Link copied!
Sign in / Sign up
8
Shares

ನೀವು ಹಾರ್ಮೋನುಗಳ ಅಸಮತೋಲನಕ್ಕೆ ಒಳಗಾಗುತ್ತಿರುವ ೮ ಭೌತಿಕ ಚಿಹ್ನೆಗಳು!

ಕೆಲವು ಸಮಯದಲ್ಲಿ ಸ್ವಲ್ಪ ಜನರು ಅರ್ಥ ಮಾಡಿಕೊಳ್ಳುವರು, ಕೆಲವು ವಿಷಯಗಳು ನಮ್ಮ ದೇಹದಲ್ಲಿ ಕೆಟ್ಟದಾಗಿ ತಿರುಗಿಸುತ್ತಿವೆ ಎಂದು, ಆದರೆ ಅವರು ಅವರ ದೇಹದಲ್ಲಿ ಆಗುವ ಬದಲಾವಣೆಗಳನ್ನು ಅವರು ಕಡೆಗಣಿಸುವರು, ಮತ್ತು ಇದು ತೀರ್ವವಾದಗ ಅದರ ಬಗ್ಗೆ ತಲೆಕೆಡಿಸಿಕೊಳ್ಳುವರು.

ನಿಮ್ಮ ದೇಹದಲ್ಲಿ ಆಗುವ ಈ ಭೌತಿಕ ಬದಲಾವಣೆಗಳು ಪ್ರಾರಂಭದಲ್ಲಿ ಸಣ್ಣದಾಗಿದ್ದರೂ, ಅದನ್ನು ನೀವು ಕಡೆಗಣಿಸಿದರೆ/ನಿರಾಕರಿಸಿದರೆ ಭವಿಷ್ಯದಲ್ಲಿ ದೊಡ್ಡ ಸಮಸ್ಯೆಯನ್ನೇ ಎದುರಿಸಬೇಕಾಗುತ್ತದೆ.

ನಾನು ಇತ್ತೀಚಿಗೆ ವೈದ್ಯರನ್ನು ಭೇಟಿ ಮಾಡಿ ನನಗೆ ಜ್ವರ, ವೈರಲ್ ಸೋಂಕು ಅಥವಾ ಹಾರ್ಮೋನಿನಲ್ಲಿ ಅಸಮತೋಲನ ಆಗಿದೆ ಎಂದು ಹೇಗೆ ತಿಳಿಯಲಿ ಎಂದು ಕೇಳಿದಾಗ ಅವರು ಹೀಗೆ ಹೇಳಿದರು.

ನಿಮ್ಮ ದೇಹವೇ ನಿಮಗೆ ಎಲ್ಲವನ್ನು ತಿಳಿಸುತ್ತದೆ, ಅದು ಪ್ರಾರಂಭಿಕ ಹಂತದಲ್ಲೇ ನಿಮ್ಮ ದೇಹ ಅದರದೇ ಭಾಷೆಯಲ್ಲಿ ನಿಮಗೆ ತಿಳಿಸುತ್ತದೆ ನೀವು ಅದನ್ನು ಗಮನಿಸಿ ತಿಳಿದುಕೊಳ್ಳಬಹುದು.

ಹಾರ್ಮೋನಿನ ಅಸಮತೋಲನದ ಎಚ್ಚರಿಕೆ

ವೈದ್ಯರು ಹೇಳಿದ ಪ್ರಕಾರ, ನಮ್ಮ ದೇಹವು ಅಸಮತೋಲನ ಅಥವಾ ಯಾವುದೇ ಸಮಸ್ಯೆಗೆ ನಮ್ಮ ದೇಹವು ತಾನಾಗಿಯೇ ಅದರ ವಿರುದ್ಧ ಹೋರಾಡಲು ಮುಂದಾಗುತ್ತದೆ, ಒಂದು ವೇಳೆ ಇದನ್ನು ಸರಿಪಡಿಸುವ ಹಂತದಲ್ಲಿ ಸೋತರೆ ನಮ್ಮ ದೇಹವು ಆಂತರಿಕವಾಗಿ ಅದರ ಎಚ್ಚರಿಕೆಯನ್ನು ನೀಡುತ್ತದೆ. ಅದು ಅನಿಯಮಿತ ಋತುಚಕ್ರ, ಉದರ ಸೆಳೆತ, ಮನಸ್ಥಿತಿ ಬದಲಾಗುವುದು, ಮತ್ತು ಮುಂತಾದವುಗಳು. ಇದನ್ನು ಸರಿಯಾದ ಸಮಯಕ್ಕೆ ಚಿಕಿತ್ಸೆ ಅಥವಾ ಅದನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎಂದರೆ ಇದರ ಲಕ್ಷಣಗಳು ಬಾಹ್ಯವಾಗಿ ತೋರಿಸಲು ಪ್ರಾರಂಭವಾಗುತ್ತದೆ.

ಹಾರ್ಮೋನು ಅಸಮತೋಲನದ ದೈಹಿಕ ಲಕ್ಷಣಗಳು

ನಿಮ್ಮ ದೇಹದಲ್ಲಿ ಹಾರ್ಮೋನಿನ ಅಸಮತೋಲನ ಆಗಿದ್ದರೆ, ನಿಮ್ಮ ದೇಹವು ಈ ಕೆಳಗಿನ ದೈಹಿಕ ಲಕ್ಷಣಗಳನ್ನು ನಿಮಗೆ ತೋರಿಸುತ್ತದೆ.

೧.ಕೂದಲು ತೆಳುವಾಗುವುದು

ಇವುಗಳು ತಲೆಯಿಂದ ಕಾಲಿನವರೆಗೆ ತನ್ನ ಲಕ್ಷಣಗಳನ್ನು ತೋರಿಸುತ್ತದೆ, ಮೆದುಳು ಮೊದಲು ತಾನು ಗ್ರಹಿಸಿದ ಸ್ಥಳದಿಂದ ಹತ್ತಿರ ಇರುವುದಕ್ಕೆ ಸಂಕೇತವನ್ನು ರವಾನಿಸುತ್ತದೆ, ಅಂದರೆ ಮೆದುಳಿಗೆ ಹತ್ತಿರವಿರುವ ಕೂದಲಿಗೆ. ಇದು ನೀವು ಸಾಮಾನ್ಯವಾಗಿ ಎದುರಿಸುವ ಕೂದಲು ಉದುರುವ ಸಮಸ್ಯೆಯಲ್ಲ, ಇದು ಮೊದಲು ನಿಮ್ಮ ಕೂದಲು ತೆಳುವಾಗಲು ಪ್ರಾರಂಭಿಸಿ, ನಂತರ ಕೂದಲಿನ ತುಂಡುಗಳು ಉದುರಲು ಪ್ರಾರಂಭಿಸುತ್ತದೆ. ನಿಮ್ಮ ತಲೆ ಬುರುಡೆಯ ಕೆಲವು ಜಾಗ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತವೆ. ನಿಮ್ಮ ದೇಹದಲ್ಲಿ ಹಾರ್ಮೋನು ಅಸಮತೋಲನವಾಗಿರುವುದರ ಮೊದಲ ಚಿಹ್ನೆ ಇದು.

೨.ನಿರಂತರ ಆತಂಕ

ನಂತರ ನಿಮ್ಮ ಮನಸ್ಸಿನ ಸ್ಥಿತಿ, ನೀವು ಯಾವಾಗಲು ಖಿನ್ನತೆ ಅಥವಾ ನಿರುತ್ಸಾಹಕ್ಕೆ ಒಳಗಾಗುವಿರಿ ಎಂದರ್ಥವಲ್ಲ, ಆದರೆ ನೀವು ಕತ್ತಲೆಯ ಲೋಕದಲ್ಲಿ ಇರುವಂತೆ ಯಾವುದೊ ವಿಷಯ ನಿಮ್ಮನ್ನು ಮಾಡುತ್ತದೆ. ನಿಮ್ಮ ದೇಹವು ನೈಸರ್ಗಿಕವಾಗಿ ಸಾಮಾನ್ಯ ರೀತಿಯಲ್ಲಿ ಮುನ್ನಡೆಯಲು ತೊಂದರೆಯನ್ನು ಅನುಭವಿಸುವಾಗ ಇದು ಸಂಭವಿಸುತ್ತದೆ.

೩.ಡಾರ್ಕ್ ಸರ್ಕಲ್ಸ್ / ಕಣ್ಣಿನ ಕೆಳಗೆ ಕಪ್ಪುಸುತ್ತು ಕೊಳ್ಳುವುದು

ಅನೇಕ ಜನರು ಇದು ಬಳಲಿಕೆ, ಒತ್ತಡ, ಮತ್ತು ನಿದ್ರೆಯ ಅಭಾವದ ಲಕ್ಷಣ ಎಂದು ಭಾವಿಸುವರು. ಮತ್ತು ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಳ್ಳುವ ಮೂಲಕ ಇದನ್ನು ಹೋಗಿಸಲು ಪ್ರಯತ್ನಿಸುವರು. ಕೆಲವೊಮ್ಮೆ ನೀವು ಏನೇ ಪ್ರಯತ್ನ ಮಾಡಿದರು ಇವು ಕಡಿಮೆ ಆಗುವುದಿಲ್ಲ. ಡಾರ್ಕ್ ಸರ್ಕಲ್ಸ್ ಗಳು, ನಿದ್ರೆಯ ಸಮಸ್ಯೆಯ ಲಕ್ಷಣಗಳಾಗಿವೆ, ಇದಕ್ಕೆ ಟೆಸ್ಟೋಸ್ಟೆರಾನ್ ಅಥವಾ ಪ್ರೊಜೆಸ್ಟೊರಾನ್ ಹಾರ್ಮೋನುಗಳ ಅಸಮತೋಲನವೇ ಕಾರಣ.

೪.ಮೊಡವೆ

ಮುಂದೆ ಅದು ಕಾಡುವುದು ನಿಮ್ಮ ಮುಖವನ್ನು. ಇದಕ್ಕೆ ನಾವು ಆಹಾರದ ಅಲರ್ಜಿ, ವಾತಾವರಣದಲ್ಲಿನ ಬದಲಾವಣೆ, ಮಾಲಿನ್ಯ, ಇತ್ಯಾದಿಗಳು ಕಾರಣ ಎಂದು ಭಾವಿಸುವೆವು. ಕೆಲವೊಮ್ಮೆ ಇವುಗಳು ಕಾರಣ ಆಗಿದ್ದರೆ ನೀವು ನೈಸರ್ಗಿಕ ವಿಧಾನ ಅಥವಾ ಮುಖದ ಮೊಡವೆ ನಿವಾರಿಸಲು ವೈದ್ಯರ ಸಲಹೆ ಪಡೆದು, ಕ್ರೀಮ್ ಅಥವಾ ಮುಂತಾದ ಕ್ರಮ ಅನುಸರಿಸಿದರೆ ಅವು ಕಡಿಮೆಯಾಗುತ್ತವೆ. ಆದರೆ ಮೊಡವೆಗಳು ನಿರಂತರವಾಗಿ ನಿಮ್ಮನ್ನು ಕಾಡುತಿದ್ದು, ನೀವು ಕ್ರೀಮ್ ಅಥವಾ ಔಷದಿ ಹಾಕಿದಾಗ ಕಡಿಮೆ ಆಗಿ ಮತ್ತೆ ಕಾಣಿಸಿಕೊಳ್ಳುತ್ತಿದೆ ಎಂದರೆ ಅದಕ್ಕೆ ನಿಮ್ಮ ದೇಹದಲ್ಲಿನ ಹಾರ್ಮೋನುಗಳ ಅಸಮತೋಲನೆಯೇ ಕಾರಣ.

೫.ಬೆವರು

ನಾವೆಲ್ಲರೂ ಬೆವರುವೆವು, ಆದರೆ ಕೆಲವರು ಹೆಚ್ಚಾಗಿ ಬೆವರುವರು. ಬಿಸಿಲಿನಲ್ಲಿ, ಭಾರ ಎತ್ತಿದಾಗ, ಆಯಾಸವಾದಾಗ, ಬೆವರುವುದು ನೈಸರ್ಗಿಕ ಪ್ರವೃತ್ತಿ. ಆದರೆ ಬೆವರು ಕೆಟ್ಟ ವಾಸನೆಯ ಜೊತೆ ಆಗಾಗ್ಗೆ ಬರುತ್ತಿವೆ ಎಂದರೆ ಅದು ಹಾರ್ಮೋನಿನ ಅಸಮತೋಲನ ಎಂದು ನಾವು ಹೇಳಬಹುದು.

೬.ಅನಿಯಮಿತ ತೂಕ ಹೆಚ್ಚಳ

ನೀವು ಆರೋಗ್ಯವಾಗಿದ್ದರು ಕೂಡ, ನಿಮ್ಮ ದೇಹದ ಕೆಲವು ಭಾಗಗಳಲ್ಲಿ ಹೆಚ್ಚು ತೂಕವನ್ನು ಪಡೆಯುತ್ತಿರುವಿರಿ ಎಂದರೆ ಇದು ಹಾರ್ಮೋನಿನ ಅಸಮತೋಲನದ ಮತ್ತೊಂದು ಚಿಹ್ನೆ ಆಗಿದೆ.

೭.ಆಯಾಸ

ನೀವು ಸ್ವಲ್ಪ ಕೆಲಸ ಮಾಡಿದ ತಕ್ಷಣವೇ ಕೊಳಕಾದ ರೀತಿಯಲ್ಲಿ ನಿಮಗೆ ಅನಿಸುವುದೇ?, ರಾತ್ರಿ ನಿದ್ರೆ ಮಾಡಿದರು ಸಹ ಬೆಳಗ್ಗೆ ನಿದ್ರೆ ಆಗದ ರೀತಿಯಲ್ಲಿ ನಿಮಗೆ ಬಾಸವಾಗುವುದೇ ? ಮತ್ತೊಮ್ಮೆ ಇದು ನಿಮ್ಮ ದೇಹದಲ್ಲಿನ ಪ್ರೊಜೆಸ್ಟರಾನ್ ಎಂಬ ಹಾರ್ಮೋನಿನ ಅಸಮತೋಲನದ ಚಿಹ್ನೆ ಆಗಿದೆ.

ಈ ಮೇಲಿನ ಲಕ್ಷಣಗಳನ್ನು ನೀವು ಕಂಡರೆ ವೈದ್ಯರನ್ನು ಭೇಟಿ ಮಾಡಿ, ರಕ್ತಪರೀಕ್ಷೆ ಮಾಡಿಸಿಕೊಳ್ಳಲು ನಾವು ನಿಮಗೆ ಸಲಹೆ ನೀಡುತ್ತೇವೆ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon