Link copied!
Sign in / Sign up
3
Shares

ಲೈಂಗಿಕವಾಗಿ ಹೆಚ್ಚು ಸಕ್ರಿಯವಾದ ದಂಪತಿಗಳ 6 ಗುಟ್ಟುಗಳು ಏನು ಗೊತ್ತಾ?!

ಎಲ್ಲಾ ಸಂಬಂಧಗಳಲ್ಲೂ ಏಳು ಬೀಳುಗಳು ಇದ್ದೇ ಇರುತ್ತವೆ. ಒಂದು ವೇಳೆ ನೀವು ಮತ್ತು ನಿಮ್ಮ ಪತಿ ಈಗ ಬರಗಾಲದ ಬದುಕು ಬದುಕುತ್ತಿದ್ದರೆ - ಅಂದರೆ ಬೇಕಿರುವಷ್ಟು ಲೈಂಗಿಕ ಕ್ರಿಯೆಯಲ್ಲಿ ತೊಡಗದೆ ಇದ್ದರೆ ಅಥವಾ ನಿಮ್ಮ ಸಂಬಂಧದಲ್ಲಿ ಲೈಂಗಿಕತೆಗೆ ಸಿಗಬೇಕಿರುವ ಮಾನ್ಯತೆ ಸಿಗದೇ ಇದ್ದರೆ, ನಿಮ್ಮ ಜೀವನವನ್ನು ಪುನಃ ಸರಿಯಾದ ದಾರಿಗೆ ತರಲು ಇದು ಸೂಕ್ತ ಸಮಯ. ಹಾಗಿದ್ದರೆ, ಖುಷಿಯಾಗಿರುವ ಮತ್ತು ಲೈಂಗಿಕ ತೃಪ್ತಿ ಹೊಂದಿರುವ ಇತರೆ ದಂಪತಿಗಳು ಹೇಗಿರುತ್ತಾರೆ? ಹೀಗಾಗಿ ನಾವು ಲೈಂಗಿಕ ತಜ್ಞರೊಂದಿಗೆ ಮಾತನಾಡಿ, ಲೈಂಗಿಕವಾಗಿ ಹೆಚ್ಚು ಸಕ್ರಿಯವಾಗಿರುವ ದಂಪತಿಗಳ ಗುಣಗಳು ಯಾವ್ಯಾವು ಎಂಬುದನ್ನು ಕಲೆ ಹಾಕಿದ್ದೇವೆ, ಓದಿ :

೧. ಒಬ್ಬರ ನ್ಯೂನ್ಯತೆಗಳನ್ನ ಇನ್ನೊಬ್ಬರು ಒಪ್ಪಿಕೊಳ್ಳುತ್ತಾರೆ

ಜೀವನವು ಪರಿಪೂರ್ಣ ಅಲ್ಲ, ಅದೇ ರೀತಿ ಸೆಕ್ಸ್ ಕೂಡ ಪರ್ಫೆಕ್ಟ್ ಅಲ್ಲ. ಹೆಚ್ಚು ಸೆಕ್ಸ್ ಅಲ್ಲಿ ತೊಡಗಿಕೊಳ್ಳುವ ದಂಪತಿಗಳು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಪರ್ಫೆಕ್ಟ್ ಸಮಯ ಯಾವುದು ಎಂದು ಹುಡುಕುವುದಿಲ್ಲ. ದೈನಂದಿನ ಜೀವನದಲ್ಲಿ ಕೆಲಸದ ಒತ್ತಡ, ಕೌಟುಂಬಿಕ ಒತ್ತಡ, ಮನೆಯ ಒತ್ತಡ ಮತ್ತು ಹಲವಾರು ಅಂಶಗಳು ಪರಿಗಣನೆಗೆ ಬರುತ್ತವೆ ಎನ್ನುತ್ತಾರೆ ಲೈಂಗಿಕ ತಜ್ಞರಾದ ಡಾ ।। ಹಾಲಿ ರಿಚ್ಮಂಡ್. ಹೆಚ್ಚೆಚ್ಚು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವ ದಂಪತಿಗಳು, ಪರ್ಫೆಕ್ಟ್ ಅಲ್ಲದ ಕ್ಷಣಗಳನ್ನೂ ಸದುಪಯೋಗ ಮಾಡಿಕೊಳ್ಳುತ್ತಾರೆ.

೨. ಅವರು ಯಾವಾಗಲು ಲೈಂಗಿಕವಾಗಿ ಸ್ವಾರ್ಥಿಗಳಾಗಿರುವುದಿಲ್ಲ

ಸುಖ ಅನುಭವಿಸುವ ತವಕದಲ್ಲಿ ಕಳೆದು ಹೋಗುವುದು ಬಹಳ ಸುಲಭ, ಆದರೆ ಒಳ್ಳೆಯ ಲೈಂಗಿಕ ಕ್ರಿಯೆ ಆಗಬೇಕಿದ್ದರೆ ಅದರಲ್ಲಿ ಪಾಲ್ಗೊಳ್ಳುವ ಇಬ್ಬರೂ ಕೂಡ ತುಂಬಾ ಸ್ವಾರ್ಥಿಗಳು ಆಗಬಾರದು. ಹೆಚ್ಚು ಸೆಕ್ಸ್ ಅಲ್ಲಿ ತೊಡಗಿಕೊಳ್ಳುವ ದಂಪತಿಗಳಿಗೆ ಸೆಕ್ಸ್ ಅನ್ನುವುದು ಕೇವಲ ಪತಿಯ ಖುಷಿ ಎಂದಾಗಲಿ ಅಥವಾ ಕೇವಲ ಪತ್ನಿಯ ಖುಷಿ ಎಂದಾಗಲಿ ಆಗಿರುವುದಿಲ್ಲ. ಈ ದಂಪತಿಗಳು ಒಬ್ಬರಿಗೆ ಏನು ಬೇಕೆಂದು ಇನ್ನೊಬ್ಬರು ಸರಿಯಾಗಿ ಕೇಳಿಕೊಳ್ಳುತ್ತಾರೆ, ಮುಖ್ಯವಾಗಿ ಸೆಕ್ಸ್ ವಿಷಯ ಬಂದಾಗ.

೩. ಅವರ ದೇಹಗಳ ಬಗ್ಗೆ ಅವರಿಗೆ ಸಂಪೂರ್ಣ ತೃಪ್ತಿ ಇರುತ್ತದೆ

ಹೆಚ್ಚೆಚ್ಚು ಸೆಕ್ಸ್ ಅಲ್ಲಿ ತೊಡಗಿಸಿಕೊಳ್ಳುವುದು ಎಂದರೆ, ಅದಕ್ಕೆ ಮೊದಲು ಮಾಡಬೇಕಿರುವುದು ನಿಮ್ಮ ದೇಹವನ್ನ ನೀವು ಪ್ರೀತಿಸುವುದು. ಯಾರು ತಮ್ಮ ದೇಹವನ್ನು ಇಷ್ಟಪಡುತ್ತಾರೋ ಅವರು ತಮ್ಮ ದೇಹ ಹೇಗೆ ಕಾಣುತ್ತದೆಯೋ, ಹೇಗೆ ಅನಿಸುತ್ತದೆಯೋ, ಎಂತ ವಾಸನೆ ಬಿರುತ್ತದೆಯೋ ಎಂಬ ಯೋಚನೆಗಳಿಗೆ ನೇತುಬೀಳುವುದಿಲ್ಲ. ಪರಸ್ಪರರ ಇರುವಿಕೆಯನ್ನು ಇಷ್ಟ ಪಡುತ್ತಾರೆ ಹಾಗು ಯಾವುದೇ ಯೋಚನೆಗಳಿಗೆ ಜೋತುಬೀಳದೆ, ಸುಮಧುರ ಕ್ಷಣಗಳ ಪೂರ್ತಿ ಅನುಭವ ಪಡೆದುಕೊಳ್ಳುತ್ತಾರೆ.

೪. ಒಬ್ಬರನ್ನೊಬ್ಬರು ನಂಬುತ್ತಾರೆ

ಲೈಂಗಿಕವಾಗಿ ಹೆಚ್ಚು ಸಕ್ರಿಯವಾಗಿರುವ ದಂಪತಿಗಳ ಒಂದು ಮುಖ್ಯ ಲಕ್ಷಣ ಎಂದರೆ ಅದು ಒಬರನ್ನೊಬ್ಬರು ತುಂಬಾನೇ ನಂಬುತ್ತಾರೆ. ನಿಮ್ಮಿಬ್ಬರ ನಡುವೆ ವಿಶ್ವಾಸದ ಕೊರತೆ ಇದ್ದರೆ, ಲೈಂಗಿಕವಾಗಿ ಹೆಚ್ಚು ಸಕ್ರಿಯವಾಗಲು ಸಾಧ್ಯವೇ ಇಲ್ಲ. ನಂಬಿಕೆ ಮತ್ತು ಅನ್ಯೋನ್ಯತೆ ಎರಡು ಒಂದಕ್ಕೊಂದು ಬೆಸೆದು ಕೊಂಡಿದ್ದು, ಒಂದಿಲ್ಲದೆ ಇನ್ನೊಂದನ್ನು ಹೊಂದಲು ಸಾಧ್ಯವಿಲ್ಲ. ವಿಶ್ವಾಸದ ವಿಷಯಗಳನ್ನ ಈ ದಂಪತಿಗಳು ಮಾತನಾಡಿಕೊಂಡು ಬಗೆಹರಿಸಿಕೊಂಡಿರುವುದಕ್ಕೆ, ಇವರ ಅನ್ಯೋನ್ಯತೆಗೆ ಯಾವುದೇ ಅಡ್ಡಿ ಇಲ್ಲ.

೫. ಮೋಜು ಮಾಡಲು ಇಬ್ಬರೂ ಕಾತುರರಾಗಿರುತ್ತಾರೆ

ಬಹಳ ಸಮಯದಿಂದ ಜೊತೆಯಿರುವ ಜೋಡಿಗಳು ತಮ್ಮ ಲೈಂಗಿಕ ಜೀವನ ಒಂದೇ ರೀತಿಯ ವಾಡಿಕೆ ಆಗಿಬಿಟ್ಟರೆ, ಅದರ ಮೇಲೆ ಆಸಕ್ತಿ ಕಳೆದುಕೊಳ್ಳುತ್ತಾರೆ. ಲೈಂಗಿಕ ದಂಪತಿಗಳು ಹೆಚ್ಚು ಮಜಾ ಮಾಡುತ್ತಾರೆ. ಸೆಕ್ಸ್ ಅನ್ನುವುದು ಯಾವಾಗಲೂ ಇಂದ್ರಿಯಗಳನ್ನೇ ತಣಿಸುವಂತ ವಿಷಯ ಆಗಬಾರದು. ಸೆಕ್ಸ್ ಕೂಡ ತರಲೆ ಆಗಿರಬಹುದು. ಇದರಲ್ಲೂ ಹಾಸ್ಯ ಇರಬಹುದು. ಕೆಲವೊಂದು ಬಾರಿ ಸ್ವಾಭಾವಿಕವಾಗಿ ಸೆಕ್ಸ್ ಹೊಂದುವುದು ಮೋಜು ಮತ್ತು ವಿನೋದದಿಂದಲೇ.

೬. ಅವರನ್ನು ಕೆರಳಿಸುವ ವಿಷಯ ಯಾವುದು ಎಂದು ಒಪ್ಪಿಕೊಳ್ಳುತ್ತಾರೆ

ನೀವು ನಿಮ್ಮ ಸಂಗಾತಿಯೊಂದಿಗೆ ಎಷ್ಟು ಬಾರಿ ಆದರೂ ಸೆಕ್ಸ್ ಅಲ್ಲಿ ತೊಡಗಿಕೊಂಡಿದ್ದರು, ನೀವು ಯಾವುದರಿಂದ ಹೆಚ್ಚು ಲೈಂಗಿಕ ಪ್ರಚೋದನೆ ಹೊಂದುತ್ತೀರಾ ಎಂದು ಅಥವಾ ನಿಮಗೆ ಯಾವುದು ಹೆಚ್ಚು ಸುಖ ನೀಡುತ್ತದೆ ಎಂಬುದು ತಿಳಿಯುವುದು ಕಷ್ಟ ಆಗುತ್ತದೆ. ಹೆಚ್ಚು ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ದಂಪತಿಗಳು ಬಾಯಿ ಬಿಟ್ಟು ಅವರು ಯಾವುದನ್ನ ಇಷ್ಟಪಡುತ್ತಾರೆ ಎಂದು ಹಾಗು ಯಾವುದು ಅವರನ್ನು ಹೆಚ್ಚು ಕೆರಳಿಸುತ್ತದೆ ಎಂಬುದನ್ನ ಹೇಳಿಕೊಳ್ಳುತ್ತಾರೆ. ಇದನ್ನು ನೀವು ಮಾಡಲು, ಸಂಭೋಗದಲ್ಲಿ ತೊಡಗುವ ಮುನ್ನ ನಿಮ್ಮ ಸಂಗಾತಿಗೆ ನಿಮ್ಮ ಯಾವುದಾದರೂ ವಯಕ್ತಿಕ ವಿಷಯ ಆಗಲಿ ಅಥವಾ ನಿಮಗೆ ಹೇಗೆ ಅನಿಸುತ್ತಿದೆ ಎಂಬುದನ್ನ ನೀವೇ ಹೇಳಿ. ನಂತರ ಅದನ್ನ ಅವರೂ ಪಾಲಿಸುತ್ತಾರೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon