದೆ.


II . ಇತರೆ ಮಾರ್ಗಗಳು

ವ್ಯಾಯಾಮ

ದೈಹಿಕ ಚಟುವಟಿಕೆಗಳಿಗೆ ಮೆದುಳಿಗೆ ರಕ್ತದ ಮತ್ತು ಆಮ್ಲಜನಕದ ಹರಿವನ್ನು ಹೆಚ್ಚಿಸುವ ಶಕ್ತಿ ಇರುತ್ತದೆ. ಅಲ್ಲದೆ ಇದು ನಿಮ್ಮನ್ನು ಮಾನಸಿಕವಾಗಿಯೂ ತಿಳಿಯಾಗಿಸುವ ಮೂಲಕ ಸೆಕ್ಸ್ ಅಲ್ಲಿ ತೊಡಗಿಸಿಕೊಳ್ಳಲು ನಿಮ್ಮ ದೇಹವನ್ನು ಸಿದ್ಧಪಡಿಸುತ್ತದೆ. ವಾಕಿಂಗ್ ಮಾಡುವುದು, ಜಾಗಿಂಗ್ ಮಾಡುವುದು, ಈಜುವುದು ಅಥವಾ ಯೋಗ ಮಾಡುವುದು - ಇವೆಲ್ಲವೂ ನಿಮ್ಮ ಲೈಂಗಿಕ ಆಸಕ್ತಿ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತವೆ.


ನಿದ್ದೆ

ಕಳಪೆ ನಿದ್ದೆಯು ನಿಮ್ಮ ಲೈಂಗಿಕ ಆಸಕ್ತಿಯನ್ನು ಕುಗ್ಗಿಸಬಹುದು ಮತ್ತು ಕಳಪೆ ಗುಣಮಟ್ಟದ ನಿದ್ದೆಯಿಂದ ನಿಮ್ಮ ಶಕ್ತಿಯು ಕ್ಷೀಣಿಸಬಹುದು. ನಿಮಗೆ ಒಳ್ಳೆಯ ಮಟ್ಟದ ನಿದ್ದೆಯೊಂದಿಗೆ ಉತ್ತಮ ಲೈಂಗಿಕ ಆಸಕ್ತಿಯು ಬೇಕು ಎಂದರೆ, ನೀವು ಸಂಜೆ ಹೊತ್ತು ಲೈಟ್ ಆಗಿ ವ್ಯಾಯಾಮ ಮಾಡಲು ಶುರು ಮಾಡಬೇಕು. ನೀವು ವಾಕಿಂಗ್ ಅಥವಾ ಯೋಗ ಮಾಡುವುದರಿಂದ ನಿಮ್ಮ ಎಲ್ಲಾ ಶಕ್ತಿಯನ್ನು ಕಳೆದುಕೊಳ್ಳದೆ ನಿಮ್ಮ ದೇಹಕ್ಕೆ ಮತ್ತು ಮನಸ್ಸಿಗೆ ಆರಾಮ ತಂದುಕೊಳ್ಳಬಹುದು.


ಯೋನಿಯ ಶುಷ್ಕತೆಯೊಂದಿಗೆ ಹೋರಾಡಿ

ಯೋನಿಯ ಶುಷ್ಕತೆ - ಅಂದರೆ ಯೋನಿಯು ಒಣಗುವುದು ಲೈಂಗಿಕ ಇಂಗಿತ ಮತ್ತು ಹಿತ ಎರಡಕ್ಕೂ ತೊಡಕನ್ನು ಉಂಟು ಮಾಡುವ ವಿಷಯ. ಆದರೆ ಈ ಸಮಸ್ಯೆಯನ್ನು ನೀವು ಕೀಲೆಣ್ಣೆ ಬಳಸುವ ಮೂಲಕ ತಡಿಯಬಹುದು. ಆದರೆ ನೀವು ನೈಸರ್ಗಿಕವಾಗಿಯೂ ಇದನ್ನು ಬಗೆಹರಿಸಿಕೊಳ್ಳಬಹುದು. ಉದಾಹರಣೆಗೆ ತೆಂಗಿನ ಎಣ್ಣೆ ಬಳಸಬಹುದು.


ಒತ್ತಡ ಕಡಿಮೆ ಮಾಡಿಕೊಳ್ಳಿ

ಲೈಂಗಿಕ ಆಸಕ್ತಿ ಮೇಲೆ ಪ್ರಭಾವ ಬೀರುವ ಇನ್ನೊಂದು ವಿಷಯ ಎಂದರೆ ಅದು ಒತ್ತಡ. ಸಾಕಷ್ಟು ವಿಶ್ರಾಂತಿ, ಮಸಾಜ್, ವ್ಯಾಯಾಮ ಇವೆಲ್ಲವೂ ಒತ್ತಡದ ವಿರುದ್ಧ ಹೋರಾಡುತ್ತವೆ. ಅಲ್ಲದೆ ಬಿ-ಕಾಂಪ್ಲೆಕ್ಸ್ ಮಾತ್ರೆಗಳು ಸಹ ನಿಮಗೆ ಇದರ ವಿರುಧ್ಹ ಹೋರಾಡಲು ಸಹಾಯ ಮಾಡುತ್ತವೆ.  

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon