Link copied!
Sign in / Sign up
4
Shares

ಅತಿ ಹೆಚ್ಚು ಅಥವಾ ಅತಿ ಕಡಿಮೆ ಸಂಭೋಗ : ನೀವು ತಿಳಿದಿರಬೇಕಾದ ವಿಷಯ !

ಸಂಭೋಗದಲ್ಲಿ ತೊಡಗುವುದು ಮಾನವನ ಪ್ರಕ್ರಿಯೆಯ ಒಂದು ಭಾಗವಾಗಿದ್ದರು, ಅದನ್ನು ಅತಿ ಹೆಚ್ಚು ಅಥವಾ ಅತಿ ಕಡಿಮೆ ಮಾಡುವುದು ಅವನ/ಅವಳ ದೇಹದ ಮೇಲೆ ಪರಿಣಾಮ ಬೀರಬಹುದು. ಅತಿ ಹೆಚ್ಚು ಅಥವಾ ಅತಿ ಕಡಿಮೆ ಸಂಭೋಗ ಮಾಡುವುದರಿಂದ ಏನಾಗುತ್ತದೆ ಎಂಬುದನ್ನು ತಿಳಿಯಲು ಮುಂದೆ ಓದಿ.

ನೀವು ತುಂಬಾ ದಿನಗಳಿಂದ ಗರ್ಭಧರಿಸಲು ಪ್ರಯತ್ನಿಸುತ್ತಿರುವಿರಾ? ಆದರೂ ನೀವು ಗರ್ಭಿಣಿ ಆಗುತ್ತಿಲ್ಲವೇ? ಹಾಗಾದರೆ ನೀವು ಏಕೆ ಗರ್ಭಿಣಿ ಆಗುತ್ತಿಲ್ಲ ಎಂಬುದಕ್ಕೆ ಕಾರಣವನ್ನು ತಿಳಿದು ಅದನ್ನು ಸರಿಪಡಿಸಿಕೊಳ್ಳುವುದಕ್ಕೆ ಇದು ಸರಿಯಾದ ಸಮಯ.

ಅತಿ ಹೆಚ್ಚು ಅಥವಾ ಅತಿ ಕಡಿಮೆ ಲೈಂಗಿಕ ಕ್ರಿಯೆ

ಸಂತಾನೋತ್ಪತ್ತಿ ಮಾಡಲು ಮತ್ತು ಆಹ್ಲಾದಕರ ತೃಪ್ತಿ ಪಡೆಯಲು ಮಾನವನಿಗೆ ಲೈಂಗಿಕ ಕ್ರಿಯೆ ಅವಶ್ಯವಾಗಿದೆ. ಮತ್ತು ಜನರು ಇದನ್ನು ಹೆಚ್ಚಾಗಿ ಮಾಡುವರು.

ಲೈಂಗಿಕ ಕ್ರಿಯೆ ಹೆಚ್ಚಾದರೆ

ಕೆಲವರು ಹೆಚ್ಚು ಬಾರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡರೆ ಗರ್ಭಧರಿಸಲು ಸುಲಭವಾಗುತ್ತದೆ ಎಂದು ನಂಬಿದ್ದಾರೆ. ಆದರೆ ಇದು ಯಾವಾಗಲು ನಿಜವಲ್ಲ. ಹೆಚ್ಚು ಲೈಂಗಿಕ ಕ್ರಿಯೆ ಇಂದ ಪುರುಷನ ವೀರ್ಯಕ್ಕೆ ಯಾವುದೇ ತೊಂದರೆ ಇಲ್ಲವಾದರೂ, ಇದನ್ನು ಹೆಚ್ಚು ಬಾರಿ ಮಾಡುವುದರಿಂದ ದೇಹದ ಆರೋಗ್ಯದಲ್ಲಿ ಸಮಸ್ಯೆಯನ್ನು ಕಾಣಬಹುದು, ಅದು, ಸುಸ್ತು, ತಲೆ ತಿರುಗುವಿಕೆ, ಮೊಣಕಾಲು ದುರ್ಬಲವಾಗುವುದು ಮತ್ತು ಹೆಚ್ಚು ಬಾರಿ ಮೂತ್ರ ವಿಸರ್ಜನೆ ಮಾಡುವಂತಹ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ನೀವು ಹೆಚ್ಚು ಬಾರಿ ಪದೇ ಪದೇ ಸಂಭೋಗ ಮಾಡುವುದರಿಂದ ಭ್ರೂಣ ಚಿಗುರೊಡೆಯುವ ಮುನ್ನ ನಿಮ್ಮ ಶಾಖಕ್ಕೆ ಸುಟ್ಟು ಹೋಗಬಹುದು. ಇದರಿಂದ ಗರ್ಭಧರಿಸುವ ಅವಕಾಶ ಕಡಿಮೆ ಆಗುತ್ತದೆ.

ಕಡಿಮೆ ಲೈಂಗಿಕ ಕ್ರಿಯೆ ಮಾಡಿದರೆ

ನೀವು ವೀರ್ಯವನ್ನು ಉಳಿಸಿಕೊಳ್ಳಲು ಅಥವಾ ಅಂಡೋತ್ಪತ್ತಿ ಆಗುವಾಗ ಮಾತ್ರ ಸಂಭೋಗ ಮಾಡಿದರೆ, ಅದು ಪರಿಣಾಮ ಬೀರಬಹುದು. ನೀವು ಹಲವು ದಿನಗಳ ಕಾಲ ಸಂಭೋಗದಿಂದ ದೂರ ಇದ್ದರೆ ಅದು ನೀವು ಗರ್ಭಿಣಿ ಆಗುವುದರ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ನೀವು ಯಾವಾಗಲು ಅಂಡೋತ್ಪತ್ತಿ ಸಮಯಕ್ಕೆ ಸಂಭೋಗ ಮಾಡಲು ಸಾಧ್ಯವಾಗುವುದಿಲ್ಲ.

ನೀವು ಏನು ಮಾಡಬೇಕು?

ನಿಯಮಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಅಭ್ಯಾಸ ಮಾಡಿಕೊಳ್ಳಿ, ಮತ್ತು ನಿಮ್ಮ ಅಂಡೋತ್ಪತ್ತಿ ಆಗುವ ದಿನವನ್ನು ಸೂಕ್ಷ್ಮವಾಗಿ ಗಮನಿಸಿ. ನಿಮಗೆ ಅನಿಯಮಿತ ಮುಟ್ಟಿನ ದಿನಗಳು ಇದ್ದರೆ ಅಥವಾ ಫಲವತ್ತತೆಯ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು ಕಷ್ಟವಾಗುತ್ತಿದ್ದರೆ ವೈದ್ಯರ ಸಲಹೆ ಪಡೆಯಿರಿ. ಅಥವಾ ನಿಮ್ಮ ಪಲವತ್ತತೆ ದಿನವನ್ನು ಕಂಡುಹಿಡಿಯಲು ಒವುಲೇಷನ್ ಕಿಟ್ ಅನ್ನು ಬಳಸಿ. ಅದರ ಫಲಿತಾಂಶದಲ್ಲಿ ಒವುಲೇಷನ್ ಆಗಲು ಒಂದು ಅಥವಾ ಎರಡು ದಿನ ಇದೆ ಎಂದು ತೋರಿಸುತ್ತಿದ್ದರೆ, ಆ ಸಮಯದಲ್ಲಿ ನೀವು ಸಂಭೋಗದಲ್ಲಿ ತೊಡಗಿಕೊಳ್ಳಿ. ನೆನಪಿರಲಿ ನೀವು ಮಗುವಿಗಾಗಿ ಸಂಭೋಗದಲ್ಲಿ ತೊಡಗಿಕೊಳ್ಳಬೇಡಿ, ಅದರಿಂದ ನೀವು ಈ ಪ್ರಕ್ರಿಯೆಯನ್ನು ಅನುಭವಿಸಲು ಸಾಧ್ಯವಿಲ್ಲ. ಯಾವುದೇ ಒತ್ತಡ ಇರದೇ ಖುಷಿಯನ್ನು ಅನುಭವಿಸಿ ಮಾಡುವುದರಿಂದ ಆಹ್ಲಾದದ ಅನುಭವದ ಜೊತೆ ನೀವು ಬೇಗನೆ ಗರ್ಭಧರಿಸಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon