Link copied!
Sign in / Sign up
5
Shares

ವೀಕ್ಷಿಸಿ : ಇದನ್ನ ನೋಡಿದ ಮೇಲೆ ನಿಮ್ಮ ಮಗುವನ್ನ ಲಿಫ್ಟ್ ಹತ್ತಿರವೂ ಬಿಡುವುದಿಲ್ಲ!

ತಂತ್ರಜ್ಞಾನವು ಈಗಿನ ದಿನಗಳಲ್ಲಿ ಎಷ್ಟು ಮುಂದುವರೆದಿದೆ ಎಂದರೆ, ಮನುಷ್ಯನು ತನ್ನ ಕೈ-ಕಾಲುಗಳಿಗೆ ಹೆಚ್ಚು ಕೆಲಸ ನೀಡದೆಯೇ ಎಲ್ಲಿಗೆ ಬೇಕೋ ಅಲ್ಲಿಗೆ ಹೋಗಬಹುದು, ಬೇಕಿದ್ದ ಕೆಲಸ ಮಾಡಿ ಮುಗಿಸಬಹುದು, ಕೂತಲ್ಲಿಯೇ ಊಟ ತರಿಸಿ ತಿನ್ನಬಹುದು. ಆದರೆ, ಪ್ರತಿಯೊಂದು ವಿಷಯಕ್ಕೂ ಅದರದ್ದೇ ಆದ ಉಪಯೋಗಗಳು ಇದ್ದರೆ, ಅದರಿಂದ ಅಪಾಯಗಳು ಕೂಡ ಇರುತ್ತವೆ. ಅತ್ಯಾಧುನಿಕ ತಂತ್ರಜ್ಞಾನ ಕೂಡ ಇದಕ್ಕೆ ಹೊರತಾಗಿಲ್ಲ.

ನೀವು ಯಾವುದೇ ಹೋಟೆಲ್, ಶಾಪಿಂಗ್ ಮಾಲ್ ಅಥವಾ ಇನ್ನಾವುದೇ ಬಹುಮಹಡಿ ಕಟ್ಟಡಗಳಿಗೆ ಹೋದರೆ ಅಲ್ಲಿ ಲಿಫ್ಟ್ ಅಥವಾ ಎಸ್ಕಾಲೇಟರ್ಸ್ ಇದ್ದೆ ಇರುತ್ತವೆ. ಈಗ ಶಾಲೆಗಳಲ್ಲೂ ನಾವು ಲಿಫ್ಟ್ ಕಾಣಬಹುದು. ನಾವು ಚಿಕ್ಕವರಿದ್ದಾಗ ಲಿಫ್ಟ್ ಅಲ್ಲಿ ಹತ್ತಿ ಇಳಿಯುವುದೇ ನಮಗೆ ಒಂದು ರೀತಿಯ ಆಟ, ಒಂದು ಖುಷಿಯ ವಿಷಯ ಆಗಿತ್ತು. ಈಗಲೂ ಮಕ್ಕಳಿಗೆ ಅವುಗಳೆಂದರೆ ಇಷ್ಟ. ಆದರೆ ಶಾಲೆಯಲ್ಲಿನ ಲಿಫ್ಟ್ ಮಗುವಿನ ಪ್ರಾಣವನ್ನೇ ತೆಗೆದುಬಿಟ್ಟಿತು ಎಂದರೆ ಅದೆಂಥಾ ದುರ್ವಿಧಿ ಇರಬಹುದು!


ಹೌದು, ಆ ದಿನ ಇನ್ನೇನು ಶಾಲೆಯಲ್ಲಿ ಕ್ಲಾಸ್ ಶುರು ಆಗಬೇಕಿತ್ತು. 4 ವರ್ಷದ ಸಯೇದ ಫಾತಿಮಾ, ತನ್ನ ಶಾಲಾ ಕೊಠಡಿಗೆ ಹೋಗಲೆಂದು ಲಿಫ್ಟ್ ಹತ್ತಿದಳು. ಲಿಫ್ಟ್ ಇರಬೇಕಾದ ಜಾಗದಲ್ಲೇ ಇದೆ ಎಂದು ಓಡಿ, ಲಿಫ್ಟ್ ಬಾಗಿಲಿನ ಹೊರಗೆ ಕಾಲಿಟ್ಟಳು. ಆದರೆ ಅಲ್ಲಿ ಲಿಫ್ಟ್ ಇನ್ನು ಆ ಮಹಡಿ ತಲುಪೇ ಇರಲಿಲ್ಲ. ಆಕೆ ಕಾಲಿಟ್ಟೊಡನೆ ಕೆಳಗೆ ಹೋದಳು, ಆಗ ಇನ್ನೂ ಮೇಲೇರುತ್ತಿದ ಲಿಫ್ಟ್  ಅವಳ ತಲೆಯನ್ನ ಲಿಫ್ಟ್ ಬಾಗಿಲ ಹೊಸ್ತಿಲು ಮತ್ತು ಲಿಫ್ಟ್ ಮಧ್ಯೆ ಸಿಲುಕಿಸಬಿಟ್ಟಿತು. ಆ ಲಿಫ್ಟ್ ಅಲ್ಲಿ ಮಕ್ಕಳನ್ನ ಕರೆದೊಯ್ಯಲೆಂದೇ ಶಾಲೆಯ ಸಿಬ್ಬಂದಿ ಈ ಸಯೇದ ಮತ್ತು 8 ಇತರೆ ಮಕ್ಕಳೊಂದಿಗೆ ಲಿಫ್ಟ್ ಅಲ್ಲಿ ಇದ್ದನು.

ಶಾಲೆಯವರನ್ನ ಈ ಬಗ್ಗೆ ವಿಚಾರಿಸಿದಾಗ ತಿಳಿದು ಬಂದದ್ದು ಏನು ಎಂದರೆ, ಆ ಸಮಯದಲ್ಲಿ ಲಿಫ್ಟ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಲಿಫ್ಟ್ ಬಾಗಿಲುಗಳು ಸರಿಯಾಗಿ ಮುಚ್ಚದೇ ಇದ್ದರೂ ಲಿಫ್ಟ್ ಚಾಲ್ತಿಯಾಗುತ್ತಿತ್ತು.ಅಷ್ಟೇ ಅಲ್ಲದೆ, ಇನ್ನೂ ಮಹಡಿಯ ನೆಲ ಬರುವ ಮುನ್ನವೇ ಅದರ ಬಾಗಿಲುಗಳು ತೆರೆದುಕೊಳ್ಳುತ್ತಿದ್ದವು!

ಇಲ್ಲಿ ಮಗುವಿನ ಪ್ರಾಣ ಹೋಗಿದ್ದು ಹೀಗೆ. ಮಗುವು ಗ್ರೌಂಡ್ ಫ್ಲೋರ್ ಇಂದ ಮೊದಲನೇ ಫ್ಲೋರ್ ಗೆ ಹೋಗುತ್ತಿತ್ತು. ಲಿಫ್ಟ್ ಮೊದಲ ಫ್ಲೋರ್ ತಲುಪುವ ಮುನ್ನವೇ, ಅದರ ಬಾಗಿಲುಗಳು ತೆರೆದುಕೊಂಡಿವೆ. ಇದನ್ನ ಕಂಡು ಆ ಮಗು, ಲಿಫ್ಟ್ ಇಂದ ಆಚೆ ಕಾಲಿಟ್ಟಿದೆ. ಆಗ ಆ ಮಗುವಿನ ಕಾಲು ಕೆಳಗೆ ಜಾರಿದೆ. ಆ ಸಮಯದಲ್ಲಿ ಮೇಲೇರುತ್ತಿದ್ದ ಲಿಫ್ಟ್ ಆ ಮಗುವಿನ ತಲೆಯನ್ನ ಸಿಲುಕಿಸಬಿಟ್ಟಿದೆ. ಇದನ್ನು ಕಂಡ ಮಕ್ಕಳು ಕೂಗಾಡಲು ಶುರು ಮಾಡಿವೆ. ನಂತರ ಲಿಫ್ಟ್ ತಂತ್ರಜ್ಞಾಗಾರರು ಮತ್ತು ಅಗ್ನಿಶಾಮಕ ದಳದವರು ಆಗಮಿಸಿ, ಲಿಫ್ಟ್ ಅನ್ನು ಮೇಲೆತ್ತಿ, ಮಗುವನ್ನ ಹೊರತೆಗೆದಿದ್ದಾರೆ. ಆದರೆ ಅಷ್ಟೊತ್ತಿಗೆ ಆಗಲೇ ಮಗುವು ಸಾವನ್ನಪ್ಪಿತ್ತು.

ಇದಕ್ಕೆ ಹೇಳುವುದು, ಎಲ್ಲಿಗೇ ಹೋದರೂ, ಲಿಫ್ಟ್ ಅಥವಾ ಎಸ್ಕಾಲೇಟರ್ಸ್ ಬಳಿ ಮಕ್ಕಳ ಕೈ ಅನ್ನು ಬಿಡಲೇಬೇಡಿ ಎಂದು. ಈ ಘಟನೆಯ ವಿಡಿಯೋ ಅನ್ನು ನೀವು ಈ ಕೆಳಗೆ ನೋಡಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon