Link copied!
Sign in / Sign up
11
Shares

ಹಸ್ತ ರೇಖೆಯನ್ನು ಓದಿ ಭವಿಷ್ಯ ಹೇಳುವುದು ಹೀಗೆ !

ಹಸ್ತ ನೋಡಿ ನಿಮ್ಮ ಭವಿಷ್ಯ ಅಥವಾ ನಿಮ್ಮ ವ್ಯಕ್ತಿತ್ವವನ್ನು ಹೇಳುವುದು ಪ್ರಾಚೀನ ಕಾಲದಿಂದಲೂ ಬಂದಿರುವ ಒಂದು ಕಲೆಯಾಗಿದ್ದು, ಈಗಲೂ ಅದನ್ನು ಹೇಳುವವರು ಇದ್ದಾರೆ. ಹಸ್ತದ ರೇಖೆಗಳು ನಮಗೂ ಕಂಡರು ಅದು ಏನು ಹೇಳುತ್ತದೆ ಎಂಬುದು ನಮಗೆ ತಿಳಿದಿರುವಿದಿಲ್ಲ. ನಿಮ್ಮ ಹಸ್ತರೇಖೆಯನ್ನು ನೋಡಿ ಈಗ ನೀವೇ ಭವಿಷ್ಯವನ್ನು ತಿಳಿಯಿರಿ. ಈ ಲೇಖನದಲ್ಲಿ ಹಸ್ತ ರೇಖೆಯನ್ನು ಹೇಗೆ ಓದುವುದು ಎಂಬುದನ್ನು ತಿಳಿದುಕೊಳ್ಳಿ.

ಮಹಿಳೆಯರು ತಮ್ಮ ಎಡ ಹಸ್ತದ ರೇಖೆಯನ್ನು ಓದಬೇಕು ಮತ್ತು ಪುರುಷರು ತಮ್ಮ ಬಲ ಹಸ್ತದ ರೇಖೆಯನ್ನು ಓದಬೇಕು.

೧.ಜೀವನ ರೇಖೆ

ಹಲವು ಜನರಿಗೆ ಈ ರೇಖೆ ಬಗ್ಗೆ ತಿಳಿದಿದೆ. ಈ ರೇಖೆಯು ನಿಮ್ಮ ಹಸ್ತದ ಮದ್ಯದ ಕೆಳಭಾಗದಿಂದ ಹೆಬ್ಬೆರಳಿನ ಕಡೆ ಸಾಗುತ್ತದೆ. ಇದು ಭಿನ್ನ ಉದ್ದ ಮತ್ತು ಆಳವನ್ನು ಹೊಂದಿರುತ್ತದೆ. ಇದು ನಿಮ್ಮ ಜೀವನವು ಹೇಗೆ ಸಾಗುತ್ತದೆ ಎಂಬುದನ್ನು ಹೇಳುತ್ತದೆ ಆದರೆ ಎಷ್ಟು ಕಾಲ ಸಾಗುತ್ತದೆ ಎಂಬುದನ್ನು ತಿಳಿಸುವುದಿಲ್ಲ. ನಿಮ್ಮ ಈ ರೇಖೆಯಲ್ಲಿ ಏನಾದರು ಅಡಚಣೆಗಳು ಇದ್ದರೆ ನೀವು ನಿಮ್ಮ ಜೀವನದ ಕೆಲವು ಹಂತಗಳಲ್ಲಿ ತೊಂದರೆಯನ್ನು ಅನುಭವಿಸುವಿರಿ ಎಂದರ್ಥ. ಅಥವಾ ನಿಮ್ಮ ಜೀವನದ ಕೆಲವು ಹಂತಗಳಲ್ಲಿ ಕೆಟ್ಟ ಸಮಯವನ್ನು ನೀವು ಕಳೆಯಬೇಕಾದೀತು.

 

೨.ಚಿತ್ತ ರೇಖೆ

ಈ ರೇಖೆಯು ನಿಮ್ಮ ಹಸ್ತದಲ್ಲಿರುವ ಜೀವನ ರೇಖೆಯ ಮೇಲ್ಬಾಗದಲ್ಲಿ ಅದಕ್ಕೆ ಅಂಟಿಕೊಂಡಂತೆ ತುದಿಯಲ್ಲಿ ಇರುತ್ತದೆ. ಇದು ನಿಮ್ಮ ಮನಸ್ಸಿನ ಭಾವನೆಗಳ ಬಗ್ಗೆ ತಿಳಿಸುವುದಿಲ್ಲ ಅಥವಾ ಮನಸ್ಥಿತಿಯ ಬಗ್ಗೆ ಸೂಚನೆ ನೀಡುವುದಿಲ್ಲ. ಇದು ನಿಮ್ಮ ಬುದ್ಧಿಶಕ್ತಿ, ಸೃಜನಶೀಲತೆ, ಶಿಕ್ಷಣ ಮತ್ತು ಅಂತಃಪ್ರಜ್ಞೆಯ ಮಟ್ಟವನ್ನು ಕೇಂದ್ರೀಕರಿಸುತ್ತದೆ. ಈ ರೇಖೆ ನಿಮ್ಮ ಹಸ್ತದಲ್ಲಿ ಚಿಕ್ಕದಾಗಿದ್ದರೆ, ನೀವು ಬೇಗನೆ ಒಂದು ನಿರ್ಧಾರವನ್ನು ತೆಗೆದುಕೊಳ್ಳುವಿರಿ, ಒಂದು ವೇಳೆ ಈ ರೇಖೆ ದೊಡ್ಡದಾಗಿದ್ದರೆ, ನೀವು ಯಾವುದೇ ವಿಷಯದ ಅಂತಿಮ ತೀರ್ಮಾನಕ್ಕೆ ಬರುವುದಕ್ಕೆ ಹೆಚ್ಚು ಸಮಯವನ್ನು ತೆಗೆದುಕೊಳ್ಳುವಿರಿ ಎಂದರ್ಥ. ಇದು ನೆರವಾಗಿದ್ದಾರೆ, ನೀವು ನೇರ ನುಡಿ ಇರುವ ವ್ಯಕ್ತಿ ಎಂದು ಹೇಳಬಹುದು.

 

೩.ಹೃದಯ ರೇಖೆ

ನಿಮ್ಮ ನಾಲ್ಕು ಬೆರಳುಗಳ ಕೆಳಗೆ ಅರ್ಧವೃತ್ತಾಕಾರದಲ್ಲಿರುವ ರೇಖೆ ಇದು. ಇದು ನಿಮ್ಮ ಹೃದಯದ ದೈಹಿಕ ಮತ್ತು ಮಾನಸಿಕ ಭಾವನೆಗಳ ಅಂಶಗಳ ಬಗ್ಗೆ ಹೇಳುತ್ತದೆ. ಈ ರೇಖೆಯು ಭಿನ್ನವಾಗಿದ್ದರೆ, ನಿಮ್ಮ ಆರೋಗ್ಯ ಮತ್ತು ವ್ಯಕ್ತಿತ್ವ ಏಕಮಾತ್ರವಾಗಿರುತ್ತದೆ ಅಥವಾ ಅನನ್ಯವಾಗಿರುತ್ತದೆ ಎಂದರ್ಥ. ಇದು ವಕ್ರವಾಗಿದ್ದರೆ, ನೀವು ಕೋಪಿಷ್ಠರಾಗಿರುವಿರಿ, ಪ್ರಣಯವಾಗಿರುವಿರಿ ಎಂದು ಸೂಚಿಸುತ್ತದೆ.

 

೪.ವಿಧಿ(ಹಣೆಬರಹ) ರೇಖೆ

ಇದು ಹಸ್ತದ ಮಧ್ಯಭಾಗದಲ್ಲಿ ಶುರುವಾಗಿ, ಮದ್ಯದ ಬೆರಳಿನ ಮೂಲದಲ್ಲಿ ಕೊನೆಯಾಗುತ್ತದೆ. ಈ ರೇಖೆಯು ಗಾಢವಾಗಿ ಕಾಣಿಸಿದರೆ ನಿಮ್ಮ ದೈಹಿಕ ಕ್ರಿಯೆ ಮೇಲೆ ನಿಯಂತ್ರಣ ಇರುತ್ತದೆ. ಇದು ದುರ್ಬಲವಾಗಿ ಇದ್ದರೆ ನೀವು ಹೆಚ್ಚು ಆರಾಮಾಗಿ ಇರುವಿರಿ. ಇದು ಬಿರುಕು ಬಿಟ್ಟಿರುವ ಹಾಗೆ ಕಾಣಿಸಿದರೆ ನೀವು ಅನಿರೀಕ್ಷಿತ ಬದಲಾವಣೆಯನ್ನು ನಿಮ್ಮ ಜೀವನದಲ್ಲಿ ಎದುರಿಸುವಿರಿ.

 

೫.ಖ್ಯಾತಿ ರೇಖೆ

ನೀವು ಪ್ರಖ್ಯಾತಿಯನ್ನು ಹೊಂದುವಿರಿ ಎಂದು ನೀವು ತಿಳಿದುಕೊಳ್ಳಬೇಕೇ? ನೀವು ದಿನ ನಿಮ್ಮ ಭವಿಷ್ಯವನ್ನು ಓದುವಿರಾ? ಆಗಿದ್ದರೆ, ನಿಮ್ಮ ವಿಧಿ ರೇಖೆಯನ್ನು ನೀವು ಗಮನಿಸಿ. ಈ ರೇಖೆಯು ನಿಮ್ಮ ಕೈ ನ ಕೆಳಭಾಗದಿಂದ ಶುರುವಾಗಿ ತೋರುಬೆರಳಿನ ಕಡೆ ಸಾಗುತ್ತದೆ. ನಿಮ್ಮ ಕಷ್ಟಕ್ಕೆ ಪ್ರತಿಫಲ ಸಿಗುವುದನ್ನು ಈ ರೇಖೆ ತಿಳಿಸುತ್ತದೆ. ಈ ರೇಖೆ ಕಾಣಿಸುತ್ತಿಲ್ಲ ಎಂದರು ನೀವು ಪ್ರಖ್ಯಾತಿ ಹೊಂದಬಹುದು ಆದರೆ ನೀವು ಹೆಚ್ಚು ಶ್ರಮ ಪಡಬೇಕು ಅಷ್ಟೇ. ಈ ರೇಖೆಯಲ್ಲಿ ಬಿರುಕುಗಳನ್ನು ಅಥವಾ ಸಣ್ಣ ಸಣ್ಣ ಅಂತರಗಳನ್ನು ಕಂಡರೆ ನೀವು ಸಾಧಿಸಲು ಹಲವು ಕಷ್ಟದ ದಾರಿಗಳನ್ನು ಸಮಯವನ್ನು ದಾಟಬೇಕು ಎಂದು ಹೇಳುತ್ತದೆ.

 

೬.ಪ್ರಯಾಣ ರೇಖೆ

ಇದು ನಿಮ್ಮ ಕಿರುಬೆರಳಿನ ಮೂಲದಿಂದ ಶುರುವಾಗಿ ಹಸ್ತದ ಒಳಭಾಗಕ್ಕೆ ಚಲಿಸಿ ಮದ್ಯದಲ್ಲಿ ತೋರುಬೆರಳು ಅಥವಾ ಮದ್ಯದ ಬೆರಳಿನ ಹತ್ತಿರ ಕೊನೆಗೊಳ್ಳುತ್ತದೆ. ಇದು ನೀವು ಎಷ್ಟು ಪ್ರಯಾಣಿಸುವಿರಿ ಎಂದು ತಿಳಿಸುವುದಿಲ್ಲ ಬದಲಿಗೆ ಪ್ರಯಾಣ ನಿಮ್ಮ ಜೀವನದ ಮೇಲೆ ಹೇಗೆ ಪರಿಣಾಮ  ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು. ಈ ರೇಖೆ ಕಾಣಿಸುತ್ತಿಲ್ಲ ಅಥವಾ ಬಹಳ ತೆಳುವಾಗಿ ಕಾಣಿಸುತ್ತಿದೆ ಎಂದರೆ ನೀವು ಹೆಚ್ಚು ಪ್ರಯಾಣ ಮಾಡುವುದಿಲ್ಲ ಅಥಾವ ಪ್ರಯಾಣ ಮಾಡುವುದು ನಿಮ್ಮ ಜೀವನದಲ್ಲಿ ಏನು ಬದಲಾವಣೆಯನ್ನು ತರುವುದಿಲ್ಲ ಎಂದು ಹೇಳುತ್ತದೆ. ಇದು ಗಾಢವಾಗಿದ್ದರೆ ಪ್ರಯಾಣವು ನಿಮ್ಮ ಜೀವನದ ಮೇಲೆ ಅನನ್ಯವಾದ ಪ್ರಭಾವವನ್ನು ಬೀರುತ್ತದೆ.

 

೭.ಸಂಬಂಧ ರೇಖೆ

ಚಿಕ್ಕ ಗೆರೆಗಳು ಅಥವಾ ರೇಖೆ ಸಂಬಂಧ ರೇಖೆಯನ್ನು ಗುರುತಿಸುತ್ತವೆ. ಇದು ಕಿರುಬೆರಳಿನ ಕೆಳಭಾಗದಲ್ಲಿ ಇರುತ್ತದೆ. ಹಲವು ಸಣ್ಣ ತೆಳು ಗೆರೆಗಳು ನೀವು ಹಲವು ಪ್ರೇಮಪ್ರಸಂಗಗಳನ್ನು ಮಾಡುವುದಾಗಿ ಮತ್ತು ಸ್ಪಷ್ಟವಾದ ಗೆರೆ ನೀವು ಮದುವೆಯಾಗುವುದನ್ನು ಸೂಚಿಸುತ್ತದೆ. ಒಂದೇ ಜಗದಲ್ಲಿ ಒಂದರ ಮೇಲೆ ಒಂದು ಹಲವು ಗೆರೆಗಳು ಕಾಣಿಸಿದರೆ ಇವರು ಹಲವು ಸಂಬಂಧಗಳನ್ನು ಹೊಂದಿರಬಹುದು ಎಂದು ಊಹಿಸಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon