ನಾವೆಲ್ಲರೂ ಒಂದಲ್ಲ ಒಂದು ಸಲ ತಪ್ಪಾಗಿ ಮಾತಾಡೇ ಮಾತಾಡುತ್ತೀವಿ. ಇದರಿಂದ ನಮ್ಮ ಮಕ್ಕಳಿಗೆ ಕೆಲವೊಮ್ಮೆ ಬೇಜಾರು ಅಥವಾ ಸಿಟ್ಟು ಅಥವಾ ಗೊಂದಲ ಮೂಡಿಸುತ್ತೇವೆ. ನಿಮ್ಮ ಮತ್ತು ನಿಮ್ಮ ಮಗುವಿನ ನಡುವಿನ ಸಂಬಂಧ ರೂಪುಗೊಳ್ಳುತ್ತಿರುವ ಸಂದರ್ಭದಲ್ಲಿ ನೀವು ಆಡುವ ಪ್ರತಿಯೊಂದು ಮಾತು ಕೂಡ ಅವರ ಮೇಲೆ ತುಂಬಾ ಆಳವಾದ ಪರಿಣಾಮ ಬಿರ್ರುತ್ತದೆ. ಹೀಗಾಗಿ, ನೀವು ನಿಮ್ಮ ಮಕ್ಕಳ ಎದುರು ಎಂದಿಗೂ ಆಡಬಾರದ ಕೆಲವೊಂದು ಮಾತುಗಳು ಯಾವು ಎಂದು ನಾವು ತಿಳಿಸಿದ್ದೇವೆ ಓದಿ :
೧. “ನನಗೆ ಸ್ವಲ್ಪ ಒಬ್ಬಳೇ ಇರೋಕೆ ಬಿಡ್ತೀಯಾ!”
ಯಾವಾಗಲಾದರು ಒಮ್ಮೆ ಆದರು ಸ್ವಲ್ಪವೂ ಏಕಾಂತದ ಸಮಯವನ್ನೇ ಬಯಸದ ತಾಯಿ ಯಾರು ಇಲ್ಲ. ಹಾಗೇನಾದರೂ ಇದ್ದರೆ, ಅವರು ಯಾವುದೋ ದೈವಿಶಕ್ತಿ ಆಗಿರಬೇಕು ಅಷ್ಟೇ. ಎಲ್ಲರಿಗು ಸಾಂಧರ್ಬಿಕವಾಗಿ ಸ್ವಲ್ಪ ಏಕಾಂತ ಬೇಕಾಗುತ್ತದೆ. ಆದರೆ ನೀವು ಇದನ್ನೇ ಪದೇ ಪದೇ ಹೇಳಿದರೆ ತಪ್ಪಾಗುತ್ತದೆ. ಅಧ್ಯಯನಗಳ ಪ್ರಕಾರ ತಿಳಿದು ಬಂದಿರುವುದು ಏನೆಂದರೆ, ಹೀಗೆ ಪದೇ ಪದೇ ನೀವು ನಿಮ್ಮ ಮಕ್ಕಳನ್ನ ಸರಿಸುತ್ತಿದ್ದರೆ, ಅವರು “ಅಮ್ಮನ ಹತ್ರ ಏನೇ ಹೇಳಿದರು ಉಪಯೋಗ ಇಲ್ಲ, ಯಾಕಂದ್ರೆ ನಾವು ಏನೇ ಹೇಳಲು ಹೋದರು ಕಿವಿಗೆ ಹಾಕೊಳ್ಳುವುದಿಲ್ಲ” ಎಂದು ಅಂದುಕೊಳ್ಳುವರು. ಈ ವಯಸ್ಸಿನಲ್ಲಿ ಅವರು ಹೀಗೆ ಎಂದುಕೊಂಡರೆ, ಭವಿಷ್ಯದಲ್ಲಿ ಅವರು ನಿಮ್ಮ ಜೊತೆ ಯಾವುದೇ ವಿಷಯವನ್ನ ಹಂಚಿಕೊಳ್ಳಲು ಹಿಂದೆ ಮುಂದೆ ನೋಡುತ್ತಾರೆ.
೨. “ಅಳಬೇಡ! ಶ್!”
ಇದರ ಬದಲು ನೀವು “ಬೇಜಾರ್ ಆಗಬೇಡ ಚಿನ್ನು” ಅಥವಾ “ಚಿಕ್ಕ ಮಗು ಥರ ಅಳಬಾರದು ಅಲ್ವ?” “ ಹೆದರಿಕೊಳ್ಳುವುದು ಏನು ಆಗಿಲ್ಲ ಸುಮ್ಮನಾಗು ” ಎಂದು ಕೇಳಬಹುದು. ಮಕ್ಕಳಿಗೆ ತಮ್ಮ ಭಾವನೆಗಳನ್ನ ಮಾತಿನಲ್ಲಿ ಹೇಳಲು ಆಗದ ಕಾರಣ, ಅವರು ಅಳುವಿಗೆ ಮೊರೆ ಹೋಗುತ್ತಾರೆ. ಅವರಿಗೂ ಬೇಸರ ಆಗುತ್ತದೆ. ಅವರಿಗೂ ಆತಂಕ ಆಗುತ್ತದೆ. ನೀವು ನಿಮ್ಮ ಮಗುವನ್ನ ಈ ಭಾವನೆಗಳಿಂದ ರಕ್ಷಿಸಲು ಹಾಗೆ ವರ್ತಿಸುವಿರಿ ಎಂದು ನಮಗೆ ತಿಳಿಯುತ್ತದೆ. ಆದರೆ, ನೀವು ಹೀಗೆ ಮಾಡಿದರೆ ಮಗುವಿಗೆ ಸಮಾಧಾನ ಆಗುವ ಬದಲು, ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲದೆ ಅವರು ಅವರ ಭಾವನೆಗಳಿಗೆ ಮನೆಯಲ್ಲಿ ಏನು ಬೆಲೆ ಇಲ್ಲ ಎಂದು ಅಂದುಕೊಳ್ಳುವರು.
೩. “ಅಪ್ಪ ಬರಲಿ ಇರು ಇದೆ...”
ತುಂಬಾ ಸಾಮಾನ್ಯವಾಗಿ ಪೋಷಕರು ಬಳಸುವ ಈ ಮಾತು ಕೇವಲ ಒಂದು ಬೆದರಿಕೆ ಅಲ್ಲ, ಬದಲಿಗೆ ಒಂದು ಗಟ್ಟಿ ಇರದ ಶಿಸ್ತಿನ ಪಾಠ. ನಿಮ್ಮ ಮಾತುಗಳು ಪರಿಣಾಮಕಾರಿ ಆಗಿ ಇರಬೇಕೆಂದರೆ ನೀವು ಸಂದರ್ಭದ ಮೇಲಿನ ನಿಯಂತ್ರಣವನ್ನ ನೀವು ಕೂಡಲೇ ವಹಿಸಬೇಕಾಗುತ್ತದೆ. ನೀವು ಮುಂದೆ ಹಾಕಿದ್ದ ಶಿಸ್ತಿನ ಪಾಠವು, ಮಗುವಿನ ಮುಂದಿನ ನಡುವಳಿಕೆಗೆ ಸರಿಯಾಗಿ ಹೊಂದುವುದಿಲ್ಲ. ನಿಮ್ಮ ಮನೆಯವರು ಮನೆಗೆ ಬರುವ ಅಷ್ಟರಲ್ಲಿ ಮಗು ತಾನು ಏನು ತಪ್ಪು ಮಾಡಿದ್ದೇನು ಎಂಬುದನ್ನೇ ಮರೆತಿರಬಹುದು. ಅಲ್ಲದೆ, ಅಪ್ಪ ಮನೆಗೆ ಬಂದು ಶಿಕ್ಷೆ ಕೊಡುವರು ಎಂಬ ಕ್ರೂರ ಭಯವೇ ಆ ಮಗು ಮಾಡಿದ ಏನೇ ತಪ್ಪು ಕೆಲಸಕ್ಕಿಂತ ದೊಡ್ಡದಿರುತ್ತದೆ. ಇದು ಕೇವಲ ಮಕ್ಕಳ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ, ಬದಲಿಗೆ ಹೀಗೆ ಹೇಳುವುದು ನಿಮ್ಮ ಕೈಯಲ್ಲಿ ಯಾವುದೇ ಅಧಿಕಾರ ಅಥವಾ ಶಕ್ತಿ ಇಲ್ಲ ಎಂದು ಮಕ್ಕಳು ತಿಳಿದುಕೊಳ್ಳುವರು.
೪. “ಅವನ ಥರ ನಿಂಗೆ ಯಾಕೆ ಇರೋದಕ್ಕೆ ಆಗೋದಿಲ್ಲ”
ನಿಮ್ಮ ಸಂಬಂಧಿಕರ ಮಗುವನ್ನ ಅಥವಾ ನಿಮ್ಮ ಮಗುವಿನ ಸ್ನೇಹಿತನನ್ನ ಒಂದು ಮಾದರಿಯಾಗಿ ನಿಮ್ಮ ಮಗುವಿಗೆ ತೋರಿಸುವುದು ಸಹಾಯಕಾರಿ ಎನಿಸಬಹುದು. “ನೋಡು ಅವ್ನು ಶೂ ಎಷ್ಟು ಕ್ಲೀನ್ ಆಗಿ ಇಟ್ಟಿಕೊಳ್ತಾನೆ”, “ನೋಡು ಅವ್ನು ಎಷ್ಟು ಸೈಲೆಂಟ್ ಆಗಿ ಇರ್ತಾನೆ”, “ಅವನನ್ನ ನೋಡಿ ಓದೋದು ಕಲಿ”, ಹೀಗೆ ನಾವು ಹೋಲಿಕೆ ಮಾಡಿ ಬುದ್ಧಿಮಾತು ಹೇಳುತ್ತೇವೆ. ಆದರೆ ಈ ಹೋಲಿಕೆಗಳು ಹೆಚ್ಚಾಗಿ ವ್ಯತಿರಿಕ್ತ ಪರಿಣಾಮಗಳನ್ನೇ ಬೀರುವುದು. ಪ್ರತಿ ವಯಸ್ಕರನಂತೆ, ಪ್ರತಿ ಮಗುವು ವಿಭಿನ್ನ ಆಗಿರುತ್ತದೆ. ಮಕ್ಕಳು ಅವರದ್ದೇ ವೇಗದಲ್ಲಿ ಕಲಿಯುತ್ತಾರೆ ಹಾಗು ಅವರದ್ದೇ ಆದ ಮನೋಧರ್ಮ ಇರುತ್ತದೆ. ಅವರದ್ದೇ ಆದ ವ್ಯಕ್ತಿತ್ವ ಇರುತ್ತದೆ. ನಿಮ್ಮ ಮಗುವಿನ ಕೈಯಲ್ಲಿ ಆಕೆಗೆ ಇಷ್ಟವಿರದ ಅಥವಾ ಆಕೆ ಇನ್ನೂ ತಯಾರಾಗಿರದ ಕೆಲಸ ಮಾಡಿಸಲು ಒತ್ತಡ ಹೇರಿದರೆ, ಅವಳು ಗೊಂದಲಕ್ಕೆ ಈಡಾಗುವಳು ಮತ್ತು ಆಕೆಯ ಆತ್ಮ ವಿಶ್ವಾಸಕ್ಕೆ ಬಲವಾದ ಪೆಟ್ಟು ಬೀಳುತ್ತದೆ.
೫. “ನೀನು ದೊಡ್ಡ ...”
ಹಣೆಪಟ್ಟಿಗಳೇ ಮಕ್ಕಳ ವ್ಯಕ್ತಿತ್ವ ಬದಲಾವಣೆಗೆ ಅಡ್ಡದಾರಿಗಳು. “ನೀನು ದೊಡ್ಡ ಭಂಡ”, “ನೀನು ದೊಡ್ಡ ಉಡಾಳ” ಎಂದು ಅನ್ನುವುದು, ನಾವು ಬೇರೆಯವರ ಬಳಿ “ಅವ್ನು ಹಂಗೆ ಸ್ವಲ್ಪ ನಾಚಿಕೆ ಜಾಸ್ತಿ” ಹೇಳುವುದು, ಎಲ್ಲವನ್ನೂ ಮಕ್ಕಳು ಕೇಳಿಸಿಕೊಳ್ಳುತ್ತಾರೆ. ಮಕ್ಕಳು ಅಪ್ಪ ಅಮ್ಮ ಪದೇ ಪದೇ ಹೇಳುವುದನ್ನ ಪ್ರಶ್ನೆ ಮಾಡದೆ ಒಪ್ಪಿಕೊಂಡು ಬಿಡುತ್ತಾರೆ. ಈ ಮಾತುಗಳನ್ನ ಕೇಳಿದರೆ ಅವರು ತಾವು ತಮ್ಮ ಸ್ವಭಾವವೇ ಅದು ಎಂದು ಅದಕ್ಕೆ ಒಗ್ಗಿಕೊಳ್ಳುತ್ತಾರೆ. ಇಷ್ಟೇ ಅಲ್ಲ, ಒಳ್ಳೆಯ ಹಣೆಪಟ್ಟಿಗಳಾದ “ಅವನು ತುಂಬಾ ಬುದ್ದಿವಂತ” ಎಂದು ಅತಿಯಾಗಿ ಹೇಳುವುದು ಕೂಡ ಮಕ್ಕಳು ಅಪೇಕ್ಷೆಗಳನ್ನ ಪೂರೈಸುವ ಒತ್ತಡಕ್ಕೆ ಸಿಲುಕುವಂತೆ ಮಾಡುತ್ತದೆ. ಹೀಗಾಗಿ, ಯಾವುದೂ ಅತಿಯಾಗಬಾರದು. ಹಣೆಪಟ್ಟಿಗಳನ್ನ ನೀಡುವುದು ನಿಲ್ಲಿಸಿ. ಬೇರೆಯವರ ಬಳಿ ಮಾತಾಡುವಾಗಲು ನಿಮ್ಮ ಮಗುವಿನ ವ್ಯಕ್ತಿತ್ವದ ಬಗ್ಗೆ ಪದೇ ಪದೇ ಮಗುವಿನ ಮುಂದೆಯೇ ಮಾತಾಡಬೇಡಿ.
