Link copied!
Sign in / Sign up
24
Shares

ನೀವು ಈ ಸಂಭೋಗ ಭಂಗಿಗಳನ್ನ ಪ್ರಯೋಗಿಸಿದರೆ ಲೈಂಗಿಕ ಪರಾಕಾಷ್ಠೆ ಗ್ಯಾರಂಟಿ!

ನಾವು ಯಾವಾಗಲೂ ಇನ್ನೂ ಉತ್ತಮವಾದ ಸೆಕ್ಸ್, ಇನ್ನೂ ಉತ್ತಮವಾದ ಲೈಂಗಿಕ ಪರಾಕಾಷ್ಠೆ, ಇನ್ನೂ ಉತ್ತಮವಾದ ಲೈಂಗಿಕ ಜೀವನ ನಮ್ಮದಾಗಿಸಿಕೊಳ್ಳಬಹುದು ಎಂಬುದನ್ನು ಕೇಳುತ್ತಲೇ ಇರುತ್ತೇವೆ. ಆದರೆ ನಾವು ನಮ್ಮ ಮನಸ್ಸಿನಾಳದಲ್ಲಿ ಅವಿತಿರುವ ಬಯಕೆಗಳನ್ನು ತಿಳಿಯುವುದು ಹೇಗೆ ಅಥವಾ ಅವುಗಳನ್ನು ಕಾರ್ಯರೂಪಕ್ಕೆ ತರುವುದು ಹೇಗೆ ಎಂಬುದರ ಬಗ್ಗೆ ಕರಾರುವಕ್ಕಾದ ಮಾಹಿತಿ ನಮಗೆ ಸಿಗುವುದೇ ಇಲ್ಲ. ಹೀಗಾಗಿ ನಾವು ಸೆಕ್ಸ್ ಥೆರಪಿಸ್ಟ್ ಆದ ವನೆಸ್ಸಾ ಮರೀನಾ ಅವರೊಂದಿಗೆ ಚರ್ಚಿಸಿ, ಹೆಣ್ಣಿನ ಲೈಂಗಿಕ ಪರಾಕಾಷ್ಠೆ ಹೊಂದಲು ಅತ್ಯಂತ ಸೂಕ್ತವಾದ ಸಂಭೋಗ ಭಂಗಿಗಳು ಯಾವುದು ಎಂಬ ಮಾಹಿತಿಯನ್ನು ಕಲೆ ಹಾಕಿದ್ದೇವೆ, ನೋಡಿ :

ಇದು ಏಕೆ ಕೆಲಸ ಮಾಡುತ್ತದೆ : ಈ ಭಂಗಿಯು ಹೆಂಗಸರಿಗೆ ಹೆಚ್ಚಿನ ನಿಯಂತ್ರಣ ನೀಡುತ್ತದೆ. ಇದು ಹೆಂಗಸರಿಗೆ ವೇಗ, ಕೋನ, ಆಳ ಮತ್ತು ಎಷ್ಟು ಪ್ರಚೋದನೆ ಬೇಕು ಎಂಬುದೆಲ್ಲದರ ನಿಯಂತ್ರಣ ನೀಡುತ್ತದೆ. ಅದಲ್ಲದೆ ಇದೇ ಭಂಗಿಯಲ್ಲಿ ನೀವು ಅನೇಕ ಪ್ರಯೋಗಗಳನ್ನು ಮಾಡಬಹುದು. ಇದು ಗಂಡಸರಿಗೆ ಅಷ್ಟೊಂದು ಪ್ರಚೋದಿಸದ ಭಂಗಿ ಆಗುವುದರಿಂದ, ಅವರು ನಿಮಗೆ ಇನ್ನೂ ಹೆಚ್ಚಿನ ಹೊತ್ತು ಸುಖ ನೀಡಬಹುದು. ಇದು ನಿಮಗೆ ಪರಾಕಾಷ್ಠೆ ಹೊಂದಲು ಸಮಯ ನೀಡುತ್ತದೆ.

 

ಇದು ಏಕೆ ಕೆಲಸ ಮಾಡುತ್ತದೆ : ಈ ಭಂಗಿಯು ನಿಮಗೆ ತುಂಬಾ ಆಳದವರೆಗೆ ಲೈಂಗಿಕ ಪ್ರಚೋದನೆ ಹೊಂದಲು ಸಹಾಯ ಮಾಡುತ್ತದೆ. ಕೇವಲ ಶಿಶ್ನ ನುಗ್ಗುಸುವಿಕೆಯಿಂದಲೇ ಲೈಂಗಿಕ ಪರಾಕಾಷ್ಠೆ ಹೊಂದುವ ಹೆಂಗಸರು ಈ ಭಂಗಿಯ ತೀವ್ರತೆ ಮತ್ತು ಜಿ-ಸ್ಪಾಟ್ ಪ್ರಚೋದನೆಯ ಉಪಯೋಗ ಪಡೆದುಕೊಳ್ಳಬಹುದು. ಚಂದ್ರನಾಡಿಯ (ಕ್ಲಿಟೋರಿಸ್) ಪ್ರಚೋದನೆ ಇಂದ ಲೈಂಗಿಕ ಪರಾಕಾಷ್ಠೆ ಹೆಂಗಸರು ಕೈಯಲ್ಲಿ ಪ್ರಚೋದನೆ ನೀಡಿಕೊಳ್ಳಲು ಕೂಡ ಇದು ಸೂಕ್ತ ಭಂಗಿ.

 

ಇದು ಏಕೆ ಕೆಲಸ ಮಾಡುತ್ತದೆ : ಬಹಳಷ್ಟು ಹೆಂಗಸರಿಗೆ ಇದು ಬಹಳ ಸೂಕ್ತವಾದ ಭಂಗಿ. ನಿಮ್ಮ ಸೊಂಟದ ಮೂಳೆಯ ಸ್ಥಿತಿಯನ್ನು ಬದಲಿಸುವ ಮೂಲಕ ನೀವು ನಿಮ್ಮ ಪತಿಯ ಸೊಂಟದ ಮೂಳೆಯ ಮೂಲಕ ನಿಮ್ಮ ಚಂದ್ರನಾಡಿಯನ್ನು ಉಜ್ಜುವ ಮೂಲಕ ಪ್ರಚೋದನೆ ನೀಡಲು ಅನುವು ಮಾಡಿಕೊಡಬಹುದು. ಇಂತಹ ನೇರ ಪ್ರಚೋದನೆಯು ಬಹಳಷ್ಟು ಹೆಂಗಸರಿಗೆ ಪರಾಕಾಷ್ಠೆ ಹೊಂದಲು ಸಹಾಯ ಮಾಡುತ್ತದೆ.

 

ಇದು ಏಕೆ ಕೆಲಸ ಮಾಡುತ್ತದೆ : ಇದು ರುಬ್ಬುವ ಚಟುವಟಿಕೆಯನ್ನು ಹೋಲುವ ಚಲನೆಯನ್ನು ಒಳಗೊಂಡಿದ್ದು, ಇದು ನಿಮಗೆ ಸಂಭೋಗದ ವೇಗ ಮತ್ತು ನಿಮ್ಮ ಚಂದ್ರನಾಡಿಯ ಮೇಲೆ ಎಷ್ಟು ಒತ್ತಡ ಬೀಳಬೇಕು ಎಂಬುದನ್ನು ನೀವೇ ನಿರ್ಧರಿಸುವ ಅವಕಾಶ ನೀಡುತ್ತದೆ. ಅಲ್ಲದೆ ಇದೊಂದು ವಿಭಿನ್ನ ಭಂಗಿ ಆಗಿದ್ದು, ಇದನ್ನು ಪ್ರಯೋಗಿಸುವ ವಿಷಯವೇ ನಿಮ್ಮನ್ನು ಮತ್ತಷ್ಟು ಪ್ರಚೋದಿಸಬಹುದು!

 

ಇದು ಏಕೆ ಕೆಲಸ ಮಾಡುತ್ತದೆ : ಇದು ಕೂಡ ನಿಮಗೆ ತುಂಬಾ ಆಳವಾದ ಪ್ರಚೋದನೆ ನೀಡುತ್ತದೆ ಮತ್ತು ನಿಮ್ಮ ಜಿ-ಸ್ಪಾಟ್ ಅನ್ನು ಅತ್ಯುತ್ತಮ ಕೋನದಲ್ಲಿ ಪ್ರಚೋದಿಸುತ್ತದೆ. ನಿಮ್ಮ ಚಂದ್ರಾನದಿಯು ಅವರ ಮುಂದೆ ಇರುತ್ತದೆ, ಹೀಗಾಗಿ ಅದನ್ನು ಪ್ರಚೋದಿಸಲು ನೀವೇ ಮುಂದಾಗಬಹುದು ಅಥವಾ ಅವರೇ ಮುಂದೆ ಬರಬಹುದು.

Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon