Link copied!
Sign in / Sign up
0
Shares

ಅತಿಹೆಚ್ಚು ಜನರು ಗೂಗಲ್ ಅನ್ನು ಕೇಳಿರುವ ಸೆಕ್ಸ್ ಪ್ರಶ್ನೆ ಯಾವುದು?

ಇಂಟರ್ನೆಟ್ ಅಥವಾ ಅಂತರ್ಜಾಲದಿಂದ ಅನೇಕ ಉಪಯೋಗಗಳು ಹಾಗು ಅಷ್ಟೇ ಪ್ರತಿಕೂಲ ಕಾರ್ಯಗಳೂ ಆಗುತ್ತವೆ. ಆದರೆ ನಿಮಗೆ ಯಾವುದಾದರೂ ಒಂದು ಪ್ರಶ್ನೆಗೆ ಥಟ್ಟನೆ ಉತ್ತರ ಬೇಕೆಂದರೆ, ಅಂತರ್ಜಾಲಕ್ಕಿಂತ ಉತ್ತಮ ಸ್ನೇಹಿತೆ ಯಾರಿದ್ದಾರೆ? ಬೆರಳಿನ ಅಂಚಿನಲ್ಲೇ ಎಲ್ಲದಕ್ಕೂ ಉತ್ತರ ನಮಗೆ ಇಂಟರ್ನೆಟ್ ಮೂಲಕ ಈಗ ಸಿಗುತ್ತದೆ.

ಜಗತ್ತಿನ ಬಹುತೇಕ ಜನರು ಬಳಸುವ ಸರ್ಚ್ ಎಂಜಿನ್ ಎಂದರೆ ಅದು ಗೂಗಲ್. ಈತ್ತಿಚೆಗಷ್ಟೇ ಗೂಗಲ್ ಸಂಸ್ಥೆಯು ತಮ್ಮ ವೆಬ್ಸೈಟ್ ಅಲ್ಲಿ ಗರಿಷ್ಟ ಸಂಖ್ಯೆಯ ಜನರು ಕೇಳುವ ಸೆಕ್ಸ್ ಸಂಬಂಧಿತ ಪ್ರಶ್ನೆ ಯಾವುದು ಎಂಬುದನ್ನ ಬಹಿರಂಗಪಡಿಸಿದೆ. ಆ ಪ್ರಶ್ನೆ ಏನು ಎಂದರೆ “ವೇರ್ ಈಸ್ ಜಿ-ಸ್ಪಾಟ್?” ಅರ್ಥಾತ್ “ಜಿ-ಸ್ಪಾಟ್ ಎಲ್ಲಿರುತ್ತದೆ?” ಎಂಬುದಾಗಿದೆ.

ಈ ಪ್ರಶ್ನೆಯನ್ನು ನೀವು ಗೂಗಲ್ ಅಲ್ಲಿ ಟೈಪ್ ಮಾಡಿದರೆ ನಿಮಗೆ ಸಿಗುವ ಉತ್ತರ ಏನು ಎಂದರೆ “ಜಿ-ಸ್ಪಾಟ್ ಯೋನಿಯ ನಾಳದ 2-3 ಇಂಚಿನಷ್ಟು ಆಳದಲ್ಲಿ ಇರುತ್ತದೆ” ಎಂದು. ಇದರೊಂದಿಗೆ ಅದು “ಕೆಲವು ಹೆಂಗಸರಲ್ಲಿ ಇದರ ಪ್ರಚೋದನೆಯಿಂದ ಸಿಗುವ ಲೈಂಗಿಕ ಪರಾಕಾಷ್ಠೆಯು ಚಂದ್ರನಾಡಿಯ ಪ್ರಚೋದನೆಯಿಂದ ಸಿಗುವ ಲೈಂಗಿಕ ಪರಾಕಾಷ್ಠೆಗಿಂತ ಹೆಚ್ಚು ತೀವ್ರವಾಗಿ ಇರುತ್ತದೆ” ಎಂದು ಕೂಡ ತಿಳಿಸುತ್ತದೆ.

ಆದರೆ, ಈ ಜಿ-ಸ್ಪಾಟ್ ಎಂದರೇನು? ಇದು ಎಲ್ಲಿರುತ್ತದೆ? ಮತ್ತು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಮ್ಮ ಹಿಂದಿನ ಲೇಖನದಲ್ಲಿ ಸವಿವವರವಾಗಿ ತಿಳಿಸಲಾಗಿದೆ. ಅದನ್ನು ನೀವು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon