Link copied!
Sign in / Sign up
2
Shares

ನಿಮ್ಮ ಹಸ್ತದಲ್ಲಿನ ರೇಖೆಗಳು ಮಗುವಿನ ಬಗ್ಗೆ ಏನು ಹೇಳುತ್ತವೆ?

ನಿಮ್ಮ ಹಸ್ತದಲ್ಲಿರುವ ಕೆಲವು ರೇಖೆಗಳಿಂದ ನಿಮ್ಮ ಉದರದೊಳಗೆ ಇರುವುದು ಅವಳಿ ಶಿಶುಗಳ, ಗಂಡು ಮಗುವ ಅಥವಾ ಹೆಣ್ಣು ಮಗುವ ಎಂದು ತಿಳಿದುಕೊಳ್ಳಬಹುದು. ನಿಮ್ಮ ಕೈಯನ್ನು ಹಿಡಿದು ನೋಡಿದಾಗ ಇದು ತುಂಬಾ ಮೃದುವಾಗಿರಬೇಕು ಅಥವಾ ತುಂಬಾ ವರುಟಾಗಿರಬೇಕು, ಮತ್ತು ಮುಟ್ಟಿದಾಗ  ಉಷ್ಣತೆಯ ಅನುಭವವನ್ನು ನೀಡಬೇಕು. ಸಾಮಾನ್ಯವಾಗಿ ಮನುಷ್ಯನ ಆರೋಗ್ಯವನ್ನು ಅವನ ಹಸ್ತದಿಂದ ತಿಳಿಯಬಹದು ಎಂದು ಹೇಳಲಾಗುತ್ತದೆ. ಇದು ಸತ್ಯವಾದರೂ ಅದನ್ನು ಪತ್ತೆಮಾಡುವುದು ಸ್ವಲ್ಪ ಕಷ್ಟದ ವಿಷಯವೇ ಸರಿ.

ಹೆರಿಗೆ ಮತ್ತು ಮಕ್ಕಳಿಗೆ ಸಂಭಂದಿಸಿದ ರೇಖೆಗಳು ಮದುವೆಯ ರೇಖೆಗಳ ನಂತರದ ಅಥವಾ ಅಂತ್ಯದ ರೇಖೆಗಳಿಂದ ಉತ್ತಮವಾದ ನೇರ ರೇಖೆಗಳಾಗಿವೆ.

ಕೆಲವೊಮ್ಮೆ ಈ ರೇಖೆಗಳು ತುಂಬಾ ಸೂಕ್ಹ್ಮವಾಗಿದ್ದು, ಅದರ ಸ್ಪಷ್ಟವಾದ ನೋಟಕ್ಕೆ ಸೂಕ್ಹ್ಮದರ್ಶಕವನ್ನು ಉಪಯೋಗಿಸಬೇಕಾಗುತ್ತದೆ. ಇಂತಹ ಪ್ರಕರಣಗಳಲ್ಲಿ ಉಳಿದ ರೇಖೆಗಳು ಕೂಡ ಉತ್ತಮವಾಗಿದ್ದರೂ ಮಸುಕಾಗಿ ಕಾಣಿಸುತ್ತವೆ.

೧.ಹಸ್ತದಲ್ಲಿ ವಿಶಾಲವಾದ ರೇಖೆಗಳು ಕಂಡರೆ ಗಂಡು ಮಗುವನ್ನು ಸೂಚಿಸುತ್ತದೆ ಹಾಗೆಯೆ ಉತ್ತಮ ಮತ್ತು ಕಿರು ಮಸುಕಾದ ರೇಖೆಗಳು ಇದ್ದಲ್ಲಿ ಅದು ಹೆಣ್ಣು ಮಗುವನ್ನು ಸೂಚಿಸುತ್ತದೆ.

೨.ಯಾವಾಗ ರೇಖೆಗಳು ಸ್ಪಷ್ಟವಾಗಿ ಮತ್ತು ವಿಶಿಷ್ಟವಾಗಿ ಗುರುತಿಸಲ್ಪಡುತ್ತವೆ ಅಥವಾ ಹಸ್ತದಲ್ಲಿನ ವಿಶಿಷ್ಟ ರೇಖೆಯನ್ನು ಸ್ಪಷ್ಟವಾಗಿ ಗುರುತಿಸಬಹುದು, ಆ ಮಕ್ಕಳು ತುಂಬಾ ಬಲಶಾಲಿಯಾಗಿ ಆರೋಗ್ಯಕರವಾಗಿ ಜನಿಸುತ್ತವೆ ಮತ್ತು ಇವರು ಸ್ವತಂತ್ರವಾಗಿರಲು ಇಚ್ಛಿಸುವರು.

೩.ಹಸ್ತದ ರೇಖೆ ಮಸುಕಾಗಿ ಅಥವಾ ಅಸ್ಪಷ್ಟವಾಗಿ ವಕ್ರವಾಗಿ ಇದ್ದರೆ, ಮಗುವು ಅಷ್ಟು ಬಲಶಾಲಿಯಾಗಿರುವುದಿಲ್ಲ, ಮತ್ತು ಬೇಗನೆ ರೋಗಕ್ಕೆ ತುತ್ತಾಗಬಲ್ಲ ಶಿಶುಗಳಾಗಿರುತ್ತವೆ.

೪.ರೇಖೆಯ ಮೊದಲ ಭಾಗವು ಸ್ವಲ್ಪ ದ್ವೀಪದಂತೆ ಅಥವಾ ವೃತ್ತಾಕಾರದಲ್ಲಿ ಇದ್ದರೆ, ಮಗುವು ತನ್ನ ಆರಂಭಿಕ ಜೀವನದಲ್ಲಿ ತುಂಬಾ ಸೂಕ್ಷ್ಮ ವ್ಯಕ್ತಿಯಾಗಿರುತ್ತಾನೆ/ಳೆ. ಈ ರೇಖೆ ನಿಖರವಾಗಿ ಸ್ಪಷ್ಟವಾಗಿ ಗುರುತಿಸುವಂತಿದ್ದರೆ, ಆರೋಗ್ಯಕರವಾಗಿ ಬಲಶಾಲಿಯಾಗಿ ಮಗುವು ಬೆಳೆಯುತ್ತದೆ.

೫.ಒಂದು ರೇಖೆ ಉಳಿದ ಎಲ್ಲಾ ರೇಖೆಗಳಿಂತ ಉದ್ದವಾಗಿದ್ದು, ಗಮನಸೆಳೆಯುವಂತೆ ಇದ್ದರೆ, ನಿಮ್ಮ ಮಗುವು ಚುರುಕಾಗಿ ಇರುತ್ತಾನೆ ಮತ್ತು ಅವನಿಗೆ ನೀವು ಮಾತ್ರ ಹೆಚ್ಚು ಮುಖ್ಯವಾಗಿರುವಿರಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon