Link copied!
Sign in / Sign up
1
Shares

ನಿಮ್ಮ ಋತುಸ್ರಾವ ಸಾಮಾನ್ಯಕ್ಕಿಂತ ಹೆಚ್ಚಾಗಲು ಕಾರಣಗಳು

ಋತುಬಂದದ(ಮುಟ್ಟಿನ) ವಿಷಯದಲ್ಲಿ, ಎಲ್ಲಾ ಮುಟ್ಟಿನ ದಿನಗಳು ಒಂದೇ ಸಮನಾಗಿ ಇರುವುದಿಲ್ಲ. ಯಾವುದೇ ಅರ್ಥದಲ್ಲೂ, ಕೆಲವರು ಹೆಚ್ಚು ಹರಿವನ್ನು ಅನುಭವಿಸುವರು, ಕೆಲವರು ಯೋನಿಯ ಉರಿಯನ್ನು ಅನುಭವಿಸುವರು. ವೈದ್ಯರು ಹೇಳುವ ಪ್ರಕಾರ ಮಹಿಳೆಯರು ತಮಗೆ ಸಹಜ ಮುಟ್ಟು ಯಾವುದು ಎಂದು ತಿಳಿದಿರುವರು, ಅಸಹಜ ಮುಟ್ಟನ್ನು ಅವರು ಅನುಭವಿಸಿದರೆ ವೈದ್ಯರನ್ನು ಭೇಟಿ ಮಾಡುವುದು ಸೂಕ್ತ ಎನ್ನುತ್ತಾರೆ. ಸಣ್ಣ ಗರ್ಭನಿರೋದ ಮಾತ್ರೆ ದೊಡ್ಡ ಸಮಸ್ಯೆಯನ್ನು ಎದುರಾಗುವಂತೆ ಮಾಡಬಹುದು. ಹೆಚ್ಚು ಋತುಸ್ರಾವವನ್ನು ಅನುಭವಿಸಲು ಕಾರಣ ಏನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

೧.ಜನನ ನಿಯಂತ್ರಣವನ್ನು ಬದಲಿಸಿರುವಿರಿ

ಹಾರ್ಮೋನು ಜನನ ನಿಯಂತ್ರಣ ಮಾತ್ರೆಗಳು ಹೆಚ್ಚಾಗಿ ನಿಯಂತ್ರಿಸುತ್ತವೆ ಮತ್ತು ಮುಟ್ಟನ್ನು ಕಡಿಮೆ ಮಾಡುತ್ತವೆ, ನಿಜ ಏನೆಂದರೆ, ಈ ಮಾತ್ರೆಗಳು ಹೆಚ್ಚು ಹರಿವನ್ನು ಕಡಿಮೆ ಮಾಡುತ್ತವೆ. ನೀವು ಮಾತ್ರೆಯನ್ನು ಬದಲಾಯಿಸಿದರೆ ಆ ಗರ್ಭ ನಿರೋಧಕ ಮಾತ್ರೆಯನ್ನು ತೆಗೆದುಕೊಳ್ಳುವುದನ್ನು ಕೂಡಲೇ ನಿಲ್ಲಿಸಿ. ಹಾರ್ಮೋನುಗಳಲ್ಲದ IUDಗಳು ಮಹಿಳೆಯರಲ್ಲಿ ಹೆಚ್ಚು ಋತುಚಕ್ರ ಆಗುವಂತೆ ಮಾಡುತ್ತದೆ. ಇದು ಹೀಗೆ ೩ ತಿಂಗಳು ಆದರೂ ಮುಂದುವರೆದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ.

೨.ಬೇಗ ಮುಟ್ಟಾಗುವುದು

ಅನೇಕ ಯುವತಿಯರು ನಾವು ಈ ವರ್ಗಕ್ಕೆ ಸೇರುವುದಿಲ್ಲ ಎಂದು ಭಾವಿಸುವರು, ಇದು ೩೦ರ ಯುವತಿಯರಲ್ಲಿ ಕಾಣಿಸಿಕೊಳ್ಳುತ್ತದೆ. ಅಂದರೆ ೩೦ರ ನಂತರ ವಯಸ್ಸಿನ ಹುಡುಗಿಯರಲ್ಲಿ ತಮ್ಮ ಮುಟ್ಟಿನ ಅವಧಿಗೆ ಮೊದಲೇ ಋತುಮತಿಯಾಗುವುದು. ಮುಟ್ಟಿನ ಬದಲಾವಣೆಗಳೆಂದರೆ ಋತುಬಂಧಕ್ಕೆ ಸಂಬಂಧಿಸಿದ ಬದಲಾವಣೆಗಳು ಕಂಡುಬರುವ ಮೊದಲ ಚಿಹ್ನೆ.

೩.ನೀವು  ಹೆಪ್ಪುರೋಧಕಗಳನ್ನು ಸೇವಿಸುತ್ತಿರುವಿರಿ

ಹೆಪ್ಪುರೋಧಕಗಳು(Anticoagulants), ಇದು ರಕ್ತವನ್ನು ತಿಳಿಮಾಡಲು ಬಳಸುವ ದ್ರವ, ಇದನ್ನು ಅಪಾಯ ಇರುವ ರಕ್ತ ಹೆಪ್ಪುಗಟ್ಟುವಿಕೆ ಇರುವವರು ಸೇವಿಸುತ್ತಾರೆ. ಇದು ರಕ್ತ ಸರಾಗವಾಗಿ ದೇಹದಲ್ಲಿ ಹರಿಯುವಂತೆ ಮಾಡುತ್ತದೆ. ಇದನ್ನು ಸೇವಿಸುವುದರಿಂದ ಹೃದಯಾಘಾತ ಮತ್ತು ಲಕ್ವವನ್ನು ತಡೆಯಲು ಇದು ಸಹಾಯ ಮಾಡುತ್ತದೆ, ಇದು ರಕ್ತವು ಸರಾಗವಾಗಿ ದೇಹದ ಎಲ್ಲಾ ಕಡೆ ಹರಿಯುವಂತೆ ಮಾಡುವುದರಿಂದ ಇದು ಸಾಧ್ಯ ಎಂದು ಸಂಶೋಧನೆ ಒಂದು ಹೇಳಿದೆ. ಹೆಚ್ಚು ಋತುಸ್ರಾವ ಆಗಲು ಇದುವೇ ಒಂದು ಕಾರಣ ಇರಬಹುದು.

೪.ರಕ್ತದ ಅಸ್ವಸ್ಥತೆ ಇರಬಹುದು

ಅಸಹಜ ಹೆಚ್ಚು ಋತುಸ್ರಾವ ರಕ್ತದ ಅಸ್ವಸ್ಥತೆಯ ಒಂದು ಚಿಹ್ನೆ ಆಗಿರಬಹುದು. ಹಲವು ಬಗೆಯ  ರಕ್ತದ ಸ್ಥಿತಿಗಳಿವೆ. ಈ ತೊಂದರೆ ನಿಮಗೆ ಇರಬಹುದು ಎಂದು ಅನಿಸಿದರೆ ನಿಮ್ಮ ವೈದ್ಯರನ್ನು ಭೇಟಿ ಮಾಡಿ.

೫.ನಿಮಗೆ ಗರ್ಭಕೋಶದ ಫೈಬ್ರಾಯ್ಡ್ ಇರಬಹುದು

ಗರ್ಭಾಶಯದೊಳಗೆ ಗರ್ಭಾಶಯದಲ್ಲದ ಸಣ್ಣ ಬೆಳವಣಿಗೆಗಳು ಗರ್ಭಾಶಯದ ಫೈಬ್ರಾಯ್ಡ್ಗಳಾಗಿವೆ, ಇದು ಕೇಳಲು ಹೆದರಿಕೆಯಾದರು, ನೀವು ಅಂದುಕೊಂಡಿರುವುದಕ್ಕಿಂತ ಇದು ತುಂಬಾ ಸಾಮಾನ್ಯವಾದದ್ದು. ಒಂದು ಸಂಶೋಧನೆಯ ಪ್ರಕಾರ ಶೇಕಡಾ ೭೦ರಷ್ಟು ಮಹಿಳೆಯರು ಕನಿಷ್ಠ ಒಂದನ್ನು ಅವರು ೫೦ನೇ ವಯಸ್ಸನ್ನು ತಲುಪುವಷ್ಟರಲ್ಲಿ ಅನುಭವಿಸುವರಂತೆ. ಮತ್ತು ಇದರ ಮುಖ್ಯ ಲಕ್ಷಣವೆಂದರೆ, ಹೆಚ್ಚು ಋತುಸ್ರಾವ ಆಗುವುದು. ಕೆಲವೊಮ್ಮೆ ಮುಟ್ಟಿನ ನಡುವೆ ಹೆಪ್ಪುಗಟ್ಟಿದ ರಕ್ತದ ಕಲೆ ಅಥವಾ ರಕ್ತಸ್ರಾವ ಆಗುವುದು.

೬.ನಿಮಗೆ ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್ ಇರಬಹುದು

ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್ (PCOS) ಫೌಂಡೇಶನ್ ಪ್ರಕಾರ, 10% ರಷ್ಟು ಮಹಿಳೆಯರಿಗೆ PCOS ಇದೆ. ಮತ್ತು ಇದರಲ್ಲಿ 50% ರಷ್ಟು ಮಹಿಳೆಯರಿಗೆ ತಮಗೆ PCOS ಇದೆ ಎಂಬುದು ತಿಳಿದಿಲ್ಲ. PCOS ಇರುವ ಮಹಿಳೆಯರು ಕೋಶಗಳ ಗೊಂಚಲನ್ನು ಹೊಂದಿರುವರು, ಇದು ಅವರು ಹೆಚ್ಚು ಮುಟ್ಟನ್ನು ಅನುಭವಿಸುವಂತೆ ಮಾಡುತ್ತದೆ.

೭.ನಿಮಗೆ ಸೋಂಕು ತಗುಲಿರಬಹುದು

ಹೌದು, ಇದು ಲೈಂಗಿಕವಾಗಿ ಹರಡುವ ವೈವಿಧ್ಯತೆಯ ಸೋಂಕುಗಳನ್ನು ಒಳಗೊಂಡಿದೆ. ಗರ್ಭಾಶಯದ ಸ್ನಾಯುವಿನ ಎಳೆಗಳಲ್ಲಿನ ಯಾವುದೇ ಸೋಂಕುಗಳು ಭಾರಿ ಸ್ರಾವವನ್ನು ಉಂಟು ಮಾಡುತ್ತವೆ. ಒಂದು ವೇಳೆ ನೀವು ರಕ್ಷಣೆ ಇಲ್ಲದ ಲೈಂಗಿಕ ಕ್ರಿಯೆಯಲ್ಲಿ ನೀವು ಭಾಗಿಯಾಗಿ ಅಸಹಜ ಮುಟ್ಟನ್ನು ಮತ್ತು ಸ್ರಾವವನ್ನು ಅನುಭವಿಸುತ್ತಿದ್ದರೆ ಕೂಡಲೇ ವೈದ್ಯರನ್ನು ಭೇಟಿ ಆಗುವುದು ಒಳ್ಳೆಯದು.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon