Link copied!
Sign in / Sign up
17
Shares

ಹೆಂಗಸರ ಕಾಂಡೋಮ್ : ಏನು? ಹೇಗೆ? ಯಾಕೆ? ವೀಡಿಯೊದೊಂದಿಗೆ

ಹೆಂಗಸರ ಕಾಂಡೋಮ್ ಅಥವಾ ಫೀಮೇಲ್ ಕಾಂಡೋಮ್ ಎಂದರೇನು?

ಫೀಮೇಲ್ ಕಾಂಡೋಮ್ ಅನ್ನುವುದು ಸಾಮಾನ್ಯ ಕಾಂಡೋಮಿಗೆ ಪರ್ಯಾವಾದ ಕಾಂಡೋಮ್. ಇವುಗಳು ಕೂಡ ಲೈಂಗಿಕವಾಗಿ ಹರಡುವ ಕಾಯಿಲೆಗಳಿಂದ ಆಗಲಿ ಅಥವ ಬೇಡದ ಗರ್ಭಧಾರಣೆ ಇಂದ ಆಗಲಿ ಅಷ್ಟೇ ರಕ್ಷಣೆ ಕೊಡುತ್ತವೆ. ಆದರೆ ಇವುಗಳಿಗೂ ಮತ್ತು ಸಾಮಾನ್ಯ ಕಾಂಡೋಮ್ ಗಳಿಗೂ ಏನು ವ್ಯತ್ಯಾಸ? ಸಾಮಾನ್ಯ ಕಾಂಡೋಮ್ ಗಳು ಗಂಡಸರ ಶಿಶ್ನದ ಮೇಲೆ ಧರಿಸಲ್ಪಟ್ಟರೆ, ಹೆಂಗಸರ ಕಾಂಡೋಮ್ ಅನ್ನು ಗರ್ಭಧಾರಣೆ ತಡೆಯಲು ಯೋನಿಯೊಳಗೆ ಇಟ್ಟುಕೊಳ್ಳಬೇಕು ಮತ್ತು ಲೈಂಗಿಕ ಕಾಯಿಲೆಗಳಿಂದ ರಕ್ಷಣೆಗಾಗಿ ಯೋನಿ ಮತ್ತು ಗುದದ್ವಾರದ ಒಳಗೆ ಬಳಸಬಹುದು. ಇವುಗಳನ್ನ ಕೆಲವೊಮ್ಮೆ ಆಂತರಿಕ ಕಾಂಡೋಮ್ (ಇಂಟರ್ನಲ್ ಕಾಂಡೋಮ್) ಎಂದು ಕೂಡ ಕರೆಯುವರು.

 ಹೆಂಗಸರ ಕಾಂಡೋಮ್ ಹೇಗೆ ಕಾರ್ಯ ನಿರ್ವಹಿಸುತ್ತದೆ?

ಹೆಂಗಸರ ಕಾಂಡೋಮ್ - ಅಥವಾ ಆಂತರಿಕ ಕಾಂಡೋಮ್ ಅಥವಾ ಕಂಪನಿಯ ಹೆಸರಿನಿಂದ ಕರಿಯುವುದಾದರೆ F2C ಕಾಂಡೋಮ್ ಒಂದು ಮೃದು ಪ್ಲಾಸ್ಟಿಕ್ ಚೀಲ ಆಗಿದ್ದು, ಇವುಗಳನ್ನ ನಿಮ್ಮ ಯೋನಿಯ ಒಳಗೆ ಇಟ್ಟುಕೊಳ್ಳಬೇಕು. ಇದು ನಿಮ್ಮ ಯೋನಿಯ ಒಳಭಾಗವನ್ನು ಮುಚ್ಚಿ, ವೀರ್ಯವು ಒಳಗೆ ಹೋಗಿ ಅಂಡಾಣು ಜೊತೆ ಫಲೀಕರಣ ಹೊಂದುವುದನ್ನು ನಿಲ್ಲಿಸುತ್ತದೆ. ವೀರ್ಯವು ಅಂಡಾಣು ಹತ್ತಿರ ಹೋಗದೆ ಇದ್ದರೆ, ಗರ್ಭ ಧರಿಸಲು ಆಗುವುದಿಲ್ಲ. ಅಷ್ಟೇ ಅಲ್ಲದೆ ಇದು ಲೈಂಗಿಕವಾಗಿ ಹರಡುವ ಕಾಯಿಲೆಗಳನ್ನು ಸಹ ತಡೆಗಟ್ಟುತ್ತದೆ.

ಹೆಂಗಸರ ಕಾಂಡೋಮ್ ಹಿತ ಮತ್ತು ನಿಯಂತ್ರಣ ಎರಡನ್ನೂ ನೀಡುತ್ತದೆ

ಹೆಂಗಸರ ಕಾಂಡೋಮ್ ಗಳು ಇವಾಗ ಎಲ್ಲೆಡೆ ಲಭ್ಯವಿದ್ದು, ನೀವು ಯಾವುದೇ ವೈದ್ಯರ ರಸೀದಿ ಅಥವಾ ಗುರುತಿನ ಚೀಟಿ ತೋರಿಸದೆ, ಇವುಗಳನ್ನ ಖರೀದಿಸಬಹುದು. ಉಳಿದೆಲ್ಲಾ ಕಾಂಡೋಮ್ ಗಳು ಶಿಶ್ನದ ಮೇಲೆ ಧರಿಸಬೇಕಾದ ಕಾರಣ, ಹೆಂಗಸರ ಕಾಂಡೋಮ್ ಹೆಂಗಸರಿಗೆ ಹೆಚ್ಚು ನಿಯಂತ್ರಣ ನೀಡುತ್ತದೆ. ನಿಮ್ಮ ಲೈಂಗಿಕ ಆರೋಗ್ಯದ ಮೇಲೆ ನಿಮಗೆ ಸಂಪೂರ್ಣ ಹಿಡಿತ ಇರುತ್ತದೆ. ಒಂದು ವೇಳೆ ನಿಮ್ಮ ಸಂಗಾತಿಯು ಕಾಂಡೋಮ್ ಧರಿಸಲು ಇಚ್ಛಿಸಲಿಲ್ಲ ಎಂದರೆ, ನೀವೇ ಧರಿಸಬಹುದು.  

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon