Link copied!
Sign in / Sign up
1
Shares

ಹೆಚ್ಚು ಮಕ್ಕಳನ್ನು ಮಾಡಿಕೊಂಡರೆ ಹೆಂಗಸರು ಈ ಕಾಯಿಲೆಗೆ ತುತ್ತಾಗುವ ಸಾಧ್ಯತೆ 70% ಹೆಚ್ಚುತ್ತದೆ!

ಒಂದು ಹೆಣ್ಣು ಹೆಚ್ಚು ಮಕ್ಕಳನ್ನು ಪಡೆದುಕೊಳ್ಳಬೇಕು ಎಂದು ಯೋಚಿಸುವ ಹಿಂದೆ ಹಲವಾರು ಲೆಕ್ಕಾಚಾರಗಳು ಇರುತ್ತವೆ, ಆದರೆ ಆ ಲೆಕ್ಕಾಚಾರಗಳಲ್ಲಿ ತಮ್ಮ ದೇಹ ಮತ್ತು ಆರೋಗ್ಯದ ಮೇಲೆ ಆಗಬಹುದಾದ ಪರಿಣಾಮಗಳನ್ನು ಒಮ್ಮೆಯೂ ಪರಿಗಣನೆಗೆ ತೆಗೆದುಕೊಂಡಿರುವುದಿಲ್ಲ ಎನ್ನುವುದೇ ವಿಪರ್ಯಾಸ. ಆದರೆ ಇತ್ತೀಚಿಗೆ ನಡೆದ ಒಂದು ಅಧ್ಯಯನದ ಪ್ರಕಾರ, ಹೆಂಗಸರು ದೊಡ್ಡದೊಂದು ಸಂಸಾರವನ್ನು ಕಟ್ಟಿಕೊಳ್ಳುವ ಮುನ್ನ ಇನ್ನಷ್ಟು ಸಂಗತಿಗಳನ್ನ ಪರಿಗಣನೆಗೆ ತೆಗೆದುಕೊಂಡು, ಯೋಚಿಸಬೇಕು ಎಂಬುದನ್ನು ತೋರಿಸುತ್ತದೆ. ಹೆಚ್ಚು ಮಕ್ಕಳು ಹೊಂದಿದಷ್ಟು ನಿಮಗೆ ಅಲ್‌ಝೈಮರ್ ಉಂಟಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ ಎಂಬುದನ್ನು ಸಂಶೋಧಕರು ಕಂಡು ಹಿಡಿದಿದ್ದಾರೆ. ಅದರಲ್ಲೂ ಮುಖ್ಯವಾಗಿ 5 ಅಥವಾ ಅದಕ್ಕಿಂತಲೂ ಹೆಚ್ಚಿನ ಮಕ್ಕಳನ್ನು ಹೊಂದುವುದು. ಇದಕ್ಕೆ ಹಾರ್ಮೋನಲ್ ಬದಲಾವಣೆ ಕಾರಣ ಇರಬಹುದು ಎಂಬುದು ಒಂದು ಊಹೆ ಆಗಿದ್ದರೂ, ಹೆಚ್ಚು ಮಕ್ಕಳು ಹೊಂದುವುದು ಈ ಅಪಾಯ ಉಂಟಾಗುವ ಸಾಧ್ಯತೆಗಳನ್ನು ಹೆಚ್ಚಿಸುವುದು ಏಕೆ ಎಂಬುದು ಇನ್ನೂ ನಿಖರವಾಗಿ ಸ್ಪಷ್ಟವಾಗಿಲ್ಲ.

ಸಂಶೋಧಕರು ಹೆಂಗಸರ ಕುಟುಂಬದ ಗಾತ್ರವು ಅವರ ಅರಿವಿನ ಶಕ್ತಿಯ (ಕಾಗ್ನಿಟಿವ್ ಸ್ಕಿಲ್ಸ್) ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಕಂಡು ಹಿಡಿಯಲು ದಕ್ಷಿಣ ಕೊರಿಯಾದ ಮತ್ತು ಗ್ರೀಸ್ ದೇಶದ ಒಟ್ಟು 3500 ಹೆಂಗಸರನ್ನು ಗಮನಿಸಿದರು. CNN ಪ್ರಕಾರ, ಈ ಅಧ್ಯಯನವು ಯಾರೆಲ್ಲಾ ಹೆಂಗಸರು 5 ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆ ಮಕ್ಕಳನ್ನು ಹೊಂದಿರುತ್ತಾರೋ, ಅವರಿಗೆ ಅಲ್‌ಝೈಮರ್ ಕಾಯಿಲೆ ಉಂಟಾಗುವ ಸಾಧ್ಯತೆಗಳು ಉಳಿದವರಿಗಿಂತ 70% ಹೆಚ್ಚು ಇರುತ್ತದೆ ಎಂಬುದನ್ನು ಸೂಚಿಸಿದೆ. ಇದಲ್ಲದೆ ಮರೆವಿನ ಕಾಯಿಲೆ ಇಲ್ಲದ 5 ಅಥವಾ ಹೆಚ್ಚಿನ ಮಕ್ಕಳ ತಾಯಂದಿರು ಕೂಡ ಕಾಗ್ನಿಟಿವ್ ಸ್ಕಿಲ್ ಪರೀಕ್ಷೆ ಅಲ್ಲಿ ಇತರರಿಗಿಂತ ಕಡಿಮೆ ಪ್ರದರ್ಶನ ತೋರಿಸಿದ್ದಾರೆ.

ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಹೆಂಗಸರೂ 60ರ ಗಡಿ ದಾಟಿದ್ದವರು. ಈ ಗುಂಪಿನ ಸರಾಸರಿ ವಯಸ್ಸು 71 ಆಗಿತ್ತು. 60 ವರ್ಷ ವಯಸ್ಸಾದ ಮೇಲೆ, 6 ಜನ ಹೆಂಗಸರಲ್ಲಿ 1 ಹೆಂಗಸಿಗೆ ಅಲ್‌ಝೈಮರ್ ಉಂಟಾಗುವ ಸಾಧ್ಯತೆಗಳು ಇರುತ್ತವೆ. ಇದು ಸ್ತನ ಕ್ಯಾನ್ಸರ್ ಉಂಟಾಗುವ ಸಾಧ್ಯತೆಗಿಂತ ತುಂಬಾನೇ ಹೆಚ್ಚು. ಏಕೆಂದರೆ 11 ಹೆಂಗಸರಲ್ಲಿ 1 ಹೆಂಗಸಿಗೆ ಸ್ತನ ಕ್ಯಾನ್ಸರ್ ಉಂಟಾಗುವ ಸಾಧ್ಯತೆಗಳು ಇರುತ್ತವೆ.


ದಕ್ಷಿಣ ಕೊರಿಯಾದ ಸಿಯೋಲ್ ನ್ಯಾಷನಲ್ ಯೂನಿವರ್ಸಿಟಿಯ ನರರೋಗವೈದ್ಯರಾದ ಡಾ ।। ಕಿ ವೂನ್ಗ್ ಕಿಮ್ ಅವರು ಹೇಳುವಂತೆ ಹೆಚ್ಚು ಗರ್ಭಧಾರಣೆಗಳು - ಹೆರಿಗೆಗಳು ಹೇಗೆ ಅಲ್‌ಝೈಮರ್ ಉಂಟಾಗುವ ಸಾಧ್ಯತೆಗಳನ್ನು ಹೆಚ್ಚಿಸುತ್ತವೆ ಎಂಬುದಕ್ಕೆ ಇನ್ನೂ ನಿಖರವಾದ ಕಾರಣ ಸ್ಪಷ್ಟವಾಗಿಲ್ಲವಾದರೂ, ಇದಕ್ಕೆ ಹಾರ್ಮೋನಲ್ ಬದಲಾವಣೆಗಳು ಕಾರಣ ಇರಬಹುದು. ಈಗಾಗಲೇ ಹೆಂಗಸರಿಗೆ ಗರ್ಭಧಾರಣೆ ಮತ್ತು ಪ್ರೆಗ್ನನ್ಸಿಯ ಬಗ್ಗೆ ಅಪಾರ ಮಾಹಿತಿ ಲಭ್ಯವಿದ್ದು, ಈ ಅಧ್ಯಯನದಿಂದ ಸಿಕ್ಕ ಮಾಹಿತಿಯನ್ನು ಕೂಡ ಹೆಂಗಸರು ತಲೆಯಲ್ಲಿ ಇಟ್ಟುಕೊಂಡು ತಮ್ಮ ಭವಿಷ್ಯದ ನಿರ್ಧಾರಗಳನ್ನ ತೆಗೆದುಕೊಳ್ಳಬೇಕು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon